ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದ ಚಿತ್ರದುರ್ಗದ ಮುರುಘಾ ಶ್ರೀಗಳನ್ನು ಪೊಲೀಸರು ಬಂಧಿಸಿದ್ದಾರೆ.ಆದರೆ ಪ್ರಕರಣ ದಾಖಲಾದ ಬಳಿಕ ಅವರ ಚಲನವಲನವನ್ನು ನಿರಂತರವಾಗಿ ಗಮನಿಸುತ್ತಿದ್ದ ಪೊಲೀಸರು ಮೊಬೈಲ್ ನ್ನು ಸಹ ಕಣ್ಗಾವಲಿನಲ್ಲಿರಿಸಿದ್ದರು. ಕಳೆದ ರಾತ್ರಿ ಅವರ ಫೋನ್ ಸ್ವಿಚ್ಚಾಫ್ ಆದ ಹಿನ್ನಲೆಯಲ್ಲಿ ಅವರ ನಡೆಯನ್ನು ಮತ್ತಷ್ಟು ತೀವ್ರವಾಗಿ ಗಮನಿಸುತ್ತಿದ್ದರು ಎನ್ನಲಾಗಿದೆ.
ನಿನ್ನೆಯಷ್ಟೇ ʼಸಂಧಾನಕ್ಕೂ ಸಿದ್ದ ಸಮರಕ್ಕೂ ಬದ್ದʼ ಎಂದು ಹೇಳಿದ್ದ ಶ್ರೀಗಳು ಬಳಿಕ ನಿಗೂಢ ಸ್ಥಳಕ್ಕೆ ತೆರಳಿದ್ದರು.ಶ್ರೀಗಳು ತಾವು ಬಳಸುತ್ತಿದ್ದ ಕಾರನ್ನು ಬಿಟ್ಟು ಮತ್ತೊಂದು ಕಾರಿನಲ್ಲಿ ತೆರಳುತ್ತಿದ್ದು, ಈ ವೇಳೆ ಕಾವಿಯನ್ನೂ ಧರಿಸಿರಲಿಲ್ಲವೆಂದು ಹೇಳಲಾಗಿದೆ.ಇಂದು ಬೆಳಿಗ್ಗೆ ಚಿತ್ರದುರ್ಗದಿಂದ ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಠದ ಆವರಣವು ಬೆಳಗ್ಗೆಯಿಂದ ಬಿಕೋ ಎನ್ನುತ್ತಿದ್ದು ಮಠದ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ಬೆಳಗ್ಗೆಯಿಂದ ಮುರುಘಾ ಶರಣರು ಮಠದ ಆವರಣದಲ್ಲೆಲ್ಲೂ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರು ಮಠದ ಆವರಣದಿಂದ ಹೊರ ನಡೆದಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ಇಂದು ಸಂತ್ರಸ್ತ ಬಾಲಕಿಯರು ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ದಾಖಲಿಸುತ್ತಿರುವ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಸ್ವಾಮೀಜಿಗಳು ಮಠದಿಂದ ಪಲಾಯನ ಮಾಡಿದ್ದಾರಾ ಎಂಬ ಅನುಮಾನ ದಟ್ಟವಾಗುತ್ತಿದೆ. ಪ್ರತಿ ದಿನವೂ ಮುರುಘಾ ಶರಣರು ಬೆಳಗ್ಗೆಯಾಗುತ್ತಿದ್ದಂತೆಯೇ ತಮ್ಮ ಭಕ್ತರನ್ನು ಭೇಟಿಯಾಗುತ್ತಿದ್ದರು. ಆದ್ದರಿಂದ ಮರುಘಾ ಶರಣರು ಮಠದಲ್ಲಿ ಆವರಣದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರುವ ಮೂಲಕ ಅನುಮಾನಕ್ಕೆ ಎಡೆ ಮಾಡಿದ್ದಾರೆ.
ಇನ್ನು ಮರುಘಾ ಶರಣರು ಮಠದಿಂದ ನಾಪತ್ತೆಯಾಗಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಚಿತ್ರದುರ್ಗ ಗ್ರಾಮಾಂತರ ಠಾಣಾ ಪೊಲೀಸರು ಮಠಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ತಡರಾತ್ರಿಯೇ ಮಠದಿಂದ ಪಲಾಯನ ಮಾಡಿರುವ ಸ್ವಾಮೀಜಿಗಳು ಅಜ್ಞಾತ ಸ್ಥಳಕ್ಕೆ ತೆರಳಿರುವ ಸಾಧ್ಯತೆಯಿದೆ. ಸ್ವಾಮೀಜಿಗಳನ್ನು ಸಂಪರ್ಕಿಸಲು ಪೊಲೀಸರು ಹರಸಾಹಸ ಪಡ್ತಿದ್ದಾರೆ. ಮೂಲಗಳ ಪ್ರಕಾರ ಕೆ.ಸಿ ವೀರೇಂದ್ರಪಪ್ಪಿ ಸಹಾಯವನ್ನು ಪಡೆದು ಮುರುಘಾ ಶರಣರು ಗೋವಾಕ್ಕೆ ಪಲಾಯನ ಮಾಡುತ್ತಿದ್ದರೆಂದು ಹೇಳಲಾಗ್ತಿದೆ.
ಇಂದು ಬೆಳಿಗ್ಗೆ ಮತ್ತೊಂದು ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಪ್ರಕ್ರಿಯೆ ಬಳಿಕ ಅವರನ್ನು ಔಪಚಾರಿಕವಾಗಿ ಬಂಧಿಸಲಾಗುತ್ತದೆ ಎಂದು ಹೇಳಲಾಗಿದೆ.
Post a Comment