[01/08, 6:48 AM] Pandit Venkatesh. Astrologer. Kannada: *ಆಗಸ್ಟ್ 2022 ರಲ್ಲಿ ನಾವು ಹಿಂದೂಗಳು ಆಚರಿಸಲಾಗುವ ಹಬ್ಬಗಳ ಬಗ್ಗೆ ಒಂದು ಮಾಹಿತಿ*
ಹಬ್ಬಗಳ ಮಾಸ ಆಗಸ್ಟ್ ಮಾಸ. ಈ ತಿಂಗಳಲ್ಲಿ ಅನೇಕ ಪ್ರಸಿದ್ಧ ಹಬ್ಬಗಳನ್ನು ಆಚರಿಸಬಹುದಾಗಿದೆ. ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳಾವುವು ಗೊತ್ತಾ..? ಇಲ್ಲಿದೆ ಆಗಸ್ಟ್ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು.
2022 ರ ಆಗಸ್ಟ್ ತಿಂಗಳು ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ಥಿ ಯೊಂದಿಗೆ ಪ್ರಾರಂಭವಾಗುತ್ತದೆ. 2022 ರ ಆಗಸ್ಟ್ ಮಾಸದ ಮೊದಲ ದಿನವೇ *ನಾಗ ಚತುರ್ಥಿ* ಆಚರಣೆ, ಮೊದಲನೆಯ ಶ್ರಾವಣ ಸೋಮವಾರ ಆರಂಭವಾಗುತ್ತದೆ. ನಂತರ ನಾಗರ ಪಂಚಮಿ, ಶಿರಿಯಾಳ ಷಷ್ಠೀ, ವರ ಮಹಾಲಕ್ಷ್ಮೀ ವ್ರತ, ರಕ್ಷಾಬಂಧನ, ಶ್ರೀ ಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ ಸೇರಿದಂತೆ ವಿವಿಧ ಹಬ್ಬ ಹರಿದಿನಗಳನ್ನು ಈ ಮಾಸದಲ್ಲಿ ಆಚರಿಸಲಾಗುತ್ತದೆ. ಆಗಸ್ಟ್ ಮಾಸವು ಧಾರ್ಮಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದ ಮಾಸವಾಗಿದೆ.
*ಆಗಸ್ಟ್ 1, ಸೋಮವಾರ - ನಾಗ ಚತುರ್ಥೀ, ದೂರ್ವಾ ಗಣಪತಿ ವ್ರತ*
*ನಾಗ ಚೌತಿ* :- ನಾಗದೇವತೆಗಳನ್ನು ಪೂಜಿಸುವ ಹಬ್ಬವಾದ ನಾಗ ಚವಿತಿಯು ಮುಖ್ಯವಾಗಿ ಮಹಿಳೆಯರ ಹಬ್ಬವಾಗಿದೆ. ನಾಗ ಚೌತಿಯನ್ನು ವಿವಾಹಿತ ಮಹಿಳೆಯರು ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಆಚರಿಸುತ್ತಾರೆ. ಚೌತಿ ಹಬ್ಬದಲ್ಲಿ ಮಹಿಳೆಯರು ಉಪವಾಸವಿದ್ದು ನಾಗಪೂಜೆಯನ್ನು ಆಚರಿಸುತ್ತಾರೆ. ವಾಲ್ಮೀಕಂ ಅಥವಾ ಹುತ್ತ ದಲ್ಲಿ ಸರ್ಪ ದೇವತೆಗೆ ಭಕ್ತರು ಹಾಲು ಮತ್ತು ಒಣ ಹಣ್ಣುಗಳನ್ನು ಅರ್ಪಿಸುತ್ತಾರೆ. ನಾಗ ಚತುರ್ಥಿಯ ದಿನದಂದು, ಅಷ್ಟನಾಗವನ್ನು ಪೂಜಿಸಲಾಗುತ್ತದೆ.
*ದೂರ್ವಾ ಗಣಪತಿ ವ್ರತ* :- ವಿಘ್ನ ವಿನಾಶಕ ಗಣಪತಿಯನ್ನು ಹಲವು ಬಗೆಯಲ್ಲಿ ವ್ರತದ ಮೂಲಕ ಪೂಜಿಸಬಹುದು. ಇದರಲ್ಲಿ ತುಂಬಾ ವಿಶಿಷ್ಟವಾದದ್ದು ದೂರ್ವ ಗಣಪತಿ ವ್ರತ. ಆರ್ಥಿಕ ತೊಂದರೆಗಳು ನಿವಾರಣೆಯಾಗಲು ಈ ವ್ರತವನ್ನು ಮಾಡುತ್ತಾರೆ.
*ಆಗಸ್ಟ್ 2, ಮಂಗಳವಾರ - ನಾಗರ ಪಂಚಮಿ*
ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲಾ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.
*ಶ್ರಾವಣ ಸೋಮವಾರ - ಶಿವನ ಪೂಜೆ* ಆಗಸ್ಟ್ 1 - ಸೋಮವಾರ ಆಗಸ್ಟ್ 8 - ಸೋಮವಾರ ಆಗಸ್ಟ್ 15 - ಸೋಮವಾರ ಆಗಸ್ಟ್ 22 - ಸೋಮವಾರ ಆಗಸ್ಟ್ 29 - ಸೋಮವಾರ ಶ್ರಾವಣ ಮಾಸದಲ್ಲಿ ಸರ್ವಶಕ್ತ ಭಗವಾನ್ ಶಿವನನ್ನು ಪೂಜಿಸುವುದರಿಂದ ಆಧ್ಯಾತ್ಮಿಕ ಶುದ್ಧೀಕರಣದ ಸಾಧನೆ ಸೇರಿದಂತೆ ಭಕ್ತರಿಗೆ ವಿವಿಧ ಆಶೀರ್ವಾದಗಳು ದೊರೆಯುತ್ತದೆ. ಈ ತಿಂಗಳಲ್ಲಿ, ಪ್ರತಿ ಸೋಮವಾರವನ್ನು ಎಲ್ಲಾ ದೇವಾಲಯಗಳಲ್ಲಿ ಶ್ರಾವಣ ಸೋಮವಾರ ಎಂದು ಆಚರಿಸಲಾಗುತ್ತದೆ. ಈ ಮಾಸದಲ್ಲಿ ಶಿವಲಿಂಗಕ್ಕೆ ಹಗಲು, ರಾತ್ರಿಯಿಡೀ ಪವಿತ್ರ ನೀರು ಮತ್ತು ಹಾಲಿನಿಂದ ಅಭಿಷೇಕ ಮಾಡುತ್ತಾರೆ.
*ಮಂಗಳ ಗೌರೀ ವ್ರತ - ಶ್ರಾವಣ ಮಂಗಳವಾರ* ಆಗಸ್ಟ್ 2 - ಮಂಗಳವಾರ ಆಗಸ್ಟ್ 9 - ಮಂಗಳವಾರ ಆಗಸ್ಟ್ 16 - ಮಂಗಳವಾರ ಆಗಸ್ಟ್ 23 - ಮಂಗಳವಾರ ಮಂಗಳ ಯೋಗದ ಕಾರಣದಿಂದಾಗಿ ನಿಮ್ಮ ಮದುವೆಯಲ್ಲಿ ಅಡ್ಡಿ ಅಥವಾ ವಿಳಂಬವಾಗುತ್ತಿದ್ದರೆ ಶ್ರಾವಣ ಮಾಸದ ಮಂಗಳವಾರ ಮಂಗಳ ಗೌರಿ ವ್ರತವನ್ನು ಭಕ್ತಿ, ಶ್ರದ್ಧೆಯಿಂದ ಮಾಡಬೇಕು. ಮಂಗಳ ಗೌರಿ ವ್ರತ-ಪೂಜೆಯನ್ನು ಶ್ರಾವಣ ಮಾಸದ ಎಲ್ಲಾ ಮಂಗಳವಾರಗಳಂದು ಮಾಡಲಾಗುತ್ತದೆ. ಈ ದಿನ ಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಉಪವಾಸವನ್ನು ಮಂಗಳವಾರ ಆಚರಿಸಲಾಗುತ್ತದೆ, ಆದ್ದರಿಂದ ಇದನ್ನು ಮಂಗಳ ಗೌರಿ ವ್ರತ ಎಂದು ಕರೆಯಲಾಗುತ್ತದೆ. *ಆಗಸ್ಟ್ 3, ಬುಧವಾರ - ಶಿರಿಯಾಳ ಷಷ್ಠೀ* ಶ್ರಾವಣ ಮಾಸ ಶುಕ್ಲ ಪಕ್ಷದ ಷಷ್ಠಿಯನ್ನು ಶಿರಿಯಾಳ ಷಷ್ಠಿಯನ್ನು ಆಚರಿಸಲಾಗುತ್ತದೆ. ಸ್ಕಂದ, ಷಣ್ಮುಖ, ಕುಮಾರ, ಕಾರ್ತಿಕೇಯ, ಸುಬ್ರಹ್ಮಣ್ಯ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಕುಮಾರಸ್ವಾಮಿ ಹಾಗೂ ಮಹಾದೇವನನ್ನು ಈ ದಿನ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಅರ್ಚಿಸಲಾಗುತ್ತದೆ. ಸ್ವಾಮಿಯನ್ನು ಪೂಜಿಸುವುದರಿಂದ ಸಂತಾನ ಭಾಗ್ಯ, ಆರೋಗ್ಯ, ಕೀರ್ತಿಗಳನ್ನು ಕರುಣುಸಿವುದಾಗಿ ಭಕ್ತರ ನಂಬಿಕೆ. *ಆಗಸ್ಟ್ 5, ಶುಕ್ರವಾರ - ವರ ಮಹಾಲಕ್ಷ್ಮೀ ವ್ರತ* ವರ ಮಹಾಲಕ್ಷ್ಮೀ ವ್ರತ ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು. ವರಮಹಾಲಕ್ಷ್ಮಿ ದಿನ ಆಚರಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಶ್ರೇಷ್ಠತೆ ಪಡೆದುಕೊಳ್ಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಗೃಹಿಣಿಯೂ ವರ ಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲು ಮುಂದಾಗುತ್ತಿದ್ದಾರೆ. ವರ ಮಹಾಲಕ್ಷ್ಮೀ ಹಬ್ಬ ಆಚರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಆಡಂಬರವಾಗಿ ಅಲ್ಲದಿದ್ದರೂ ಚಿಕ್ಕದಾದ ಲಕ್ಷ್ಮಿ ದೇವಿಯನ್ನು ಕೂರಿಸಿ ಆಚರಣೆ ಮಾಡಲು ಜನರು ಮುಂದಾಗುತ್ತಿದ್ದಾರೆ. *ಸಂಪತ್ ಶ್ರಾವಣ ಶನಿವಾರ* - ಜುಲೈ 30 - ಶನಿವಾರ ಆಗಸ್ಟ್ 6 - ಶನಿವಾರ ಆಗಸ್ಟ್ 13 - ಶನಿವಾರ ಆಗಸ್ಟ್ 20 - ಶನಿವಾರ ಆಗಸ್ಟ್ 27 - ಶನಿವಾರ ಶ್ರಾವಣ ಮಾಸದಲ್ಲಿ ಬರುವ ಶನಿವಾರವನ್ನು ಕೆಲವೆಡೆ ಶ್ರಾವಣ ಶನಿವಾರವೆಂದು ಕರೆದರೆ ಇನ್ನೂ ಕೆಲವೆಡೆ ಸಂಪತ್ ಶ್ರಾವಣ ಶನಿವಾರವೆಂದು ಕರೆಯುತ್ತಾರೆ. ಶ್ರಾವಣ ಶನಿವಾರದಂದು ವೆಂಕಟೇಶ್ವರ ಮತ್ತು ಲಕ್ಷ್ಮಿ ದೇವಿಯನ್ನು ಹಾಗೂ ಶನೈಶ್ಚರ ಸ್ವಾಮಿಯನ್ನು ಪೂಜಿಸಲಾಗುತ್ತದೆ. ವಿವಿಧ ಸ್ಥಳಗಳಿಗೆ ಹೋದಂತೆ ಶ್ರಾವಣ ಶನಿವಾರ ಆಚರಣೆಯು ಭಿನ್ನ ಭಿನ್ನವಾಗಿರುತ್ತದೆ. *ಆಗಸ್ಟ್ 8, ಸೋಮವಾರ - ಪುತ್ರದಾ ಏಕಾದಶಿ* ಈ ಏಕಾದಶಿಯು ಅತ್ಯಂತ ಮಂಗಳಕರ ಮತ್ತು ಫಲಪ್ರದ ಏಕಾದಶಿಯೆಂದು ಪರಿಗಣಿಸಲಾಗುವುದು. ಈ ವ್ರತದ ಹೆಸರಿನ ಪ್ರಕಾರ ಇದರ ಫಲವೇನೆಂದರೆ, ದಂಪತಿಗಳು ಸಂತಾನ ಹೊಂದಲು ಬಯಸುವವರು ಈ ದಿನದಂದು ಉಪವಾಸವಿದ್ದು ಸಂತಾನ ಭಾಗ್ಯವನ್ನು ಬಯಸಿದಲ್ಲಿ ಅವರು ಬಯಸಿದ ಫಲವನ್ನು ಪಡೆಯುತ್ತಾರೆ. *ಆಗಸ್ಟ್ 9, ಮಂಗಳವಾರ - ಭೌಮ ಪ್ರದೋಷ* ಪ್ರದೋಷದ ವ್ರತವು ಮಂಗಳವಾರದಂದು ಬಂದಾಗಲೆಲ್ಲಾ ಅದನ್ನು ಭೌಮ ಪ್ರದೋಷ ಅಥವಾ ಮಂಗಳ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. *ಆಗಸ್ಟ್ 10, ಬುಧವಾರ - ಅಂಗಾರಕ ಜಯಂತಿ* ಅಂಗಾರಕ ಅಥವಾ ಕುಜ ಎಂದು ನಾಮಾಂಕಿತನಾದ ಭೂಮಿಪುತ್ರ ಮಂಗಳನು ಜನಿಸಿದ ದಿನ. ಮಂಗಳ ಎಂದು ಕರೆಯಲ್ಪಡುವ ಇವನು ನೈಸರ್ಗಿಕ ಪಾಪಗ್ರಹ. ಈ ದಿನ ಈತನ ಆರಾಧನೆ ಮಾಡುವುದರಿಂದ ಮಂಗಳನ ಅನುಗ್ರಹ ಪಡೆಯಬಹುದು. *ಆಗಸ್ಟ್ 11, ಗುರುವಾರ - ರಕ್ಷಾ ಬಂಧನ* ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವಾದ ಈ , ಗುರುವಾರದಂದು ರಕ್ಷಾ ಬಂಧನವನ್ನು ಆಚರಿಸಲಾಗುವುದು. ಈ ದಿನ ಸಹೋದರತ್ವದ ಬಾಂದವ್ಯವನ್ನು ಬೆಸೆಯುವ ದಿನವಾಗಿದೆ. ಅಷ್ಟು ಮಾತ್ರವಲ್ಲ, ಯಜುರ್ ಉಪಾಕರ್ಮ ಇದೇ ದಿನ ಬಂದಿರುವುದು ಈ ದಿನ ಅತ್ಯಂತ ವಿಶೇಷವಾಗಿದೆ.
*ಆಗಸ್ಟ್ 12, ಶುಕ್ರವಾರ - ನೂಲ ಹುಣ್ಣಿಮೆ, ಗಾಯತ್ರೀ ಪ್ರತಿಪತ್, ಸಂಸ್ಕೃತ ದಿನಾಚರಣೆ* *ನೂಲ ಹುಣ್ಣಿಮೆ* :- ಉಪಾಕರ್ಮ ಆಚರಣೆ ಎಂದರೆ ಉಪನಯನ ನಂತರ ಪ್ರತಿ ವರ್ಷವೂ ಉಪಾಕರ್ಮ ಆಚರಿಸಬೇಕು. ಶ್ರಾವಣದಲ್ಲಿ ನೂಲ ಹುಣ್ಣೆಮೆಯಂದು ಬರುವ ಉಪಾಕರ್ಮ ಯಜ್ಞೋಪವೀತ ಧರಿಸಿದವರಿಗೆ ಅತಿ ಮುಖ್ಯವಾಗಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ನೂಲ ಹುಣ್ಣಿಮೆ ವಿಶೇಷ. *ಗಾಯತ್ರೀ ಪ್ರತಿಪತ್* :- ಶ್ರಾವಣ ಮಾಸ ಕೃಷ್ಣ ಪಕ್ಷದ ಪ್ರಥಮ ತಿಥಿಯ ದಿನ ಗಾಯತ್ರೀ ಪ್ರತಿಪತ್‌ಅನ್ನು ಆಚರಿಸಲಾಗುತ್ತದೆ. ಪಾಡ್ಯದ ಹಿಂದಿನ ದಿನದಂದು ಉಪವಾಸವಿದ್ದು, ಮಾರನೆಯ ದಿನ ಮಂಗಳ ಸ್ನಾನದ ನಂತರ ಗಾಯತ್ರೀ ಜಪವನ್ನು ಮಾಡುವುದು ಈ ಆಚರಣೆಯ ವಿಧಿಯಾಗಿದೆ. *ಸಂಸ್ಕೃತ ದಿನಾಚರಣೆ* :- ದೇವ ಭಾಷೆ ಸಂಸ್ಕೃತವನ್ನು ಕೇವಲ ನಮ್ಮ ದೇಶದಲ್ಲಿ ಅಲ್ಲದೇ, ವಿದೇಶಗಳಲ್ಲಿ ಕೂಡ ಮಾನ್ಯತೆ ಕೊಟ್ಟು ಅದನ್ನು ಬೆಳೆಸುತ್ತಿದ್ದಾರೆ. ಅದರ ಪ್ರಯೋಜನ ಅವರು ಕೂಡ ಕಂಡುಕೊಂಡಿದ್ದಾರೆ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯ ಮಹತ್ವವನ್ನು ಸಾರುವುದು ಇದರ ಉದ್ದೇಶ.
ದೇವಭಾಷಾ, ಗೀರ್ವಾಣವಾಣೀ, ಅಮೃತವಾಣೀ, ಸುರಭಾರತೀ ಎಂದೆಲ್ಲಾ ಕರೆಸಿಕೊಳ್ಳುವ ಸಂಸ್ಕೃತ ಎಲ್ಲ ವಿಷಯಗಳ ಮೂಲಾಧಾರ. *ಆಗಸ್ಟ್ 13, ಶನಿವಾರ - ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ*
ಕಲಿಯುಗದ ಕಾಮಧೇನು ಎಂದೇ ಕರೆಯಲ್ಪಡುವ ಶ್ರೀ ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ಬೃಂದಾವನದಲ್ಲಿ ಸಮಾಧಿ ಸೇರಿದ ದಿನವೇ ಆರಾಧನಾ ಮಹೋತ್ಸವ.
*ಆಗಸ್ಟ್ 15, ಸೋಮವಾರ - ಸಂಕಷ್ಟಹರ ಚತುರ್ಥಿ* ಗಣೇಶನನ್ನು ಪ್ರಥಮ ವಂದಿತನೆಂದು ಕರೆಯಲಾಗುತ್ತದೆ. ಎಲ್ಲಾ ಶುಭ ಕಾರ್ಯಗಳಲ್ಲೂ ಮೊದಲ ಪೂಜೆ ಗಣೇಶನಿಗೆ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯ. ಗಣೇಶನನ್ನು ಸಂಕಷ್ಟ ಹರ, ವಿಘ್ನನಿವಾರಕನೆಂದು ಕರೆಯಲಾಗುತ್ತದೆ. ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ಭಕ್ತರ ಸಂಕಷ್ಟಗಳೆಲ್ಲವೂ ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದಿನ ಪರಮೇಶ್ವರನನ್ನು ಆರಾಧಿಸುವ ಶ್ರಾವಣ ಸೋಮವಾರ.
*ಆಗಸ್ಟ್ 15, ಸೋಮವಾರ - ಸ್ವಾತಂತ್ರ್ಯ ದಿನಾಚರಣೆ*
ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಿ, ಭಾರತೀಯರಿಗೆ ಸ್ವತಂತ್ರವನ್ನು ಘೋಷಿಸಿದ ದಿನವಾಗಿದೆ.
*ಆಗಸ್ಟ್ 17, ಬುಧವಾರ - ಸಿಂಹ ಸಂಕ್ರಮಣ*
ಸೂರ್ಯ ದೇವನು ಕಟಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುವ ಪುಣ್ಯಕಾಲವೇ ಸಿಂಹ ಸಂಕ್ರಮಣ. ಈ ದಿನ ಸೂರ್ಯ ದೇವನನ್ನು ಪೂಜಿಸಲಾಗುತ್ತದೆ. ಮುಂಜಾನೆ ಅರ್ಘ್ಯವನ್ನು ನೀಡುವ ಮೂಲಕ ಸೂರ್ಯನಿಗೆ ನಮಸ್ಕರಿಸಲಾಗುವುದು. *ಆಗಸ್ಟ್ 19, ಶುಕ್ರವಾರ - ಶ್ರೀ ಕೃಷ್ಣ ಜನ್ಮಾಷ್ಟಮೀ*
ಭಗವಾನ್ ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಜನಿಸಿದನು. ಕೃಷ್ಣ ಭಕ್ತರು ಈ ದಿನ ಕೃಷ್ಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಸಂಪೂರ್ಣ ದಿನವೂ ಕೃಷ್ಣನ ನಾಮಸ್ಮರಣೆಯನ್ನು ಜಪಿಸಲಾಗುತ್ತದೆ. ಭಕ್ತಿ, ಭಾವದ ಶಕ್ತಿಯ ನಡುವೆ ತುಂಟಾಟದ ಕೃಷ್ಣನನ್ನು ಪೂಜಿಸಲಾಗುತ್ತದೆ.
*ಆಗಸ್ಟ್ 22, ಸೋಮವಾರ - ಅಜಾ ಏಕಾದಶಿ* ಸನಾತನ ಸಂಪ್ರದಾಯದಲ್ಲಿ, ಅಜಾ ಏಕಾದಶಿಯನ್ನು ಭಕ್ತಿ ಮತ್ತು ಪುಣ್ಯದ ಕೆಲಸಗಳಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶ್ರೀ ಕೃಷ್ಣನು ಅಜಾ ಏಕಾದಶಿಯ ಉಪವಾಸವನ್ನು ಆಚರಿಸುವ ಮೂಲಕ ಎಲ್ಲಾ ಪಾಪಗಳು ಮತ್ತು ಸಂಕಟಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಮತ್ತು ಮರಣದ ನಂತರ ಒಬ್ಬ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಎಂದು ಹೇಳಲಾಗಿದೆ.
*ಆಗಸ್ಟ್ 24, ಬುಧವಾರ - ಪ್ರದೋಷ ಪೂಜೆ*
ಈ ದಿನ ಶಿವನನ್ನು ಪೂಜಿಸಲಾಗುತ್ತದೆ. ಪ್ರದೋಷ ವ್ರತದ ಉಪವಾಸವನ್ನು ಶಿವ ಭಕ್ತರು ಕೈಗೊಳ್ಳುತ್ತಾರೆ. ಪ್ರದೋಷ ದಿನದಂದು ಉಪವಾಸವಿದ್ದು, ಶಿವನನ್ನು ಪೂಜಿಸುವುದರಿಂದ ಶಿವ ಭಕ್ತರ ಆಸೆಗಳು ಈಡೇರುವುದೆನ್ನುವ ನಂಬಿಕೆಯಿದೆ.
*ಆಗಸ್ಟ್ 17, ಗುರುವಾರ - ಮಾಸ ಶಿವರಾತ್ರಿ*
ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿಯನ್ನು ಮಾಸಿಕ ಶಿವರಾತ್ರಿಯೆಂದು ಕರೆಯಲಾಗುತ್ತದೆ. ಮಾಸಿಕ ಶಿವರಾತ್ರಿ ದಿನದಂದು ಶಿವ ಭಕ್ತರು ಉಪವಾಸವಿದ್ದು, ಶಿವನಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಪ್ರತೀ ಮಾಸದಲ್ಲೂ ಮಾಸಿಕ ಶಿವರಾತ್ರಿ ಆಚರಿಸುವುದರಿಂದ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಲು ಸಹಕಾರಿ.
*ಆಗಸ್ಟ್ 27, ಶನಿವಾರ - ಬೆನಕನ ಅಮಾವಾಸ್ಯೆ*
ಶ್ರಾವಣ ಮಾಸದ ಕೊನೆಯ ದಿನ, ಗಣಪತಿ ಹಬ್ಬದ ಮುನ್ನ ಬರುವ ಅಮಾವಾಸ್ಯೆಯನ್ನು ಬೆನಕನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. *ಆಗಸ್ಟ್ 29, ಸೋಮವಾರ - ವರಾಹ ಜಯಂತಿ* ಭಾದ್ರಪದ ಮಾಸದ ಶುಕ್ಲ ಪಕ್ಷದ ಬಿದಿಗೆ ದಿನ ವಿಷ್ಣುವಿನ ಮೂರನೆಯ ಅವತಾರ ವರಾಹ ರೂಪದಲ್ಲಿ ಜನ್ಮತಾಳಿದ ಸೂಚಕವಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುವುದು *ಆಗಸ್ಟ್ 30, ಮಂಗಳವಾರ - ಸ್ವರ್ಣ ಗೌರೀ ವ್ರತ*
30 ರ ಮಂಗಳವಾರದಂದು ಸ್ವರ್ಣ ಗೌರಿ ಹಬ್ಬವನ್ನು ಆಚರಿಸಲಾಗುವುದು. ಹೆಚ್ಚಾಗಿ ಈ ಹಬ್ಬವನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ಈ ದಿನ ಮಹಿಳೆಯರು ಉಪವಾಸವಿದ್ದು, ಪಾರ್ವತಿ ದೇವಿಯನ್ನು ಪೂಜಿಸುತ್ತಾರೆ. ಪತಿಯ ದೀರ್ಘಾಯುಷ್ಯಕ್ಕಾಗಿ, ಉತ್ತಮ ಆರೋಗ್ಯಕ್ಕಾಗಿ, ಕುಟುಂಬದ ಸಂತೋಷಕ್ಕಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
*ಆಗಸ್ಟ್ 31, ಬುಧವಾರ - ವರಸಿದ್ಧಿ ವಿನಾಯಕ ವ್ರತ*
ಗಣೇಶ ಚತುರ್ಥಿಯನ್ನು ಭಾದ್ರಪದ ತಿಂಗಳ ಶುಕ್ಲ ಪಕ್ಷದ ಚತುರ್ಥಿ ತಿಥಿಯಲ್ಲಿ ಆಚರಿಸಲಾಗುವುದು. ಈ ಬಾರಿ ಗಣೇಶ ಚತುರ್ಥಿಯನ್ನು ಆಗಸ್ಟ್ 31 ರಂದು ಬುಧವಾರ ಆಚರಿಸಲಾಗುತ್ತದೆ. ಬುದ್ಧಿವಂತಿಕೆಯ ಪ್ರತೀಕವಾದ ಗಣೇಶನನ್ನು ಈ ದಿನ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮುಂಬೈನಲ್ಲಂತೂ ಗಣೇಶ ಚತುರ್ಥಿಯೆಂದರೆ ಎಲ್ಲಿಲ್ಲದ ಸಂಭ್ರಮ, ಸಡಗರ. ಆದರೆ ಈ ಬಾರಿ ಕೊರೊನಾ ಬಹುಶಃ ಗಣೇಶ ಚತುರ್ಥಿ ಆಚರಣೆಗೆ ಅಡ್ಡಿಯಾಗಬಹುದು. ಮನೆಯಲ್ಲೂ ಕೂಡ ಗಣೇಶನ ವಿಗ್ರಹಗಳನ್ನಿಟ್ಟು ಪೂಜಿಸಲಾಗುತ್ತದೆ.🕉️
🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು 📱9482655011🙏🙏🙏
[01/08, 7:03 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️
*ನಾಗರ ಪಂಚಮಿ : ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು ಮಹತ್ವಗಳ ಸಂಪೂರ್ಣ ವಿವರ..!*
ಭಗವಾನ್ ಶಿವನಿಗೆ ಅರ್ಪಿತವಾದ ಶ್ರಾವಣ ಮಾಸ ಪ್ರಸ್ತುತ ನಡೆಯುತ್ತಿದೆ. ಈ ತಿಂಗಳಲ್ಲಿ ವಿವಿಧ ಉಪವಾಸ ಮತ್ತು ಹಬ್ಬಗಳು ಬರುತ್ತವೆ. ಆದರೆ ಈ ಹಬ್ಬಗಳಲ್ಲಿ ನಾಗಪಂಚಮಿ ಹಬ್ಬ ಬಹಳ ವಿಶೇಷವಾಗಿದೆ. ಪಂಚಾಂಗದ ಪ್ರಕಾರ, ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಶಿವನ ಜೊತೆಗೆ ಸರ್ಪಗಳನ್ನು ಪೂಜಿಸುವ ನಿಯಮವಿದೆ. ನಾಗ ಪಂಚಮಿಯಂದು ಸರ್ಪಗಳನ್ನು ಪೂಜಿಸುವುದರಿಂದ ಸರ್ಪ ದೋಷಗಳು ಮತ್ತು ಕಾಳ ಸರ್ಪದೋಷ ದೂರವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ವರ್ಷದ ನಾಗರ ಪಂಚಮಿ ಬಹಳ ವಿಶೇಷವಾಗಿದೆ ಏಕೆಂದರೆ ಹಲವು ವರ್ಷಗಳ ನಂತರ ಈ ಬಾರಿ ಅಪರೂಪದ ಸಂಯೋಗವು ಈ ದಿನ ರೂಪುಗೊಳ್ಳಲಿದೆ. ಈ ವರ್ಷ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 2 ರಂದು ಮಂಗಳವಾರ ಆಚರಿಸಲಾಗುತ್ತದೆ. ಈ ಬಾರಿ ನಾಗರ ಪಂಚಮಿಯ ಶುಭ ಮುಹೂರ್ತ ಮತ್ತು ಮಹತ್ವವೇನು ನೋಡೋಣ..
*ನಾಗರ ಪಂಚಮಿ 2022 ಶುಭ ಮುಹೂರ್ತ:*
ಶ್ರಾವಣ ಶುಕ್ಲ ಪಕ್ಷ ಪಂಚಮಿ ತಿಥಿ ಆರಂಭ: 2022 *ಆಗಸ್ಟ್ 2* ರಂದು *ಮಂಗಳವಾರ ಬೆಳಿಗ್ಗೆ 5:12* ರಿಂದ
ಶ್ರಾವಣ ಶುಕ್ಲ ಪಕ್ಷ ಪಂಚಮಿ ತಿಥಿ ಮುಕ್ತಾಯ: 2022 *ಆಗಸ್ಟ್ 3* ರಂದು *ಬುಧವಾರ ಬೆಳಿಗ್ಗೆ 5:41* ರವರೆಗೆ
ನಾಗರ ಪಂಚಮಿ ಪೂಜೆಗೆ ಶುಭ ಮುಹೂರ್ತ: 2022 *ಆಗಸ್ಟ್ 2* ರಂದು *ಮಂಗಳವಾರ ಬೆಳಿಗ್ಗೆ 5:43 ರಿಂದ ಬೆಳಿಗ್ಗೆ 8:25 ರವರೆಗೆ*
ಪೂಜೆ ಅವಧಿ: 2 ಗಂಟೆ 42 ನಿಮಿಷಗಳು
ಶಿವಯೋಗ: ಆಗಸ್ಟ್ 2 ರಂದು ಸಂಜೆ 06.38 ರವರೆಗೆ
*ನಾಗರ ಪಂಚಮಿ 2022 ಶುಭ ಸಂಯೋಗ:*
*ನಾಗರ ಪಂಚಮಿ* 2022 ನ್ನು ಆಗಸ್ಟ್ 2 ರಂದು ಮಂಗಳವಾರದಂದು ಆಚರಿಸಲಾಗುತ್ತಿದ್ದು, ಇದೇ ದಿನ *ಮಂಗಳ ಗೌರಿ ವ್ರತ* ವನ್ನೂ ಆಚರಿಸಲಾಗುವುದು. ಈ ದಿನ ಸುಮಂಗಲಿಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪೂಜೆ ಮತ್ತು ಉಪವಾಸ ವ್ರತವನ್ನು ಆಚರಿಸುತ್ತಾರೆ. ಈ ವರ್ಷ ನಾಗರ ಪಂಚಮಿ ದಿನದಂದು ನಾಗದೇವತೆಯೊಂದಿಗೆ ಶಿವ ಮತ್ತು ಪಾರ್ವತಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಈ ದಿನದ ಶುಭ ಸಂಯೋಗದ ನಿಯಮಗಳ ಪ್ರಕಾರ, ನಾಗದೇವತೆ, ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುವುದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು.
[01/08, 10:23 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ತನಿ ಎರೆಯುವುದು* "ತನಿ ಎರೆಯುವುದು" ಎಂದರೆ ಸರ್ಪ ಪ್ರತಿಷ್ಠಾಪನೆಯಾದ ನಾಗರ ಕಲ್ಲಿಗೆ ಹಾಲು, ತುಪ್ಪ ಅಭಿಷೇಕ ಮಾಡಿ, ಹಸಿಕಡಲೆ, ತಂಬಿಟ್ಟು, ಚಿಗುಳಿ ಮುಂತಾದವುಗಳನ್ನು ನೈವೇದ್ಯ ಮಾಡಿ ಪೂಜಿಸುವುದು. ತನಿ ಎರೆಯುವುದಕ್ಕೆ ಯಾವುದೇ ರೀತಿಯ ದಿನವನ್ನೂ ನಿಗದಿಪಡಿಸಿರುವುದಿಲ್ಲವಾದರೂ ಸಾಮಾನ್ಯವಾಗಿ - *ಪಂಚಮಿ*, ಚತುರ್ಥಿ, ಷಷ್ಠೀ ತಿಥಿಗಳಿರುವ ದಿನಗಳಂದು ತನಿ ಎರೆಯುವುದು ವಾಡಿಕೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ಥಿ ಮತ್ತು ಪಂಚಮಿ ದಿನಗಳಲ್ಲಿ *ನಾಗ ಚತುರ್ಥಿ* ಮತ್ತು *ನಾಗರ ಪಂಚಮಿ* ಹಬ್ಬಗಳನ್ನು ಆಚರಿಸುತ್ತಾರೆ. ಅಂದಿನ ದಿನಗಳಲ್ಲಿ ಬೆಳಗಿನ ಜಾವದಲ್ಲಿ ಬೇಗನೇ ಎದ್ದು ತಣ್ಣೀರಿನ ಸ್ನಾನ ಮಾಡಿ, ಮಡಿ ಬಟ್ಟೆಗಳನ್ನು ಧರಿಸಿ, ನಾಗರ ದೇವತೆಗಳ ಆರಾಧನೆ ಮಾಡುವ ಸಂಪ್ರದಾಯ ದೇಶಾದ್ಯಂತ ಎಲ್ಲೆಡೆ ಆಚರಣೆಯಲ್ಲಿದೆ. ತನಿ ಎರೆಯುವ ಸಂಪ್ರದಾಯಕ್ಕೆ ಸಂಬಂಧಿಸಿದ ಒಂದು ಪುರಾಣೋಕ್ತ ಐತಿಹ್ಯ ಇರುವುದು ಕಂಡುಬರುತ್ತದೆ. ಸಮುದ್ರಮಂಥನ ಕಾಲದಲ್ಲಿ ಕಡೆಯುವ ಕೆಲಸವು ಸಾಗಿದಂತೆ ಉಚ್ಛೈಶ್ರವಸ್ಸು ಎಂಬ ಕುದುರೆಯು ಸಮುದ್ರದಿಂದ ಹೊರ ಬಂದಿತು. ಕುದುರೆಯ ಬಾಲವು ಕಪ್ಪಗಿದೆ ಎಂದು ಸರ್ಪಗಳ ಮಾತೆಯಾದ ಕದ್ರುವು ಹಾಗೂ ಬಾಲವು ಬಿಳಿಯದಾಗಿದೆ ಎಂದು ಗರುಡನ ತಾಯಿಯಾದ ವಿನುತೆಯ ಮಧ್ಯೆ ವಿವಾದ ಉಂಟಾಗುತ್ತದೆ. ವಾಸ್ತವವಾಗಿ ಕುದುರೆಯ ಬಾಲವು ಕಪ್ಪಾಗಿ ಇರಲಿಲ್ಲ. ಕದ್ರುವಿಗೆ ತಾನು ಸೋಲುತ್ತೇನೆಂಬ ಭೀತಿಯುಂಟಾಯಿತು. ಕೂಡಲೇ ತನ್ನ ಮಕ್ಕಳಾದ ಸರ್ಪಗಳನ್ನು ಕರೆದು ತಮಗಿರುವ ವಿಷದ ಪ್ರಭಾವದಿಂದಾಗಿ ಬಾಲವನ್ನು ಕಪ್ಪಾಗುವಂತೆ ಮಾಡಲು ಆಜ್ಞಾಪಿಸಿದಳು. ಆದರೆ, ಇದು ಅನ್ಯಾಯವೆಂದು ವಾದಿಸಿದ ಸರ್ಪಗಳು ತಾಯಿಯ ಮಾತಿಗೆ ಬೆಲೆ ಕೊಡಲಿಲ್ಲ. ಮಕ್ಕಳ ಅವಿಧೇಯತೆಯಿಂದ ಕೋಪಗೊಂಡ ಕದ್ರುವು ಸರ್ಪಗಳು ನಾಶವಾಗಲಿ ಎಂದು ಶಪಿಸಿದಳು. ತಾಯಿಯ ಶಾಪವನ್ನು ಕೇಳಿದ ಸರ್ಪಗಳು ಹೆದರಿಕೆಯಿಂದ ಬಳಲಿ ಬೆಂಡಾದವು. ವಿಧಿಯಿಲ್ಲದೆ ಒಲ್ಲದ ಮನಸ್ಸಿನಿಂದ ಕುದುರೆಯ ಬಾಲವು ಕಪ್ಪಗಾಗುವಂತೆ ಮಾಡಿ ಗರುಡನ ತಾಯಿಯಾದ ವಿನುತೆಯು ಕದ್ರುವಿನ ದಾಸಿಯಾಗುವಂತೆ ಮಾಡಿದವು. ಆದರೂ, ತಾಯಿಯ ಶಾಪವು ತನ್ನ ಕೆಲಸವನ್ನು ಮಾಡಲಾರಂಭಿಸಿತು. ಇದರಿಂದ ಸರ್ಪಗಳ ಶರೀರವು ಬಿಸಿಯಾಗಿ ಸುಡಲಾರಂಭಿಸಿತು. ಬಿಸಿಯಿಂದ ಉಂಟಾದ ಉರಿ ಮತ್ತು ದಾಹವನ್ನು ಶಮನ ಮಾಡುವ ಸಲುವಾಗಿ ಸರ್ಪಗಳಿಗೆ ಹಾಲು ಮತ್ತು ತುಪ್ಪದಿಂದ ಸ್ನಾನ ಮಾಡಿಸುವ ಪದ್ಧತಿಯು ಪ್ರಾರಂಭವಾಯಿತು. ತನಿ ಎರೆಯುವ ಸಂಪ್ರದಾಯ ಬರಲು ಮತ್ತೊಂದು ಪುರಾಣೋಕ್ತ ಐತಿಹ್ಯ ಇರುವುದು ಕಂಡುಬರುತ್ತದೆ. ಸಮುದ್ರ ಮಂಥನ ಮಾಡುವಾಗ ಮಂದರ ಪರ್ವತವನ್ನು ಕಡೆಗೋಲಾಗಿ ಮಾಡಿಕೊಂಡು ದೇವತೆಗಳು ಮತ್ತು ದಾನವರು ಸರ್ಪ ರಾಜನಾದ ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಮುದ್ರವನ್ನು ಕಡೆದು ಅಮೃತವನ್ನು ಪಡೆದರು. ಒರಟಾಗಿದ್ದ ಕಲ್ಲು ಬಂಡೆ, ಮುಳ್ಳುಗಳಿಂದ ಕೂಡಿದ್ದ ಮಂದರ ಪರ್ವತಕ್ಕೆ ಹಗ್ಗದಂತೆ ವಾಸುಕಿಯನ್ನು ಸುತ್ತಿ ಸಮುದ್ರವನ್ನು ಕಡೆದದ್ದರಿಂದ ವಾಸುಕಿಯ ಮೈಯೆಲ್ಲವೂ ಕಿತ್ತು ಹೋಗಿ, ತೀವ್ರ ರಕ್ತಸ್ರಾವದಿಂದ ಉರಿ ನೋವುಗಳನ್ನು ಅನುಭವಿಸಬೇಕಾಯಿತು. ಈ ಬಾಧೆಯನ್ನು ಶಮನ ಮಾಡುವ ಸಲುವಾಗಿ ತುಪ್ಪವನ್ನು ಹಚ್ಚಿ ಹಾಲಿನಿಂದ ಅಭಿಷೇಕ ಮಾಡಿ ನೋವು ಉರಿಯನ್ನು ಶಮನ ಮಾಡಲಾಯಿತು. ಹಾಲು ತುಪ್ಪ ಎರೆಯುವುದರಿಂದ ಸರ್ಪಗಳು ಶಾಂತಚಿತ್ತವಾಗಿ, ಭೂಲೋಕದಲ್ಲಿ ಕಷ್ಟಗಳನ್ನು ಅನುಭವಿಸುತ್ತಿರುವ ಮಾನವರನ್ನು ಹರಸಿ, ಅವರ ಸಂಕಟಗಳನ್ಮು ಪರಿಹರಿಸುವರೆಂಬ ನಂಬಿಕೆ ಪ್ರಚಾರಕ್ಕೆ ಬಂದಿರುತ್ತದೆ. ತಲೆಯೆಲ್ಲಾ ಗಾಯಗಳಾಗಿ ಯಾವುದೇ ಔಷಧೋಪಚಾರಗಳಿಂದ ವಾಸಿಯಾಗದಿದ್ದಾಗ, ಕಿವಿ ಸೋರುತ್ತಿದ್ದಾಗ, ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾಗ ಸಂಕಟಗಳನ್ನು ಅನುಭವಿಸುತ್ತಿದ್ದಾಗ, ರೋಗ ರುಜಿನಗಳಿಂದ ಬಳಲುತ್ತಿದ್ದಾಗ ನಾಗರ ಕಲ್ಲಿಗೆ ಭಕ್ತಿಯಿಂದ ತನಿ ಎರೆದು ನಾಗ ದೇವತೆಗಳ ಆಶೀರ್ವಾದ ಬಲದಿಂದ ಸಂಕಟಗಳನ್ನು ಪರಿಹರಿಸಿಕೊಳ್ಳುತ್ತಾರೆ. *ತನಿ ಎರೆಯುವ ಕ್ರಮ*:- ನಾಗರ ಕಲ್ಲಿಗೆ ತನಿ ಎರೆಯಲು ನಿಶ್ಚಯಿಸಿದ ಹಿಂದಿನ ದಿನ ಫಲಾಹಾರ ಅಥವಾ ಹಾಲನ್ನಷ್ಟೇ ಸೇವಿಸಬೇಕು. ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ, ಮಡಿ ಬಟ್ಟೆಗಳನ್ನು ಧರಿಸಿ ತನಿ ಎರೆಯಲು ತಯಾರಾಗಬೇಕು. ತಣ್ಣೀರಿನ ಸ್ನಾನ ಮಾಡಲು ಆಗದಿದ್ದವರು ಬಿಸಿ ನೀರಿನ ತಲೆ ಸ್ನಾನ ಮಾಡಬಹುದು. ಈ ಕಾರ್ಯಕ್ರಮಕ್ಕೆ ಬೇಕಾಗಿರುವುದು ಭಕ್ತಿ ಶ್ರದ್ಧೆ ಬಹಳ ಮುಖ್ಯ. *ಪೂಜೆಗೆ ಬೇಕಾಗುವ ಸಾಮಗ್ರಿಗಳು* :- ೧. ಅರಿಶಿನ, ಕುಂಕುಮ, ಗಂಧ, ವೀಳ್ಯದೆಲೆ, ಅಡಿಕೆ, ಗಂಧದ ಕಡ್ಡಿ, ಕರ್ಪೂರ. ೨. ಬಿಡಿ ಹೂಗಳು, ಕಟ್ಟಿದ ಹೂಗಳು, ಗೆಜ್ಜೆ ವಸ್ತ್ರ. ೩. ತಟ್ಟೆ, ಬಟ್ಟಲು, ಆರತಿ ತಟ್ಟೆ, ಹಲಗಾರತಿ, ಹೂಬತ್ತಿ, ತುಪ್ಪದ ಬತ್ತಿ. ೪. ಹಸುವಿನ ಹಾಲು (ಕಾಯಿಸಿರಬಾರದು), ಹಸುವಿನ ತುಪ್ಪ. ೫. ನೈವೇದ್ಯ - ನೆನೆಸಿದ ಹಸಿಕಡಲೆ, ಚಿಗುಳಿ ಉಂಡೆ, ಹಸಿ ಅಕ್ಕಿ ತಂಬಿಟ್ಟು. ಇದನ್ನು ಹೊರತುಪಡಿಸಿ ಸಾಧ್ಯವಾದರೆ ಬೇರೆ ಸಿಹಿ ತಿಂಡಿ - ಕಜ್ಜಾಯ, ಹೋಳಿಗೆ....ಮಾಡಬಹುದು. (ಎಲ್ಲವನ್ನೂ ಸ್ನಾನ ಮಾಡಿ, ಮಡಿಯಿಂದ ಮಾತನಾಡದೇ, ಎಂಜಲು ಮಾಡದೇ ತಯಾರಿಸಬೇಕು). ೬. ಹಣ್ಣುಗಳು, ತೆಂಗಿನಕಾಯಿ. ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆಗೊಂಡಿರುವ ನಾಗರಕಲ್ಲಿಗೆ ತನಿ ಎರೆಯುವ ಪದ್ಧತಿಯು ಸಾಮಾನ್ಯವಾಗಿರುತ್ತದೆ. ಇಂತಹ ಅನುಕೂಲವಿಲ್ಲದವರು ಮನೆಯಲ್ಲಿಯೇ ಬೆಳ್ಳಿಯ ನಾಗಪ್ಪನನ್ನಾಗಲೀ ಅಥವಾ ಬೇರಾವುದೇ ನಾಗರ ಮೂರ್ತಿಯನ್ನಾಗಲೀ ತಟ್ಟೆಯಲ್ಲಿಟ್ಟು ಹಾಲು ತುಪ್ಪದ ತನಿ ಎರೆಯಬಹುದು. ಹೇಗೆ ಮಾಡಿದರೂ ಭಕ್ತಿ, ಶ್ರದ್ಧೆಗಳಿಂದ ಆಚರಣೆ ಮಾಡಿದ್ದಲ್ಲಿ ಮಾತ್ರ ಫಲಗಳು ಸಿಕ್ಕೇ ಸಿಗುತ್ತವೆ. *ಪೂಜಾ ವಿಧಾನ* :- ತನಿ ಎರೆಯುವುದರಲ್ಲಿ ಯಾವುದೇ ಲೋಪದೋಷಗಳನ್ನು ಮಾಡಬಾರದು. ಯಾವುದೇ ರೀತಿಯ ಮೈಲಿಗೆ ಆಗದಂತೆ ಎಚ್ಚರಿಕೆ ವಹಿಸಬೇಕು. ಪೂಜೆ ಸಲ್ಲಿಸುವ ಕ್ರಮದಂತೆಯೇ ನೆರವೇರಿಸಬೇಕು. ಸರ್ಪ ಗಾಯತ್ರೀ ಮಂತ್ರ, ಸರ್ಪ ಸೂಕ್ತ, ಸುಬ್ರಹ್ಮಣ್ಯ ಅಷ್ಟೋತ್ತರ ಮುಂತಾದವುಗಳನ್ನು ಹೇಳಿಕೊಳ್ಳುತ್ತಾ ಭಕ್ತಿಯಿಂದ ಆರಾಧನೆ ಮಾಡಬೇಕು. ಮೊದಲಿಗೆ ನಾಗದೇವತೆಗಳಿಗೆ ಸಂಕಲ್ಪ ಮಾಡಿ, ನೀರಿನ ಅಭಿಷೇಕ ಮಾಡಿ. ಹಾಲು ಮತ್ತು ತುಪ್ಪದ ಅಭಿಷೇಕ ಮಾಡಬೇಕು. ಮೂರ್ತಿಗಳನ್ನು ಸ್ವಚ್ಛವಾಗಿ ಯಾವುದೇ ಅಂಟು ಇಲ್ಲದಂತೆ ತೊಳೆಯಬೇಕು. ಅರಿಶಿನವನ್ನು ಕಲಸಿ ಮೂರ್ತಿಗಳಿಗೆ ಸಂಪೂರ್ಣವಾಗಿ ಲೇಪಿಸಬೇಕು. ಗಂಧ, ಕುಂಕುಮ, ಪುಷ್ಪ ಮಾಲಿಕೆ, ಗೆಜ್ಜೆ ವಸ್ತ್ರಗಳಿಂದ ಅಲಂಕರಿಸಬೇಕು. ಪುಷ್ಪಾಕ್ಷತೆಗಳಿಂದ ಅರ್ಚಸಿ, ಧೂಪ, ದೀಪ, ನೈವೇದ್ಯವನ್ನು ಸಮರ್ಪಿಸಿ, ಮಂಗಳ ನೀರಾಂಜನ ಸಲ್ಲಿಸಬೇಕು. ನಂತರ ದೇವರಿಗೆ ಪ್ರದಕ್ಷಿಣ ನಮಸ್ಕಾರ ಮಾಡಿ, ಮನಸ್ಸಿನಲ್ಲಿರುವ ಕೋರಿಕೆಯನ್ನು ಸಲ್ಲಿಸಿ ಅವುಗಳನ್ನು ಈಡೇರಿಸುವಂತೆ ಸರ್ಪ ದೇವತೆಗಳನ್ನು ಪ್ರಾರ್ಥಿಸಬೇಕು. ಪೂಜೆಯನ್ನು ಸಾಂಗವಾಗಿ ನೆರವೇರಿಸಿದ ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ, ಹೂಗಳನ್ನು ನೀಡಬೇಕು. ಬ್ರಾಹ್ಮಣರಿಗೆ ಅಥವಾ ಸತ್ಪಾತ್ರರಿಗೆ ಯಥೋಚಿತವಾಗಿ ದಾನ ಮಾಡಬೇಕು.
*ಮುಖ್ಯವಾಗಿ ಪಾಲಿಸಬೇಕಾದ ಕೆಲವು ನಿಯಮಗಳು* : ೧. ವ್ರತಾಚರಣೆ ಮಾಡುವವರು ಹಿಂದಿನ ದಿನ ಹಾಗೂ ಪೂಜೆಯ ದಿನ ಮಾಂಸ ಮದಿರೆಗಳ ಸೇವನೆ ಮಾಡಿರಬಾರದು. ೨. ಪೂಜೆಯ ದಿನ ಆಹಾರದಲ್ಲಿ ಈರುಳ್ಳಿ ಬೆಳ್ಳುಳ್ಳಿಗಳನ್ನು ಬಳಸಬಾರದು. ೩. ಪೂಜೆ ಸಲ್ಲಿಸುವವರು ಅವಶ್ಯವಾಗಿ ಮಡಿ ವಸ್ತ್ರಗಳನ್ನು ಧರಿಸಬೇಕು. ಪುರುಷರು ಪಂಚೆ ಮತ್ತು ಶಲ್ಯ, ಸ್ತ್ರೀಯರು ಸೀರೆ ಕುಪ್ಪಸ. ಯಾವುದೇ ಕಾರಣಕ್ಕೂ ಪಾಶ್ಚಿಮಾತ್ಯ ವಸ್ತ್ರಗಳನ್ನು ಧರಿಸಿ ಮಾಡಬಾರದು. ೪. ಹಾಲು ತುಪ್ಪಗಳನ್ನು ಬೆಳ್ಳಿ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಬಳಸಿ ಅರ್ಪಿಸಬೇಕು. ಹಾಲಿನ ಪ್ಯಾಕೆಟ್ ಅಥವಾ ಬಾಟಲಿಗಳಲ್ಲಿ ಹಾಕಬಾರದು. ೫. ಕೆಲವು ಜನರಿಗೆ ಹಾಲ ಅಥವಾ ಮೊಸರನ್ನು ಸುರಿದು ಹಾಗೆ ಹೋಗುವ ಅಭ್ಯಾಸ ಇರುತ್ತದೆ. ಇಂತಹವರು ಮಹಾ ದೋಷಕ್ಕೆ ಗುರಿಯಾಗುತ್ತಾರೆ.
*ಸರ್ಪಾರಾಧನೆ* ಸರ್ಪ ದೇವತೆಗಳ ಆರಾಧನೆಯನ್ನು ಶುಕ್ಲ ಪಕ್ಷದ ಮುಖ್ಯವಾಗಿ ಪಂಚಮಿ, ಷಷ್ಠೀ ದಿನಗಳಂದು, ಅಲ್ಲದೇ ಬಿದಿಗೆ, ತದಿಗೆ, ಚೌತಿ, ಸಪ್ತಮಿ, ಅಷ್ಟಮಿ ಅಥವಾ ಪೂರ್ಣಿಮಾ ತಿಥಿಗಳಲ್ಲಿ, ಮಂಗಳವಾರ, ಗುರುವಾರ, ಶುಕ್ರವಾರ, ಸೋಮವಾರ ದಿನಗಳಲ್ಲಿ ಮಾಡಬಹುದು. ಈ ದಿನಗಳಲ್ಲಿ ಆರಿದ್ರಾ ಅಥವಾ ಆಶ್ಲೇಷ ನಕ್ಷತ್ರಗಳು ಬಂದರೆ ಇನ್ನೂ ವಿಶೇಷ ಫಲದಾಯಕವಾಗಿರುತ್ತದೆ. ತಿಳಿದೋ ಅಥವಾ ತಿಳಿಯದೆಯೋ ಮಾಡಿರಬಹುದಾಗಿರುವ ಸರ್ಪ ನಿಂದನೆ, ಸರ್ಪ ಹತ್ಯೆ, ಸರ್ಪ ವಾಸಸ್ಥಾನ ನಾಶ, ಇವೇ ಮೊದಲಾದ ಅಪಚಾರಗಳಿಂದ ಉಂಟಾಗಿರುವ ಸರ್ಪಶಾಪ, ಸರ್ಪದೋಷ ಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾಗದೇವತೆಗಳ ಆರಾಧನೆ ಅತ್ಯಂತ ಸುಲಭದ ಮಾರ್ಗ. ನಾಗ ಪೂಜೆಯನ್ನು ಪರಿಶುದ್ಧವಾಗಿರುವ ಸ್ಥಳದಲ್ಲಿಯೇ ಆಚರಿಸಬೇಕು. ಮನೆಯಲ್ಲಿ ಮಾಡುವುದಾದರೂ ಸ್ಥಳವನ್ನು ಶುದ್ಧೀಕರಿಸಿ ಪೂಜೆಯನ್ನು ಮಾಡಬೇಕು. ll ಶ್ರೀ ನವನಾಗ ಅಷ್ಟೋತ್ತರ ಶತನಾಮಾವಳಿ ll
ಓಂ ಅನಂತನಾಗಾಯ ನಮಃ
ಓಂ ಅನನ್ತರಾಯ ನಮಃ
ಓಂ ಅನನ್ತಮಾತ್ರಾಯ ನಮಃ
ಓಂ ಅನಾಮಧೇಯಾಯ ನಮಃ
ಓಂ ಅನ್ತರಾತ್ಮನೇ ನಮಃ
ಓಂ ಅನನ್ತಾಯ ನಮಃ
ಓಂ ಅನಾಭಾಸಾಯ ನಮಃ
ಓಂ ಅನಾಧಾರಾಯ ನಮಃ
ಓಂ ಅನಾಶ್ರಯಾಯ ನಮಃ
ಓಂ ಅನಿರುಕ್ತಾಯ ನಮಃ
ಓಂ ಅನನ್ನಮಯಾಯ ನಮಃ
ಓಂ ಅನಿರ್ವಚನೀಯಾಯ ನಮಃ 12
ಓಂ ವಾಸುಕಿನಾಗಾಯ ನಮಃ
ಓಂ ವಾಸಸಕಲಾಧಾರಾಯ ನಮಃ
ಓಂ ವಾಸವಾದ್ಯರ್ಚಿತಾಯ ನಮಃ
ಓಂ ವಾಗ್ವಿಚಕ್ಷಣಾಯ ನಮಃ
ಓಂ ವಾಕ್ಯಸಮಾವೃತಾಯ ನಮಃ
ಓಂ ವಾಮಪಾಶಾಯ ನಮಃ
ಓಂ ವಾರಿವಸ್ಕೃತಾಯ ನಮಃ
ಓಂ ವನನರ್ತಕಾಯ ನಮಃ
ಓಂ ವಪಯೇ ನಮಃ
ಓಂ ವಾರಾಂಗನಾರ್ಚಿತಾಯ ನಮಃ
ಓಂ ವಾಮಾಗಮಪೂಜಿತಾಯ ನಮಃ
ಓಂ ವಾಹನಾದಿವಿಶೇಷಿತಾಯ ನಮಃ 24
ಓಂ ಶೇಷನಾಗಾಯ ನಮಃ
ಓಂ ಶಾನ್ತಾತ್ಮನೇ ನಮಃ
ಓಂ ಶಾಶ್ವತಾಯ ನಮಃ
ಓಂ ಶಾನ್ತಿದಾಯ ನಮಃ
ಓಂ ಶಾನ್ತಾರಯೇ ನಮಃ
ಓಂ ಶಂಗಾಯ ನಮಃ
ಓಂ ಶಾನ್ತಪ್ರಿಯಾಯ ನಮಃ
ಓಂ ಶುಭಾನನಾಯ ನಮಃ
ಓಂ ಶಮಾಯ ನಮಃ
ಓಂ ಶುಭಾತ್ಮನೇ ನಮಃ
ಓಂ ಶುದ್ಧಾತ್ಮನೇ ನಮಃ
ಓಂ ಶಕ್ತಿಮಾರ್ಗಪರಾಯಣಾಯ ನಮಃ
36
ಓಂ ಪದ್ಮನಾಭನಾಗಾಯ ನಮಃ
ಓಂ ಪರಮಾಯ ನಮಃ
ಓಂ ಪದಾಯ ನಮಃ
ಓಂ ಪರಮಾಯ ನಮಃ
ಓಂ ಪರಮಾದಾಯ ನಮಃ
ಓಂ ಪರವಿದ್ಯಾವಿಕರ್ಷಣಾಯ ನಮಃ
ಓಂ ಪತಯೇ ನಮಃ
ಓಂ ಪಾತಿತ್ಯಸಂಹರ್ತ್ರೇ ನಮಃ
ಓಂ ಪರೋನ್ನತಿಮತೇ ನಮಃ
ಓಂ ಪರಮಸನ್ತೋಷಾಯ ನಮಃ
ಓಂ ಪರನಿರ್ವಾಣತೃಪ್ತಯೇ ನಮಃ
ಓಂ ಪರಸಚ್ಚಿತ್ಸುಖಾತ್ಮಕಾಯ ನಮಃ 48
ಓಂ ಕಂಬಲನಾಗಾಯ ನಮಃ
ಓಂ ಕರುಣಾಕರಾಯ ನಮಃ
ಓಂ ಕಲ್ಪಾತೀತಾಯ ನಮಃ
ಓಂ ಕಲ್ಪನಾರಹಿತಾಯ ನಮಃ
ಓಂ ಕಲ್ಪಸಾಕ್ಷಿಣೇ ನಮಃ
ಓಂ ಕಲ್ಪಕವತ್ಸ್ಥಿತಾಯ ನಮಃ
ಓಂ ಕರ್ಮಾಧ್ಯಕ್ಷಾಯ ನಮಃ
ಓಂ ಕುಂತಸಿದ್ಧಾಯ ನಮಃ
ಓಂ ಕುಂತಮೇಧಾಯ ನಮಃ
ಓಂ ಕೃತಿಸಾರಜ್ಞಾಯ ನಮಃ
ಓಂ ಕರುಣಾತ್ಮನೇ ನಮಃ
ಓಂ ಕಾರಣಸಾಕ್ಷಿಣೇ ನಮಃ 60
ಓಂ ಶಂಕಪಾಲನಾಗಾಯ ನಮಃ
ಓಂ ಶತಯಾಗಾಯ ನಮಃ
ಓಂ ಶತಾನನ್ದಾಯ ನಮಃ
ಓಂ ಶಮಪ್ರಾಪ್ಯಾಯ
ಓಂ ಶರ್ಮದಾಯ ನಮಃ
ಓಂ ಶತಕ್ರತವೇ ನಮಃ
ಓಂ ಶುಭದಕ್ಷಾಯ ನಮಃ
ಓಂ ಶಮನಕ್ಷಮಾಯ ನಮಃ
ಓಂ ಶರ್ವಾಯ ನಮಃ
ಓಂ ಶುಷ್ಕ್ಯಾಯ ನಮಃ
ಓಂ ಶೃಂಗಾರರೂಪಾಯ ನಮಃ
ಓಂ ಶುದ್ಧಹೃದಯಾಯ ನಮಃ 72
ಓಂ ದೃತರಾಷ್ಟ್ರನಾಗಾಯ ನಮಃ
ಓಂ ದೃಢವ್ರತಾಯ ನಮಃ
ಓಂ ದೃಪ್ತಾಯ ನಮಃ
ಓಂ ದ್ರಷ್ಟ್ರೇ ನಮಃ
ಓಂ ದ್ರುಹಿಣಾಯ ನಮಃ
ಓಂ ದೂರಾಯ ನಮಃ
ಓಂ ದ್ವಿಜಪ್ರಿಯಾಯ ನಮಃ
ಓಂ ದ್ವಿತನವೇ ನಮಃ
ಓಂ ದೃಢಾಯುಧಾಯ ನಮಃ
ಓಂ ದೃಷ್ಟಿಪ್ರದಾಯ ನಮಃ
ಓಂ ದ್ರೌಣಿರಕ್ಷಾವಿಚಕ್ಷಣಾಯ ನಮಃ
ಓಂ ದೃಪ್ತಕ್ಷತ್ರಕುಲಾಂತಕಾಯ ನಮಃ 86
ಓಂ ತಕ್ಷಕನಾಗಾಯ ನಮಃ
ಓಂ ತದಾಕಾರಾಯ ನಮಃ
ಓಂ ತತ್ತ್ವದಾಯ ನಮಃ
ಓಂ ತರಣಿಪ್ರಿಯಾಯ ನಮಃ
ಓಂ ತಾನ್ತ್ರೇಯಾಯ ನಮಃ
ಓಂ ತಮೋಘ್ನೇ ನಮಃ
ಓಂ ತನ್ವಿನೇ ನಮಃ
ಓಂ ತರುಪ್ರಿಯಾಯ ನಮಃ
ಓಂ ತಪಸ್ವಿನೇ ನಮಃ
ಓಂ ತಾಪಸಿನೇ ನಮಃ
ಓಂ ತಾಪತ್ರಯಾತೀತಾಯ ನಮಃ
ಓಂ ತದಾಕಾರಸ್ತಾಂಡವಿನೇ ನಮಃ 96
ಓಂ ಕಾಲಿಯನಾಗಾಯ ನಮಃ
ಓಂ ಕಾಲಿಯೋಗಾಯ ನಮಃ
ಓಂ ಕಾಲಿಸಮಾಯ ನಮಃ
ಓಂ ಕಾಲಿನಮ್ರಾಯ ನಮಃ
ಓಂ ಕಾಲಾಯ ನಮಃ
ಓಂ ಕಾಲಜ್ಞಾಯ ನಮಃ
ಓಂ ಕಾಲಕೃಪಾನಿಧಯೇ ನಮಃ
ಓಂ ಕಾಲವಿತ್ಕಾಲಾಯ ನಮಃ
ಓಂ ಕಾಲಚಕ್ರಪ್ರವರ್ತಕಾಯ ನಮಃ
ಓಂ ಕಾರ್ಯಾನುತುದಾಯ ನಮಃ
ಓಂ ಕಾರ್ಯಕಾರಣರೂಪಾಯ ನಮಃ
ಓಂ ಕಾರ್ಯಾನನ್ದವಿಹೀನಾಯ ನಮಃ 108
ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ನವನಾಗ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
[01/08, 10:23 AM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ಸರ್ಪದೇವತಾ ಅಷ್ಟೋತ್ತರ ಮಹತ್ವ*
ಶ್ರೀ ಸರ್ಪರಾಜ ಅಷ್ಟೋತ್ತರ ಬಹಳ ಅಪರೂಪ ಮತ್ತು ಅತ್ಯಂತ ವಿಶೇಷವಾದದ್ದು, ಪವಿತ್ರವಾದದ್ದು, ತುಂಬಾ ಶಕ್ತಿಯುತವಾದದ್ದು..
ಪರಮ ಪವಿತ್ರವಾದ ಶ್ರೀ ಸರ್ಪರಾಜ ದೇವರ ಅಷ್ಟೋತ್ತರದಲ್ಲಿ ಮಹಾವಿಶೇಷವಾದ ಸರ್ಪರಾಜರುಗಳ ನಾಮಗಳಿವೆ..
ಅನೇಕ ಚರಿತ್ರೆಗಳಲ್ಲಿ, ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಈ ಸರ್ಪರಾಜರ ಬಗ್ಗೆ ಮಾಹಿತಿಗಳು ದೊರಕುತ್ತವೆ.
ಅವುಗಳಲ್ಲಿ ಮುಖ್ಯವಾಗಿ ನವನಾಗೇಂದ್ರರ ಹೆಸರುಗಳು ತುಂಬಾ ವಿಶೇಷ..
ಅನಂತ, ವಾಸುಕಿ, ತಕ್ಷಕ, ವಿಶ್ವತೋಮುಖ, ಕಾರ್ಕೋಟಕ, ಮಹಾಪದ್ಮ, ಪದ್ಮ, ಶಂಖಪಾಲ, ಧೃತರಾಷ್ಟ್ರ
ಶ್ರೀ ಸರ್ಪರಾಜರ ಹೆಸರುಗಳು ಹೇಗೆ ವಿಶೇಷವೋ ಅದೇ ರೀತಿ 16 ಜನ ನಾಗಮಾತೆಯರು ಸಹ ಬಹಳ ವಿಶೇಷ..
ಶ್ರೀ ನಾಗಮಾತೇ, ನಾಗಭಗಿನೀ, ವಿಷಹರೇ, ಮೃತಸಂಜೀವಿನೀ, ಸಿದ್ಧಯೋಗಿನೀ, ಯೋಗಿನೀ, ಪ್ರಿಯಾ, ಜರತ್ಕಾರು, ಶ್ರೀ ಜಗದ್ಗೌರಿ, ಮಾನಸಾ, ವೈಷ್ಣವೀ, ಶೈವೀ, ನಾಗೇಶ್ವರೀ, ಆಸ್ತಿಕಾ, ಮಾತಾ, ವಿಷಹರಾ ದೇವೀ.
ಮುಖ್ಯವಾಗಿ ಸ್ತ್ರೀಯರು ಪ್ರತಿದಿವಸ ಈ ದೇವಿಯರ ಸ್ಮರಣೆ ಮಾಡುತ್ತಾರೋ ಅವರು ಧೀರ್ಘ ಸುಮಂಗಲಿಯಾಗಿರುತ್ತಾರೆ.., ಮನೆಯಲ್ಲಿ ಗಂಡಹೆಂಡತಿ ಅನ್ಯೋನ್ಯವಾಗಿರುತ್ತಾರೆ, ದಾಂಪತ್ಯ ಜೀವನ ಸುಖಕರವಾಗಿರುತ್ತದೆ..
ಅಷ್ಟೋತ್ತರ ಪಾರಾಯಣ ಮಾಡುವುದರ ಫಲ..
೧. ಪ್ರತಿದಿನವೂ ಶ್ರೀ ನವನಾಗೇಂದ್ರರ ಪ್ರಾರ್ಥನೆ ಮತ್ತು ಶ್ರೀ ನಾಗಮಾತೆಯರನ್ನು ಸ್ಮರಿಸಿ, ಸರ್ಪರಾಜ ಅಷ್ಟೋತ್ತರ ಓದಿದರೆ, ನಿಮ್ಮ ಮನೆಯ ಮೇಲೆ ಸರ್ಪದೇವರ ಆಶೀರ್ವಾದವಿದ್ದು , ಸರ್ವಭಯ, ಸರ್ಪಭಯ, ಶತೃಭಯ ನಿವಾರಣೆಯಾಗುತ್ತದೆ ..
೨. ನವನಾಗೇಂದ್ರರು ಮತ್ತು ನಾಗದೇವತೆಯರ ಸ್ಮರಣೆ ಮಾಡಿ , ಸರ್ಪರಾಜ ಅಷ್ಟೋತ್ತರ ಓದಿ, ಹುತ್ತಕ್ಕೆ ನಮಸ್ಕಾರ ಮಾಡುತ್ತಾ ಬಂದರೆ, ಮನೆಯಲ್ಲಿ ಜಗಳ ನಿವಾರಣೆಯಾಗಿ , ಸಂತೋಷದ ಜೀವನ ಮಾಡುವಿರಿ. ಎಲ್ಲರೂ ಆರೋಗ್ಯವಾಗಿರುತ್ತಾರೆ..
೩. ಯಾರಿಗೆ ಸಂತಾನಭಾಗ್ಯ ಇರುವುದಿಲ್ಲವೋ ಅವರು ಅಶ್ವತ್ಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ಪೂಜೆ ಮಾಡಿಸಿ, ಸರ್ಪರಾಜ ಅಷ್ಟೋತ್ತರ ಓದಿ, ಮಂಡಲ ಪೂಜೆ ಮಾಡಿಸಿದರೆ ಸಂತಾನ ಭಾಗ್ಯವಾಗುತ್ತದೆ..
೪. ಗಂಡ ಹೆಂಡತಿ ವಿರಸ ಇರುವವರು, ವಿಚ್ಛೇದನ ಸಮಸ್ಯೆ ಇರುವವರು, ಪಂಚಮಿ, ಷಷ್ಠಿ ಅಥವಾ ಅಷ್ಟಮಿಯ ದಿನ ಶ್ರೀ ಸರ್ಪರಾಜ ದೇವರ ಅಷ್ಟೋತ್ತರ ಪಠಿಸಿದರೆ, ತನಿ ಎರೆದರೆ ಸರ್ವ ಸಮಸ್ಯೆ ನಿವಾರಣೆಯಾಗುತ್ತದೆ ..
೫. ಯಾರಿಗೆ ಮೂರ್ಛೆರೋಗ (ಫಿಟ್ಸ್ ) ಖಾಯಿಲೆ ಇದೆಯೋ ಅಂಥವರು ಓದಿದರೆ , ಫಿಟ್ಸ್ ಬರುವುದಿಲ್ಲ..
೬. ಕಾಲಸರ್ಪದೋಷ ಇರುವವರು ಓದಿದರೆ ಕಾಲಸರ್ಪದೋಷ, ಕಾಲಸರ್ಪ ಯೋಗವಾಗಿ ಉತ್ತಮ ಫಲ ಕೊಡುತ್ತದೆ.
೭. ಯಾವುದೇ ತರಹ ಜನ್ಮ ರಾಹು, ಚತುರ್ಥ ರಾಹು, ಪಂಚಮ ರಾಹು, ಸಪ್ತಮ ರಾಹು, ಅಷ್ಟಮ ರಾಹು ದೋಷಗಳು ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ನಿವಾರಣೆಯಾಗುತ್ತದೆ.
೮. ಯಾರು ಸರ್ಪಸಂಸ್ಕಾರ ಮಾಡಿ ನಾಗರ ಪ್ರತಿಷ್ಠೆ ಮಾಡಿಸಿದ್ದರೂ, ತೊಂದರೆ ಅನುಭವಿಸುತ್ತಿದ್ದರೆ, ಶ್ರೀ ನಾಗರಾಜ ದೇವರ ಅಷ್ಟೋತ್ತರವನ್ನು 48 ದಿವಸ ಓದಿ ಪೂಜೆ ಮಾಡಿದರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆ.
೯. ಗರ್ಭದೋಷದ ತೊಂದರೆ ಇರುವವರು ಹಾಗೂ ರಜಸ್ವಲೆ ದೋಷ ಇರುವವರು, ಶ್ರೀ ನಾಗರಾಜ ಅಷ್ಟೋತ್ತರ ಪ್ರತಿದಿನ ಓದುತ್ತಾ ಬಂದರೆ ದೋಷ ನಿವಾರಣೆಯಾಗುತ್ತದೆ, ಆರೋಗ್ಯ ಭಾಗ್ಯವಾಗುತ್ತದೆ..
೧೦. ಅಶ್ವಿನೀ ನಕ್ಷತ್ರ, ಮಖಾ ನಕ್ಷತ್ರ, ಮೂಲಾ ನಕ್ಷತ್ರ ಜನಿಸಿದವರು ಮತ್ತು ಜಾತಕದಲ್ಲಿ ಸರ್ಪದೋಷ ಇರುವವರು, ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ದೋಷ ನಿವಾರಣೆಯಾಗುತ್ತದೆ.
೧೧. ಸರ್ಪದೋಷದಿಂದ ವಿವಾಹ ಸಮಸ್ಯೆ ಇರುವವರು ಪ್ರತಿದಿನ ಶ್ರೀ ಸರ್ಪರಾಜ ಅಷ್ಟೋತ್ತರ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರ ಓದಿದರೆ ವಿವಾಹ ಸಮಸ್ಯೆ ನಿವಾರಣೆಯಾಗುತ್ತದೆ, ದಾಂಪತ್ಯ ಚೆನ್ನಾಗಿರುತ್ತದೆ..
*****************************
*ಶ್ರೀ ನಾಗದೇವತಾ ಅಷ್ಟೋತ್ತರ ಶತನಾಮಾವಳೀ*
ಓಂ ಅನಂತಾಯ ನಮಃ |
ಓಂ ಆದಿಶೇಷಾಯ ನಮಃ |
ಓಂ ಅಗದಾಯ ನಮಃ |
ಓಂ ಅಖಿಲೋರ್ವೇಚರಾಯ ನಮಃ |
ಓಂ ಅಮಿತವಿಕ್ರಮಾಯ ನಮಃ |
ಓಂ ಅನಿಮಿಷಾರ್ಚಿತಾಯ ನಮಃ |
ಓಂ ಆದಿವಂದ್ಯಾನಿವೃತ್ತಯೇ ನಮಃ |
ಓಂ ವಿನಾಯಕೋದರಬದ್ಧಾಯ ನಮಃ |
ಓಂ ವಿಷ್ಣುಪ್ರಿಯಾಯ ನಮಃ | ೯
ಓಂ ವೇದಸ್ತುತ್ಯಾಯ ನಮಃ |
ಓಂ ವಿಹಿತಧರ್ಮಾಯ ನಮಃ |
ಓಂ ವಿಷಧರಾಯ ನಮಃ |
ಓಂ ಶೇಷಾಯ ನಮಃ |
ಓಂ ಶತ್ರುಸೂದನಾಯ ನಮಃ |
ಓಂ ಅಶೇಷಫಣಾಮಂಡಲಮಂಡಿತಾಯ ನಮಃ |
ಓಂ ಅಪ್ರತಿಹತಾನುಗ್ರಹದಾಯಿನೇ ನಮಃ |
ಓಂ ಅಮಿತಾಚಾರಾಯ ನಮಃ |
ಓಂ ಅಖಂಡೈಶ್ವರ್ಯಸಂಪನ್ನಾಯ ನಮಃ | ೧೮
ಓಂ ಅಮರಾಹಿಪಸ್ತುತ್ಯಾಯ ನಮಃ |
ಓಂ ಅಘೋರರೂಪಾಯ ನಮಃ |
ಓಂ ವ್ಯಾಲವ್ಯಾಯ ನಮಃ |
ಓಂ ವಾಸುಕಯೇ ನಮಃ |
ಓಂ ವರಪ್ರದಾಯಕಾಯ ನಮಃ |
ಓಂ ವನಚರಾಯ ನಮಃ |
ಓಂ ವಂಶವರ್ಧನಾಯ ನಮಃ |
ಓಂ ವಾಸುದೇವಶಯನಾಯ ನಮಃ |
ಓಂ ವಟವೃಕ್ಷಾರ್ಚಿತಾಯ ನಮಃ | ೨೭
ಓಂ ವಿಪ್ರವೇಷಧಾರಿಣೇ ನಮಃ |
ಓಂ ತ್ವರಿತಾಗಮನಾಯ ನಮಃ |
ಓಂ ತಮೋರೂಪಾಯ ನಮಃ |
ಓಂ ದರ್ಪೀಕರಾಯ ನಮಃ |
ಓಂ ಧರಣೀಧರಾಯ ನಮಃ |
ಓಂ ಕಶ್ಯಪಾತ್ಮಜಾಯ ನಮಃ |
ಓಂ ಕಾಲರೂಪಾಯ ನಮಃ |
ಓಂ ಯುಗಾಧಿಪಾಯ ನಮಃ |
ಓಂ ಯುಗಂಧರಾಯ ನಮಃ | ೩೬
ಓಂ ರಶ್ಮಿವಂತಾಯ ನಮಃ |
ಓಂ ರಮ್ಯಗಾತ್ರಾಯ ನಮಃ |
ಓಂ ಕೇಶವಪ್ರಿಯಾಯ ನಮಃ |
ಓಂ ವಿಶ್ವಂಭರಾಯ ನಮಃ |
ಓಂ ಶಂಕರಾಭರಣಾಯ ನಮಃ |
ಓಂ ಶಂಖಪಾಲಾಯ ನಮಃ |
ಓಂ ಶಂಭುಪ್ರಿಯಾಯ ನಮಃ |
ಓಂ ಷಡಾನನಾಯ ನಮಃ |
ಓಂ ಪಂಚಶಿರಸೇ ನಮಃ | ೪೫
ಓಂ ಪಾಪನಾಶಾಯ ನಮಃ |
ಓಂ ಪ್ರಮದಾಯ ನಮಃ |
ಓಂ ಪ್ರಚಂಡಾಯ ನಮಃ |
ಓಂ ಭಕ್ತಿವಶ್ಯಾಯ ನಮಃ |
ಓಂ ಭಕ್ತರಕ್ಷಕಾಯ ನಮಃ |
ಓಂ ಬಹುಶಿರಸೇ ನಮಃ |
ಓಂ ಭಾಗ್ಯವರ್ಧನಾಯ ನಮಃ |
ಓಂ ಭವಭೀತಿಹರಾಯ ನಮಃ |
ಓಂ ತಕ್ಷಕಾಯ ನಮಃ | ೫೪
ಓಂ ಲೋಕತ್ರಯಾಧೀಶಾಯ ನಮಃ |
ಓಂ ಶಿವಾಯ ನಮಃ |
ಓಂ ವೇದವೇದ್ಯಾಯ ನಮಃ |
ಓಂ ಪೂರ್ಣಾಯ ನಮಃ |
ಓಂ ಪುಣ್ಯಾಯ ನಮಃ |
ಓಂ ಪುಣ್ಯಕೀರ್ತಯೇ ನಮಃ |
ಓಂ ಪಟೇಶಾಯ ನಮಃ |
ಓಂ ಪಾರಗಾಯ ನಮಃ |
ಓಂ ನಿಷ್ಕಲಾಯ ನಮಃ | ೬೩
ಓಂ ವರಪ್ರದಾಯ ನಮಃ |
ಓಂ ಕರ್ಕೋಟಕಾಯ ನಮಃ |
ಓಂ ಶ್ರೇಷ್ಠಾಯ ನಮಃ |
ಓಂ ಶಾಂತಾಯ ನಮಃ |
ಓಂ ದಾಂತಾಯ ನಮಃ |
ಓಂ ಆದಿತ್ಯಮರ್ದನಾಯ ನಮಃ |
ಓಂ ಸರ್ವಪೂಜ್ಯಾಯ ನಮಃ |
ಓಂ ಸರ್ವಾಕಾರಾಯ ನಮಃ |
ಓಂ ನಿರಾಶಯಾಯ ನಮಃ | ೭೨
ಓಂ ನಿರಂಜನಾಯ ನಮಃ |
ಓಂ ಐರಾವತಾಯ ನಮಃ |
ಓಂ ಶರಣ್ಯಾಯ ನಮಃ |
ಓಂ ಸರ್ವದಾಯಕಾಯ ನಮಃ |
ಓಂ ಧನಂಜಯಾಯ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ವ್ಯಕ್ತರೂಪಾಯ ನಮಃ |
ಓಂ ತಮೋಹರಾಯ ನಮಃ |
ಓಂ ಯೋಗೀಶ್ವರಾಯ ನಮಃ | ೮೧
ಓಂ ಕಲ್ಯಾಣಾಯ ನಮಃ |
ಓಂ ವಾಲಾಯ ನಮಃ |
ಓಂ ಬ್ರಹ್ಮಚಾರಿಣೇ ನಮಃ |
ಓಂ ಶಂಕರಾನಂದಕರಾಯ ನಮಃ |
ಓಂ ಜಿತಕ್ರೋಧಾಯ ನಮಃ |
ಓಂ ಜೀವಾಯ ನಮಃ |
ಓಂ ಜಯದಾಯ ನಮಃ |
ಓಂ ಜಪಪ್ರಿಯಾಯ ನಮಃ |
ಓಂ ವಿಶ್ವರೂಪಾಯ ನಮಃ | ೯೦
ಓಂ ವಿಧಿಸ್ತುತಾಯ ನಮಃ |
ಓಂ ವಿಧೀಂದ್ರಶಿವಸಂಸ್ತುತ್ಯಾಯ ನಮಃ |
ಓಂ ಶ್ರೇಯಪ್ರದಾಯ ನಮಃ |
ಓಂ ಪ್ರಾಣದಾಯ ನಮಃ |
ಓಂ ವಿಷ್ಣುತಲ್ಪಾಯ ನಮಃ |
ಓಂ ಗುಪ್ತಾಯ ನಮಃ |
ಓಂ ಗುಪ್ತತರಾಯ ನಮಃ |
ಓಂ ರಕ್ತವಸ್ತ್ರಾಯ ನಮಃ |
ಓಂ ರಕ್ತಭೂಷಾಯ ನಮಃ | ೯೯
ಓಂ ಭುಜಂಗಾಯ ನಮಃ |
ಓಂ ಭಯರೂಪಾಯ ನಮಃ |
ಓಂ ಸರೀಸೃಪಾಯ ನಮಃ |
ಓಂ ಸಕಲರೂಪಾಯ ನಮಃ |
ಓಂ ಕದ್ರುವಾಸಂಭೂತಾಯ ನಮಃ |
ಓಂ ಆಧಾರವಿಧಿಪಥಿಕಾಯ ನಮಃ |
ಓಂ ಸುಷುಮ್ನಾದ್ವಾರಮಧ್ಯಗಾಯ ನಮಃ |
ಓಂ ಫಣಿರತ್ನವಿಭೂಷಣಾಯ ನಮಃ |
ಓಂ ನಾಗೇಂದ್ರಾಯ ನಮಃ || ೧೦೮
ಇತಿ ನಾಗದೇವತಾ ಅಷ್ಟೋತ್ತರ ಶತನಾಮಾವಳಿಃ ||
Post a Comment