ಶ್ರೀ ಕಾಮಾಕ್ಷಿ ದೀಪ ಮತ್ತು ಮಹತ್ವ ...

[07/08, 9:56 AM] Pandit Venkatesh. Astrologer. Kannada: 💚🙏ನಮೋ ವಾಸುದೇವಾ🙏💚
        🙏ಕಾಮಾಕ್ಷಿ ದೀಪ🙏

ಕಾಮಾಕ್ಷಿ ದೀಪ ಮತ್ತು ಮಹತ್ವ ...
ಕಾಮಾಕ್ಷಿ ದೀಪ ಎಂದರೆ ಗಜಲಕ್ಷ್ಮಿ ದೇವಿಯ ಚಿತ್ರವಿರುವ  ದೀಪವೇ ಗಜಲಕ್ಷ್ಮಿ ದೀಪ ಅಥವಾ  ಕಾಮಾಕ್ಷಿ ದೀಪ. ಈ ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪವೆ೦ದು ಸಹ ಕರೆಯುತ್ತಾರೆ.ಈ ದೀಪದ ಬೆಳಕಿನಲ್ಲಿ ಕಾಮಾಕ್ಷಿ ದೇವಿಯೂ ನೆಲೆಸಿರುವಳು.ಕಾಮಾಕ್ಷಿ ದೇವಿಯು ಸರ್ವ ದೇವತೆಗಳಿಗೆ ಶಕ್ತಿ ಕೊಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ. 
ಆದ್ದರಿಂದಲೇ ಕಾಮಾಕ್ಷಿ ದೇವಸ್ಥಾನವನ್ನು ಬೇರೆ ದೇವಸ್ಥಾನಗಳಿಗಿಂತ ಬೆಳಗಿನ ಜಾವ ಬೇಗನೆ ತೆರೆಯುತ್ತಾರೆ.ಹಾಗೆಯೇ ರಾತ್ರಿಯ ಸಮಯದಲ್ಲಿ ಎಲ್ಲ ದೇವಸ್ಥಾನಗಳ ಬಾಗಿಲು ಮುಚ್ಚಿದ ನಂತರವೇ ಈ ಕಾಮಾಕ್ಷಿ ದೇವಿಯ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ದೇವಿಯ ಅವತಾರವಾದ ಈ ಕಾಮಾಕ್ಷಿ ದೀಪ ಬೆಳಗುವ ಮನೆ ಅಖಂಡ ಐಶ್ವರ್ಯದಿಂದ ಕೂಡಿರುತ್ತದೆ.ನಮ್ಮ ಹಿಂದೂ ಸಂಪ್ರದಾಯದಲ್ಲಿ  ಚಿನ್ನದ ಆಭರಣಗಳನ್ನು ವಂಶ ಪರಂಪರೆಯಾಗಿ ಹೇಗೆ ಮುಂದಿನ ಪೀಳಿಗೆ ನೀಡುತ್ತಾರೋ. ಹಾಗೆಯೇ ಇದನ್ನೂ  ಸಹ ಜಾಗ್ರತೆಯಿಂದ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಬಳುವಳಿಯಾಗಿ ಕೊಡುತ್ತಾರೆ.

ಮನೆಯಲ್ಲಿ ವ್ರತಗಳು, ಗೃಹಪ್ರವೇಶ ಪೂಜೆಯನ್ನು ಮಾಡುವಾಗ ಅಖಂಡ ದೀಪವನ್ನು ಹಚ್ಚಬೇಕು ಎನ್ನುವವರು ಕಾಮಾಕ್ಷಿ ದೀಪವನ್ನು ಹೆಚ್ಚಾಗಿ ಬಳಸುತ್ತಾರೆ.ಹೀಗೆ ಪುರಾಣಗಳಲ್ಲಿ ವ್ರತಗಳಲ್ಲಿ ಮತ್ತು  ಶುಭ ಕಾರ್ಯಗಳಲ್ಲಿ ಕಾಮಾಕ್ಷಿ ದೀಪಗಳನ್ನು ದೀಪಾರಾಧನೆಗೆ  ಬಳಸಿದರೆ ಒಳ್ಳೆಯದು. ದೀಪಾರಾಧನೆ ಮಾಡುವಾಗ ದೀಪಕ್ಕೆ ಕುಂಕುಮವನ್ನು ಇಟ್ಟು, ಹೂವನ್ನು ಅರ್ಪಿಸಿ,  ದೀಪವನ್ನು ಬೆಳಗಿಸಿ ನಂತರ ಮೊದಲು ದೀಪಕ್ಕೆ ಪೂಜೆ ಮಾಡಬೇಕು ನಂತರ ದೇವರ ಪೂಜೆ ಮಾಡುವುದು ನಮ್ಮ   ಸಂಪ್ರದಾಯದ ರೂಢಿಯಲ್ಲಿದೆ .ಹಾಗೆಯೇ ಕಾಮಾಕ್ಷಿ ದೀಪವನ್ನು ಬಳಸುವಾಗ ಆ ದೀಪಕ್ಕೆ ಕುಂಕುಮ ಇಟ್ಟ ನಂತರ ಅದೇ ಕೈಯಿಂದ ದೇವರ ರೂಪಕ್ಕೂ ಕುಂಕುಮ ಇಟ್ಟು, ಸುತ್ತಲೂ ಹೂವಿನಿಂದ ಅಲಂಕಾರ ಮಾಡಿ ಆ ದೀಪವನ್ನು ನೆಲಕ್ಕೆ ತಾಕದಂತೆ ಒಂದು ತಾಮ್ರದ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಇರಿಸಬೇಕು. ಈ ದೀಪವನ್ನು ಎಳ್ಳೆಣ್ಣೆ ಅಥವಾ ಹಸುವಿನ ತಾಜಾ ತುಪ್ಪದಿಂದ ದೀಪಾರಾಧನೆ ಮಾಡಿದರೆ ಒಳ್ಳೆಯದು.

ಕಾಮಾಕ್ಷಿ ದೀಪದ ಬತ್ತಿ ಹೇಗೆ ನಿಧಾನವಾಗಿ ಸುಡುತ್ತದೆಯೋ ಹಾಗೆಯೇ ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಸಹ ನಿಧಾನವಾಗಿ ತೊಲಗಿ ಆಚೆ ಹೋಗುತ್ತದೆ. ಯಾವಾಗಲೂ ದೀಪಾರಾಧನೆ ಮಾಡುವಾಗ ಎರಡು ಬತ್ತಿಗಳು ಸಾಮಾನ್ಯವಾಗಿ ಇರುವಂತೆ ನೋಡಿಕೊಳ್ಳಬೇಕು. ಕಾಮಾಕ್ಷಿ ದೀಪವನ್ನು ಯಾವಾಗಲೂ ಉತ್ತರ ಮತ್ತು ಪೂರ್ವ ದಿಕ್ಕನ್ನು ನೋಡುವಂತೆ ಇಡಬೇಕು. ದಕ್ಷಿಣ ದಿಕ್ಕಿನಲ್ಲಿ ಖಚಿತವಾಗಿ ದೀಪಾರಾಧನೆ ಮಾಡಬಾರದು.

 ಈ ದೀಪವನ್ನು ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ತೊಳೆಯಬಾರದು. ಪ್ರತಿದಿನ ಬೆಳಗಿನ ಜಾವ ಮತ್ತು ಸಾಯಂಕಾಲದ ಸಮಯದಲ್ಲಿ ಕಾಮಾಕ್ಷಿಯ ದೀಪದಿಂದ ದೀಪಾರಾಧನೆಯನ್ನು ಮನೆಯಲ್ಲಿ ಮಾಡಿದರೆ ಸಕಲ ರೀತಿಯಲ್ಲಿಯೂ ಒಳ್ಳೆಯದಾಗುವುದು....
ಓಂ ನಮೋ ಭಗವತೇ ವಾಸುದೇವಾಯಾ
💚🙏ಕೃಷ್ಣ....ಕೃಷ್ಣ....ಕೃಷ್ಣ🙏💚

(ಸಂಗ್ರಹ.. ವಾಟ್ಸಪ್)
[07/08, 9:56 AM] Pandit Venkatesh. Astrologer. Kannada: 💚🙏,ನಮೋ ವಾಸುದೇವಾ🙏💚
         🙏#ಭಜನೆ🙏

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು? 
ಸತ್ಯ ಸದಾಚಾರ ಇಲ್ಲದವನು ಜಪ
ಹತ್ತು ಸಾವಿರ ಮಾಡಿ ಫಲವೇನು?||೧||

ತನ್ನ ಸತಿ ಸುತರು ಬಂಧುಗಳ ನೋಯಿಸಿ 
ಚಿನ್ನ ದಾನವ ಮಾಡಿದರೆ ಫಲವೇನು?
ಬಿನ್ನಣದಿಂದಲಿ ದೇಶ ದೇಶವ ತಿರುಗಿ 
ಅನ್ನ ದಾನವ ಮಾಡಿ ಫಲವೇನು?||೨||

ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
ರೂಪ ಯೌವನವಿದ್ದು ಫಲವೇನು?
ತಾಪತ್ರಯದ ಸಂಸಾರ ಕೆಡಿಸುವಂಥ 
ಪಾಪಿ ಮಗನು ಇದ್ದು ಫಲವೇನು? ||೩||

ತಾಂಡವ ಧನದಿಂದ ತಂದೆ ಮಾತು ಕೇಳದ
ತುಂಡು ಮಗನು ಇದ್ದು ಫಲವೇನು?
ಭಂಡುಮಾಡಿ ಅತ್ತಿ ಮಾವನ ಬೈವ
ಮಂಡ ಸೊಸೆಯಿದ್ದು ಫಲವೇನು? ||೪||

ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು 
ಕಾನನದೊಳಗಿದ್ದು ಫಲವೇನು?
ಆನಂದ ಮೂರುತಿ ಪುರಂದರ ವಿಠಲನ 
ನೆನೆಯದ ತನುವಿದ್ದು ಫಲವೇನು? ||೫||

ಓಂ ನಮೋ ಭಗವತೇ ವಾಸುದೇವಾಯಾ
💚🙏ಕೃಷ್ಣ....ಕೃಷ್ಣ....ಕೃಷ್ಣ🙏💚
[07/08, 1:33 PM] Pandit Venkatesh. Astrologer. Kannada: ನಾಳೆ ಶ್ರಾವಣ ಏಕಾದಶಿ ಪ್ರಯುಕ್ತ
|| ಸಂಕಷ್ಟನಾಶನ ವಿಷ್ಣು ಸ್ತೋತ್ರಮ್  ||
**********************************
ಶ್ರೀ ಗಣೇಶಾಯ ನಮ:| 
ನಾರದ ಉವಾಚ:-

ಪುನರ್ದೈತ್ಯಂ ಸಮಾಯಾಂತಂ ದೃಷ್ಟ್ವಾ ದೇವಾ: ಸವಾಸವಾ: |
ಭಯಪ್ರಕಂಪಿತಾ: ಸರ್ವೆ ವಿಷ್ಣುಂ ಸ್ತೋತುಂ ಪ್ರಚಕ್ರಮು:  ||೧||

ಭಾವಾರ್ಥ:-ನಾರದರು ಹೇಳಿದರು:-
ಪುನ: ಬರುತ್ತಿರುವ ದೈತ್ಯರನ್ನು ಕಂಡು ಇಂದ್ರನೊಟ್ಟಿಗೆ  ದೇವತೆಯರೆಲ್ಲರೂ ಭೀತಿಗೊಳಗಾಗಿ ವಿಷ್ಣುವನ್ನು ಸ್ತುತಿಸಲು  ಪ್ರಾರಂಬಿಸಿದರು.

ದೇವಾ ಊಚು:-
ನಮೋ ಮತ್ಸ್ಯಕೂರ್ಮಾದಿ ನಾನಾ ಸ್ವರೂಪೈ: ಸದಾಭಕ್ತ  ಕಾರ್ಯೋದ್ಯತಾಯಾರ್ತಿಹಂತ್ರೇ |
ವಿಧಾತ್ರಾದಿ ಸರ್ಗಸ್ಥಿತಿಧ್ವಂಸಕರ್ತೆ ಗದಾಶಂಖಪದ್ಮಾದಿ ಹಸ್ತಾಯ  ತೇಸ್ತು ||೨||

ಭಾವಾರ್ಥ:-ದೇವತೆಗಳು ಹೇಳುವರು:-
ಮತ್ಸ್ಯ-ಕೂರ್ಮ ಮೊದಲಾದ ನಾನಾಸ್ವರೂಪಗಳಿಂದ ಸಮಸ್ತಕಾಲವೂ  ಭಕ್ತರ ಕಾರ್ಯಗಳಲ್ಲಿ ನಿರತನಾಗಿ ಅವರ ದುರಭಿಮಾನವನ್ನು ಅಳಿಸಿ  ಉತ್ಪತ್ತಿ,ಸ್ಥಿತಿ,ಮತ್ತು ನಾಶಗಳಿಗೆ ಸ್ವಾಮಿಯಾದವನೂ,ಕೈಗಳಲ್ಲಿ  ಗದೆ,ಶಂಖ,ಪದ್ಮ,ಚಕ್ರಗಳನ್ನು ಹಿಡಿದಿರುವವನೂ ಆಗಿರುವ ವಿಷ್ಣುವೇ  ನಿನಗೆ ಪ್ರಣಾಮಗಳು.

ರಮಾವಲ್ಲಭಾಯಾಸ್ಸುರಾಣಾಂ ನಿಹಂತ್ರೇ ಭುಜಂಗಾರಿಯಾನಾಯ  ಪೀತಾಂಬರಾಯ |
ಮಖಾದಿಕ್ರಿಯಾಪಾಕಕರ್ತ್ರೆ ವಿಕರ್ತ್ರೆ ಶರಣ್ಯಾಯ ತಸ್ಮೈ ನತಾ:  ಸ್ಮೋ ನತಾ ಸ್ಮ: ||೩||

ಭಾವಾರ್ಥ:-ರಮಾವಲ್ಲಭನಿಗೆ,ಅಸುರ  ಸಂಹಾರಕನಿಗೆ,ಗರುಢವಾಹನನಿಗೆ,ಪೀತಾಂಬರಧಾರಿಗೆ,ಯಜ್ಞಾದಿ  ಕಾರ್ಯಗಳ ಪ್ರತಿಫಲದಾಯಕನಿಗೆ,ಶರಣರನ್ನು ರಕ್ಷಿಸುವವನಿಗೆ ನಾವು  ನಮಸ್ಕರಿಸುವೆವು.

ನಮೋ ದೈತ್ಯಸಂತಾಪಿತಾಮರ್ತೃ ದು:ಖಾಚಲ ಧ್ವಂಸದಂಭೋಲಯೇ  ವಿಷ್ಣವೇ ತೇ |
ಭುಜಂಗೇಶತಲ್ಪೇಶಯಾರ್ಕ ಚಂದ್ರ ದ್ವಿನೇತ್ರಾಯ ತಸ್ಮೈ ನತಾ:  ಸ್ಮೋ ನತಾ ಸ್ಮ: ||೪||

ಭಾವಾರ್ಥ:-ದೈತ್ಯರ ಉಪಟಳದಿಂದ ಕ್ಷೋಭೆಗೊಳಗಾದ,ಮರ್ತ್ಯರ  ದು:ಖವೆಂಬ ಅತ್ಯುನ್ನತಪ್ರದೇಶವನ್ನು ನಾಶಗೊಳಿಸುವ,ಗರ್ವಗಳಿಗೆ  ಲಯಕಾರಿಯಾಗಿರುವ  ವಿಷ್ಣುವೇ;ಶೇಷಶಾಯಿಯೇ;ಸೂರ್ಯ-ಚಂದ್ರರನ್ನು ಕಣ್ಣುಗಳನ್ನಾಗಿ  ಮಾಡಿಕೊಂಡಿರುವವನೇ ನಿನಗೆ ನಮಸ್ಕರಿಸುವೆವು.
*********************************************************************************                     || ಇತಿ ಸಂಕಷ್ಟನಾಶನ ವಿಷ್ಣುಸ್ತೋತ್ರಮ್ ||  
              || ಈ ರೀತಿಯಾಗಿ ಸಂಕಷ್ಟ ನಾಶನ ವಿಷ್ಣುಸ್ತೋತ್ರಗಳ  ಭಾವಾರ್ಥವು ||
********************************************
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು 
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
*************************************
[07/08, 1:44 PM] Pandit Venkatesh. Astrologer. Kannada: *ನಿಜವಾದ ಪುಷ್ಪಾರ್ಚನೆ.*

ಭಗವಂತನನ್ನು ದೇವಾಲಯಗಳಲ್ಲಿ ಮತ್ತು ಮನೆಗಳಲ್ಲೂ ಸಹ ಸಾಮಾನ್ಯವಾಗಿ ಹೂವಿನಿಂದ ಪೂಜಿಸುತ್ತೇವೆ. ಎಷ್ಟು ತುಟ್ಟಿಯಾದ (ಹೆಚ್ಚು ಬೆಲೆಯುಳ್ಳ) ಹೂವಿನಿಂದ ಪೂಜಿಸುತ್ತೇವೆಯೋ ಅಷ್ಟು ಪುಣ್ಯ ಬರುತ್ತದೆ ಎಂದು ನಮ್ಮಲ್ಲನೇಕರು ಭಾವಿಸುತ್ತೇವೆ.

ಎಷ್ಟು ದುಡ್ಡು ಖರ್ಚು ಮಾಡಿ ಪೂಜೆ ಮಾಡಿದೆವು ಎಂದು ಹಲವರು ಸಂಭ್ರಮದಿಂದ ಹೇಳಿಕೊಳ್ಳುವುದನ್ನೂ ಸಹ ಸಾಮಾನ್ಯವಾಗಿ ನೋಡುತ್ತಿರುತ್ತೇವೆ.

 ಗಿಡಗಳಲ್ಲಿ ಬಿಡುವ ಹೂವು ಸಾಲದೆಂದು ಕೆಲವು ಧನವಂತರು ಬಂಗಾರದ ಹೂವುಗಳನ್ನು ಮಾಡಿಸುತ್ತಾರೆ. 

ಶಿವನಿಗೆ ಬಂಗಾರದ ಬಿಲ್ವಪತ್ರೆಗಳನ್ನೂ, ವಿಷ್ಣುವಿಗೆ ಬಂಗಾರದ ತುಳಸೀ ದಳಗಳನ್ನೂ, ಅಮ್ಮನವರಿಗೆ ಬಂಗಾರದ ಹೂವುಗಳಿಂದ ಅರ್ಚಿಸಿ ಅದು ತಮ್ಮ ಉನ್ನತವಾದ ಭಕ್ತಿಗೆ ನಿದರ್ಶನವೆಂದು ಭಾವಿಸುತ್ತಾರೆ. 

ಭೋಗಗಳಿಗೆ ನಿಲಯವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ನಿವಾಸವಿರುವ ಭಾರತೀಯರಲ್ಲಿ ಈ ಲಕ್ಷಣಗಳು ಸ್ವಲ್ಪ ಹೆಚ್ಚಾಗಿಯೇ ಕಂಡುಬರುತ್ತವೆ. 

ಆದರೆ, 
ಭಗವಂತನು, ಹೂವುಗಳ ಬೆಲೆಯನ್ನಾಧರಿಸಿ ವರ್ತಕನಂತೆ ಪುಣ್ಯವನ್ನು ಕರುಣಿಸುವುದಿಲ್ಲ. 

ಪುಷ್ಪಾರ್ಚನೆಯ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯವಾದುದು ಭಕ್ತಿಯಾಗಿದೆ. 

 ಇದೇ ವಿಷಯವನ್ನು ಗೀತೆಯಲ್ಲಿ *ಪತ್ರಂ, ಪುಷ್ಪಂ, ಫಲಂ, ತೋಯಂ* (ಎಲೆ, ಹೂವು, ಹಣ್ಣು, ನೀರು) ಇವುಗಳಲ್ಲಿ ಯಾವುದನ್ನಾದರೂ ನನಗೆ ಭಕ್ತಿಯಿಂದ ಅರ್ಪಿಸಿದರೆ ಸಾಕು ಎಂದು ಸ್ವಯಂ ಕೃಷ್ಣನೇ ಅಪ್ಪಣೆ ಕೊಡಿಸಿದ್ದಾನೆ. 

ದೇವರಿಗೆ ಸಮರ್ಪಿಸ ಬೇಕಾಗಿರುವುದು ಮನಸ್ಸು ಎನ್ನುವ ಪುಷ್ಪ ಎಂದು ಆದಿ ಶಂಕರರು ತಮ್ಮ ಶಿವಾನಂದ ಲಹರಿಯಲ್ಲಿ ವಿವರಿಸಿದ್ದಾರೆ.

ಹಾಗಾದರೆ, 
ಭಗವಂತನಿಗೆ ಇಷ್ಟವಾದ ಪುಷ್ಪವಾವುದು.? 
ತಾವರೆ, ನೈದಿಲೆ, ಸೇವಂತಿಗೆ, ಮಲ್ಲಿಗೆ, ಸಂಪಿಗೆ, ಕಣಗಿಲೆ, ಇವೆಲ್ಲಾ ಹೂವುಗಳನ್ನೂ ಸಹ ದೇವರ ಪೂಜೆಗೆ ಬಳಸಬಹುದು ನಿಜ. ಆದರೆ, ನಿಜವಾಗಿ ಅರ್ಪಿಸ ಬೇಕಾಗಿರುವುದು ಅವನಿಗೆ ಇಷ್ಟವಾದ ಎಂಟು ಪುಷ್ಪಗಳನ್ನು.

*ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಾಃ*
*ಸರ್ವಭೂತ ದಯಾಪುಷ್ಪಂ ಕ್ಷಮಾಪುಷ್ಪಂ ವಿಶೇಷತಃ l*
*ಶಾಂತಿಪುಷ್ಪಂ ತಪಃsಪುಷ್ಪಂ ಧ್ಯಾನಪುಷ್ಪಂ ತಥೈವ ಚ*
*ಸತ್ಯಮಷ್ಟವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್ ll*

ಭಗವಂತನಿಗೆ ಪ್ರಿಯವಾದ ಪುಷ್ಪಗಳಲ್ಲಿ ಮೊದಲನೆಯದೆ *ಅಹಿಂಸೆ.*

ಯಾವುದೇ ಜೀವಿಯನ್ನಾಗಲಿ ಯಾವುದೇ ವಿಧವಾಗಿ ಕಷ್ಟಕ್ಕೆ ಗುರಿ ಮಾಡಬಾರದು. 

ಒಬ್ಬರ ಮನಸ್ಸನ್ನು ಮಾತುಗಳ ಮೂಲಕವೂ ನೋಯಿಸಬಾರದು. 

ಮನಸ್ಸಿನಲ್ಲಿಯೂ ಸಹ ಯಾರಿಗೂ ಕೇಡು ಎಣಿಸಬಾರದು.

ಎರಡನೆಯ ಪುಷ್ಟವೆ *ಇಂದ್ರಿಯ ನಿಗ್ರಹ.*

ಮನಸ್ಸಿನಲ್ಲಿ ಬಯಕೆ ಹುಟ್ಟುವುದೇ ತಡ ನ್ಯಾಯಾ ನ್ಯಾಯಗಳನ್ನು, ಧರ್ಮಾ ಧರ್ಮಾಗಳನ್ನು ನೋಡದೆ. 

 ಇತರರಿಗೆ ಅದರಿಂದ ಯಾವ ವಿಧವಾದ ಕೆಡುಕಾಗ ಬಹುದೆನ್ನುವ ವಿವೇಚನೆಯಿಲ್ಲದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು.

ಇಂದ್ರಿಯಗಳ ಮೇಲೆ ಯಾವುದೇ ವಿಧವಾದ ಹಿಡಿತವಿಲ್ಲವೆನ್ನುವುದರ ಲಕ್ಷಣಗಳು. 

 *ಇಂದ್ರಿಯ ನಿಗ್ರಹವು* ದೇವರಿಗೆ ಇಷ್ಟವಾದ ಮತ್ತೊಂದು ಪುಷ್ಪ.

*ಸರ್ವಭೂತ ದಯೆ* ಮೂರನೆಯ ಪುಷ್ಪ. 

ಸಹ ಮಾನವರ ಮೇಲೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳಲ್ಲಿ - ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಾದಿಗಳು, ಸಸ್ಯಗಳ ಮೇಲೆಯೂ ದಯೆ ತೋರ ಬೇಕೆನ್ನುವುದು ಸನಾತನ ಭಾರತೀಯ ತತ್ತ್ವ.

ನಾಲ್ಕನೇ ಪುಷ್ಪವೇ *ಕ್ಷಮಾಗುಣ.* ನಮಗೆ ಅಪಕಾರ ಮಾಡಿದವರಿಗೂ ಸಹ ಉಪಕಾರ ಮಾಡಬೇಕು ಅವರ ಮೇಲೆ ಪ್ರತೀಕಾರ ಸಲ್ಲದು ಎನ್ನುವುದೇ ಕ್ಷಮಾಗುಣ.

*ಶಾಂತಿ* ಐದನೆಯ ಪುಷ್ಪ. ಮನಸ್ಸು ಉದ್ವೇಗಕ್ಕೆ ಒಳಗಾಗ ಬಾರದು. 

ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗುವುದು, ಹೊಗಳಿದರೆ ಉಬ್ಬಿ ಹೋಗುವುದು, ತೆಗಳಿದರೆ ಕುಗ್ಗಿ ಹೋಗುವುದು ಒಳ್ಳೆಯದಲ್ಲ, ಮನಸ್ಸನ್ನು ಪ್ರಶಾಂತವಾಗಿರಿಸಿ ಕೊಳ್ಳಬೇಕು.

ಆರನೆಯ ಪುಷ್ಪವೆ *ತಪಸ್ಸು.* ತಪಸ್ಸೆಂದರೆ ಸುತ್ತಲೂ ಹುತ್ತ ಬೆಳೆಯುವವರೆಗೆ ಒಂಟಿಕಾಲಿನ ಮೇಲೆ ನಿಲ್ಲುವುದೆಂದಲ್ಲ. 
ಆ ಮಾತಿಗೆ ಅರ್ಥ ಕೆಟ್ಟ ವಿಷಯಗಳನ್ನು ದೂರವಿರಿಸಿ ಒಳ್ಳೆಯ ಕಾರ್ಯಗಳನ್ನು ಸಾಧಿಸುವ ಚಲವನ್ನು ಹೊಂದಿರುವುದು.

ಏಳನೆಯ ಪುಷ್ಪವೆ *ಧ್ಯಾನ.* ಶಂಖದಿಂದ ಬಿದ್ದರೇನೆ ತೀರ್ಥ ಎನ್ನುವಂತೆ ಆಧುನಿಕ ವೈದ್ಯರೂ ಸಹ ಧ್ಯಾನವು ಮಾನಸಿಕ ಹಾಗು ಶಾರೀರಿಕ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದ್ದಾರೆ.

ಕಡೆಯದಾಗಿ ಹೇಳಿದ್ದರೂ ಸಹ ಮೊದಲನೆಯ ಸ್ಥಾನದಲ್ಲಿರ ಬೇಕಾಗಿರುವುದು ಎಂಟನೆಯ ಪುಷ್ಪವಾದ *ಸತ್ಯ.*

ಯಾವಾಗಲೂ ಸುಳ್ಳನ್ನು ಆಡದೇ ಇರುವುದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ಮೋಸ ಮಾಡದೇ ಇರುವುದು, ಮೊದಲಾದವು ಸತ್ಯಪರಿಪಾಲನೆಯ ಕೆಳಗೆ ಬರುತ್ತವೆ.

ಭಗವಂತನನ್ನು ಸಾಮಾನ್ಯವಾದ ಹೂವುಗಳಿಂದಾಗಲಿ, ಬಂಗಾರದ ಹೂವುಗಳಿಂದಾಗಲಿ ಪೂಜಿಸಬಹುದು. 
ಆದರೆ, 
ಪೂಜಾ ಸಮಯದಲ್ಲಿ ತಪ್ಪದೇ ಅರ್ಪಿಸಬೇಕಾದದ್ದು ಮೇಲೆ ಹೇಳಿದ ಎಂಟು ಪುಷ್ಟಗಳನ್ನೆ. 

*ಭಗವಂತನಿಗೆ ಪ್ರಿಯವಾದ ಎಂಟು ಪುಷ್ಪಗಳು.*
*- ಅಹಿಂಸೆ, ಇಂದ್ರಿಯನಿಗ್ರಹ, ಭೂತದಯೆ, ಕ್ಷಮೆ, ಶಾಂತಿ, ತಪಸ್ಸು, ಧ್ಯಾನ ಮತ್ತು ಅತ್ಯಂತ ಪ್ರಮುಖವಾಗಿರುವುದು ಸತ್ಯ ಎನ್ನುವುದನ್ನು ಮರೆಯಬಾರದು.*.
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು 
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Post a Comment

Previous Post Next Post