*ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ: ಚರ್ಚೆಯೇ ಆಗಿಲ್ಲ:
ಮುರುಘಾ ಶ್ರೀ ಗಳ ಮೇಲೆ ಎಫ್.ಐ.ಆರ್ : ತನಿಖೆಯ ನಂತರ ಸತ್ಯ ಹೊರ ಬೀಳಲಿದೆ*ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಶೀಘ್ರ ನಿರ್ಣಯ
[28/08, 2:01 PM] Deepak Karade. CM. Media. office: *ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ: ಚರ್ಚೆಯೇ ಆಗಿಲ್ಲ: ಸಿಎಂ ಬೊಮ್ಮಾಯಿ*
ಬೆಂಗಳೂರು, ಆಗಸ್ಟ್ 28: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯದವರೊಂದಿಗೆ ಮಾತನಾಡಿದರು.
ನಳಿನ್ ಕುಮಾರ್ ಕಟೀಲ್ ಅವರು ಕಳೆದ ಮೂರು ವರ್ಷಗಳಿಂದ ಪಕ್ಷವನ್ನು ಅತ್ಯಂತ ಸಮರ್ಥವಾಗಿ. ಮುನ್ನಡೆಸಿದ್ದಾರೆ. ಸುಮಾರು 8- 10 ಬಾರಿ ರಾಜ್ಯವನ್ನು ಸುತ್ತಿದ್ದಾರೆ.ಬೂತ್ ಮಟ್ಟದಿಂದ ಸಂಘಟನೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಮುನ್ನ ಹಾಗೂ ನಂತರ ವಿಧಾನ ಪರಿಷತ್ ಚುನಾವಣೆ , ಉಪ ಚುನಾವಣೆ ಎಲ್ಲವನ್ನೂ ಸಮರ್ಥವಾಗಿ ಸಂಘಟಿಸಿ ಎದುರಿಸಿದ್ದಾರೆ. ಯಶಸ್ವಿಯಾಗಿ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಮುಂದುವರೆಯುತ್ತಿದ್ದೇವೆ. ಅವರ ನೇತೃತ್ವ ಪಕ್ಷಕ್ಕೆ ಇನ್ನಷ್ಟು ಬಲ ನೀಡಲಿದೆ ಎಂದರು.
[28/08, 2:30 PM] Deepak Karade. CM. Media. office: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಮಕೂರಿನಲ್ಲಿಂದು ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಚಿತ್ರದುರ್ಗ ಬೋವಿ ಗುರುಪೀಠದ ನಿರಂಜನ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಜಿ, ಸಚಿವ ಬಿ.ಸಿ.ನಾಗೇಶ, ಸಂಸದ ಜಿ.ಎಸ್. ಬಸವರಾಜ್, ಮಾಜಿ ಸಂಸದ ಜನಾರ್ಧನ್ ಸ್ವಾಮಿ, ಶಾಸಕ ಜ್ಯೋತಿ ಗಣೇಶ್ ಹಾಗೂ ಸಮಾಜದ ಮುಖಂಡರಾದ ರವಿ ಮಾಕಳಿ, ಎಂ.ವಿ.ನಾಗರಾಜ್, ಮಂಗಮ್ಮ ಮರಿಸ್ವಾಮಿ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
[28/08, 2:31 PM] Deepak Karade. CM. Media. office: *ಮುರುಘಾ ಶ್ರೀ ಗಳ ಮೇಲೆ ಎಫ್.ಐ.ಆರ್ : ತನಿಖೆಯ ನಂತರ ಸತ್ಯ ಹೊರ ಬೀಳಲಿದೆ* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಆಗಸ್ಟ್ 28:
ಮುರುಘಾ ಶ್ರೀ ಗಳ ಮೇಲೆ ಪೋಸ್ಕೊ ಅಡಿ ಎಫ್.ಐ.ಆರ್.ದಾಖಲಾಗಿದ್ದು, ತನಿಖೆಯ ನಂತರ ಸತ್ಯ ಹೊರಬೀಳಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯದವರೊಂದಿಗೆ ಮಾತನಾಡಿದರು.
ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ವಿದೆ. ತನಿಖೆ ಮಾಡಿದ ನಂತರ ಸತ್ಯ ಹೊರಗೆ ಬರಲಿದೆ ಎಂದರು. ಇದೊಂದು ಪ್ರಮುಖ ಪ್ರಕರಣ. ಪೋಸ್ಕೊ ಪ್ರಕರಣವೂ ಆಗಿದೆ ಹಾಗೂ ಚಿತ್ರದುರ್ಗದಲ್ಲಿ ಕಿಡ್ನಾಪ್ ಪ್ರಕರಣವೂ ದಾಖಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಮಾತನಾಡುವುದಾಗಲಿ, ವ್ಯಾಖ್ಯಾನ ಮಾಡುವುದಾಗಲಿ ತನಿಖೆಯ ದೃಷ್ಟಿಯಿಂದ ಸರಿಯಲ್ಲ.
*ಮಳೆ: ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ*
ಅತಿ ಹೆಚ್ಚು ಮಳೆಯಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿ ಗಳೊಂದಿಗೆ ಇಂದು ಸಂಜೆ ಮಾತನಾಡಿ, ಸ್ಥಿತಿಗತಿ ನೋಡಿ ಹೆಚ್ವಿನ ಪರಿಹಾರ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
*ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಶೀಘ್ರ ನಿರ್ಣಯ*
ಚಾಮರಾಜಪೇಟೆ ಈದ್ಗಾ ಮೈದಾನದ ಬಗ್ಗೆ ಗೊಂದಲ ಏನಿಲ್ಲ. ಗಣೇಶೋತ್ಸವ ಆಚರಿಸುವ ಬಗ್ಗೆ ಕಂದಾಯ ಸಚಿವರು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಅರ್ಜಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅದಾದ ಕೂಡಲೇ ನಿರ್ಣಯ ಮಾಡುತ್ತೇವೆ ಎಂದರು.
[28/08, 2:52 PM] Deepak Karade. CM. Media. office: ತುಮಕೂರು, ಆಗಸ್ಟ್ 28: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯ ಮಟ್ಟದ ಭೋವಿ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿದರು.
ಭೋವಿ ಗುರುಪೀಠದ ನಿರಂಜನ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಸಚಿವ ಬಿ.ಸಿ.ನಾಗೇಶ್, ಸಂಸದ ಜಿ.ಎಸ್. ಬಸವರಾಜ್, ಮಾಜಿ ಸಂಸದ ಜನಾರ್ಧನ್ ಸ್ವಾಮಿ, ಶಾಸಕ ಜ್ಯೋತಿ ಗಣೇಶ್ ಹಾಗೂ ಸಮಾಜದ ಮುಖಂಡರಾದ ರವಿ ಮಾಕಳಿ, ಎಂ.ವಿ.ನಾಗರಾಜ್, ಮಂಗಮ್ಮ ಮರಿಸ್ವಾಮಿ, ರಾಷ್ಟ್ರೀಯ ಶ್ರೀ ಸಿದ್ದರಾಮೇಶ್ವರ ಒಡ್ (ಭೋವಿ) ಯುವವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಕೊತ್ತೂರು ಹನುಮಂತರಾಯಪ್ಪ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
Post a Comment