ಆಗಸ್ಟ್ 06, 2022
,
9:23AM
ವಿದೇಶಾಂಗ ಸಚಿವಾಲಯವು ಜೆ & ಕೆ ಕುರಿತು OIC ಸೆಕ್ರೆಟರಿಯಟ್ ಹೇಳಿಕೆಯನ್ನು ಖಂಡಿಸಿದೆ
ಜಮ್ಮು ಮತ್ತು ಕಾಶ್ಮೀರ ಕುರಿತು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಪ್ರಧಾನ ಕಾರ್ಯದರ್ಶಿ ಹೊರಡಿಸಿರುವ ಹೇಳಿಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಂಡಿಸಿದ್ದು, ಇದು ಧರ್ಮಾಂಧತೆಯನ್ನು ಮೆರೆದಿದೆ ಎಂದು ಹೇಳಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ಬಹುನಿರೀಕ್ಷಿತ ಬದಲಾವಣೆಗಳ ಪರಿಣಾಮವಾಗಿ ಇಂದು ಸಾಮಾಜಿಕ-ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಲಾಭವನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು. ಆದಾಗ್ಯೂ, ಮಾನವ ಹಕ್ಕುಗಳ ಸರಣಿ ಉಲ್ಲಂಘಿಸುವ ಮತ್ತು ಗಡಿಯಾಚೆಗಿನ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಭಯೋತ್ಪಾದನೆಯ ಕುಖ್ಯಾತ ಪ್ರವರ್ತಕನ ಆದೇಶದ ಮೇರೆಗೆ OIC ಪ್ರಧಾನ ಕಾರ್ಯದರ್ಶಿಯು ಜಮ್ಮು ಮತ್ತು ಕಾಶ್ಮೀರದ ಕುರಿತು ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿದೆ ಎಂದು ಶ್ರೀ ಬಾಗ್ಚಿ ಹೇಳಿದರು. ಇಂತಹ ಹೇಳಿಕೆಗಳು ಒಐಸಿಯನ್ನು ಭಯೋತ್ಪಾದನೆಯ ಮೂಲಕ ಅನುಸರಿಸುತ್ತಿರುವ ಕೋಮುವಾದಿ ಅಜೆಂಡಾಕ್ಕೆ ಮೀಸಲಾದ ಸಂಘಟನೆ ಎಂದು ಬಹಿರಂಗಪಡಿಸುತ್ತದೆ ಎಂದು ಅವರು ಹೇಳಿದರು.
ಆಗಸ್ಟ್ 06, 2022

Post a Comment