ಮೇಲ್ನೋಟಕ್ಕೆ ಇಡಿ ಮತ್ತು ಎನ್ಐಎ ಜಂಟಿ ಕಾರ್ಯಾಚರಣೆ ನಡೆಸಿದವು ಎನಿಸಿದರೂ ಇದರಲ್ಲಿ ಭಯೋತ್ಪಾದಕ ನಿಗ್ರಹ ದಳ ಮತ್ತು 'ರಾ' ಕೂಡ ಭಾಗಿಯಾಗಿದ್ದು ಕಂಡುಬರುವಂತಿತ್ತು. ದುರಹಂಕಾರದಿಂದ ಮೆರೆಯುತ್ತಿದ್ದ ಪಿಎಫ್ಐ ವಿಲವಿಲನೆ ಪತರಗುಟ್ಟಿದ್ದನ್ನು ಕಂಡು ಅನೇಕರು ಶಾಂತವಾಗಿಯೇ ಸಂಭ್ರಮಿಸಿದ್ದಾರೆ. ಪಿಎಫ್ಐ ನಿಷೇಧ ಮಾಡಬೇಕೆಂಬ ಕೂಗು ಏಕಾಕಿ ತಣ್ಣಗಾಗಿಬಿಟ್ಟಿದೆ. ಏಕೆಂದರೆ ಕೇಂದ್ರ ಸರ್ಕಾರ ನಿಷೇಧಕ್ಕಿಂತಲೂ ಹೆಚ್ಚಿನ ಕೊಡುಗೆ ಕೊಟ್ಟುಬಿಟ್ಟಿದೆ. ಸಂಘಟನೆಯೊಂದನ್ನು ನಿಷೇಧಿಸಿದರೆ ಅದು ಅವರಿಗೆ ಲಾಭವೇ ಹೊರತು ನಷ್ಟವಲ್ಲ. ಜನರ ಅನುಕಂಪ ದೊರೆಯುತ್ತದೆ, ಹೆಚ್ಚು ಪ್ರಚಾರ ದೊರೆಯುತ್ತದೆ, ಕೊನೆಗೆ ಹೊಸ ರೂಪದಲ್ಲಿ ಅವತಾರವೆತ್ತಲು ಸಮಾಜದ ಸಹಕಾರವೂ ದೊರೆತುಬಿಡುತ್ತದೆ. ಈ ಸಂದರ್ಭದಲ್ಲೇ ಈ ಸಂಘಟನೆಗಳಿಗೆ ಹೆಚ್ಚುಮಂದಿ ಸೇರಿಕೊಳ್ಳಲು ಧಾವಿಸುವುದು. ಮುಸಲ್ಮಾನರ ವಿಚಾರದಲ್ಲಂತೂ ಇದು ಅಕ್ಷರಶಃ ಸತ್ಯ. ನಾಯಿಕೊಡೆಗಳಂತೆ ಸಂಘಟನೆಗಳನ್ನು ಹುಟ್ಟಿಸಬಲ್ಲ ತಾಕತ್ತು ಅವರಿಗಿದೆ. ಒಂದು ಸಂಘಟನೆ ಜೀವ ಕಳೆದುಕೊಂಡರೆ ಅದೇ ಮಂದಿ ಮತ್ತೊಂದು ಹೆಸರಿನೊಂದಿಗೆ ಮರುಜೀವ ಪಡೆದುಬಿಡುತ್ತಾರೆ. ಪಿಎಫ್ಐ ಕೂಡ ಹಾಗೆಯೇ ಉದ್ಭವಿಸಿದ ಸಂಘಟನೆ. ಉಗ್ರವಾದಿ ಕೃತ್ಯಗಳಲ್ಲಿ ಭಾಗಿಯಾಗಿ ನಿಷೇಧಕ್ಕೊಳಗಾದ ಸಿಮಿಯ ಹೊಸ ರೂಪವಷ್ಟೇ. ಸಿಮಿ ಎಲ್ಲೆಲ್ಲಿ ಎಡವಿತ್ತೋ ಅದೆಲ್ಲವನ್ನೂ ತಿದ್ದಿಕೊಂಡು ಇಡಿಯ ದೇಶವನ್ನು ಭಯೋತ್ಪಾದನೆಯ ಏಕಸೂತ್ರದಡಿ ಬಂಧಿಸುವ ತಾಕತ್ತನ್ನು ಪಿಎಫ್ಐ ತೋರಿಸಿದೆ. ಇದರ ಇತಿಹಾಸಕ್ಕೆ ಹೆಚ್ಚು ಹೋಗುವುದಿಲ್ಲವಾದರೂ ಅದರ ಕೆಲಸ ಮಾಡುವ ಶೈಲಿಯನ್ನಷ್ಟೇ ನಿಮ್ಮೊಂದಿಗೆ ಹಂಚಿಕೊಳ್ಳುವೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ ರಾಜಕೀಯ ಅಂಗವಾಗಿ ಎಸ್ಡಿಪಿಐ ಅನ್ನು ಬೆಳೆಸಿತು. ಕಾಲೇಜಿನ ವಿದ್ಯಾರ್ಥಿಗಳನ್ನು ಸೆಳೆಯಲೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆರಂಭಿಸಿತು. ಇವರೆಲ್ಲರಿಗೂ ಛತ್ರಛಾಯೆಯಾಗಿ ಸ್ವತಃ ಪಿಎಫ್ಐ ನಿಂತುಕೊಂಡಿತು. ಕಾಂಗ್ರೆಸ್ ಇದ್ದೆಡೆ ಶಕ್ತಿಯನ್ನು ಸಹಜವಾಗಿ ವೃದ್ಧಿಸಿಕೊಳ್ಳುತ್ತಾ, ಭಾಜಪ ಇದ್ದಕಡೆ ಕಾಲೇಜುಗಳಲ್ಲಿ ಉಗ್ರಸ್ವರೂಪದ ಸಂಘಟನೆಯ ನಿರ್ವಣಕ್ಕೆ ಕೈ ಹಾಕುತ್ತಿತ್ತು. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹಿಂದೂಗಳ ಸರಣಿ ಹತ್ಯೆಗಳು ನಡೆದವಲ್ಲ, ಅವೆಲ್ಲ ಇವರು ಸರ್ಕಾರದ ಸವಲತ್ತುಗಳನ್ನು ಅನುಭವಿಸಿಕೊಂಡೇ ನಡೆಸಿದ್ದು. ಬಲು ಎಚ್ಚರಿಕೆಯಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ 1600ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರ, 125ಕ್ಕೂ ಹೆಚ್ಚು ಆರೋಪಗಳನ್ನು ಖುಲಾಸೆಗೊಳಿಸಲು ಸಂಪೂರ್ಣ ಸಹಕಾರ ನೀಡಿದರು. ಗಣಪತಿ ಉತ್ಸವವನ್ನು ಅನುಮತಿ ಇಲ್ಲದೇ ಆಚರಿಸಿದ ತಪ್ಪಿಗಾಗಿ ಹತ್ತಾರು ವರ್ಷ ನ್ಯಾಯಾಲಯಕ್ಕೆ ಅಲೆದಾಡುವ ಹಿಂದೂ ಕಾರ್ಯಕರ್ತರ ನಡುವೆ ಪಿಎಫ್ಐ ಕಾರ್ಯಕರ್ತರ ಖದರ್ರೇ ಬೇರೆ, ಅದು ಸಿದ್ದರಾಮಯ್ಯರ ಕೊಡುಗೆ! ಅವರ ಕೃಪೆಯಿಂದ ಹೊರಬಂದವರು ಸಾಮಾನ್ಯವಾದ ಆರೋಪಿಗಳಾಗಿರಲಿಲ್ಲ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾ ಅಶಾಂತಿ ಹುಟ್ಟಿಸಿ ದಂಗೆಗಳ ಸೂತ್ರಧಾರರಾಗಿದ್ದವರು. ಇವರೇ ಮುಂದೆ ಅನೇಕ ಹತ್ಯೆಗಳಲ್ಲಿ ಭಾಗಿಯಾದವರು ಎಂಬುದಕ್ಕೆ ಸಾಕಷ್ಟು ಸಾಕ್ಷಿ ಇದೆ. ಪಿಎಫ್ಐ ತನ್ನ ಸಂಘಟನೆಯ ಹೆಸರಿನಲ್ಲಿ ಹೀಗೆ ಜೈಲಿಗೆ ಹೋದವರನ್ನು ಬಿಡಿಸಿಕೊಂಡು ಬರುವಲ್ಲಿ ಬೆಟ್ಟದಷ್ಟು ಪ್ರಯಾಸ ಹಾಕುತ್ತದೆ. ಬಿಜೆಪಿ ಬಂದೊಡನೆ ಸಣ್ಣ-ಸಣ್ಣ ವಿಚಾರಗಳನ್ನೂ ಮುನ್ನೆಲೆಗೆ ತಂದು ಕಾಲೇಜುಗಳಲ್ಲಿ ಭಡಕಾಯಿಸುವ ಕೆಲಸ ಮಾಡುತ್ತದೆ. ಆ ಮೂಲಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಕ್ಕೆ ಜೀವತುಂಬಿ ತನ್ನ ಸಂಘಟನೆಗೆ ಬೇಕಾದ ತರುಣ-ತರುಣಿಯರನ್ನು ಜೋಡಿಸಿಕೊಳ್ಳುತ್ತದೆ. ಕರ್ನಾಟಕದಲ್ಲಿ ನಡೆದ ಹಿಜಾಬ್ ಕುರಿತ ಹೋರಾಟ ಅಂಥದ್ದೇ ಒಂದು ಪ್ರಯತ್ನ. ಮೇಲ್ನೋಟಕ್ಕೆ ಹಿಜಾಬ್ ಹೋರಾಟ ಭಾಜಪಕ್ಕೆ ಉಪಯೋಗಿಯಾಯಿತು ಎಂದು ಕೆಲವರು ಮಾತನಾಡಿಕೊಳ್ಳುತ್ತಾರಾದರೂ ಅದು ನಿಜವಾಗಿಯೂ ಸಹಕಾರಿಯಾದದ್ದು ಮುಸಲ್ಮಾನರಿಗೇ, ವಿಶೇಷವಾಗಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ. ತರುಣರು ದೊಡ್ಡ ಪ್ರಮಾಣದಲ್ಲಿ ಈ ಸಂಘಟನೆ ಕುರಿತಂತೆ ಅನುಕಂಪ ತೋರಲಾರಂಭಿಸಿದರು. ಹೆಣ್ಣುಮಕ್ಕಳು ಹಿಂದೂಗಳ ವಿರುದ್ಧ ಸಿಡಿದೆದ್ದರು. ಇಡಿಯ ದೇಶದಲ್ಲಿ ಇವರು ಹಚ್ಚಿದ ಈ ಕಿಡಿಗೆ ಜಾಗತಿಕ ಮಟ್ಟದ ಬೆಂಬಲ ದೊರೆಯಲಾರಂಭಿಸಿತು. ಭಯೋತ್ಪಾದಕ ಅಲ್ ಜವಾಹರಿ ಮಂಡ್ಯದ ಮುಸ್ಕಾನ್ಳನ್ನು ಅಭಿನಂದಿಸುವ ಧಾವಂತದಲ್ಲಿ ಪಿಎಫ್ಐ ಸಾಹಸಗಳನ್ನು ಮೆಚ್ಚಿದ. ವಿದೇಶದಿಂದ ಮತ್ತೂ ಹೆಚ್ಚು ಹಣ ಹರಿದುಬರಲು ಇದೊಂದು ವಿಷಯ ಅವರಿಗೆ ಸಾಕಿತ್ತು.
ಹಾಗಂತ ಪಿಎಫ್ಐ ತನ್ನ ಸಾಮರ್ಥ್ಯ ತೋರುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ರೈತರ ಹೋರಾಟ ನಡೆಯುವಾಗ ಅದರ ಹಿಂದೆ ಕೆನಡಾದ ಖಾಲಿಸ್ತಾನಿಗಳು, ಚೀನಾ ಮತ್ತು ಭಾರತದ ಕಮ್ಯುನಿಸ್ಟರು, ಪಾಕಿಸ್ತಾನದ ಐಎಸ್ಐ ಏಜೆಂಟುಗಳು ಇದ್ದಾರೆಂಬುದು ಎಂಥವರಿಗೂ ಗೊತ್ತಾಗುತ್ತಿತ್ತು. ಆದರೆ ಅಷ್ಟೇ ಪ್ರಮಾಣದಲ್ಲಿ ಈ ಹೋರಾಟಕ್ಕೆ ಆಂತರಿಕ ಬೆಂಬಲವನ್ನು ಸದ್ದಿಲ್ಲದೇ ಕೊಟ್ಟವರು ಈ ಮುಸಲ್ಮಾನರೇ. ಈಗಲೂ ಪಿಎಫ್ಐ ಪ್ರಚೋದಿತ ಭಯೋತ್ಪಾದಕ ಕೃತ್ಯಗಳ ಕುರಿತಂತೆ ನೀವು ಅವರೊಂದಿಗೆ ಮಾತನಾಡಿ ನೋಡಿ, ಅವರು ತಕ್ಷಣ ರೈತ ಹೋರಾಟದಲ್ಲಿ ತೀರಿಕೊಂಡವರ ಕುರಿತಂತೆ ವರಾತ ಶುರು ಹಚ್ಚಿಕೊಳ್ಳುತ್ತಾರೆ. ಅಂದರೆ ಆ ಹೋರಾಟ ವ್ಯರ್ಥವಾಗಿದ್ದರ ಕುರಿತಂತೆ ಅವರೊಳಗಿನ ಬೆಂಕಿ ಎಷ್ಟಿದೆ ಎಂಬುದು ಎಂಥವನಿಗೂ ಅರ್ಥವಾಗುತ್ತದೆ.
ಸಿಎಎ ಕಾನೂನು ಬಂದಾಗ ಅದರಿಂದ ಭಾರತೀಯ ಮುಸಲ್ಮಾನರಿಗೆ ಇನಿತೂ ತೊಂದರೆಯಿಲ್ಲ ಎಂಬುದು ನಿಚ್ಚಳವಾಗಿದ್ದರೂ, ಪಿಎಫ್ಐ ಮುಸಲ್ಮಾನರನ್ನು ದೇಶಬಿಟ್ಟು ಓಡಿಸುವ ಮೋದಿಯ ರಣತಂತ್ರವಿದು ಎಂದುಬಿಟ್ಟಿತು. ಸಾಮಾನ್ಯ ಮುಸಲ್ಮಾನರ ಬೌದ್ಧಿಕ ಸಾಮರ್ಥ್ಯದ ಅರಿವಿರುವ ಎಂಥವನಿಗಾದರೂ ಪಿಎಫ್ಐ ಎಷ್ಟು ಸಲೀಸಾಗಿ ಮೋಸ ಮಾಡಿರಬಹುದು ಎಂಬುದನ್ನು ತಿಳಿಯಲು ತಡವಾಗಲಾರದು. ದೇಶದಾದ್ಯಂತ ಮುಸಲ್ಮಾನರು ಬೀದಿಗಿಳಿದು ಪ್ರತಿಭಟಿಸಿದರು. ಪಿಎಫ್ಐ ಹಚ್ಚಿದ ಪ್ರತಿಭಟನೆಯ ಕಾವು ಎಂಥದ್ದಿತ್ತೆಂದರೆ ಸೈದ್ಧಾಂತಿಕವಾಗಿ ಅವರನ್ನು ಕಂಠಮಟ್ಟ ವಿರೋಧಿಸುತ್ತಿದ್ದ ಅನೇಕ ಮುಸ್ಲಿಂ ಪಂಗಡಗಳು ಕೂಡ ಅನಿವಾರ್ಯವಾಗಿ ಕೈಜೋಡಿಸಬೇಕಾಯ್ತು. ಸರ್ಕಾರ ಕ್ಯಾರೆ ಎನ್ನಲಿಲ್ಲ. ಮಂಗಳೂರಿನಲ್ಲಂತೂ ಗೋಲಿಬಾರ್ ಮಾಡಿಸಲಾಯ್ತು. ತಮ್ಮ ಹೋರಾಟ ಸರ್ಕಾರವನ್ನು ಪ್ರಭಾವಿಸುವಲ್ಲಿ ಸೋಲುತ್ತಿದೆ ಎಂದು ಗೊತ್ತಾದಾಗ ರೈತರ ಹೋರಾಟದ ಶೈಲಿಯನ್ನುನುಸರಿಸಿ ದೆಹಲಿಯ ರಸ್ತೆಯನ್ನು ಅಡ್ಡಹಾಕಿ ಇವರು ಕುಳಿತುಬಿಟ್ಟರು. ಶಾಹಿನ್ಬಾಗಿನಲ್ಲಿ ಬೆಳಗಿನಿಂದ ರಾತ್ರಿಯವರೆಗೂ ಖುದ್ರತಿ ಬಿರಿಯಾನಿ ಬರುತ್ತಿತ್ತಲ್ಲ, ಅದು ಪಿಎಫ್ಐಗೆ ಸಿಗುತ್ತಿದ್ದ ಜನಮನ್ನಣೆಯ ಸಂಕೇತವಾಗಿತ್ತು. ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲವೆಂದು ಗೊತ್ತಾದಾಗ ತಾನೇ ಮುಂದೆ ನಿಂತು ಟ್ರಂಪ್ ಆಗಮನದ ಹೊತ್ತಲ್ಲಿ ಭಯಾನಕವಾದ ದಂಗೆ ನಡೆಸಿದ ಮುಸಲ್ಮಾನರು ಅದರ ನೇತೃತ್ವವನ್ನು ಗುರುತಿಸಿದ್ದು ಇದೇ ಸಂಘಟನೆಯಲ್ಲಿ. ದೆಹಲಿಯ ಅಧಿಕಾರದ ಗದ್ದುಗೆಯಲ್ಲಿರುವ ಆಮ್ ಆದ್ಮಿಪಾರ್ಟಿ ಇವರಿಗೆ ಸಹಕಾರ ನೀಡುತ್ತಿದೆ ಎನ್ನುವ ಗುಮಾನಿ ಎಲ್ಲರಿಗೂ ಇತ್ತು. ಮೊನ್ನೆ ಪಿಎಫ್ಐ ದಾಳಿಯ ವೇಳೆ ಸಿಕ್ಕ ಸಾಕ್ಷಿಗಳಲ್ಲಿ ರಾಜ್ಯಸಭಾ ಸದಸ್ಯನೊಬ್ಬ ಇವರುಗಳೊಂದಿಗೆ ನೇರ ಸಂಪರ್ಕದಲ್ಲಿರುವ ವಿವರವೂ ಬಹಿರಂಗವಾಗಿದೆ. ಪಿಎಫ್ಐ ಸಿಎಎ ಪ್ರತಿಭಟನೆ ಮುಗಿಯುವ ವೇಳೆಗಾಗಲೇ ಭಾರತದಾದ್ಯಂತ ರಾಷ್ಟ್ರವಿರೋಧಿ ಕೃತ್ಯ ನಡೆಸುವಲ್ಲಿ ಏಕೈಕ ಸಮರ್ಥ ಸಂಘಟನೆ ಎಂಬ ಖ್ಯಾತಿಯನ್ನು ಮುಸಲ್ಮಾನ್ ರಾಷ್ಟ್ರಗಳಲ್ಲಿ ಪಡೆದುಕೊಂಡುಬಿಟ್ಟಿತ್ತು. ಅದಾಗಲೇ ಅವರಿಗೆ ಹರಿಯುತ್ತಿದ್ದ ವಿದೇಶೀ ಹಣ ಈಗ ಹತ್ತಾರುಪಟ್ಟು ಹೆಚ್ಚಾಗಿಬಿಟ್ಟಿತ್ತು. ದೇಶದಾದ್ಯಂತ ಏಕಕಾಲಕ್ಕೆ ದಂಗೆ ಎಬ್ಬಿಸುವ ತನ್ನ ಸಾಮರ್ಥ್ಯ ಪರೀಕ್ಷಿಸಲೆಂದು ಅದು ಸರಿಯಾದ ಸಂದರ್ಭಕ್ಕೆ ಕಾಯುತ್ತಿತ್ತು. ನೂಪುರ್ ಶರ್ಮಾ ಚರ್ಚೆಯೊಂದರಲ್ಲಿ ಕೊಟ್ಟ ಹೇಳಿಕೆಯನ್ನು ಸೂಕ್ತವಾಗಿ ಬಳಸಿಕೊಂಡ ಪಿಎಫ್ಐ ಜನರನ್ನು ಭಡಕಾಯಿಸಲು ಮೊಹಮ್ಮದ್ ಜುಬೇರ್ ಎಂಬ ಫ್ಯಾಕ್ಟ್ಚೆಕರ್ ಅನ್ನು ಬಳಸಿಕೊಂಡಿತು. ದೇಶದ ಪ್ರತಿ ಜಿಲ್ಲೆಯಲ್ಲಿಯೂ ಮುಸಲ್ಮಾನರು ಬೀದಿಗೆ ಬರುವಂತೆ ಮಾಡಲಾಯಿತು. 'ಸರ್ ತನ್ಸೆ ಜುದಾ' ಘೊಷಣೆಗಳು ವ್ಯಾಪಕವಾದವು. ಹಿಜಾಬ್ ಸಂದರ್ಭದಲ್ಲಿ ಹರ್ಷನ ಹತ್ಯೆ ಮಾಡಿ ತಮ್ಮ ಸಾಮರ್ಥ್ಯ ಒರೆಗೆ ಹಚ್ಚಿಕೊಂಡಿದ್ದ ಇಲ್ಲಿನ ಪಿಎಫ್ಐ ಕಾರ್ಯಕರ್ತರು ಈಗ ಪ್ರವೀಣ್ ನೆಟ್ಟಾರುವಿನ ಹತ್ಯೆ ಮಾಡಿ ದೇಶದೆಲ್ಲೆಡೆ ದಂಗೆ ಎಬ್ಬಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ನಿಸ್ಸಂಶಯವಾಗಿ ಅಧಿಕಾರ ನಡೆಸುವವರಿಗೆ ಇದು ದೊಡ್ಡ ಸವಾಲೇ. ಆಗ ಪಿಎಫ್ಐ ನಿಷೇಧ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಗಂಭೀರವದನರಾದರು. ಅಧಿಕಾರಿಗಳನ್ನು ಕರೆದು ಪ್ರಶ್ನಿಸಿದಾಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ವಲ್ಪ ಕಾಲಾವಕಾಶ ಪಡೆದುಕೊಂಡರು. ಈ ಸಂಘಟನೆ ಕುರಿತಂತೆ ಪರಿಪೂರ್ಣ ಮಾಹಿತಿ ಸಂಗ್ರಹಿಸಿ ನಿಷೇಧಕ್ಕೂ ಮುನ್ನ ಮಾಡಬೇಕಾದ ಮಹತ್ವದ ಕೆಲಸಗಳ ಕುರಿತಂತೆ ಯೋಜನೆ ರೂಪಿಸಿಕೊಂಡರು. 45 ನಿಮಿಷಗಳಲ್ಲಿ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ 90ಕ್ಕೂ ಹೆಚ್ಚು ಕಡೆಗಳಲ್ಲಿ 100ಕ್ಕೂ ಹೆಚ್ಚು ಪಿಎಫ್ಐ ನಾಯಕರನ್ನು ಬಂಧಿಸುವುದು ಸುಲಭವಾಗಿರಲಿಲ್ಲ. ಈ ಬಂಧನದ ನಂತರ ಮುಂದಾಗಬಹುದಾಗಿರುವುದನ್ನು ಸಹಜವಾಗಿಯೇ ಊಹಿಸಬಹುದಿತ್ತು. ಹೀಗಾಗಿಯೇ ಸುದ್ದಿ ಹಬ್ಬುವ ಮುನ್ನ, ಹಾಸಿಗೆಯಿಂದ ಏಳುವ ಮುನ್ನವೇ ಅವರನ್ನು ಬಂಧಿಸಿ ಒಯ್ಯಬೇಕೆಂದು ನಿಶ್ಚಯಿಸಲಾಗಿತ್ತು. ಎನ್ಐಎನ 200 ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಪ್ರತಿ ದಾಳಿ ಸ್ಥಳಗಳಲ್ಲೂ ಆಯಾ ವ್ಯಕ್ತಿಗಳ ಮನೆಯ ಹೊರಗೆ ಕಾಯುತ್ತ ನಿಂತರು. ಬೆಳಗಿನ ಜಾವ 4 ಗಂಟೆಗೆ ದಾಳಿ ಎಂಬುದು ನಿಶ್ಚಯವಾಗಿತ್ತು. ಆದರೆ ಅರ್ಧಗಂಟೆ ಮುನ್ನವೇ ಕೇಂದ್ರಕಚೇರಿಯಿಂದ ಮುನ್ನುಗ್ಗುವ ಆದೇಶ ದೊರೆಯಿತು. ಪಿಎಫ್ಐನ ಪ್ರಮುಖ ನಾಯಕರಿಗೆ ತಮ್ಮ ಮೇಲೆ ದಾಳಿಯಾಗಿದೆ ಎಂದು ಅರಿವಾದದ್ದು ಪೊಲೀಸರ ಕೈಗೆ ಸಿಕ್ಕುಬಿದ್ದಾಗಲಷ್ಟೇ! ಸುದ್ದಿ ಹರಡಿ ನಾಯಕರನ್ನು ಉಳಿಸಿಕೊಳ್ಳಲೆಂದು ಸ್ಥಳೀಯ ಕಾರ್ಯಕರ್ತರು ಬರುವ ವೇಳೆಗಾಗಲೇ ಪೊಲೀಸರು ಅವರನ್ನು ಅಡ್ಡಗಟ್ಟುವ ವ್ಯವಸ್ಥೆ ರೂಪಿಸಿಕೊಂಡಾಗಿತ್ತು. ನಾಯಕರುಗಳಿಲ್ಲದೇ ಮುಂದೇನು ಮಾಡಬೇಕೆಂದು ಅವರು ಆಲೋಚಿಸುವ ವೇಳೆಗೆ ಕೇಂದ್ರ ಸರ್ಕಾರ ಎಸೆದ ದಾಳಗಳೆಲ್ಲ ಕೆಲಸ ಮಾಡಲಾರಂಭಿಸಿತು. ಮುಸಲ್ಮಾನರನ್ನು ವಿಭಜಿಸುವ ಯೋಜನೆಗೆ ಒಂದು ವರ್ಷದ ಹಿಂದೆಯೇ ಕೇಂದ್ರಸರ್ಕಾರ ಅಸ್ತು ಎಂದಿತ್ತು. ದಲಿತ ಮುಸಲ್ಮಾನರನ್ನು ಮೇಲ್ವರ್ಗದ ಅಶ್ರಫ್ಗಳು ತುಳಿಯುವುದು ಹೊಸದೇನಲ್ಲ. ಹೀಗಾಗಿ ತುಳಿತಕ್ಕೊಳಗಾದ ದಲಿತ ಪಸ್ಮಂಡ ಮುಸಲ್ಮಾನರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟ ಮೋದಿ ಸರ್ಕಾರ ಅವರನ್ನು ರಾಷ್ಟ್ರೀಯತೆಯೆಡೆಗೆ ಎಳೆದು ತಂದಿತ್ತು. ಹೀಗಾಗಿ ಅವರು ಈ ಉಗ್ರವಾದಿ ಸಂಘಟನೆಯನ್ನು ಬೆಂಬಲಿಸುವ ಸಾಧ್ಯತೆ ಇರಲಿಲ್ಲ. ನೆನಪಿಡಿ, ಈ ದೇಶದ ಶೇಕಡಾ 85 ಪ್ರತಿಶತ ಮಂದಿ ದಲಿತ ಮುಸಲ್ಮಾನರೇ. ಅವರ ಬೆಂಬಲ ಸಿಗಲಿಲ್ಲವೆಂದಾದೊಡನೆ ಪಿಎಫ್ಐ ಹೋರಾಟ ಸತ್ತುಬಿತ್ತು. ಪಸ್ಮಂಡಾಗಳು ಪಿಎಫ್ಐ ನಿಷೇಧದ ಆಗ್ರಹ ಮಂಡಿಸುವ ಹೇಳಿಕೆ ಹೊರಡಿಸುವುದರೊಂದಿಗೆ ಮೇಲ್ವರ್ಗದ ಮುಸಲ್ಮಾನರ ದುರಹಂಕಾರ ಇಳಿದುಹೋಯ್ತು. ಅತ್ತ ಇದೇ ವೇಳೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತರು ಮುಸಲ್ಮಾನ ಇಮಾಮ್ಳೊಂದಿಗೆ ಚರ್ಚೆ ನಡೆಸಿ ರಾಷ್ಟ್ರಹಿತದ ಮನವರಿಕೆ ಮಾಡಿಸಿದರು. ಈ ಕಾರಣದಿಂದಾಗಿ ಸಣ್ಣ ಸಣ್ಣ ವಿಚಾರಗಳಿಗೂ ಕೂಗೆಬ್ಬಿಸಬಲ್ಲ ತಾಕತ್ತು ಹೊಂದಿದ್ದ ಪಿಎಫ್ಐ ತನ್ನ ಮೇಲೆ ದಾಳಿಯಾದಾಗ ಅಸಹಾಯಕವಾಯ್ತು. ಮೋದಿ-ಷಾ-ದೋವಲ್ ಸೇರಿಕೊಂಡು ಪಿಎಫ್ಐನ ಶವಪೆಟ್ಟಿಗೆಗೆ ಕೊನೆಯ ಮೊಳೆಯನ್ನು ಹೊಡೆದುಬಿಟ್ಟಿದ್ದರು!
ಈಗಿನ ಕಥೆ ಕೇಳಲೇಬೇಡಿ. ಈ ಸಂಘಟನೆಗೆ ಭಿನ್ನ ಭಿನ್ನ ಸ್ವರೂಪದಲ್ಲಿ ಬರುತ್ತಿದ್ದ ಹಣದ ಮೂಲವನ್ನು ಇ.ಡಿ. ಜಾಲಾಡಿ ವಿವರ ಬಿಚ್ಚಿಟ್ಟಿದೆ. ಪಿಎಫ್ಐ ಮತ್ತು ಭಯೋತ್ಪಾದಕರ ನಡುವಣ ಸಂಬಂಧದ ಕುರಿತಂತೆ ಎನ್ಐಎ ಸಾಕಷ್ಟು ಮಾಹಿತಿ ಹೊರಹಾಕಿದೆ. ಇದೇ ಜಾಡನ್ನು ಅನುಸರಿಸಿ, ಖೋಟಾನೋಟುಗಳನ್ನು ಭಾರತಕ್ಕೆ ಪೂರೈಸುತ್ತಿದ್ದ ಲಾಲ್ ಮೊಹಮ್ಮದ್ ಎಂಬ ಐಎಸ್ಐ ಏಜೆಂಟನ್ನು ನೇಪಾಳದಲ್ಲಿ ನಡುರಸ್ತೆಯಲ್ಲಿ ಹತ್ಯೆ ಮಾಡಲಾಗಿದೆ. ಕಾಶ್ಮೀರದಲ್ಲಿ ಪೊಲೀಸ್ ಹೆಡ್ಕಾನ್ಸ್ಟೆಬಲ್ ಆಗಿದ್ದ ಮೊಹಮ್ಮದ್ ರಂಜಾನ್ ತನ್ನ 16 ಬ್ಯಾಂಕ್ ಅಕೌಂಟುಗಳ ಮೂಲಕ ಆರು ಕೋಟಿ ರೂಪಾಯಿ ಹೊಂದಿದ್ದ. ಆತನನ್ನೂ ಹಿಡಿಯಲಾಗಿದೆ. ಮಹಾರಾಷ್ಟ್ರದಲ್ಲಿ ಭಯೋತ್ಪಾದಕ ನಿಗ್ರಹ ದಳ 20 ಜನ ಭಯೋತ್ಪಾದಕರನ್ನು ವಶಕ್ಕೆ ಪಡೆದುಕೊಂಡಿದೆ. ಮಧ್ಯರಾತ್ರಿಯ ದಾಳಿ ದೇಶಕ್ಕೆ ಭವಿಷ್ಯದಲ್ಲಿ ಆಗಬಹುದಾಗಿದ್ದ ಅನೇಕ ದಾಳಿಗಳನ್ನು ತಡೆಗಟ್ಟಿದೆ. ಒಂದು ಕ್ಷಣ ನೂಪುರ್ ಶರ್ಮಾ ಗಲಾಟೆಯ ನಂತರ ದೇಶವಿರೋಧಿ ಶಕ್ತಿಗಳ ಕೈ ಮೇಲಾಗಿಬಿಟ್ಟಿದೆಯಲ್ಲ ಎನಿಸಿತ್ತು. ಸದಾ ರಾಷ್ಟ್ರವನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಗೌರವಿಸುವ ಮೋದಿ ಬಳಗ ಮತ್ತೆ ರಾಷ್ಟ್ರದ ಆಂತರಿಕ ಸುರಕ್ಷತೆಯನ್ನು ಎತ್ತಿ ಹಿಡಿದಿದೆ. ದುಷ್ಟರ ಗೋಣು ಮುರಿದಿದೆ. ಎಷ್ಟು ಅಭಿನಂದಿಸಿದರೂ ಕಡಿಮೆಯೇ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)
ಮೊನ್ನೆ ಮಧ್ಯರಾತ್ರಿಯ ಕಾರ್ಯಾಚರಣೆ ನಡೆಯಿತಲ್ಲ, ಬಹುಶಃ ಈ ದೇಶ ಸರ್ಜಿಕಲ್ ಮತ್ತು ಏರ್ಸ್ಟ್ರೈಕ್ಗಳ ನಂತರ ಕಂಡ ಅತ್ಯಂತ ಮಹತ್ವದ ಕಾರ್ಯಾಚರಣೆ ಇರಬಹುದೆನಿಸುತ್ತದೆ. ಮೇಲ್ನೋಟಕ್ಕೆ ಇಡಿ ಮತ್ತು ಎನ್ಐಎ ಜಂಟಿ ಕಾರ್ಯಾಚರಣೆ ನಡೆಸಿದವು ಎನಿಸಿದರೂ ಇದರಲ್ಲಿ ಭಯೋತ್ಪಾದಕ ನಿಗ್ರಹ ದಳ ಮತ್ತು 'ರಾ' ಕೂಡ ಭಾಗಿಯಾಗಿದ್ದು ಕಂಡುಬರುವಂತಿತ್ತು. ದುರಹಂಕಾರದಿಂದ ಮೆರೆಯುತ್ತಿದ್ದ ಪಿಎಫ್ಐ ವಿಲವಿಲನೆ ಪತರಗುಟ್ಟಿದ್ದನ್ನು ಕಂಡು ಅನೇಕರು ಶಾಂತವಾಗಿಯೇ ಸಂಭ್ರಮಿಸಿದ್ದಾರೆ. ಪಿಎಫ್ಐ ನಿಷೇಧ ಮಾಡಬೇಕೆಂಬ ಕೂಗು ಏಕಾಕಿ ತಣ್ಣಗಾಗಿಬಿಟ್ಟಿದೆ. ಏಕೆಂದರೆ ಕೇಂದ್ರ ಸರ್ಕಾರ ನಿಷೇಧಕ್ಕಿಂತಲೂ ಹೆಚ್ಚಿನ ಕೊಡುಗೆ ಕೊಟ್ಟುಬಿಟ್ಟಿದೆ. ಸಂಘಟನೆಯೊಂದನ್ನು ನಿಷೇಧಿಸಿದರೆ ಅದು ಅವರಿಗೆ ಲಾಭವೇ ಹೊರತು ನಷ್ಟವಲ್ಲ. ಜನರ ಅನುಕಂಪ ದೊರೆಯುತ್ತದೆ, ಹೆಚ್ಚು ಪ್ರಚಾರ ದೊರೆಯುತ್ತದೆ, ಕೊನೆಗೆ ಹೊಸ ರೂಪದಲ್ಲಿ ಅವತಾರವೆತ್ತಲು ಸಮಾಜದ ಸಹಕಾರವೂ ದೊರೆತುಬಿಡುತ್ತದೆ. ಈ ಸಂದರ್ಭದಲ್ಲೇ ಈ ಸಂಘಟನೆಗಳಿಗೆ ಹೆಚ್ಚುಮಂದಿ ಸೇರಿಕೊಳ್ಳಲು ಧಾವಿಸುವುದು. ಮುಸಲ್ಮಾನರ ವಿಚಾರದಲ್ಲಂತೂ ಇದು ಅಕ್ಷರಶಃ ಸತ್ಯ. ನಾಯಿಕೊಡೆಗಳಂತೆ ಸಂಘಟನೆಗಳನ್ನು ಹುಟ್ಟಿಸಬಲ್ಲ ತಾಕತ್ತು ಅವರಿಗಿದೆ. ಒಂದು ಸಂಘಟನೆ ಜೀವ ಕಳೆದುಕೊಂಡರೆ ಅದೇ ಮಂದಿ ಮತ್ತೊಂದು ಹೆಸರಿನೊಂದಿಗೆ ಮರುಜೀವ ಪಡೆದುಬಿಡುತ್ತಾರೆ. ಪಿಎಫ್ಐ ಕೂಡ ಹಾಗೆಯೇ ಉದ್ಭವಿಸಿದ ಸಂಘಟನೆ. ಉಗ್ರವಾದಿ ಕೃತ್ಯಗಳಲ್ಲಿ ಭಾಗಿಯಾಗಿ ನಿಷೇಧಕ್ಕೊಳಗಾದ ಸಿಮಿಯ ಹೊಸ ರೂಪವಷ್ಟೇ. ಸಿಮಿ ಎಲ್ಲೆಲ್ಲಿ ಎಡವಿತ್ತೋ ಅದೆಲ್ಲವನ್ನೂ ತಿದ್ದಿಕೊಂಡು ಇಡಿಯ ದೇಶವನ್ನು ಭಯೋತ್ಪಾದನೆಯ ಏಕಸೂತ್ರದಡಿ ಬಂಧಿಸುವ ತಾಕತ್ತನ್ನು ಪಿಎಫ್ಐ ತೋರಿಸಿದೆ. ಇದರ ಇತಿಹಾಸಕ್ಕೆ ಹೆಚ್ಚು ಹೋಗುವುದಿಲ್ಲವಾದರೂ ಅದರ ಕೆಲಸ ಮಾಡುವ ಶೈಲಿಯನ್ನಷ್ಟೇ ನಿಮ್ಮೊಂದಿಗೆ ಹಂಚಿಕೊಳ್ಳುವೆ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)
Post a Comment