[26/09, 11:36 PM] Rss Lokesh Anna. mallm: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* ದಿನಾಂಕ : *27/09/2022*
ವಾರ : *ಮಂಗಳ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ದಕ್ಷಿಣಾಯಣೇ* : *ಶರತ್* ಋತೌ
*ಆಶ್ವೀಜ* ಮಾಸೇ *ಶುಕ್ಲ* : ಪಕ್ಷೇ *ದ್ವಿತೀಯಾಯಂ* ತಿಥೌ (ಪ್ರಾರಂಭ ಸಮಯ *ಸೋಮ ರಾತ್ರಿ 03-07 am* ರಿಂದ ಅಂತ್ಯ ಸಮಯ : *ಮಂಗಳ ರಾತ್ರಿ 02-27 am* ರವರೆಗೆ) *ಭೌಮ* ವಾಸರೇ : ವಾಸರಸ್ತು *ಹಸ್ತ* ನಕ್ಷತ್ರೇ (ಪ್ರಾರಂಭ ಸಮಯ : *ಸೋಮ ಮುಂಜಾನೆ 05-54 am* ರಿಂದ ಅಂತ್ಯ ಸಮಯ : *ಮಂಗಳ ಹಗಲು 06-15 am* ರವರೆಗೆ) ನಂತರ *ಚಿತ್ತ* *ಬ್ರಹ್ಮ* ಯೋಗೇ (ಮಂಗಳ ಹಗಲು *06-42 am* ರವರೆಗೆ) ಉಪರಿ *ಐಂದ್ರ* ಯೋಗೇ (ಮಂಗಳ ರಾತ್ರಿ *05-01 am* ರವರೆಗೆ) *ಬಾಲವ* ಕರಣೇ (ಮಂಗಳ ಹಗಲು *02-50 pm* ರವರೆಗೆ) ಸೂರ್ಯ ರಾಶಿ : *ಕನ್ಯಾ* ಚಂದ್ರ ರಾಶಿ : *ಕನ್ಯಾ*
ಬೆಂಗಳೂರಿಗೆ *ಅಗ್ನಿಹೋತ್ರ ಸಮಯಕ್ಕನುಸಾರವಾಗಿ* 🌅 ಸೂರ್ಯೋದಯ - *06-09 am* 🌄ಸೂರ್ಯಾಸ್ತ - *06-11 pm*
------------------------------------------------------- 🎆 ದಿನದ ವಿಶೇಷ - *ಶರನ್ನವರಾತ್ರಿ ಮಹೋತ್ಸವ - ಬ್ರಹ್ಮಚಾರಿಣಿ ಆರಾಧನೆ* ---------------------------------------------------- *ಅಶುಭ ಕಾಲಗಳು* *ರಾಹುಕಾಲ* *03-11 pm* ಇಂದ *04-41 pm ಯಮಗಂಡಕಾಲ*
*09-10 am* ಇಂದ *10-40 am* *ಗುಳಿಕಕಾಲ*
*12-11 pm* ಇಂದ *01-41 pm* *ಅಭಿಜಿತ್ ಮುಹೂರ್ತ* : ಮಂಗಳ ಹಗಲು *11-46 am* ರಿಂದ *12-35 pm* ರವರೆಗೆ *ದುರ್ಮುಹೂರ್ತ* : ಮಂಗಳ ಹಗಲು *08-34 am* ರಿಂದ *09-22 am* ರವರೆಗೆ ಮಂಗಳ ರಾತ್ರಿ *11-59 pm* ರಿಂದ *11-47 pm* ರವರೆಗೆ *ವರ್ಜ್ಯ* ಮಂಗಳ ಹಗಲು *02-17 pm* ರಿಂದ *03-53 pm* *ಅಮೃತ ಕಾಲ* : ಶುಭ ಭಮಸ್ತು...ಶುಭದಿನ
[26/09, 11:36 PM] Rss Lokesh Anna. mallm: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ನವರಾತ್ರಿ ಮಹೋತ್ಸವ ಎರಡನೆಯ ದಿನ ಬ್ರಹ್ಮಚಾರಿಣಿ ಆರಾಧನೆ - ಪೂಜೆ ವಿಧಾನ, ಮಂತ್ರ ಮತ್ತು ಮಹತ್ವ ಹೀಗಿದೆ..!*
ಶಾರದೀಯ ನವರಾತ್ರಿಯ ಎರಡನೆಯ ದಿನ ಬಿದಿಗೆ ದಿನದಂದು ದುರ್ಗಾ ದೇವಿಯ ಎರಡನೇ ಅವತರವಾದ ಬ್ರಹ್ಮಚಾರಿಣಿ ರೂಪವನ್ನು ಪೂಜಿಸಲಾಗುವುದು. ಅಂದರೆ 9 ದಿನಗಳ ನವರಾತ್ರಿ ಹಬ್ಬದ ಎರಡನೇ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುವುದು. ತಪಸ್ಸಿನ ರೂಪಕವಾದ ಬ್ರಹ್ಮಚಾರಿಣಿ ದೇವಿಯನ್ನು ನವರಾತ್ರಿ ಹಬ್ಬದಲ್ಲಿ ಪೂಜಿಸುವುದು ಹೇಗೆ..? ತಾಯಿ ಬ್ರಹ್ಮಚಾರಿಣಿಯ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ..
ತಾಯಿ ಬ್ರಹ್ಮಚಾರಿಣಿಯ ಸ್ವರೂಪ
ಹೆಸರೇ ಸೂಚಿಸುವಂತೆ ತಾಯಿ ಬ್ರಹ್ಮಚಾರಿಣಿ ಎಂದರೆ ದೃಢತೆ ಮತ್ತು ನಡವಳಿಕೆಯ ದೇವತೆ. ತಾಯಿಯು ಒಂದು ಕೈಯಲ್ಲಿ ಜಪಮಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ನೀವು ತಾಯಿಯ ಈ ರೂಪವನ್ನು ಪೂಜಿಸಬೇಕು. ತಾಯಿಯ ಈ ರೂಪವನ್ನು ಪೂಜಿಸುವುದರಿಂದ ಸಂಯಮ, ಪರಿತ್ಯಾಗ ಮತ್ತು ನಿರ್ಲಿಪ್ತತೆಯೊಂದಿಗೆ ವ್ಯಕ್ತಿಯಲ್ಲಿ ಸದ್ಗುಣದ ಭಾವನೆಗಳು ಸಹ ಬೆಳೆಯುತ್ತವೆ ಎನ್ನುವ ನಂಬಿಕೆಯಿದೆ.
ಬ್ರಹ್ಮಚಾರಿಣಿ ದೇವಿ ಹಿನ್ನೆಲೆ
ಪಾರ್ವತಿಯಾಗಿ, ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಬರೀ ಹೂವು, ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು, ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸಿದಳು, ಪರ್ಣವೆಂದರೆ ಎಲೆ. ಹಾಗಾಗಿ ಈಕೆಯನ್ನು ಅಪರ್ಣಾ ಎಂದೂ ಕರೆಯುತ್ತಾರೆ. ನಂತರ ಶಿವನೇ ಒಬ್ಬ ಸನ್ಯಾಸಿಯ ರೂಪವನ್ನು ತಾಳಿ ಬಂದು, ಶಿವನಲ್ಲಿ ಈಕೆಗೆ ಇರುವ ನಿಷ್ಠೆಯನ್ನು ಪರೀಕ್ಷಿಸಿದನು. ಪಾರ್ವತಿಯ ಅಖಂಡ ನಿಷ್ಠೆಗೆ ಮೆಚ್ಚಿದ ಶಿವನು ಆಕೆಗೆ ಒಲಿಯುತ್ತಾನೆ.
*ತಾಯಿ ಬ್ರಹ್ಮಚಾರಿಣಿ ಪೂಜೆ ವಿಧಾನ*
- ಈ ದಿನ, ಭಕ್ತರು ಬೆಳಗಿನ ಪೂಜೆಯಲ್ಲಿ ಪಾಲ್ಗೊಳ್ಳಲು ಮುಂಜಾನೆ ಬೇಗ ಏಳಬೇಕು.
- ಪೂಜೆಗೆ ಪಾಲ್ಗೊಳ್ಳುವ ಮುನ್ನ ಶುದ್ಧವಾದ ಅಥವಾ ಸ್ವಚ್ಛವಾದ ಬಟ್ಟೆಯನ್ನು ಧರಿಸಿ, ಪೂಜೆಯಲ್ಲಿ ಭಾಗವಹಿಸಬೇಕು.
- ಬ್ರಹ್ಮಚಾರಿಣಿ ದೇವಿಯ ವಿಗ್ರಹವನ್ನು ಜೇನುತುಪ್ಪ ಮತ್ತು ಹಾಲಿನಿಂದ ಅಭಿಷೇಕ ಮಾಡಿ ಮತ್ತು ಅಂತಿಮವಾಗಿ ವಿಗ್ರಹದ ಹಣೆಗೆ ಸಿಂಧೂರವನ್ನು ಇಡಿ.
- ಪೂಜೆಯ ಸಮಯದಲ್ಲಿ ಭಕ್ತರು ಬ್ರಹ್ಮಚಾರಿಣಿ ದೇವಿಗೆ ಹೂವು, ಶ್ರೀಗಂಧ, ಹಾಲು, ಅನ್ನ, ಮೊಸರು ಮತ್ತು ಜೇನುತುಪ್ಪವನ್ನು ಅರ್ಪಿಸುವುದು ಉತ್ತಮ.
- ಪೂಜೆಯ ಸಮಯದಲ್ಲಿ ಅವಳನ್ನು ದಾಸವಾಳ ಮತ್ತು ಬಿಳಿ ಕಮಲದ ಹೂವುಗಳಿಂದ ಪೂಜಿಸಲಾಗುತ್ತದೆ.
*ತಾಯಿ ಬ್ರಹ್ಮಚಾರಿಣಿಗೆ ಭೋಗ*
ತಾಯಿಗೆ ಪಿಸ್ತಾ ಸಿಹಿತಿಂಡಿಗಳು ತುಂಬಾ ಇಷ್ಟವೆಂದು ನಂಬಲಾಗಿದೆ. ಆದ್ದರಿಂದ, ಸಾಧ್ಯವಾದಷ್ಟು ಇವುಗಳನ್ನು ಪೂಜೆಯಲ್ಲಿ ಇಡಬೇಕು. ದಾಸವಾಳ ಮತ್ತು ಕಮಲದ ಹೂವು ತುಂಬಾ ಇಷ್ಟ. ಪೂಜೆಯ ಸಮಯದಲ್ಲಿ ತಾಯಿಗೆ ಈ ಹೂವುಗಳಿಂದ ಮಾಡಿದ ಮಾಲೆಯನ್ನು ಅರ್ಪಿಸಿ. ಏಕೆಂದರೆ ತಾಯಿಗೆ ಸಕ್ಕರೆ ಮತ್ತು ಸಕ್ಕರೆ ಮಿಠಾಯಿ ಕೂಡ ಇಷ್ಟ. ಹಾಗಾಗಿ ಇವುಗಳನ್ನು ಪೂಜೆಯಲ್ಲಿ ಅರ್ಪಿಸಬಹುದು. ಇದರಿಂದ ತಾಯಿಗೆ ತುಂಬಾ ಸಂತೋಷವಾಗುತ್ತದೆ.
*ಬ್ರಹ್ಮಚಾರಿಣಿ ಪೂಜೆ ಮಹತ್ವ*
ಬ್ರಹ್ಮಚಾರಿಣಿ ಮಾತೆಯನ್ನು ಪೂಜಿಸುವ ವ್ಯಕ್ತಿಗಳಿಗೆ ಶಾಂತಿ ಮತ್ತು ಸಂತೋಷವು ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಅವಳು ಅದೃಷ್ಟದ ನಿಯಂತ್ರಕ ಮಂಗಳ ದೇವನನ್ನು ನಿಯಂತ್ರಿಸುತ್ತಾಳೆ ಮತ್ತು ತನ್ನ ಅನುಯಾಯಿಗಳಿಗೆ ಬುದ್ಧಿವಂತಿಕೆ ಮತ್ತು ಸಂತೋಷವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.
*ಬ್ರಹ್ಮ ಚಾರಿಣಿ ಮಂತ್ರ*
- ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ
- ದಧನಾಕಾರ ಪದ್ಮಭಯಂ ಅಕ್ಷಮಾಲಾ ಕಮಂಡಲಂ,
ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ.
*ಬ್ರಹ್ಮಚಾರಿಣಿಯ ಸ್ತುತಿ*
ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
[26/09, 11:36 PM] Rss Lokesh Anna. mallm: ll *ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ* ll
ಓಂ ಬ್ರಹ್ಮಚರ್ಯಾಶ್ರಮಪರಾಯೈ ನಮಃ
ಓಂ ಬ್ರಹ್ಮವಿದ್ಯಾತರಂಗಿಣ್ಯೈ ನಮಃ
ಓಂ ಬ್ರಹ್ಮಾಂಡಕೋಟಿವ್ಯಾಪ್ತಾಮ್ಬ್ವೈ ನಮಃ
ಓಂ ಬ್ರಹ್ಮಹತ್ಯಾಪಹಾರಿಣ್ಯೈ ನಮಃ
ಓಂ ಬ್ರಹ್ಮೇಶವಿಷ್ಣುರೂಪಾಯೈ ನಮಃ
ಓಂ ಬಾಲಪೀಯೂಷರೋಚಿಷಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ
ಓಂ ಬ್ರಹ್ಮಮಾತ್ರ್ಯೈ ನಮಃ
ಓಂ ಬ್ರಹ್ಮೇಶ್ಯೈ ನಮಃ
ಓಂ ಬ್ರಹ್ಮಕೈವಲ್ಯಬಗಲಾಯೈ ನಮಃ 10
ಓಂ ಬ್ರಹ್ಮಚಾರಿಣ್ಯೈ ನಮಃ
ಓಂ ಬ್ರಹ್ಮಸ್ಥಿತಾಯೈ ನಮಃ
ಓಂ ಬ್ರಹ್ಮರೂಪಾಯೈ ನಮಃ
ಓಂ ಬ್ರಹ್ಮಣಾವೇದವನ್ದಿತಾಯೈ ನಮಃ ಓಂ ಬ್ರಹ್ಮೋದ್ಭವಾಯೈ ನಮಃ
ಓಂ ಬ್ರಹ್ಮಕಲಾಯೈ ನಮಃ
ಓಂ ಬ್ರಹ್ಮಾಣ್ಯೈ ನಮಃ
ಓಂ ಬ್ರಹ್ಮಬೋಧಿನ್ಯೈ ನಮಃ
ಓಂ ಬ್ರಹ್ಮಕರ್ಮಪರಾಯಣಾಯೈ ನಮಃ
ಓಂ ಬೃಹತ್ತುಂಡಾಯೈ ನಮಃ 20
ಓಂ ಬ್ರಹ್ಮಾದಿಸುರವನ್ದ್ಯಾಯೈ ನಮಃ
ಓಂ ಬ್ರಹ್ಮಾದಿಜನನ್ಯೈ ನಮಃ
ಓಂ ಬ್ರಹ್ಮರನ್ಧ್ರಾಯೈ ನಮಃ
ಓಂ ಬ್ರಹ್ಮಯಜ್ಞಾಯೈ ನಮಃ
ಓಂ ಬ್ರಹ್ಮಶೀರ್ಷಾಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಣ್ಯೈ ನಮಃ
ಓಂ ಬ್ರಹ್ಮಯಜ್ಞಿನ್ಯೈ ನಮಃ
ಓಂ ಬೃಹತ್ಸಾಮಸ್ತುತಾಯೈ ನಮಃ
ಓಂ ಬ್ರಹ್ಮಮಾಯಾಯೈ ನಮಃ 30
ಓಂ ಬ್ರಹ್ಮರ್ಷಿಪೂಜಿತಾಯೈ ನಮಃ
ಓಂ ಬನ್ಧೂಕಸುಮನೋರಾಗಾಯೈ ನಮಃ ಓಂ ಬಾದರಾಯಣದೇಶಿಕಾಯೈ ನಮಃ ಓಂ ಬಾಲಾಮ್ಬಾಯೈ ನಮಃ
ಓಂ ಬಾಣಕುಸುಮಾಯೈ ನಮಃ
ಓಂ ಬಗಲಾಮುಖಿರೂಪಿಣ್ಯೈ ನಮಃ
ಓಂ ಬಿನ್ದುಚಕ್ರಸ್ಥಿತಾಯೈ ನಮಃ
ಓಂ ಬಿನ್ದುತರ್ಪಣಪ್ರೀತಮಾನಸಾಯೈ ನಮಃ
ಓಂ ಬೃಹದೈಶ್ವರ್ಯದಾಯೈ ನಮಃ
ಓಂ ಬನ್ಧಹೀನಾಯೈ ನಮಃ 40
ಓಂ ಬುಧಸಮರ್ಚಿತಾಯೈ ನಮಃ
ಓಂ ಬ್ರಹ್ಮಚಾಮುಂಡಿಕಾಯೈ ನಮಃ
ಓಂ ಬ್ರಹ್ಮಜನನ್ಯೈ ನಮಃ
ಓಂ ಬ್ರಾಹ್ಮಣಪ್ರಿಯಾಯೈ ನಮಃ
ಓಂ ಬ್ರಹ್ಮಜ್ಞಾನಪ್ರದಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ
ಓಂ ಬ್ರಹ್ಮಾಂಡನಾಯಿಕಾಯೈ ನಮಃ
ಓಂ ಬ್ರಹ್ಮತಾಲಪ್ರಿಯಾಯೈ ನಮಃ
ಓಂ ಬ್ರಹ್ಮಪಂಚಮಂಚಕಶಾಯಿನ್ಯೈ ನಮಃ ಓಂ ಬ್ರಹ್ಮಾದಿವಿನುತಾಯೈ ನಮಃ 50
ಓಂ ಬ್ರಹ್ಮಸಹೋದರ್ಯೈ ನಮಃ
ಓಂ ಬ್ರಹ್ಮಪುರಸ್ಥಿತಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ಬ್ರಾಹ್ಮಣದೇವತಾಯೈ ನಮಃ
ಓಂ ಬ್ರಹ್ಮಾಂಡಬಹಿರನ್ತಸ್ಥಾಯೈ ನಮಃ ಓಂ ಬ್ರಹ್ಮಕಂಕಣಸೂತ್ರಿಣ್ಯೈ ನಮಃ
ಓಂ ಬೃಂಹಣ್ಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಮಯ್ಯೈ ನಮಃ
ಓಂ ಬ್ರಾಹ್ಮ್ಯೈ ನಮಃ 60
ಓಂ ಬ್ರಹ್ಮಾನನ್ದಪ್ರದಾಯಿನ್ಯೈ ನಮಃ
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ
ಓಂ ಬ್ರಧ್ನತನಯಾಯೈ ನಮಃ
ಓಂ ಬಲೋನ್ಮೂಲಿತಕಲ್ಮಷಾಯೈ ನಮಃ
ಓಂ ಬಲೋದ್ಧತಾಯೈ ನಮಃ
ಓಂ ಬಹುವಿಘ್ನವಿನಾಶಕೃತೇ ನಮಃ
ಓಂ ಬಾಲಬಾಲಾಯೈ ನಮಃ
ಓಂ ಬಹುಮತಾಯೈ ನಮಃ
ಓಂ ಬಾಹುಯುಗಲಾಯೈ ನಮಃ
ಓಂ ಬಾಹುಪಂಕಜಾಯೈ ನಮಃ 70
ಓಂ ಬಾಲಾತಪನೀಭಾಂಶುಕಾಯೈ ನಮಃ ಓಂ ಬಲಭದ್ರಪ್ರಿಯಾಯೈ ನಮಃ
ಓಂ ಬಾಲಪ್ರದಾಯಿನ್ಯೈ ನಮಃ
ಓಂ ಬುದ್ಧಿಸಂಸ್ತುತಾಯೈ ನಮಃ
ಓಂ ಬನ್ದೀದೇವ್ಯೈ ನಮಃ
ಓಂ ಬಿಲವತ್ಯೈ ನಮಃ
ಓಂ ಬಡಿಶಘಿನ್ಯೈ ನಮಃ
ಓಂ ಬಲಿಪ್ರಿಯಾಯೈ ನಮಃ
ಓಂ ಬಾನ್ಧವ್ಯೈ ನಮಃ
ಓಂ ಬೋಧಿತಾಯೈ ನಮಃ 80
ಓಂ ಬುದ್ಧಿಬನ್ಧುಕಕುಸುಮಪ್ರಿಯಾಯೈ ನಮಃ
ಓಂ ಬಾಲಭಾನುಪ್ರಭಾಕರಾಯೈ ನಮಃ
ಓಂ ಬೃಹಸ್ಪತಿಸ್ತುತಾಯೈ ನಮಃ
ಓಂ ಬೃನ್ದಾಯೈ ನಮಃ
ಓಂ ಬೃನ್ದಾವನವಿಹಾರಿಣ್ಯೈ ನಮಃ
ಓಂ ಬಾಲಾಕಿನ್ಯೈ ನಮಃ
ಓಂ ಬಿಲಾಹಾರಾಯೈ ನಮಃ
ಓಂ ಬಿಲವಸಾಯೈ ನಮಃ
ಓಂ ಬಹುದಕಾಯೈ ನಮಃ
ಓಂ ಬಹುನೇತ್ರಾಯೈ ನಮಃ 90
ಓಂ ಬಹುಪದಾಯೈ ನಮಃ
ಓಂ ಬಹುಕರ್ಣಾವತಂಸಿಕಾಯೈ ನಮಃ
ಓಂ ಬಹುಬಾಹುಯುತಾಯೈ ನಮಃ
ಓಂ ಬೀಜರೂಪಿಣ್ಯೈ ನಮಃ
ಓಂ ಬಹುರೂಪಿಣ್ಯೈ ನಮಃ
ಓಂ ಬಿನ್ದುನಾದಕಲಾತೀತಾಯೈ ನಮಃ
ಓಂ ಬಿನ್ದುನಾದಸ್ವರೂಪಿಣ್ಯೈ ನಮಃ
ಓಂ ಬದ್ಧಗೋಧಾಂಗುಲಿಪ್ರಾಣಾಯೈ ನಮಃ
ಓಂ ಬದರ್ಯಾಶ್ರಮವಾಸಿನ್ಯೈ ನಮಃ
ಓಂ ಬೃನ್ದಾರಕಾಯೈ ನಮಃ 100
ಓಂ ಬೃಹತ್ಸ್ಕನ್ಧಾಯೈ ನಮಃ
ಓಂ ಬೃಹತ್ಯೈ ನಮಃ
ಓಂ ಬಾಣಪಾತಿನ್ಯೈ ನಮಃ
ಓಂ ಬೃನ್ದಾಧ್ಯಕ್ಷಾಯೈ ನಮಃ
ಓಂ ಬಹುನುತಾಯೈ ನಮಃ
ಓಂ ಬಹುವಿಕ್ರಮಾಯೈ ನಮಃ
ಓಂ ಬದ್ಧಪದ್ಮಾಸನಾಸೀನಾಯೈ ನಮಃ
ಓಂ ಬಿಲ್ವಪತ್ರತಲಸ್ಥಿತಾಯೈ ನಮಃ 108
ll ಇತಿ ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ ll
Post a Comment