ಮತಾಂತರ ನಿಷೇಧ ವಿಧೇಯಕ ಅಂಗೀಕಾರ

ಬೆಂಗಳೂರು: ವಿಧಾನ ಪರಿಷತ್‍ನಲ್ಲಿ ಧ್ವನಿ ಮತದ ಮೂಲಕ ಮತಾಂತರ ನಿಷೇಧ ವಿಧೇಯಕ ಅಂಗೀಕಾರ ಮಾಡಲಾಗಿದೆ. ವಿಧಾನ ಪರಿಷತ್​ನಲ್ಲಿ ಇಂದು ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡಿದರು ಇದೇ ವೇಳೆ ಅವರು ಇದು ಬಹಳ ಮಹತ್ವದ ಕಾಯ್ದೆಯನ್ನ ಸರ್ಕಾರ ತಂದಿದೆ.2013 ರಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗಲು ಇದರ ಬಗ್ಗೆ ಚಿಂತನೆ ನಡೆಸಿತ್ತು. ಎಲ್ಲರಿಗೂ ಅವರವರ ಧಾರ್ಮಿಕ ಹಕ್ಕಿನಲ್ಲಿ ಬದುಕುವ ಅವಕಾಶ ವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಲವಂತದಿಂದ, ಆಮೀಷದ ಮತಾಂತರ ನಡೆಯುತ್ತಿದೆ. ನಮ್ಮ ಶಾಸಕರೇ ಕಳೆದ ಬಾರಿ ವಿಧಾನ ಸಭೆಯಲ್ಲಿ ಹೇಳಿದ್ರು ನನ್ನ ತಾಯಿಯನ್ನೆ ಮತಾಂತರ ಮಾಡಲಾಗಿದೆ ಎಂದು ಹೇಳಿದ್ರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿವೇಶನದಲ್ಲಿ ಪ್ರಸ್ತಾಪಿಸಿದರು.

ಮತಾಂತರ ನಿಷೇಧ ವಿಧೇಯಕ ಮಂಡನೆ ಮಸೂದೆಯಲ್ಲಿ ಏನಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Post a Comment

Previous Post Next Post