ಸೆಪ್ಟೆಂಬರ್ 13, 2022
, 1:43PM
ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ
@MoHFW_INDIA
ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ (NLEM) ಅಡಿಯಲ್ಲಿ ಸರ್ಕಾರವು 384 ಔಷಧಿಗಳನ್ನು ಬಿಡುಗಡೆ ಮಾಡಿದೆ. ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಇಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ NLEM 2022 ರ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದರು.
ಎಲ್ಲಾ ಹಂತದ ಆರೋಗ್ಯ ರಕ್ಷಣೆಯಲ್ಲಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸುವಲ್ಲಿ NLEM ಪ್ರಮುಖ ಪಾತ್ರ ವಹಿಸುತ್ತದೆ ಎಂದು ಡಾ. ಮಾಂಡವೀಯ ಹೇಳಿದರು. ಈ ಔಷಧಿಗಳು ಆರೋಗ್ಯ ಸೇವೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಡಾ.ಮಾಂಡವೀಯ ಹೇಳಿದರು.
ಸಂಬಂಧಪಟ್ಟವರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿ ಪಟ್ಟಿಯನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು. ರಾಷ್ಟ್ರೀಯ ಫಾರ್ಮಾ ಬೆಲೆ ಪ್ರಾಧಿಕಾರವು ಈಗ ಈ ಔಷಧಿಗಳ ಬೆಲೆಯನ್ನು ನಿರ್ಧರಿಸುತ್ತದೆ ಮತ್ತು ನಿಯಂತ್ರಿಸುತ್ತದೆ ಇದರಿಂದ ಜನರಿಗೆ ಕೈಗೆಟುಕುವ ಔಷಧಿಗಳು ಲಭ್ಯವಿವೆ ಎಂದು ಅವರು ಹೇಳಿದರು.
ರಾಜ್ಯ ಸಚಿವೆ ಡಾ.ಭಾರತಿ ಪವಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಫಾರ್ಮಾ ಕ್ಷೇತ್ರ ಬೆಳೆಯುತ್ತಿದೆ. ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯು ರಾಷ್ಟ್ರದ ಬೇಡಿಕೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಫಾರ್ಮಾ ವಲಯಕ್ಕೆ ಮಾರ್ಗದರ್ಶನ ನೀಡುತ್ತದೆ ಮತ್ತು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಆಂಟಿಮೈಕ್ರೊಬಿಯಲ್ ಪ್ರತಿರೋಧದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. NLEM ಒಂದು ಕ್ರಿಯಾತ್ಮಕ ದಾಖಲೆಯಾಗಿದೆ ಮತ್ತು ಬದಲಾಗುತ್ತಿರುವ ಸಾರ್ವಜನಿಕ ಆರೋಗ್ಯ ಆದ್ಯತೆಗಳು ಮತ್ತು ಔಷಧೀಯ ಜ್ಞಾನದಲ್ಲಿನ ಪ್ರಗತಿಗಳನ್ನು ಪರಿಗಣಿಸಿ ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ. ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು ಮೊದಲು 1996 ರಲ್ಲಿ ರೂಪಿಸಲಾಯಿತು ಮತ್ತು ಇದನ್ನು 2003, 2011 ಮತ್ತು 2015 ರಲ್ಲಿ ಮೂರು ಬಾರಿ ಪರಿಷ್ಕರಿಸಲಾಗಿದೆ.
NLEM, 2015 ರಲ್ಲಿ 376 ಕ್ಕೆ ಹೋಲಿಸಿದರೆ NLEM 2022 384 ಔಷಧಿಗಳನ್ನು ಒಳಗೊಂಡಿದೆ. ಔಷಧಗಳನ್ನು ಈಗ 27 ಚಿಕಿತ್ಸಕ ವರ್ಗಗಳಾಗಿ ವರ್ಗೀಕರಿಸಲಾಗಿದೆ. COVID-19 ನ ಬೆಂಬಲ ನಿರ್ವಹಣೆಗೆ ಅಗತ್ಯವೆಂದು ಪರಿಗಣಿಸಲಾದ ಔಷಧಿಗಳಿಗಾಗಿ ಹೊಸ ವಿಭಾಗವನ್ನು ಸೇರಿಸಲಾಗಿದೆ.
Post a Comment