ಎರಡು ದಿನಗಳ ಹಿಂದೆ, ಆರ್ ಎಸ್ಎಸ್ ಚಡ್ಡಿಗಳಿಗೆ ಬೆಂಕಿ ಹಾಕಿದ ಗ್ರಾಫಿಕ್ಸ್ ಚಿತ್ರಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಟಾಂಗ್ ನೀಡಿದ್ದಾರೆ. ನೆಹರೂ ಅವರು ಶಾರ್ಟ್ಸ್ (ಚಡ್ಡಿ) ಧರಿಸಿ ಸಾಗುತ್ತಿರುವ
ಫೋಟೋವೊಂದನ್ನು ಟ್ವಿಟ್ ಮಾಡಿರುವ ಅವರು, ಇದಕ್ಕೂ ಬೆಂಕಿ ಹಾಕುತ್ತೀರಾ ಎಂದು ಕೇಳುವ ಮೂಲಕ ಕಾಂಗ್ರೆಸ್ ಕಾಲೆಳೆದಿದ್ದಾರೆ. ಇದರ ಜೊತೆಗೆ, ಭಾರತ್ ತೋಡೋ ಯಾತ್ರಿ ಎಂಬ ಶೀರ್ಷಿಕೆಯುಳ್ಳ ಹ್ಯಾಶ್ ಟ್ಯಾಗನ್ನೂ ಹಾಕಿ ಕಾಂಗ್ರೆಸ್ಸಿಗರನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ.-----------------------------------------------------------
Post a Comment