ಕಾನೂನು ಜಾರಿ ಸಂಸ್ಥೆಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥೆಗಳ ಮೇಲೆ ರಾಷ್ಟ್ರವ್ಯಾಪಿ ದಾಳಿ

ಸೆಪ್ಟೆಂಬರ್ 27, 2022
2:13PM

ಕಾನೂನು ಜಾರಿ ಸಂಸ್ಥೆಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥೆಗಳ ಮೇಲೆ ರಾಷ್ಟ್ರವ್ಯಾಪಿ ದಾಳಿ 


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಭದ್ರತಾ ಏಜೆನ್ಸಿಗಳು ಇಂದು ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿವೆ. ಕೇಂದ್ರ ಏಜೆನ್ಸಿಗಳ ಮಾಹಿತಿಯ ಆಧಾರದ ಮೇಲೆ ದೆಹಲಿ ಪೊಲೀಸರು ನಿಜಾಮುದ್ದೀನ್, ಶಾಹೀನ್ ಬಾಗ್ ಮತ್ತು ನಗರದ ಇತರ ಪ್ರದೇಶಗಳಲ್ಲಿ ಶೋಧ ನಡೆಸಿದರು. 30ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂನಲ್ಲಿ, ಭದ್ರತಾ ಸಂಸ್ಥೆಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ PFI ನ 25 ಸದಸ್ಯರನ್ನು ಬಂಧಿಸಿವೆ. ಹಲವು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 10 ಪಿಎಫ್‌ಐ ಮುಖಂಡರು ಮತ್ತು ಸದಸ್ಯರನ್ನು ಗೋಲ್‌ಪಾರಾ ಜಿಲ್ಲೆಯಿಂದ ಮತ್ತು ಐವರನ್ನು ಕಾಮ್ರೂಪ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಮಹಾರಾಷ್ಟ್ರ ರಾಜ್ಯ ಪೊಲೀಸರು ನಡೆಸಿದ ದಾಳಿಯಲ್ಲಿ 20 ಪಿಎಫ್‌ಐ ಸದಸ್ಯರನ್ನು ಬಂಧಿಸಲಾಗಿದೆ. ಔರಂಗಾಬಾದ್‌ನಿಂದ 13 ಪಿಎಫ್‌ಐ ಸದಸ್ಯರನ್ನು, ಮರಾಠವಾಡ ಪ್ರದೇಶದ ಇತರ ಭಾಗಗಳಿಂದ ಏಳು ಮತ್ತು ಸೋಲಾಪುರದಿಂದ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತರು ಪಿಎಫ್‌ಐನಲ್ಲಿ ಕಾರ್ಯದರ್ಶಿ ಹುದ್ದೆಯನ್ನೂ ಅಲಂಕರಿಸಿದ್ದಾರೆ. ಎಟಿಎಸ್ ಪಿಎಫ್‌ಐ ಸದಸ್ಯರ ಮೇಲೆ ನಿಗಾ ಇರಿಸಿತ್ತು.

ಕರ್ನಾಟಕ ರಾಜ್ಯ ಪೊಲೀಸರು ಜಿಲ್ಲಾ ಮಟ್ಟದ ಪಿಎಫ್‌ಐ ಕಚೇರಿಗಳು ಮತ್ತು ಅದರ ಕಾರ್ಯಕರ್ತರ ನಿವಾಸಗಳ ಮೇಲೂ ದಾಳಿ ನಡೆಸಿದ್ದಾರೆ. 40 ಕ್ಕೂ ಹೆಚ್ಚು ಪಿಎಫ್‌ಐ ಜಿಲ್ಲಾಧ್ಯಕ್ಷರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಪಿಎಫ್‌ಐ ಕಾರ್ಯಕರ್ತರಿಂದ ಹಿಂಸಾಚಾರದ ಸುದ್ದಿಯ ನಂತರ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

Post a Comment

Previous Post Next Post