ಶ್ರೀರಾಮ ಜನ್ಮಭೂಮಿ ಉತ್ಖನನದ ರೂವಾರಿ ಬಿ.ಬಿ.ಲಾಲ್ ಅವರ ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ಸಂತಾಪ
ಬೆಂಗಳೂರು: ಶ್ರೀರಾಮ ಜನ್ಮಭೂಮಿ ಉತ್ಖನನದ ರೂವಾರಿ ಬಿ.ಬಿ.ಲಾಲ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತ ಹಿರಿಯ ಪುರಾತತ್ವ ಶಾಸ್ತ್ರಜ್ಞ ಬೃಜ್‍ಬಾಸಿ ಲಾಲ್ (ಬಿ.ಬಿ.ಲಾಲ್) ಅವರು ಭಾರತೀಯ ಪುರಾತತ್ವ ಇಲಾಖೆಯ ಮಹಾ ನಿರ್ದೇಶಕರಾಗಿದ್ದರು. ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಯಲ್ಲಿ ಉತ್ಖನನ ವೇಳೆ ದೇವಸ್ಥಾನ ಮಾದರಿಯ ನಾಲ್ಕು ಕಂಬಗಳನ್ನು ಅವರು ಗುರುತಿಸಿದ್ದರು. ಅಯೋಧ್ಯೆಯಲ್ಲಿ ಮಂದಿರ ಇತ್ತು ಎಂಬ ವಾದಕ್ಕೆ ಇದುವೇ ಪ್ರಮುಖ ಸಾಕ್ಷ್ಯವಾಗಿ ಬದಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಬಿ.ಬಿ.ಲಾಲ್ ಅವರು ಸಂಸ್ಕೃತಿ ಮತ್ತು ಪುರಾತತ್ವ ಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಬೇಸರವಾಗಿದೆ ಎಂದು ತಿಳಿಸಿದ್ದಾರೆ.
Post a Comment