[27/09, 2:38 PM] Bjp Media: ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ಶ್ರೀ ನಳೀನ್ ಕುಮಾರ್ ಕಟೀಲ್ ಅವರು ವಿಜಯಪುರದಲ್ಲಿ ನೀಡಿದ ಹೇಳಿಕೆ.
[27/09, 3:42 PM] Bjp Media: 27-9-2022
ಗೆ,
ಸಂಪಾದಕರು / ವರದಿಗಾರರು.
ಪ್ರಕಟಣೆಯ ಕೃಪೆಗಾಗಿ
ಸಿದ್ದರಾಮಣ್ಣ ಪೇಮೆಂಟ್ ಸಿಎಂ: ನಳಿನ್‍ಕುಮಾರ್ ಕಟೀಲ್
ಬೆಂಗಳೂರು: ತಾನು ಜೈಲಿಗೆ ಹೋಗಬಾರದೆಂದು ಲೋಕಾಯುಕ್ತವನ್ನು ಸಿದ್ದರಾಮಣ್ಣ ಮುಚ್ಚಿಹಾಕಿದ್ದರು. ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ. ಈ ರಾಜ್ಯದಲ್ಲಿ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಣ್ಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಆರೋಪಿಸಿದರು.
ವಿಜಯಪುರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪೇಸಿಎಂ ಕಾಂಗ್ರೆಸ್; ಭ್ರಷ್ಟಾಚಾರದ ಇನ್ನೊಂದು ಹೆಸರು ಕಾಂಗ್ರೆಸ್. ದೇಶ ಮತ್ತು ರಾಜ್ಯವನ್ನು ಲೂಟಿ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು. ಹಗರಣ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‍ನವರಿಗೆ ನೈತಿಕತೆ ಇಲ್ಲ ಎಂದರು.
ಖರ್ಗೆ, ಪರಮೇಶ್ವರ್ ಅವರಂಥ ಹಿರಿಯ ನಾಯಕರಿದ್ದರು. ದಲಿತ ಸಿಎಂ ವಿಚಾರ ಆಗ ಜೋರಾಗಿ ಚರ್ಚೆಯಲ್ಲಿತ್ತು. ಡಿ.ಕೆ.ಶಿವಕುಮಾರ್, ದೇಶಪಾಂಡೆ ಅವರಂಥ ಪ್ರಮುಖರ ಮಧ್ಯೆ ಸಿದ್ದರಾಮಣ್ಣ ಮುಖ್ಯಮಂತ್ರಿ ಆಗಿದ್ದಾರೆ ಅಂದರೆ, ಹಣ ಕೊಟ್ಟೇ ಆಗಿದ್ದಾರೆ. 5 ವರ್ಷ ಮೇಡಂಗೆ ಹಣ ಕೊಟ್ಟೇ ಆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಿದರು.
ಪೇಮೆಂಟ್ ಮೂಲಕ ಸಿದ್ದರಾಮಣ್ಣ ಸೀಟು ಗಟ್ಟಿ ಮಾಡಿಕೊಂಡರು. ಪೇ ಕಾಂಗ್ರೆಸ್ ಮೇಡಂ ಎಂಬ ಅರ್ಥ ಪೇಸಿಎಂ ಎಂಬುದರಲ್ಲಿ ಅಡಗಿದೆ. ಇದನ್ನು ಬುದ್ಧಿವಂತಿಕೆಯಿಂದ ಡಿ.ಕೆ.ಶಿವಕುಮಾರ್ ‘ಪೇಸಿಎಂ’ ಮಾಡಿದ್ದಾರೆ. ಸಿದ್ದರಾಮಣ್ಣನನ್ನು ಉದ್ದೇಶಿಸಿ ಈ ಶಬ್ದ ತಂದಿದ್ದಾರೆ. ನಮ್ಮ ಬಾಯಲ್ಲಿ ಇದನ್ನು ಹೇಳಿಸಲು ಡಿ.ಕೆ.ಶಿವಕುಮಾರ್ ಇದನ್ನು ಮಾಡಿದ್ದಾರೆ ಎಂದು ವಿವರಿಸಿದರು.
ಎಷ್ಟು ಕೋಟಿ ಎಂದು ಶಿವಕುಮಾರ್ ಹೇಳ್ತಾರೆ
ಸಿಎಂ ಆಗಲು ಎಷ್ಟು ಕೋಟಿ ಕೊಟ್ಟಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೇಡಂ ಚಿಲ್ರೆ ತೆಗೆದುಕೊಳ್ಳಲಾರರು. ದೊಡ್ಡ ಮೊತ್ತ ಕೊಟ್ಟಿರಬಹುದು ಎಂದು ನಳಿನ್‍ಕುಮಾರ್ ಕಟೀಲ್ ಅವರು ಉತ್ತರಿಸಿದರು.
ನೋಡೋಣ ಒಂದಲ್ಲ ಒಂದು ದಿನ ಡಿ.ಕೆ.ಶಿವಕುಮಾರ್ ಇದನ್ನು ಹೇಳ್ತಾರೆ. ಅವರ ಬಾಯಿಂದಲೇ ಕೇಳೋಣ; ನಮ್ಮ ಹತ್ರ ಯಾಕೆ ಹೇಳಿಸ್ತೀರಿ; ಅವರ ಬಾಯಲ್ಲೇ ಹೇಳಿಸ್ತೇವೆ ಎಂದು ಉತ್ತರ ನೀಡಿದರು.
ಪಿಎಫ್‍ಐ, ಕೆಎಫ್‍ಡಿ, ಎಸ್‍ಡಿಪಿಐ ಗಳು ಈ ರಾಜ್ಯದಲ್ಲಿ ಆತಂಕ ಸೃಷ್ಟಿಸುತ್ತಿವೆ. ಇದು ಗಂಭೀರವಾಗಲು ಸಿದ್ದರಾಮಣ್ಣ ಕಾರಣ ಎಂದು ಟೀಕಿಸಿದರು. ಈ ದೇಶವಿರೋಧಿ ಸಂಘಟನೆಗಳ ನಿಷೇಧ ಕುರಿತಂತೆ ಅಗತ್ಯ ದಾಖಲೆ ಸಂಗ್ರಹಿಸಲಾಗುತ್ತಿದೆ. ಪೂರಕ ದಾಖಲೆಗಳು ಸಿಕ್ಕಿದರೆ ಭವಿಷ್ಯದಲ್ಲಿ ನಿಷೇಧ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಿದ್ದಾಗ 3 ನಿರ್ಧಾರಗಳನ್ನು ತೆಗೆದುಕೊಂಡರು. ಸುಮಾರು 2 ಸಾವಿರ ಜನ ಗಲಭೆಕೋರರ ಮೇಲಿದ್ದ ಕೇಸುಗಳನ್ನು ಬಿ ರಿಪೋರ್ಟ್ ಹಾಕಿ ಹಿಂದಕ್ಕೆ ಪಡೆದರು. ಗಲಭೆ, ಹತ್ಯೆ ಮಾಡಲು ಅವರಿಗೆ ಇದು ಪ್ರೇರಣೆಯಾಯಿತು. ಎರಡನೆಯದಾಗಿ ಮೈಸೂರು ಶಾಸಕ ಸೇಠ್ ಅವರಿಗೆ ಚೂರಿ ಇರಿತ ಆಯಿತು. ಆಗಲೂ ಗಟ್ಟಿಯಾದ ತೀರ್ಮಾನ ತೆಗೆದುಕೊಳ್ಳಲು ಸಿದ್ದರಾಮಣ್ಣ ಹಿಂದೇಟು ಹಾಕಿದರು. ಸಿದ್ದರಾಮಣ್ಣ ಮತಬ್ಯಾಂಕ್ ಆಸೆಗಾಗಿ ಮಾಡಿದ ರಾಜಕಾರಣದಿಂದ ಇಡೀ ರಾಜ್ಯದಲ್ಲಿ ಅವರು ಬೆಳೆದರು ಎಂದು ವಿವರಿಸಿದರು.
ನಮ್ಮ ಸರಕಾರ ಮಾಡಿದ ನಿರ್ಧಾರದಿಂದ ಮತ್ತು ಅವುಗಳ ನಿಯಂತ್ರಣಕ್ಕಾಗಿ ಎನ್ ಐಎ ಮೂಲಕ ಅವರೆಲ್ಲರ ಬಂಧನ ಮಾಡಲಾಗುತ್ತಿದೆ. ಪಿಎಫ್‍ಐ, ಎಸ್‍ಡಿಪಿಐ ಮತ್ತು ಕೆಎಫ್‍ಡಿ ಯಾವುದೇ ಸಂಸ್ಥೆಗಳಿರಲಿ; ದೇಶವಿರೋಧಿ ಕೃತ್ಯ, ಗಲಭೆ, ಹತ್ಯೆ ಮತ್ತು ಕೋಮುಭಾವನೆ ಕೆರಳಿಸುವುದರ ವಿರುದ್ಧ ಗಟ್ಟಿಯಾದ ತೀರ್ಮಾನವನ್ನು ಸರಕಾರ ತೆಗೆದುಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಬಂಧನ ಕಾರ್ಯಾಚರಣೆ ನಡೆಸುತ್ತಿವೆ ಎಂದರು.
ಪಿಎಸ್‍ಐ ಹಗರಣ ಸಿದ್ದರಾಮಣ್ಣನ ಕಾಲದಲ್ಲೂ ಇತ್ತು. ಅವರು ಕ್ರಮ ಕೈಗೊಳ್ಳಲಿಲ್ಲ. ನಾವು ಡಿಐಜಿ ರ್ಯಾಂಕ್ ಅಧಿಕಾರಿಯನ್ನು ಬಂಧಿಸಿದ್ದೇವೆ. ಶಿಕ್ಷಕರ ನೇಮಕಾತಿಯಲ್ಲೂ ಹಗರಣ ಇದ್ದರೂ ಏನೂ ಕ್ರಮ ತೆಗೆದುಕೊಳ್ಳಲಿಲ್ಲ. ನಾವು ಕ್ರಮ ಕೈಗೊಂಡಿದ್ದೇವೆ. ಡ್ರಗ್ ಮತ್ತು ಸ್ಯಾಂಡ್ ಮಾಫಿಯಾ ಅಡಿಯಲ್ಲೇ ಕಾಂಗ್ರೆಸ್ ಬದುಕಿತ್ತು. ಇವೆರಡು ಮಾಫಿಯಾದಿಂದ ಹಣ ಸಂಗ್ರಹಿಸಿ ಮೇಡಂಗೆ ಕೊಟ್ಟಿದ್ದರು ಎಂದು ತಿಳಿಸಿದರು.
ಯಡಿಯೂರಪ್ಪ ಸರಕಾರ ಬಂದಾಗ, ಬೊಮ್ಮಾಯಿಯವರು ಗೃಹ ಸಚಿವರಾದಾಗ ಡ್ರಗ್ ಮಾಫಿಯಾವನ್ನು ನಿಯಂತ್ರಿಸಲಾಯಿತು. ಪಾರದರ್ಶಕ ಮರಳು ನೀತಿಯನ್ನೂ ತರುತ್ತಿದ್ದೇವೆ. ನೀವು ಯಾವ ತನಿಖೆಯನ್ನೂ ಪಾರದರ್ಶಕವಾಗಿ ಮಾಡಲಿಲ್ಲ; ಯಾವ ಆದೇಶಗಳನ್ನೂ ಮಾಡಿಲ್ಲ. ನಮ್ಮ ಸರಕಾರ ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತಿದೆ ಎಂದು ನುಡಿದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment