[25/09, 11:08 AM] +91 99001 58601: ಉದ್ಯಮಿ ಮೋಹನ ದಾಸ್ ಪೈ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.
[25/09, 12:03 PM] +91 99001 58601: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಿಬಿಎಂಪಿ ವಾರ್ಡ್ ನಂ 9 ರಲ್ಲಿರುವ ಉದ್ಯಾನವನಕ್ಕೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಉದ್ಯಾನವನ ಎಂದು ನಾಮಕರಣ ಸಮಾರಂಭವನ್ನು ಉದ್ಘಾಟಿಸಿದರು.
ಸಚಿವ ವಿ.ಸೋಮಣ್ಣ, ಮಾಜಿ ನಗರಸಭಾ ಸದಸ್ಯ ಕೆ.ಎನ್.ಚಕ್ರಪಾಣಿ ಮತ್ತಿತರರು ಉಪಸ್ಥಿತರಿದ್ದರು.
[25/09, 2:05 PM] +91 99001 58601: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಲಾಕೈರಾಲಿ ಸಂಸ್ಥೆ ಆಯೋಜಿಸಿದ್ದ ಓಣೋತ್ಸವಂ 2022 - ಕಾರ್ಯಕ್ರಮ ವನ್ನು ಉದ್ಘಾಟಿಸಿದರು.
ಕಲಾಕೈರಾಲಿ ಸಂಸ್ಥೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[25/09, 2:16 PM] +91 99001 58601: ಬೆಂಗಳೂರು, ಸೆಪ್ಟಂಬರ್ 25: *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ* ಅವರು *ಕಲಾಕೈರಲಿ ಸಂಸ್ಥೆಯ* ವತಿಯಿಂದ ಆಯೋಜಿಸಿರುವ *ಓಣೋತ್ಸವಂ – 2022ರ 25ನೇ* *ವರ್ಷಾಚರಣೆ* ಕಾರ್ಯಕ್ರಮದಲ್ಲಿ ಪಾಲ್ಗೊಂಡು *ಕಾರ್ಯಕ್ರಮವನ್ನುದ್ದೇಶಿಸಿ* ಮಾತನಾಡಿದರು.
[25/09, 4:33 PM] +91 99001 58601: *ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರು ದೇಶ ಕಂಡ ಅಪರೂಪದ ದೇಶಪ್ರೇಮಿ: ಸಿಎಂ ಬೊಮ್ಮಾಯಿ*
ಬೆಂಗಳೂರು, ಸೆಪ್ಟೆಂಬರ್ 25: ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರು ದೇಶ ಕಂಡ ಅಪರೂಪದ ದೇಶಪ್ರೇಮಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಿ.ಬಿ.ಎಂ.ಪಿ.ಯ ವಾರ್ಡ್ ನಂ: 9ರ ವಿರೂಪಾಕ್ಷಪುರದಲ್ಲಿರುವ ಉದ್ಯಾನವನಕ್ಕೆ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಉದ್ಯಾನವನ ಎಂದು ನಾಮಕರಣ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
*ಅಂತ್ಯೋದಯ ಪರಿಕಲ್ಪನೆ*
ವ್ಯವಸ್ಥೆ ಯನ್ನು ಆಳವಾಗಿ ಅಧ್ಯಯನ ಮಾಡಿ ಪರ್ಯಾಯ ವ್ಯವಸ್ಥೆ ಯನ್ನು ತೋರಿಸಿ, ಪ್ರತಿಪಾದಿಸಿ, ನಾಡಿಗೆ ಮತ್ತೊಂದು ಕಲ್ಪವನ್ನು ನೀಡಿದ ಚಿಂತಕ ಹಾಗೂ ಧೀಮಂತ ನಾಯಕರು. ಅವರು ಮೇಷ್ಟ್ರಾಗಿ, ಪತ್ರಕರ್ತರಾಗಿ, ರಾಷ್ಟ್ರಸೇವೆಗೆ ಧುಮುಕಿದರು. ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ ಉತ್ತುಂಗದಲ್ಲಿತ್ತು. ವಿಭಿನ್ನ ಅಭಿಪ್ರಾಯಗಳಿದ್ದವು. ಕೆಲವರು ಪಾಶ್ಚಿಮಾತ್ಯ ದೇಶದ ಪ್ರಭಾವದಲ್ಲಿದ್ದರು, ಇನ್ನು ಕೆಲವರು ಕಮ್ಯುನಿಸ್ಟ್ ನೆಲೆಯ ಪ್ರಭಾವದಲ್ಲಿದ್ದರು. ಈ ಎರಡರ ಮಧ್ಯೆ ನಮ್ಮ ಭಾರತೀಯರು ಹಾಗೂ ಅವರ ಬದುಕನ್ನು ಗುರುತಿಸಲಿಲ್ಲ ಎನ್ನುವ ನೋವು ದೀನ್ ದಯಾಳ್ ಉಪಾಧ್ಯಾಯ ಅವರಿಗಿತ್ತು. ಪ್ರತಿ ದೇಶಕ್ಕೆ ತನ್ನತನವಿದೆ, ತನ್ನದೇ ಆದ ಸಂಸ್ಕೃತಿ, ಸಂಸ್ಕಾರ, ಚಿಂತನೆ, ಬದುಕಿದೆ ಭಾರತೀಯರ ಬದುಕು, ಮೌಲ್ಯಗಳು,ಆದರ್ಶಗಳು ಬೇರೆ ದೇಶದವರಿಗಿಂತ ವಿಭಿನ್ನವಾಗಿದೆ ಎಂದು ಗಟ್ಟಿಯಾಗಿ ಪ್ರತಿಪಾದಿಸಿದ್ದು, ದೀನ್ ದಯಾಳ್ ಉಪಾಧ್ಯಾಯ ಅವರು. ಅಂತ್ಯೋದಯ ಪರಿಕಲ್ಪನೆ ನೀಡಿದರು. ಈ ಸಮಾಜದ ಕಟ್ಟಕಡೆಯ ವ್ಯಕ್ತಿ ಉದ್ಧಾರವಾಗಲು ಅಂತ್ಯೋದಯ ಕಾರ್ಯಕ್ರಮ ಆಗಲೇಬೇಕು ಎಂದರು.
*ಏಕಾತ್ಮ ಚಿಂತನೆ*
ಏಕಾತ್ಮಮಾನಾರ್ಥವಾದ ಚಿಂತನೆ ನೀಡಿದರು. ಎಲ್ಲಾ ಮಾನವ ಆತ್ಮಗಳ ಚಿಂತನೆ ಏಕಾತ್ಮ ಭಗವಂತನನ್ನು ಓಲೈಸುವ, ಕೃಪೆ ಪಡೆದು ಸತ್ಯದ ಮಾರ್ಗದಲ್ಲಿ ನಡೆಯಬೇಕೆನ್ನುವ ಚಿಂತನೆಯನ್ನು ಬೋಧನೆ ಮಾಡಿದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ದೀನ್ ದಯಾಳ್ ಉಪಾಧ್ಯಕ್ಷ ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು*
ಈ ದೇಶದ ಏಕತೆ, ಅಖಂಡತೆಯ ಬಗ್ಗೆ ಸದಾ ಕಾಲ ಚಿಂತನೆ ಮಾಡಿದರು. ಅಂತ್ಯೋದಯದ ಮುಖಾಂತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಏಳಿಗೆಗೆ ನಿರಂತರವಾಗಿ ಶ್ರಮಿಸಿದರು. ಅವರ ಹೆಸರಿನಲ್ಲಿಯೇ ದೀನ, ದಯಾಳು, ಶಿಕ್ಷಕ ಮೂರು ಇದೆ. ಅವರ ಹೆಸರಿನ ತಕ್ಕಂತೆ ಅವರು ಬದುಕಿದರು. ಭಾರತೀಯ ಜನತಾ ಪಕ್ಷ ಹುಟ್ಟುಹಾಕಿದ ಪ್ರಮುಖರಲ್ಲಿ ಅವರೂ ಒಬ್ಬರು. ಮುಂದೆ ಭಾರತೀಯ ಜನ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದರು. ಅವರ ಎಲ್ಲಾ ಆದರ್ಶಗಳು ಪ್ರಸ್ತುತವಾಗಿದೆ. ಅವರ ಹೆಸರಿನಲ್ಲಿ ಉದ್ಯಾನವನ ಆಗಿರುವುದು ಒಳ್ಳೆ ಕೆಲಸ. ಚಕ್ರಪಾಣಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಭಾಗದ ಅವರ ಹೆಸರಿನ ಜನರಿಗೆ ಸ್ಪೂರ್ತಿದಾಯಕವಾಗಿದೆ. ದೀನ್ ದಯಾಳ್ ಉಪಾಧ್ಯಕ್ಷ ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ದೀನ್ ದಯಾಳ ಅವರ ಮೂರ್ತಿ ಸ್ಥಾಪನೆಗೆ ಬಿಬಿಎಂಪಿ ಆದೇಶವನ್ನು ಪಡೆಯುವಂತೆ ಸೂಚಿಸಿದರು. ದೊಡ್ಡವರ ಹೆಸರಿಗೆ ಯಾವುದೇ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಅನುಮತಿಗಳನ್ನು ಪಡೆದೇ ಮುಂದಿನ ಕಾರ್ಯಮಾಡಬೇಕು. ದೀನ್ ದಯಾಳ ಅವರದ್ದು ಬಹಳ ದೊಡ್ಡ ವ್ಯಕ್ತಿತ್ವ ಎಂದರು.
*ಭಾರತೀಯ ಸಂಸ್ಕೃತಿ ಯನ್ನು ಉಳಿಸಿ ಬೆಳಸಬೇಕಿದೆ*
ಸರ್ಕಾರ ಈ ವರ್ಷ 5 ಮಹಾನಗರಗಳಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಕಲಬುರಗಿಯಲ್ಲಿ ಒಂದು ಸಾವಿರ ಎಸ್.ಸಿ.ಎಸ್.ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳನ್ನು ಇದೆ ವರ್ಷ ನಿರ್ಮಾಣ ಮಾಡುತ್ತಿದ್ದೇವೆ.ಅಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅವರ ಆದರ್ಶಗಳ ಸ್ಫೂರ್ತಿ ಸಿಗಲಿ ಎಂಬ ಕಾರಣದಿಂದ 5 ವಿದ್ಯಾರ್ಥಿನಿಲಯಗಳಿಗೆ ದೀನ್ ದಯಾಳ್ ಉಪಾಧ್ಯಾಯರ ಹೆಸರನ್ನು ಇಡಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಎಸ್.ಸಿ.ಎಸ್.ಟಿ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲಾಗುತ್ತಿದೆ. 50 ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳನ್ನು ಕನಕದಾಸರ ಹೆಸರಿನಲ್ಲಿ ನಿರ್ಮಿಸುತ್ತಿದ್ದೇವೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದುವರೆಸುತ್ತಿದ್ದೇವೆ. ನಾಗರೀಕತೆ ಯ ಜೊತೆಗೆ ಸಂಸ್ಕೃತಿ ಬೆಳೆಯಬೇಕಾಗಿದೆ. ನಾವೇನಾಗಿದ್ದೇವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಉತ್ತಮ ಆದರ್ಶ, ನೈತಿಕ ಬದುಕಿನ ಭಾರತೀಯ ಸಂಸ್ಕೃತಿ ಯನ್ನು ಉಳಿಸಿ ಬೆಳಸಿಕೊಂಡು ಹೋಗಬೇಕಿದೆ. ಅದು ಈ ರೀತಿಯ ಕೆಲಸಗಳಿಂದ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ. ಸೋಮಣ್ಣ, ಮಾಜಿ ಕಾರ್ಪೊರೇಟರ್ ಚಕ್ರಪಾಣಿ ಹಾಜರಿದ್ದರು.
[25/09, 4:55 PM] +91 99001 58601: *ಕಾಂಗ್ರೆಸ್ ಪಕ್ಷ ಅಧ:ಪತನವಾಗುತ್ತಿದೆ: ಸಿಎಂ ಬೊಮ್ಮಾಯಿ*
ಮೈಸೂರು, ಸೆಪ್ಟೆಂಬರ್ 25: ಕಾಂಗ್ರೆಸ್ ಪಕ್ಷ ಅಧ:ಪತನ ವಾಗುತ್ತಿದೆ. ಪೇ ಸಿಎಂ ಅಭಿಯಾನವನ್ನು ಕಾಂಗ್ರೆಸ್ ದಯವಿಟ್ಟು ಮಾಡಲಿ. ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
*ಮೋಸದ ಸುದ್ದಿ*
ತನ್ನ ತಟ್ಟೆಯಲ್ಲಿ ಸರಣಿ ಹಗರಣಗಳಲ್ಲಿಟ್ಟುಕೊಂಡು ಈ ರೀತಿಯ ಡರ್ಟಿ ಅಭಿಯಾನ ಮಾಡುತ್ತಿದ್ದಾರೆ. ಅದರಲ್ಲೇನಿದೆ? ಯಾವುದಾದರೂ ಪ್ರಕರಣವಿದೆಯೇ? ಇದೊಂದು ಅಭಿಯಾನವಷ್ಟೇ. ಜನ ಇನ್ನು ನೋಡಿಯಾಗಿದೆ. ಆಪ್, ಅಂತರ್ಜಾಲದಿಂದ ಕೂತಲ್ಲೇ ಏನೆಲ್ಲಾ ಮಾಡಬಹುದು ಎಂದು ಸಣ್ಣ ಸಣ್ಣ ಯುವಕರಿಗೂ ಗೊತ್ತಿದೆ. ಇದೊಂದು ಮೋಸದ ಸುದ್ದಿ ಎಂದು ಸ್ಪಷ್ಟವಾಗಿದೆ. ಲಿಂಗಾಯತ ಸಮುದಾಯದ ಸಿಎಂ ಗಳನ್ನು ಗುರಿ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ ಅಭಿಯಾನ ಮಾಡಿದಾಗ ಕೆಲವರು ಸಿಟ್ಟು ಬಂದು ಮಾತನಾಡಿರಬಹುದು. ಆದರೆ ಅದರಲ್ಲಿ ನಾನಿಲ್ಲ ಎಂದರು. ಸಾರ್ವಜನಿಕರಿಗೆ ಇದು ಅರ್ಥವಾಗುತ್ತದೆ. ತಮ್ಮ ಸ್ವಾರ್ಥಕ್ಕೆ, ಅಧಿಕಾರಕ್ಕೆ ಬರಲು ರಾಜ್ಯದ ಮರ್ಯಾದೆ, ಹೆಸರನ್ನೂ ಬಲಿಕೊಡಲು ಸಿದ್ಧರಿರುವ ಸ್ವಾರ್ಥಿಗಳು ಎಂದು ತಿಳಿಸಿದರು.
ವೈಯಕ್ತಿಕ ಟೀಕೆಗಳು ಹೆಚ್ಚಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಸದನದಲ್ಲಿ ಚರ್ಚೆ ಮಾಡಲು ವಿಪುಲ ಅವಕಾಶವಿತ್ತು. ಅಲ್ಲಿ ಪ್ರಸ್ತಾಪ ಮಾಡಲು ಅವರ ಬಳಿ ಸರಕಿಲ್ಲ. ಹೀಗಾಗಿ ಕೀಳು ಮಟ್ಟದ ಅಭಿಯಾನ ಮಾಡುತ್ತಿದ್ದಾರೆ ಎಂದರು.
*ರಾಹುಲ್ ಗಾಂಧಿ ಪ್ರಚಾರ ಮಾಡಿದಲ್ಲಿ ಬಿಜೆಪಿ ಕಮಲ ಅರಳಿದೆ*
ರಾಹುಲ್ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಅಭಿಯಾನ ವಾಗುತ್ತಿದೆಯೇ ಎಂಬ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು ಡರ್ಟಿ ಪಾಲಿಟಿಕ್ಸ್ ಮಾಡುವವರನ್ನೇ ಕೇಳಬೇಕು. ರಾಹುಲ್ ಗಾಂಧಿ ಬರುತ್ತಾರೆ, ಹೋಗುತ್ತಾರೆ. ಹಿಂದಿನ ಚುನಾವಣೆ ಯಲ್ಲಿ ರಾಹುಲ್ ಗಾಂಧಿ ಯಾವ್ಯಾವ ಕ್ಷೇತ್ರಗಳಿಗೆ ಹೋಗಿದ್ದಾರೆ ಅಲ್ಲೆಲ್ಲ ಬಿಜೆಪಿ ಕಮಲ ಅರಳಿದೆ ಎಂದರು.
[25/09, 4:56 PM] +91 99001 58601: *ಅರ್ಥ ಪೂರ್ಣ ಹಾಗೂ ವೈಭವಪೂರ್ಣ ದಸರಾ ಆಚರಣೆ* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಮೈಸೂರು, ಸೆಪ್ಟೆಂಬರ್ 25: ಈ ಬಾರಿ ಅರ್ಥ ಪೂರ್ಣ ಹಾಗೂ ವೈಭವಪೂರ್ಣ ದಸರಾ ಆಚರಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾಳೆ ರಾಷ್ಟ್ರಪತಿ ದ್ರೌ ಪದಿ ಮುರ್ಮು ಅವರಿಂದ ಚಾಮುಂಡೇಶ್ವರಿ ಪೂಜೆ, ದಸರಾ ಉದ್ಘಾಟನೆ ನಡೆಯಲಿದೆ. ದಸರಾ ಹಬ್ಬಕ್ಕೆ ತನ್ನದೇ ಆದ ಪರಂಪರೆ ಇದೆ. ದಸರಾ ನಾಡಹಬ್ಬವೂ ಹೌದು ಜನ ಸುಗ್ಗಿ ಮುಗಿಸಿ ಸಂಭ್ರಮಿಸುವ ಹಬ್ಬವೂ ಹೌದು ಎಂದರು.
ದಸರಾ ಹಬ್ಬದ ಎಲ್ಲಾ ಸಿದ್ಧತೆಗಳನ್ನು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಹಗಲಿರುಳು ಮಾಡಿದ್ದಾರೆ. ಕರ್ನಾಟಕ ಜನತೆಗೆ ನಾಡಹಬ್ಬ ದಸರಾ ಶುಭಾಶಯಗಳು. ಮೈಸೂರು ಜನತೆಗೆ ವಿಶೇಷ ಶುಭಾಶಯಗಳನ್ನು ಮುಖ್ಯ ಮಂತ್ರಿಗಳು ತಿಳಿಸಿದರು.
*ಆಂಬ್ಯುಲೆನ್ಸ್ ಸೇವೆ ಶೀಘ್ರವೇ ದುರಸ್ತಿ*
108 ಆಂಬ್ಯುಲೆನ್ಸ್ ಸೇವೆ ಸರ್ವರ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದು, ಈಗಾಗಲೇ ದುರಸ್ತಿಯಾಗುತ್ತಿದೆ. ಆರೋಗ್ಯ ಸಚಿವರು ಖುದ್ದು ಇದನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.
[25/09, 5:00 PM] +91 99001 58601: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
[25/09, 5:12 PM] +91 99001 58601: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ನಾಗೇಂದ್ರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[25/09, 5:14 PM] +91 99001 58601: *ಮೈಸೂರು* , ಸೆಪ್ಟಂಬರ್ 25: *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ* ಅವರು ಭಾರತದ *ಸನ್ಮಾನ್ಯ* *ಪ್ರಧಾನ ಮಂತ್ರಿಗಳವರ ಹುಟ್ಟು* *ಹಬ್ಬದ ಅಂಗವಾಗಿ* *ಕರ್ನಾಟಕ ರಾಜ್ಯ ಮುಕ್ತ* *ವಿಶ್ವವಿದ್ಯಾಲಯದ ಘಟಿಕೋತ್ಸವ* ಭವನದಲ್ಲಿ ಆಯೋಜಿಸಿರುವ *ಚಾಮರಾಜ ವಿಧಾನಸಭಾ ಕ್ಷೇತ್ರದ* *ವ್ಯಾಪ್ತಿಯ* *ಸಾರ್ವಜನಿಕರಿಗೆ ವಿವಿಧ ಸರ್ಕಾರಿ* ಸವಲತ್ತುಗಳ ವಿತರಣೆ ಮಾಡಿ ಮಾತನಾಡಿದರು.
[25/09, 6:13 PM] +91 99001 58601: *ಹಿರಿಯ ನಾಯಕ ಎಸ್.ಎಂ ಕೃಷ್ಣ ಆರೋಗ್ಯವಾಗಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು: ರಾಜ್ಯದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಆರೋಗ್ಯ ಚೇತರಿಕೆಯಾಗಿದೆ. ಎರಡು, ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಅವರು ಮನೆಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದ ಹಿರಿಯ ನಾಯಕ ಎಸ್ ಎಂ ಕೃಷ್ಣ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಿರಂತರ ಚಿಕಿತ್ಸೆಯಿಂದ ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಎರಡು ಮೂರು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗುತ್ತಾರೆ. ರಾಜ್ಯದ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ರಾಷ್ಟ್ರಪತಿಗಳಿಂದ ನಾಳೆ ದಸರಾ ಉದ್ಘಾಟನೆ*
ನಾಳೆಯ ದಸರಾ ಉದ್ಘಾಟನೆಗೆ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದಾರೆಮ ಅವರಿಂದ ಚಾಮುಂಡೇಶ್ವರಿ ದೇವಿ ಪೂಜೆ ಮತ್ತು ದಸರಾ ಉದ್ಘಾಟನೆ ನಡೆಯಲಿದೆ. ರಾಜ್ಯದಲ್ಲಿ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
[25/09, 7:51 PM] +91 99001 58601: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮೈಸೂರಿನಲ್ಲಿರುವ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸಂಸ್ಥಾನದ ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
[25/09, 8:04 PM] +91 99001 58601: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮೈಸೂರಿನಲ್ಲಿರುವ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಮುಕ್ತಿದಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
Post a Comment