[24/09, 5:17 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day #28
ಭಗವಂತ ಮುಂದೆ ಹೇಳುತ್ತಾನೆ. *ವಿಪ್ರರ ಹಿಂಸಕರನ್ನು, ಮತ್ತು ಅವರನ್ನು ಕೆಟ್ಟಗಣ್ಣಿನಿಂದ ನೋಡಿದವರ ಕಣ್ಣುಗಳನ್ನು ಯಮಲೋಕದ ಹದ್ದುಗಳು ತಿಂದುತೇಗುವವು.*
*ವಿಪ್ರರ ಪಾದೋದಕವು ಚಂದ್ರ ಮೊದಲಾದ ಸಕಲ ದೇವ ಮಾನವರನ್ನು ಪಾವನ ಮಾಡುವದು.ನನ್ನ ಭಕ್ತರು ಆದ ದ್ವಿಜರನ್ನು ವಿರೋಧ ಮಾಡಿ ದ್ರೋಹ ವೆಸಗಿದ ಪಾಪಾತ್ಮರು ನರಕವಂ ಸೇರಿ ರವಿಸುತನ ದಂಡಕ್ಕೆ ಚಂಡಶಾಸನಕ್ಕೆ ಗುರಿಯಾಗುವರು.*
*ನನ್ನ ಭಕ್ತರು ನನ್ನ ಚಲ ಪ್ರತಿಮೆ ಗಳು.ಸಜ್ಜನರು ಅಂತಹ ಭಕ್ತರನ್ನು ಕಂಡು ನಾನೇ ರೂಪದಿಂದ ಬಂದನೆಂದು ತಿಳಿದು ಸಂತುಷ್ಟ ಹೃದಯದಿಂದ ಪ್ರೇಮದಿಂದ ಮನೆಗೆ ಬಂದ ಅಳಿಯನಂತೆ ಸಂತೈಸಿ ಸತ್ಕರಿಸುವ ವಿವೇಕಿಗಳಿಗೆ ಅವರು ಮಾಡುವ ಭಕ್ತಿ ಗೆ ಮೆಚ್ಚಿ ಅವರ ವಶನಾಗಿ ನಿಲ್ಲುವೆನು.*
*ಆದ್ದರಿಂದ ನನ್ನ ಸ್ವಭಾವ ಅರಿಯದೇ ನಿಮಗೆ ವಿರೋಧವೆಸಗಿದನನ್ನ ಮನೆಯ ಆಳುಗಳಾದ ಜಯ ವಿಜಯರು ಮೂರು ಜನುಮಗಳಲ್ಲಿ ಸುರಕುಲದಿಂದ ವಿಮುಖರಾಗಿ ತತ್ಕ್ಷಣವೇ ಮರಳಿ ನನ್ನ ಲೋಕವನ್ನು ಪೊಂದುವಂತೆ ಅನುಗ್ರಹ ಮಾಡುವೆನು.*
*ನನ್ನ ಹಾಗೇ ಪ್ರೇಮದಿಂದ ಬ್ರಾಹ್ಮಣ ರನ್ನು ಪೂಜಿಸುವವರಿಗೆ ನಾನು ವಶನಾಗುವೆನು.ಬ್ರಾಹ್ಮಣ ವಿರೋಧಿಗಳೇ ನನ್ನ ವಿರೋಧಿಗಳು.ಆದ್ದರಿಂದ ನಿಮ್ಮಲ್ಲಿ ಅಪರಾಧ ಮಾಡಿದ ಜಯವಿಜಯರು ಈಗಲೇ ಅಸುರರಾಗಿ ಹುಟ್ಟಲಿ.ಆದರೆ ಅವರು ಬೇಗ ನನ್ನ ಬಳಿಗೆ ಬರಲಿ..*
*ಇದು ನಿಮಗೆ ಒಪ್ಪಿಗೆಯೆಂದೆ ಭಾವಿಸುವೆನು.*
ಶ್ರೀ ಹರಿಯ ಮಧುರಭರಿತವಾದ ಮೃದು ನುಡಿಗಳನ್ನು ಕೇಳಿ ಸನಕಾದಿಗಳು ಶಾಂತರಾದರು..
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ಕಪಿಲಾಯ ನಮಃ🙏
[24/09, 9:48 PM] vijayavitthala blr: देवतिर्यड्मनुष्यादौ पुन्नामा भगवान्हरीः ।
स्त्रीनाम्नी श्रीश्च विज्ञेया नानयोर्विद्यते परम् ॥३५॥
इति श्रीविष्णुपुराणे प्रथमेऽंशे अष्टमोऽध्यायः
*ದೇವತೆಗಳಿಂದ ಹಿಡಿದು ಮನುಷ್ಯನವರೆ ಯಾವುದೆಲ್ಲ ಪುರುಷನಾಮಗಳಿವೆಯೋ ಅದೆಲ್ಲಾ ನಾರಾಯಣನ ಹೆಸರುಗಳಾಗಿವೆ.* ಹಾಗೆಯೇ *ಸ್ತ್ರೀನಾಮಗಳೆಲ್ಲ ಮಹಾಲಕ್ಷ್ಮಿಯ ಹೆಸರುಗಳು ಈ ವೈಶಿಷ್ಟ್ಯತೆ ಬೇರೆ ಯಾವ ದೇವತೆಗಳಿಗೂ ಇಲ್ಲ.*
*#ವಿಷ್ಣುಪುರಾಣ*
Post a Comment