vijayavitthala blr: *|ಶ್ರೀನಿವಾಸ ಕಲ್ಯಾಣ ಚರಿತ್ರೆ*||day #6*||ವೆಂಕಟೇಶನೆ ನಮೊ ವೆಂಕಟೇಶನೆ ನಮೊ|**ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||*

[01/10, 5:17 AM] vijayavitthala blr: *|ಶ್ರೀನಿವಾಸ ಕಲ್ಯಾಣ ಚರಿತ್ರೆ*||day #6
*||ವೆಂಕಟೇಶನೆ ನಮೊ ವೆಂಕಟೇಶನೆ ನಮೊ|*
*ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||*
✍️ಇತ್ತ ಭೃಗು ಋಷಿಗಳು ವೈಕುಂಠ ದಿಂದ ಹೊರಟು ಹೋದ ಮೇಲೆ, ಏಕಾಂತದಲ್ಲಿ ಶ್ರೀರಮಾದೇವಿಯ ಜೊತೆಯಲ್ಲಿ  ಭಗವಂತನು ಇರುವಾಗ 
ಶ್ರೀಮಹಾಲಕ್ಷ್ಮಿ ದೇವಿಯು
*"ಜಗನ್ನಿಯಾಮಕನಾದ, ದೇವೋತ್ತಮನಾದ ಪ್ರಭುವೇ, ನಾನು ನಿನ್ನನ್ನು ತೊರೆದು ಹೋಗುವೆನು.*.
*ನಿನ್ನ ಶ್ರೀವತ್ಸ ಸದಾ ಎನ್ನ ಆಲಿಂಗನವನ್ನು ಮಾಡಿಕೊಂಡಿರುವದು.*
*ಅಂತಹ ಸ್ಥಳ ಭೂಸುರನ ಪಾದದಿಂದ ಸ್ಪರ್ಶವಾಗಿದೆ.ಹಾಗಾಗಿ ನಾನು ಇಲ್ಲಿ ಇರುವುದಿಲ್ಲ..*
*ಎಲ್ಲರಿಗಿಂತ ಉತ್ತಮನು ನೀನು ಎಂದುಇಲ್ಲಿ ಇದ್ದೆ. ನಿನಗೆ  ಭಕ್ತ ವತ್ಸಲ ಎಂಬ ಬಿರುದು ಬೇಕಾಗಿತ್ತು ಅಂದರೆ ಈ ತರ ಮಾನವ ಚರಣವನ್ನು ಎದೆಯಲ್ಲಿ ಧರಿಸುವದು ಸರಿಯೇ!! ಕರವೀರಪುರಕ್ಕೆ ಹೋಗುತ್ತೇನೆ ಅಂತ ಹೇಳಿ ಜಗನ್ಮಾತೆ ಯು ಪ್ರೇಮ ಕಲಹವನ್ನು ಮಾಡಿ (ಕಲಹ ಮಾಡಿದಂತೆ  ನಟಿಸಿ)ವೈಕುಂಠ ಪುರವನ್ನು ಬಿಟ್ಟು ಕರವೀರಪುರಕ್ಕೆ ಬರುತ್ತಾಳೆ.*.
*ಅವಿಯೋಗಿಗಳು ಅವರು..*.
*ಅವರಿಬ್ಬರಿಗೂ ವಿಯೋಗ ಎನ್ನುವುದು ಯಾವ ಕಾಲಕ್ಕೆ ಸಹ ಇಲ್ಲ.*
*ಭಾವಿ ಲೋಕ ಕಲ್ಯಾಣಕ್ಕಾಗಿಯು, ಭಗವಂತನ ಸಂಕಲ್ಪ ಮಹತ್ವವನ್ನು ಜಗತ್ತಿನಲ್ಲಿ ತೋರಿಸಲು ವೈಕುಂಠ ದಿಂದ ನೇರವಾಗಿ ಕರವೀರಪುರಕ್ಕೆ ದಯ ಮಾಡಿಸಿದಳು.*.
*ಭಗವಂತನಿಗೆ ಸದಾ ಆಭರಣವಾಗಿ,ಅವನ ಎದೆಯಲ್ಲಿ ಸದಾ ವಾಸ ಮಾಡುವಂತಹವಳು ಶ್ರೀಲಕ್ಷ್ಮೀ ದೇವಿಯು..* ..
*ಹೇಗೆ ಸೂರ್ಯನಿಗು ಅವನ ಕಿರಣಗಳಿಗು ಹೇಗೆ ಅವಿಭಾಜ್ಯ ಸಂಭಂದವಿದೆಯೋ ಅಂತೆಯೇ ಶ್ರೀ ಲಕ್ಷ್ಮೀ ನಾರಾಯಣರ ನಡುವೆಯೂ ಇದೆ.ಒಂದು ರೂಪದಿಂದ* *ಭಗವಂತನ ಜೊತೆಯಲ್ಲಿ ಇದ್ದು,ಇನ್ನೊಂದು ರೂಪದಿಂದ*
*ಭಗವಂತನ ಜೊತೆಯಲ್ಲಿ* *ಪ್ರೇಮ ಕಲಹವಾಡಿದಂತೆ ನಟಿಸಿ ಶ್ರೀರಮಾದೇವಿಯು ಭೂಲೋಕಕ್ಕೆ ಬಂದಳು.*.
*ಹೇಗೆ ಸಮುದ್ರ ಮಥನ ಸಮಯದಲ್ಲಿ ಒಂದು ರೂಪದಿಂದ ವೈಕುಂಠ ದಲ್ಲಿ ಇದ್ದಳೊ, ಅದೇ ರೀತಿಯಲ್ಲಿ ಇನ್ನೊಂದು ರೂಪದಿಂದ ಸಮುದ್ರ ದಲ್ಲಿ ಕಾಣಿಸಿಕೊಂಡಳೊ ಹಾಗೇ ಸದಾ ಭಗವಂತ ನ ಬಿಟ್ಟು ಒಂದು ಕ್ಷಣವು ಶ್ರೀಲಕ್ಷ್ಮಿ ದೇವಿಯು ಇರುವುದಿಲ್ಲ.*.
*ಶ್ರೀರಮಾದೇವಿ ಬಿಟ್ಟು ಹೋದದ್ದಕ್ಕೆ ಭಗವಂತನು  ಪತ್ನಿ ವಿಯೋಗ ವಾಯಿತೆಂದು, ನಟಿಸಿದ ಹೊರತು ನಿಜವಾಗಿಯೂ ಅವರಿಬ್ಬರಿಗೂ ಎಂದಿಗು ವಿಯೋಗ ಇಲ್ಲ.*
ಒಟ್ಟಾರೆ ತಿಳಿದು ಕೊಳ್ಳುವ ದು ಇಷ್ಟೇ. 
*ಒಂದು ರೂಪದಿಂದ ವೈಕುಂಠ ದಲ್ಲಿ ಶ್ರೀವಿಷ್ಣು ವನ್ನು ಸೇವಿಸುತ್ತಾ ಇನ್ನೊಂದು ರೂಪದಿಂದ ಶ್ರೀರಮಾದೇವಿ ಭೂಲೋಕಕ್ಕೆ ಬಂದಳು ಅಂತ ಚಿಂತನೆ ಮಾಡಬೇಕು.*
*ಸಾಮಾನ್ಯ ಸ್ತ್ರೀ ಯಂತೆ,ಕಲಹಮಾಡಿಕೊಂಡು ಭಗವಂತನ ಬಿಟ್ಟು ಹೋದಳು ಅಂತ ಚಿಂತನೆ ಮಾಡಬಾರದು. ಮಹಾ ದೋಷ ಬರುತ್ತದೆ.*
 *ಅಸುರೀ ಜನ ಮೋಹಕ್ಕಾಗಿ, ಈ ರೀತಿಯಾಗಿ ಪ್ರೇಮ ಕಲಹವನ್ನು ಮಾಡಿ* ಭೂಲೋಕಕ್ಕೆ ಜಗನ್ಮಾತೆಯು ಬರುತ್ತಾಳೆ.
*28,‌ನೆಯ ದ್ವಾಪರಯುಗದ ಕೊನೆಯ ಭಾಗದಲ್ಲಿ* ಕಲಿಯುಗದಲ್ಲಿ ಮಹಾಲಕ್ಷ್ಮಿ ಯು ಕರವೀರಪುರಕ್ಕೆ ತೆರಳಿದ ಮೇಲೆ 
*ಭಗವಂತನು ಸಿರಿ ಇಲ್ಲದ ವೈಕುಂಠ ಸರಿ ಬಾರದು ಎನಗೆ, ಏನು ಮಾಡಲಿ !!ನನ್ನ ಕಣ್ಣಿಗೆ ವೈಕುಂಠ ಅರಣ್ಯ ದಂತೆ ತೋರುತ್ತಿದೆ!!*...
*ಎಲ್ಲಿ ಹೋಗಲಿ?? ಅಂತ ಚಿಂತೆ ಮಾಡುವರಂತೆ, ನಟಿಸುತ್ತಾ*
*ಯಾವುದೇ ಚಿಂತೆ, ಸಂತಾಪ, ಮುಂತಾದ ದೋಷ ವಿದೂರನಾಗಿದ್ದರು,* *ಸ್ವರಮಣನಾದ ಶ್ರೀ ಹರಿಯು  ಶ್ರೀರಮಾದೇವಿ ಯ ವಿರಹ ದುಃಖವನ್ನು ತಾಳದವನಂತೆ ನಟಿಸುತ್ತಾ ಆಜ್ಞ ಜನರನ್ನು ಮೋಹಗೊಳಿಸುತ್ತಾ ,ವೈಕುಂಠ ವನ್ನು ಬಿಟ್ಟು ಸುವರ್ಣಮುಖಿ ನದಿಯ ತಟದಲ್ಲಿ ಹಿಂದೆ ವಾಯುದೇವರು ಶೇಷದೇವನ ಗರ್ವಭಂಗವನ್ನು ಮಾಡಿದ ಶೇಷಾಚಲಕ್ಕೆ ಬಂದು ಸ್ವಾಮಿ ಪುಷ್ಕರಣಿ ತೀರದಲ್ಲಿ ಹುಣಿಸೇ ಮರದ ಬುಡದಲ್ಲಿ ಇರುವ ವಲ್ಮೀಕದಲ್ಲಿ ಅವಿತುಕೊಂಡು ರಹಸ್ಯ ವಾಗಿ ವಾಸಮಾಡತೊಡಗಿದನು.*
*ಭಕ್ತರ ಮೂಲಕ ಸಾಧನೆ, ನಡೆಯುವಂತೆ ಮಾಡಿ ಆ ಪ್ರಯುಕ್ತ ಪುಣ್ಯ, ಮತ್ತು ಕೀರ್ತಿಗಳಿಂದ, ಅವರನ್ನು ಅವರವರ ಯೋಗ್ಯತೆನುಗುಣವಾಗಿ ಅನುಗ್ರಹ ಮಾಡುವದೇ, ಭಗವಂತನ ಎಲ್ಲಾ ಅವತಾರಗಳ ಹಿನ್ನೆಲೆ..*
*ನಿತ್ಯ ಶ್ರೀಲಕ್ಷ್ಮೀ ಯನ್ನು ಹೊಂದಿದ್ದು ,ತನಗಾಗಿ ಹೊಂದಬೇಕಾದದ್ದು, ಮಾಡಬೇಕಾದದ್ದು ,ಏನು ಇಲ್ಲವಾದರು ಭಗವಂತನು ಶ್ರೀಲಕ್ಷ್ಮೀ ದೇವಿ,ಶ್ರೀಬ್ರಹ್ಮ, ರುದ್ರಾದಿ ದೇವತೆಗಳು, ಶುಕಾಚಾರ್ಯರು,ಆಕಾಶ ರಾಜ,ಬಕುಲಾ ದೇವಿ,ಮುಂತಾದ ಭಕ್ತರಿಂದ ಆಯಾ ಸಾಧನೆ ಮಾಡಿಸಿ, ಪುಣ್ಯ, ಮತ್ತು ಸತ್ಕೀರ್ತಿಗಳಿಂದ, ಅವರಿಗೆ ಅನುಗ್ರಹ ಮಾಡಬೇಕೆಂಬ ಸಂಕಲ್ಪ ದಿಂದ ವೆಂಕಟೇಶ ನಾಗಿ ವೆಂಕಟಾದ್ರಿ ಗೆ ಬಂದನು.*.
ಈ ಪರ್ವತದ ವರ್ಣನೆ.👇
*"ಈ ವೆಂಕಟಾಚಲವೇ ಶ್ರೀ ಶೇಷದೇವರ ಮುಖವು",*
*"ನೃಸಿಂಹಾಚಲವೇ (ಅಹೋಬಲ ಪರ್ವತವೇ)ಮಧ್ಯಭಾಗ"*
*"ಬಾಲದಂತಿರುವ ಕೊನೆಯ ಭಾಗವೇ ಶ್ರೀಶೈಲ ಪರ್ವತವು"*.
ಇಂತಹ ಶೇಷಾಚಲವು ಪುಣ್ಯ ಪ್ರದವಾಗಿದೆ.ಅದರ ವರ್ಣನೆ ಬಲು ರಮಣೀಯ.
*ಅನೇಕ ಜಾತಿಯ ಗಿಡ ಮರಗಳಿಂದ,ಫಲ ಪುಷ್ಪ ಗಳಿಂದ, ವೃಕ್ಷ ಭರಿತವಾದ ಪರ್ವತ ಅದು.*.
*ಅನೇಕ ಜಾತಿಯ ಪಕ್ಷಿಗಳು, ಮೃಗಗಳು ಮತ್ತು ಅನೇಕ ಬಗೆಯ ಹೂ ಬಳ್ಳಿ ಗಳು ಹೀಗೆ ಅದರಲ್ಲಿ ಅಲಂಕೃತ ವಾಗಿದೆ.*
ಇಂತಹ ಮನೋಹರವಾದ ನಯನಾನಂದವಾದ ಸಕಲ ವೃಕ್ಷ, ಸಂಪತ್ತನ್ನು ಹೊಂದಿದ *ವೆಂಕಟಾಚಲಕ್ಕೆ ಸ್ವಾಮಿ ಆಗಮಿಸಿ ಹತ್ತು ಸಾವಿರ ವರ್ಷಗಳ ಕಾಲ ಹುತ್ತದಲ್ಲಿ ವಾಸ ಮಾಡಿದನು.*.
*"ಇಲ್ಲಿ ಇರುವ ವೃಕ್ಷಗಳೇ ದೇವತೆಗಳ  ಸಮೂಹವು.*",
*ಮೃಗಗಳೇ ಮುನಿಶ್ರೇಷ್ಟರು.*,
*ಪಕ್ಷಿ ಗಳೇ ಪಿತೃದೇವತೆಗಳು.*
*ಅಲ್ಲಿ ಇರುವ ಸಕಲ ಕಲ್ಲು ಬಂಡೆಗಳೇ ಸಕಲ ಯಕ್ಷ ಕಿನ್ನರರು ಎಂದು ತಿಳಿಯಬೇಕು.*
ಮೇರು ಪರ್ವತನ ಕುಮಾರನಾದ 
*ಕಾಂತಿ ಸಂಪನ್ನವಾದ ಈ ವೆಂಕಟಾಚಲದ ಹಾಗು* 
*ಶ್ರೀ ಹರಿಯ ಮಹಿಮೆಯನ್ನು ಬ್ರಹ್ಮ ಮುಂತಾದ ದೇವತೆಗಳು ಮಾತ್ರ ಬಲ್ಲರು ಹೊರತು ಅಲ್ಪಶಕ್ತರಾದ ನಮ್ಮಂತಹ ಮಾನವರು ತಿಳಿಯಲು ಅಶಕ್ಯ..*.
ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತ ವಾದ ಶ್ರೀ ವೆಂಕಟೇಶ ಮಹಾತ್ಮೆ ಯ ಶೇಷಗಿರಿ ಪರ್ವತದ ವರ್ಣನೆ ಎಂಬ ಎರಡನೆಯ ಅಧ್ಯಾಯ ಮುಗಿದಿದು.
🙏ಶ್ರೀ ಕೃಷ್ಣಾ ರ್ಪಣಮಸ್ತು🙏
*ವಾಯುವಂದಿತ ವಿಜಯವಿಠಲ ವೆಂಕಟಗಿರಿ* 
*ರಾಯ*|
*ತನ್ನ ಶರಣರಿಗೆ ಭೀತಿ ಬರಗೊಡನು||*
🙏ಹರೇ ಶ್ರೀನಿವಾಸ🙏
[01/10, 5:19 AM] vijayavitthala blr: *|ಶ್ರೀನಿವಾಸ ಕಲ್ಯಾಣ ಚರಿತ್ರೆ*||day #6

Post a Comment

Previous Post Next Post