vijayavitthala blr: *|ಪಿಬತ ಭಾಗವತಂ ರಸಮಾಲಯಂ||*Day29, 30

[25/09, 5:22 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*
Day29
✍️ಶ್ರೀ ಹರಿಯ ಮಾತುಗಳಿಂದ ಸನಕಾದಿಗಳುಆನಂದ ವನ್ನು ಹೊಂದಿದರು.
ನಂತರ ದೇವ ದೇವನಿಗೆ ನಮಸ್ಕರಿಸಿ ಹೇಳುತ್ತಾರೆ.
*ದೇವಾ! ವಿಪ್ರರ ಕುಲಸ್ವಾಮಿಯು ನೀನು.ಅವರಿಂದ ಅರ್ಚಿತಗೊಳ್ಳುವ ನಿನಗೆ ಅವರು ಪರ ದೇವತೆಯೇ?ಅವರ ಅನುಗ್ರಹ ವನ್ನು ನೀನು ಪಡೆಯಬೇಕೆ??*
 *ಇತರರು ವಿಪ್ರರ ನ್ನು ಗೌರವಿಸುವ ಉದ್ದೇಶದಿಂದ ಹೀಗೆ ಅವರನ್ನು ಪ್ರಶಂಸೆಯನ್ನು ಮಾಡಿದಿ.*
*ವಿಪ್ರರ ರಕ್ಷಣಾ ಗಾಗಿ ಅನೇಕ ಅವತಾರಗಳನ್ನು ತಾಳುವಿ.*
*ನಿನ್ನ ಅನುಗ್ರಹ ಕೃಪೆಯಿಂದ ವಿಪ್ರರು ಜ್ಞಾನಿಗಳು ಆಗುವರು.ಸಂಸಾರ ಸಾಗರವನ್ನು ದಾಟುವರು.*
 *ಹೀಗಿರುವಾಗ ವಿಪ್ರರಿಂದ ನೀನೆಂತು ಅನುಗ್ರಹ ಪಡೆಯುವೆ??  ಸಕಲ ಜೀವಿಗಳಿಗೆ ಮಾತೆಯಾದ ಆ ಶ್ರೀರಮಾದೇವಿಯು ನಿನ್ನ ಭಕ್ತಗಣದಲ್ಲಿ ಅಗ್ರಳು.ಮತ್ತು ಸರ್ವೋತ್ತಮಳು.ಮತ್ತು ಕ್ಷಣ ಬಿಡದೇ ನಿನ್ನನ್ನು ಸೇವೆ ಮಾಡುತ್ತಾ ಸದಾ ಕಾಲ ಇರುವಂತಹವಳು.ಪ್ರಳಯ ಕಾಲದಲ್ಲಿ ಸಹ ಆಭರಣಗಳಾಗಿ ಜಲವು ಆಗಿ ಜೊತೆಯಲ್ಲಿ ಇರುವಂತಹಳು.ಕೋಟಿ ಕೋಟಿ ಭೃತ್ಯರಿದ್ದರು ಸಹ ನಿನ್ನ ಸೇವೆಯನ್ನು ತಾನೇ ಛತ್ರ ಚಾಮರ,ಇನ್ನೂ ಮುಂತಾದ ರೂಪದಿಂದ ನಿನ್ನ ಸೇವೆಯನ್ನು ಸದಾ ಮಾಡುತ್ತಾ ಇರುವ ಆ ಲಕ್ಷ್ಮೀ ದೇವಿಯು ನಿನ್ನ ಭಕ್ತರ ಪಾದಧೂಳಿಯಿಂದ ನಿನ್ನನ್ನು ಅಗಲದೇ ಇರುವಳೆ??ನೀನು ಮಹಾ ಭಾಗ್ಯವಂತ ನಾದೆಯಾ??ಇತರರು ನಿನ್ನ ಭಕುತರನ್ನು ಪೂಜಿಸಿ ಗೌರವಿಸಲಿ ಎಂದು ತೋರಿಸಲೋಸುಗ ಈ ರೀತಿಯಲ್ಲಿ ನಡೆದು ತೋರಿಸುವ ನಿನ್ನ ಲೀಲೆ ಬಹು ಸೋಜಿಗ ಮತ್ತು ವಿಚಿತ್ರ.*
*ಅಸುರಿ ಜನ ಮೋಹನಕ್ಕಾಗಿ ಮತ್ತು ನಿನ್ನ ಭಕ್ತಜನ ಸಂತೋಷ ಪಡಲು ನೀನು ಮಾಡುವ ನಟನೆ ಇದು.*
*ನಾವು ಗಳು ನಿನ್ನ ಆಳುಗಳಿಗೆ ಕೊಟ್ಟ ಶಾಪವನ್ನು ಬೇಕಾದರೆ ಅದನ್ನು ರದ್ದು ಪಡಿಸಿ ನಿನ್ನ ಲೋಕದಲ್ಲಿ ಅವರನ್ನು ಇಟ್ಟುಕೊಳ್ಳುವ ಅಧಿಕಾರ ನಿನಗುಂಟು.ನೀನು ಮಾಡಿದ್ದು ನಮಗೆ ಸಮ್ಮತ.*. 
*ಒಂದು ವೇಳೆ ನಿರಪರಾಧಿಗಳಾದ ನಿನ್ನ ದ್ವಾರಪಾಲಕರನ್ನು ದೋಷಿಗಳೆಂದು ಭಾವಿಸಿ ಶಾಪವನ್ನು ಕೊಟ್ಟ ನಮಗೆ ನೀನು ಶಿಕ್ಷೆಯನ್ನು ಕೊಟ್ಟರು ನಮಗೆ ಸಮ್ಮತವೇ.ಅದನ್ನು ಅನುಭವಿಸಲು ನಾವು ಸಿದ್ದ.*
ಎಂದು ಹೇಳುತ್ತಾರೆ.
*ಅದಕ್ಕೆ ಶ್ರೀ ಮನ್ ನಾರಾಯಣ ದೇವನು*
*"ವಿಪ್ರರೇ! ನಿಮ್ಮ ಮಾತಿನಂತೆ ಜಯ ವಿಜಯರು ಈ ತಕ್ಷಣವೇ ಭೂಲೋಕದಲ್ಲಿ ಅಸುರರಾಗಿ ಜನಿಸಲಿ.ಅಲ್ಲಿ ಅವರು ನನ್ನ ಸದಾ ದ್ವೇಷವನ್ನು ಮಾಡುವ ಜೀವರ ಜೊತೆಯಲ್ಲಿ ಇದ್ದರು ನನ್ನಲ್ಲಿ ಮಾಡಿದ ಭಕುತಿ ಇಂದ ಪುನಃ ನನ್ನ ಲೋಕ ಕ್ಕೆ ಬರುವರು.*
*ವಿಪ್ರರ ವಾಕ್ಯ ವಿಷ್ಣುವಿನ ವಾಕ್ಯ.ನಿಮ್ಮ ಮಾತಿಗೆ ಎದುರಿಲ್ಲ.ಶಾಪವನ್ನು ನೀವು ಕೊಟ್ಟಿದ್ದರು ಅದು ನಾನು ಕೊಟ್ಟಂತಯೇ ಸರಿ..*
ಸನಕಾದಿಗಳು ಭಗವಂತನ ದರುಶನ ದಿಂದ ಅವನ ಮಾತುಗಳಿಂದ ಸಂತೃಪ್ತಿ ಹೊಂದಿ ಅವನ ಗುಣಗಳನ್ನು ಕೊಂಡಾಡುತ್ತಾ ಹೊರಟಿದ್ದಾರೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ಕಪಿಲಾಯ ನಮಃ🙏
[26/09, 8:29 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day# 30
✍️ಇಲ್ಲಿ ಒಂದು ಸೂಕ್ಷ್ಮ ವಿಷಯ. 
*ಶ್ರೀ ಹರಿಯು ಸಕಲ ಗುಣ ಪೂರ್ಣ ನು.ಅವನಿಗೆ ಎಂದು ವಿಪ್ರರ ಸೇವನೆಯಿಂದ ಯಾವ ಲಾಭವು ಆಗಬೇಕಾದ್ದು ಇಲ್ಲ.ಸ್ವತಃ ಶ್ರೀ ರಮಾದೇವಿ ಬ್ರಹ್ಮಾದಿಗಳಿಂದ ಅವನಿಗೆ ಲಾಭವಿಲ್ಲ ಎಂದ ಮೇಲೆ ಈ ವಿಪ್ರರಿಂದೇನು ಆಗಬೇಕು ಅವನಿಗೆ..*
*ಅಜ್ಞಾನ ಉಳ್ಳ ಜನರಿಗೆ ಭ್ರಾಂತಿಯನ್ನು ಉಂಟು ಮಾಡಲು ಮತ್ತು ತನ್ನ ಭಕ್ತರು ಈ ಲೀಲೆ ಯನ್ನು ನೋಡಿ ಆನಂದ ಪಡಲಿ ಎಂದು ಮಾಡಿದನು ಎಂದು ತಿಳಿಯಬೇಕು ಹೊರತು ಬೇರೆ ರೀತಿಯಲ್ಲಿ ಅಲ್ಲ.*
*ಆ ತರಹ ಭಗವಂತನ ಬಗ್ಗೆ ಅಜ್ಞಾನ ದಿಂದ ತಿಳಿದರೆ ದೋಷವೇ ಹೊರತು ಬೇರೆ ಏನು ಇಲ್ಲ. ಸದಾಚಾರವುಳ್ಳ ವಿಪ್ರರ ಸೇವೆ ಯನ್ನು ಮಾಡಿದರೆ ಭಗವಂತ ಅನುಗ್ರಹ ಮಾಡುವನು ಎಂಬುದನ್ನು ತಿಳಿಸಲೋಸುಗ ಶ್ರೀ ಹರಿಯು ಈ ತರಹ ಲೀಲಾ ವಿಡಂಬನೆ ಮಾಡಿದನೆಂದು ತಿಳಿಯುವದೇ ಯಥಾರ್ಥ ಜ್ಞಾನ ಎನಿಸುತ್ತದೆ.*
ಇತ್ತ ಭಗವಂತ 
ಜಯ ವಿಜಯರಿಗೆ ಭೂಲೋಕದಲ್ಲಿ ಜನಿಸಲು ಆಜ್ಞೆ ಮಾಡುತ್ತಾನೆ.
*ನಡೆಯಿರಿ! ಇಲ್ಲಿಂದ.*
*ಭಯಪಡಬೇಡಿ.ಬ್ರಹ್ಮನ ಶಾಪವನ್ನು ಸಹ ಪರಿಹರಿಸಲು ನಾನು ಸಮರ್ಥನಾಗಿದ್ದರು  ಸಹ ಇದು ನನ್ನ ಇಚ್ಛೆ ಯಂತೆ ಆಗಿದೆ.ಹಿಂದೆ ಒಮ್ಮೆ ನೀವು  ಒಳಗೆ ನನ್ನ ಬಳಿ ಬರುತ್ತಿದ್ದ  ರಮೆಯನ್ನು ಸಹ ತಡೆದು ಪಾಪವನ್ನು ಎಸಗಿದಿರಿ.ಕ್ರುದ್ದಳಾದ ಇಂದಿರೆಯು ಕೊಟ್ಟ ಶಾಪ ಇಂದು ವಿಪ್ರರ ವಾಣಿಯಿಂದ ನಿಜವಾಯಿತು.  ಈ ಕ್ಷಣವೇ ದಿತಿಯ ಗರ್ಭವನ್ನು ಸೇರಿರಿ.ಕಾಲಾನಂತರದಲ್ಲಿ ನನ್ನ ಲೋಕಕ್ಕೆ ಶೀಘ್ರವಾಗಿ ಹಿಂತಿರುಗಿ ಬರುವಿರಿ.ನಡೆ ಯಿರಿ* ಎಂದು ಹೇಳಿ 
ಪತ್ನಿ ಸಮೇತನಾಗಿ ಭಗವಂತ ತನ್ನ ಸ್ಥಾನಕ್ಕೆ ಹಿಂತಿರುಗಿದ್ದಾನೆ.*
*ತಕ್ಷಣವೇ ಕಾಂತಿಹೀನ ರಾಗಿ ದೇವಲೋಕದಿಂದ ಉಭಯರು ಭೂಲೋಕದ ಕಡೆ ಬೀಳುವದನ್ನು ಕಂಡು ಆಗಸದಲ್ಲಿ ಸಂಚಾರ ವನ್ನು ಮಾಡುತ್ತಿದ್ದ ದೇವತೆಗಳು ಕಂಡು ಹಾಹಾಕಾರವನ್ನು ಮಾಡಿದ್ದಾರೆ.*
ಜಯ ವಿಜಯರು ದಿತಿಯ ಗರ್ಭವನ್ನು ಸೇರಿದ್ದಾರೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ವರಾಹಾಯ ನಮಃ🙏

Post a Comment

Previous Post Next Post