[26/09, 6:07 PM] vijayavitthala blr: *|ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ| ಸುಲಭ ದೇವರ ದೇವ ವಿಜಯವಿಠಲ ವೆಂಕಟ||*
*✍️ಜಗತ್ತಿನೊಡೆಯನಾದ ಶ್ರೀನಿವಾಸ ದೇವರ ಕಲ್ಯಾಣವನ್ನು ಪ್ರತಿವರ್ಷ ಎರಡು ಬಾರಿ ನಡೆಸಲಾಗುವುದು.*
*ವೈಶಾಖ ಶುದ್ಧ ದಶಮಿಯಂದು ಶ್ರೀಶ್ರೀನಿವಾಸ ದೇವರು ಶ್ರೀಪದ್ಮಾವತಿ ದೇವಿಯ ಪಾಣಿಗ್ರಹಣ ಮಾಡಿದ ಪುಣ್ಯ ಕಾಲ.*
*ಶ್ರೀಪದ್ಮಾವತಿ ದೇವಿಯನ್ನು ಪಾಣಿಗ್ರಹಣ ಮಾಡಿದ ಶ್ರೀನಿವಾಸ ದೇವರು ತಾನು ಸರ್ವತ್ರ ವ್ಯಾಪ್ತನಾಗಿದ್ದರು ಲೋಕ ಶಿಕ್ಷಣ ಕ್ಕಾಗಿ ಅಗಸ್ತ್ಯ ಮಹರ್ಷಿಗಳ*
*ಆಶ್ರಮದಲ್ಲಿ ಆರು ತಿಂಗಳುಗಳ ಕಾಲ ತಂಗಿ,ಅವರಿಗೆ ಅನುಗ್ರಹಿಸಿದ..,*
*ಆರು ತಿಂಗಳ ನಂತರ ಪರ್ವತ ಏರಿ ಬಂದ ಆದಿದಂಪತಿಗಳಿಗೆ ದೇವಶಿಲ್ಪಿಯಾದ ವಿಶ್ವಕರ್ಮನಿಂದ ನಿರ್ಮಿಸಿದ ರಥದಲ್ಲಿ ಕುಳ್ಳಿರಿಸಿಕೊಂಡು ಶ್ರೀಬ್ರಹ್ಮ ದೇವರು ಹತ್ತು ದಿನಗಳ ಕಾಲ ಮೆರವಣಿಗೆ ಯನ್ನು ಮಾಡಿದರು.*
*ಆಶ್ವೀಜ ಶುದ್ಧ ದಶಮಿಯಂದು ಬ್ರಹ್ಮೋತ್ಸವ.*
*ಸಾಧ್ಯ ವಾದರೆ ಇವೆರಡು ಮಾಸದಲ್ಲಿ ಅಂದರೆ ವೈಶಾಖ ಮತ್ತು ಆಶ್ವೀಜ ಮಾಸದಲ್ಲಿ ವೆಂಕಟಪರ್ವತಕ್ಕೆ ಹೋಗಿ ಆ ಪರಬ್ರಹ್ಮ ನಾದ ಶ್ರೀನಿವಾಸದೇವರ ದರ್ಶನ ಮಾಡಬೇಕು.*
*ಕಲಿಯುಗದಲ್ಲಿ ಈ ಮಂಗಳಮಯ ಹಾಗು ಪುಣ್ಯಕರವಾದ ಈತನ ಚರಿತ್ರೆಯನ್ನು ಭಕ್ತಿ ಶ್ರದ್ಧೆ ಇಂದ ಕೇಳಿದರೆ,ಹೇಳಿದರೆ,ಓದಿದರೆ ಎಲ್ಲಾ ದುಃಖ ಗಳು ಪರಿಹಾರವಾಗುವವು..*.
*ಲೌಕಿಕದ ಎಲ್ಲಾ ಅಪೇಕ್ಷೆ ಗಳನ್ನು ಸ್ವಾಮಿ ನೆರವೇರಿಸುವ.*
*ಬೆಟ್ಟ ಕ್ಕೆ,ಹೋಗಲು ಸಾಧ್ಯ ವಾಗದೇ ಇದ್ದರೆ ಈ ಹತ್ತು ದಿನಗಳ ಕಾಲ ಮೇಲೆ ಹೇಳಿದ ವೈಶಾಖ ಹಾಗು ಆಶ್ವೀಜ ಮಾಸಗಳಲ್ಲಿ ಶ್ರೀನಿವಾಸ ಪದ್ಮಾವತಿ ಯರ ಕಲ್ಯಾಣ ಕತೆಯನ್ನು ಕೇಳಬೇಕು.*ನಿತ್ಯದಂತೆ ಶ್ರೀ ಮದ್ ಭಾಗವತದ ಜೊತೆಗೆ ಶ್ರೀನಿವಾಸ ಕಲ್ಯಾಣವನ್ನು ಬರೆಯಬೇಕು ಎನ್ನುವ ಸಂಕಲ್ಪ.
*ನಿರ್ವಿಘ್ನವಾಗಿ ಈ ಕಾರ್ಯ ನಡೆದು ಪರಬ್ರಹ್ಮ ನಾದ ಆ ಶ್ರೀನಿವಾಸ ಪ್ರೀತಿಯಾಗಲಿ.* ಎಂದು ತಾವು ತುಂಬು ಮನಸ್ಸಿನಿಂದ ಹಾರೈಯಿಸಿ ಆಶೀರ್ವಾದ ಮಾಡಬೇಕೆಂದು ತಮ್ಮ ಬಳಿ ಸವಿನಯ ಪೂರ್ವಕ ಪ್ರಾರ್ಥನೆ.
🙏ಹರೇ ಶ್ರೀನಿವಾಸ🙏
[26/09, 6:08 PM] vijayavitthala blr: *ವೆಂಕಟೇಶನೆ ನಮೊ| ವೆಂಕಟೇಶನೆ ನಮೊ*|
*ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||*
🙏🙇♂day 1
*ಶ್ರೀನಿವಾಸನು ಸಕಲ ಸನ್ಮಂಗಳಪ್ರದನಾದ ಸರ್ವೋತ್ತಮನಾದ ದೇವರು..*.
*ಸಕಲ ಪುರಾಣಾದಿಗಳು ಆ ಶ್ರೀನಿವಾಸನೇ ಜಗಜನ್ಮಾದಿಕಾರಣನಾದ ಸಕಲ ಗುಣಪೂರ್ಣನಾದ,ದೋಷವಿದೂರನಾದ,ಸರ್ವ ಸ್ವತಂತ್ರ ನಾದ,ರಮಾ ಬ್ರಹ್ಮ ರುದ್ರ, ಇಂದ್ರಾದಿ,ದೇವತೆಗಳಿಂದ,ಋಷಿ ಮುನಿಗಳಿಂದ,ಅವನ ದಾಸರಿಂದ ಸದಾ ಪೂಜೆಗೊಂಬುವ,ಚತುರ್ವಿಧ ಪುರುಷಾರ್ಥ ಪ್ರದನಾದ ,ಆ ವೆಂಕಟೇಶ ನನ್ನು ಅವನ ಮಹಾತ್ಮೆಯನ್ನು ತಿಳಿದು ಜ್ಞಾನ ಪೂರ್ವಕವಾಗಿ ಅವನನ್ನು ಆರಾಧಿಸುವದರಿಂದ ಸುಪ್ರಸನ್ನನಾದ ಶ್ರೀ ಹರಿಯು ಸಮಸ್ತ ಕಾಮನೆಗಳನ್ನು,ಸನ್ಮಂಗಳವನ್ನು ಇತ್ತು ಕರುಣಿಸಿ ಕಾಪಾಡುವವ* ಅಂತ ಸಾರುತ್ತಿವೆ..
*ಅಶ್ವಯುಜ ಮಾಸದ ಪ್ರಾರಂಭದ ಈ ಶುಭದಿನದಲ್ಲಿ ಮಹಾಮಹಿಮನಾದ ಪದ್ಮಾವತಿಯ ಪತಿಯ ಕಲ್ಯಾಣ ಮಹೋತ್ಸವ ವನ್ನು(ವೈಶಾಖ ಶುದ್ದ ದಶಮಿ ಸ್ವಾಮಿ ಕಲ್ಯಾಣವಾದ ದಿನ.)*
*ತನ್ನ ಮದುವೆಗೆ ತಾನೇ ದಿನವನ್ನು ನಿಶ್ಚಿತ ಮಾಡಿಕೊಂಡ,ಮತ್ತು ಅದರ ಹಿನ್ನೆಲೆ ನಿರೂಪಿಸುವ ಭವಿಷ್ಯೊತ್ತರ ಪುರಾಣಾಂತರ್ಗತವಾದ ವೆಂಕಟೇಶ ಮಹಾತ್ಮೆ ಯನ್ನು ತಿಳಿಸುವ ಪುಟ್ಟ ಪ್ರಯತ್ನ.*
✍ಪುಣ್ಯ ಭೂಮಿಯಾದ ಭರತವರ್ಷದಲ್ಲಿ *ಮನುಕುಲದ ಉದ್ದಾರ ಕ್ಕಾಗಿ ಪರಮ ಕೃಪಾಳುಗಳಾದ ಭಗವಾನ್ ಶ್ರೀ ವೇದವ್ಯಾಸ ದೇವರು ಅನೇಕ ಪುರಾಣಗಳನ್ನು ರಚಿಸಿ* ಮಹೋದುಪಕಾರ ಮಾಡಿದ್ದಾರೆ. ಅದರಲ್ಲಿ ಭವಿಷ್ಯೊತ್ತರಪುರಾಣದಲ್ಲಿ ಶ್ರೀ ವೆಂಕಟೇಶ ಮಹಾತ್ಮೆ ಯನ್ನು ಹೇಳಿದ್ದಾರೆ.
ಒಮ್ಮೆ ಶೌನಕರು ಸೂತ ಮುನಿಗಳ ಬಳಿ ಬಂದು
*ಹಿಂದೆ ನಿಮ್ಮಿಂದ ಅನೇಕ ಭಗವಂತನ ಮಹಿಮೆಯನ್ನು ಸಾರುವ ವಿಷಯಗಳನ್ನು ತಿಳಿದು ಸುಕೃತಿಗಳಾಗಿದ್ದೇವೆ.*.
*ಇವಾಗ ವೆಂಕಟಾಚಲಪತಿಯಾದ ಶ್ರೀ ಹರಿಯ ಮಹಿಮೆಯನ್ನು ಕೇಳಲು ಆಶಿಸಿದ್ದೇವೆ.ಅದನ್ನು ತಿಳಿಸಬೇಕು ಎಂದು ಕೇಳಲು*,
ಅವಾಗ ಸೂತರು ಹೇಳುತ್ತಾರೆ.
*ಮುನಿವರ್ಯರೆ!! ಬಹಳ ಆನಂದದಾಯಕವಾದ ಪ್ರಶ್ನೆ ಯನ್ನು ಕೇಳಿದ್ದೀರಿ.*
*ಶ್ರೀ ವೇದವ್ಯಾಸ ದೇವರು ನನಗೆ ಉಪದೇಶ ಮಾಡಿದ ಕ್ರಮದಲ್ಲಿ ನಿಮಗೆ ಹೇಳುತ್ತೇನೆ ಕೇಳಿ.*
ಪೂರ್ವದಲ್ಲಿ ಧರ್ಮಿಷ್ಟನಾದ ಜನಕ ರಾಜನು ಧರ್ಮದಿಂದ ರಾಜ್ಯಭಾರ ಮಾಡುತ್ತಾ
ಇದ್ದರು. ಅವರಿಗೆ ಕುಶಕೇತುವೆಂಬ ತಮ್ಮ ಇದ್ದನು.ಅವನ ಪತ್ನಿ ಬಹು ಪತಿವ್ರತೆಯು.ಆ ದಂಪತಿಗಳಿಗೆ ಮೂರು ಜನ ಪುತ್ರಿ ಯರು.ಜನಕರಾಜರಿಗೆ ಜಾನಕಿ ಎಂಬ ನಾಮದಿಂದ ಕರೆಯಲ್ಪಡುವ ಜಗನ್ಮಾತೆ ಪುತ್ರಿಯಾಗಿದ್ದಾಳೆ.
ಹೀಗೆ ಜನಕರಾಜರು ಪತ್ನಿ ಪುತ್ರಿ ಮತ್ತು ಸಹೋದರನ ಜೊತೆಯಲ್ಲಿ ಆನಂದವಾಗಿ ರಾಜ್ಯ ಭಾರ ಮಾಡುತ್ತಾ ಇದ್ದರು.
*ಒಂದು ದಿನ ಜನಕರಾಜರ ಮನಸ್ಸಿನಲ್ಲಿ ನಾನು ಎಂಭತ್ತು ಸಹಸ್ರ ವರ್ಷ ನನ್ನ ಎರಡು ಕಣ್ಣುಗಳು ಸರ್ವದಾ ಸುಖವನ್ನು ನೋಡಿವೆ.ದುಃಖ ವನ್ನು ಒಂದು ಕಣ್ಣು ಸಹ ನೋಡಿಲ್ಲ.ಮುಂದೆಯೂ ಸಹ ಹೀಗೆ ಸುಖವಾಗಿಯೇ ಇರಬೇಕು.. ದುಃಖ ಗಳನ್ನು ಕಣ್ಣಿನಿಂದ ನೋಡಬಾರದು ಎಂದು ಅಪೇಕ್ಷೆ ಪಟ್ಟನು.*.
*ಅವನ ಅಪೇಕ್ಷೆ ಪಟ್ಟಿದ್ದು ಶಾಸ್ತ್ರ ಸಮ್ಮತವಲ್ಲ ವಾದುದರಿಂದ ಭಗವಂತನು ಅವನಿಗೆ ದುಃಖ ಪ್ರದರ್ಶನ* ಮಾಡಿದನು.
ಸಾಧುವಾದ ಜನಕರಾಜನ ಬಾಯಲ್ಲಿ ಅಸಾಧುವಾದ ಮಾತುಗಳನ್ನು ಕೇಳಿ ಶ್ರೀ ಹರಿಯು ಅವನಿಗೆ ಸ್ವಲ್ಪ ದುಃಖವನ್ನು ತೋರಿಸಿದ್ದಾನೆ.
(ಕೆಲವುಕಡೆ ಸ್ವಪ್ನದಲ್ಲಿ ಅಂತ ಹೇಳುತ್ತಾರೆ.)
*ಜನಕರಾಜನ ತಮ್ಮ ಕುಶಕೇತು ಮರಣ ಹೊಂದಿದ. ಅವನ ಪತ್ನಿ ಸಹ ಅವನ ಜೊತೆಗೆ ಸಹಗಮನ ಮಾಡಿದ್ದಾರೆ.*
ಅನಾಥರಾದ ಮಕ್ಕಳನ್ನು ಕಂಡು ಕಡು ದುಃಖಿತನಾದ ಜನಕರಾಜನು ಅನ್ನಾಹಾರಗಳನ್ನು ತ್ಯಜಿಸಿ ಚಿಂತಾಕ್ರಾಂತರಾದರು.
ಆಗ ದೈವಯೋಗದಿಂದ ಕುಲಪುರೋಹಿತರು,
ವಾಮದೇವ ಮುನಿಗಳ ಸಹೋದರರು ಆದ ಶತಾನಂದರು ಮಿಥಿಲೆಗೆ ಬಂದರು.ಅರ್ಘ್ಯ ಪಾದಾದಿಗಳಿಂದ ಅವರನ್ನು ಪೂಜಿಸಿ ಸತ್ಕರಿಸಿ ತನಗೆ ಪ್ರಾಪ್ತ ವಾದ ದುಃಖ ವನ್ನು ಅವರ ಬಳಿ ಹೇಳಿಕೊಂಡರು.
*ನಾನು ಮುದುಕನಾಗಿದ್ದೆನೆ.ಮಕ್ಕಳು ಚಿಕ್ಕವರಿದ್ದಾರೆ.ನನ್ನ ಮಕ್ಕಳನ್ನು ವಿವಾಹವಾಗಲು ಹಲವಾರು ರಾಜರು ಹೊಂಚು ಹಾಕುತ್ತಾಇದ್ದಾರೆ.ರಾವಣನು ಸಹ ಅದಕ್ಕೆ ಪ್ರಯತ್ನ ಮಾಡುತ್ತಾ ಇದ್ದಾನೆ.*
ಇದು ಮೊದಲನೆಯ ದುಃಖ.
*ಎರಡನೆಯ ದುಃಖ ನನ್ನ ಮಗಳಾದ ಸೀತಾದೇವಿಯು ಅಪ್ರತಿಮ ಸುಂದರಿ.ಅವಳಿಗೆ ಅತೀ ಸುಂದರನಾದ ವರ ಸಿಗಬೇಕು. ಇದು ಹೇಗೆ ಸಾಧ್ಯ ಎಂದು ಯೋಚನೆ ಯಾಗಿದೆ.*
*ಇನ್ನೂ ಮೂರನೆಯ ದುಃಖ*
*ನನ್ನ ಈ ನಾಲ್ಕು ಜನ ಹೆಣ್ಣು ಮಕ್ಕಳು ಒಂದೇ ದೇಶದ ಅರಸನಿಗೆ* *ಸೊಸೆಯಾಗಬೇಕು.ನನಗೆ ಬರುವ ಅಳಿಯಂದಿರು ಸಹ ಒಬ್ಬ ಅರಸನ ಮಕ್ಕಳಾಗಿರಬೇಕು..ಮುಂದೆ ಅವರಿಂದ ನನಗೆ ಹಿತ ಉಂಟಾಗಬೇಕು.*
*ಇವೆಲ್ಲವೂ ಯಾವುದರಿಂದ ಆಗುತ್ತದೆ ತಿಳಿಸಿ ಎಂದು ಕೇಳಿದಾಗ*
ಆವಾಗ ಶತಾನಂದರು ಹೇಳುತ್ತಾರೆ..
*ರಾಜನ್ !ಕಲಿಯುಗದಲ್ಲಿ ವೆಂಕಟಗಿರಿ ಮಹಾತ್ಮೆ ಯನ್ನು ಶ್ರವಣ ಮಾಡುವದರಿಂದ ಸರ್ವಪಾಪವು,ಸರ್ವ ದುಃಖವು ಪರಿಹಾರವಾಗುವದು.*.
*ಯಾವ ಭಗವಂತನ ಚರಿತ್ರೆ ಯನ್ನು ಕೇಳಿ ಸಕಲ ದೇವತೆಗಳು ತಮ್ಮ ತಮ್ಮ ಪದವಿಯನ್ನು ಹೊಂದಿದರೋ*
*ಅಂತಹ ಆ ವೈಕುಂಠ ಗಿರಿಯ ಚರಿತ್ರೆ ನಿನಗೆ ಹೇಳುವೆನು*
*ಸಂತಾನ, ಸಂಪತ್ತು,ರೋಗಭಯ,ಜ್ಞಾನ ಸಿದ್ದಿ,ಸಕಲರಿಗು ಮಂಗಳವನ್ನು ಉಂಟುಮಾಡುವ ಬೆಟ್ಟದೊಡೆಯನ ಚರಿತ್ರೆ ಯನ್ನು ನಿನಗೆ ಹೇಳುವೆನು.*
*ನಿನಗೆ ಶತೃನಾಶ,ಪುತ್ರಿಯರ ವಿವಾಹ, ಸಕಲ ಶ್ರೇಯಸ್ಸು ಗಳು ಅದರ ಶ್ರವಣದಿಂದ ದೊರಕುತ್ತವೆ.*
*ಈ ಪರ್ವತಕ್ಕೆ ಕೃತಯುಗದಲ್ಲಿ ವೃಷಭಾಚಲವೆಂದು*,
*ತ್ರೇತಾಯುಗ ದಲ್ಲಿ ಅಂಜನಾಚಲವೆಂದು*,
*ದ್ವಾಪರದಲ್ಲಿ ಶೇಷಾಚಲವೆಂದು,* *ಕಲಿಯುಗದಲ್ಲಿ ವೆಂಕಟಾಚಲವೆಂದು ಯುಗಭೇದದಿಂದ ಹೆಸರುಂಟಾಗಿದೆ*.ಅಂತ ಹೇಳುತ್ತಾರೆ.
ಆ ಪರ್ವತಕ್ಕೆ ನಾಲ್ಕು ಹೆಸರುಗಳು ಬಂದ ಹಿನ್ನೆಲೆ ನಂತರ ತಿಳಿಯೋಣ.
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಒಂದೊಂದು ಯುಗಗೆ ಒಂದೊಂದು ಪೆಸರು|*
*ಚಂದವಾಗಿಪ್ಪವು ಪೊಗಳಿದವರಿಗೀಗಾ|*
*ನಂದವೇ ಕೊಡುತಲಿ ಅತಿಶಯವೆನಿಸಿ ವಸುಂಧರದದೊಳಗೆ* *ಸುಲಭವಾಗಿದೆ ಕೇಳಿ|*
..
*ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ*|
*ಕಾಣಿಸಿ ಕೊಂಬನು ಈ ಗಿರಿಯ ಸ್ಮರಿಸಿ ದವರಿಗೆ*|
🙏ಹರೇ ಶ್ರೀನಿವಾಸ🙏
[27/09, 5:34 AM] vijayavitthala blr: *ಶ್ರೀನಿವಾಸ ಕಲ್ಯಾಣ ಚರಿತ್ರೆ*day 2
*ವೆಂಕಟೇಶನೆ ನಮೊ ವೆಂಕಟೇಶನೆ ನಮೊ|*
*ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||*.
✍ಹಿಂದಿನ ಸಂಚಿಕೆಯಲ್ಲಿ ಶತಾನಂದರು ಜನಕ ಮಹಾರಾಜನಿಗೆ
*ಶ್ರೀ ವೆಂಕಟಗಿರಿಯ ಮಹಾತ್ಮೆ ಶ್ರವಣ ಮಾಡುವದರಿಂದ ಅವನ ದುಃಖ,ಕಷ್ಟ ಪರಿಹಾರವಾಗಿ ಮಂಗಳವಾಗುತ್ತದೆ ಅಂತ ಹೇಳುತ್ತಾರೆ.*
ಅದಕ್ಕೆ ಯುಗಭೇದದಿಂದ ನಾಲ್ಕು ಹೆಸರು ಬಂದ ಬಗೆಯನ್ನು ಹೇಳುತ್ತಾರೆ.
*ಕೃತಯುಗದಲ್ಲಿವೃಷಭಾಚಲ*
*ತ್ರೇತಾಯುಗದಲ್ಲಿ ಅಂಜನಾಚಲ,*
*ದ್ವಾಪರಯುಗದಲ್ಲಿ ಶೇಷಾಚಲ*,
*ಕಲಿಯುಗದಲ್ಲಿ*
*ವೆಂಕಟಾಚಲವೆಂದು,* ಹೇಳುತ್ತಾರೆ.
ಅದಕ್ಕೆ ಜನಕನು
*ನಾಲ್ಕು ಯುಗದಲ್ಲಿ ಆಯಾ ಹೆಸರು ಬರಲು ಕಾರಣವನ್ನು* ಕೇಳಿದಾಗ
ಅದಕ್ಕೆ ಶತಾನಂದರು
*ರಾಜನ್! ಕೃತಯುಗದಲ್ಲಿ ವೃಷಭ ಎಂಬ ರಾಕ್ಷಸ ನು ಈ ಪರ್ವತದಲ್ಲಿ ವಾಸವಾಗಿದ್ದು ಅಲ್ಲಿದ್ದ ಋಷಿಗಳ ಸಮೂಹಕ್ಕೆ ತೊಂದರೆ ಕೊಡುತ್ತಾ ಇದ್ದನು*.
ಅವನು ಕೊಡುವ ಕಷ್ಟ ತಾಳದೆ ಮುನಿಗಳು ಭಗವಂತನ ಬಳಿ ಮೊರೆಹೋಗುತ್ತಾರೆ.
ಅವಾಗ ಶ್ರೀ ಹರಿಯು ಪ್ರತ್ಯಕ್ಷವಾಗಿ ಅವರಿಗೆ ಅಭಯವಿತ್ತು ಆ ರಾಕ್ಷಸನ ಸಂಹಾರಮಾಡುವೆನೆಂದು
ಹೇಳುತ್ತಾನೆ.
*ಆ ವೃಷಭ ಎಂಬ ರಾಕ್ಷಸನು ಪ್ರತಿದಿನವು ತುಂಬುರು ತೀರ್ಥ ದಲ್ಲಿ ಸ್ನಾನ ಮಾಡಿ ,ಅವನ ಬಳಿಯಿರುವ ಶ್ರೀನರಸಿಂಹ ದೇವರ ಶಾಲಗ್ರಾಮವನ್ನು ಪೂಜಿಸುತ್ತಾ,ಪೂಜೆ ಮುಗಿದ ಮೇಲೆ ,ಫಲ ಸಮರ್ಪಣ ರೂಪದಲ್ಲಿ ತನ್ನ ಶಿರಸ್ಸನ್ನು ಖಡ್ಗದಿಂದ ಕತ್ತರಿಸಿ ನರಸಿಂಹ ರೂಪಿಯಾದ ಆ ಶ್ರೀ ಹರಿಗೆ ಸಮರ್ಪಣೆ ಮಾಡುತ್ತಾ ಇದ್ದ.ಅಚ್ಚರಿಯೆಂದರೆ ಮತ್ತೆ ಅವನ ಶಿರವು ಮತ್ತೆ ಅವನ ದೇಹಕ್ಕೆ ಬಂದು ಕೂಡುತ್ತಾ ಇತ್ತು.ಈ ರೀತಿಯಲ್ಲಿ 5 ಸಹಸ್ರ ವರ್ಷಗಳ ಕಾಲ ಪೂಜೆ ಯನ್ನು ಮಾಡಿದನು.*.
*ಸರಿಯಾಗಿ 5 ಸಹಸ್ರ ವರ್ಷಗಳಾಗುವ ಸಮಯಕ್ಕೆ ಶ್ರೀ ಹರಿ ಪ್ರತ್ಯಕ್ಷವಾಗಿ ದರುಶನ ನೀಡುತ್ತಾನೆ.*.
*ಭಗವಂತನ ದರ್ಶನ ದಿಂದ ಆನಂದ ತಡೆಯಲಾರದೆ ಮೂರ್ಛೆ ತಾಳುತ್ತಾನೆ.*
ನಂತರ ಎಚ್ಚರವಾದ ಮೇಲೆ ಭಗವಂತನ ಬಳಿ ಹೀಗೆಂದು ಕೇಳುತ್ತಾನೆ.
*ಹೇ ನಾರಾಯಣ!! ನೀನು ದೋಷ ರಹಿತನು, ರಮಾ,ಬ್ರಹ್ಮಾದಿ ಸಕಲ ದೇವತೆಗಳಿಂದ ನೀನು ನಿತ್ಯ ಪೂಜೆಗೊಂಬುವವನು ಮತ್ತು ಎಲ್ಲರಿಗಿಂತ ಅತ್ಯುತ್ತಮ ನಾದವನು ಆಗಿದ್ದೀಯಾ.*
*ನಿನ್ನ ಬಳಿ ನಾನು ಯುದ್ಧ ಮಾಡಬೇಕು ಅನ್ನುವ ಅಪೇಕ್ಷೆಉಂಟಾಗಿದೆ.ಅದನ್ನು ನಡೆಸಿಕೊಡಲು ಕೇಳುತ್ತಾನೆ.*
*ಭಗವಂತನು ತಥಾಸ್ತು! ಅಂತ* ಹೇಳಿ ಅವನ
ಜೊತೆಯಲ್ಲಿ ಯುದ್ಧ ವನ್ನು ಮಾಡುತ್ತಾನೆ.
ಸಕಲ ದೇವತಾ ಋಷಿ ಪರಿವಾರ ಆಗಸದಲ್ಲಿ ನಿಂತು ಈ ಯುದ್ದವನ್ನು ನೋಡುತ್ತಾರೆ.
*ಅವನ ಯುದ್ದ ಕೌಶಲ್ಯ ಕಂಡು ಭಗವಂತನು ಹರ್ಷಿತನಾಗಿ ಅವನ ಶಿರವನ್ನು ತರಿಯಲು ತನ್ನ ಚಕ್ರ ವನ್ನು ಪ್ರಯೋಗ* ಮಾಡಲು ಸಿದ್ದನಾಗುತ್ತಾನೆ.
ಅದಕ್ಕೆ ಅವನು ಭಗವಂತನ ಪಾದಕ್ಕೆ ಎರಗಿ
*ಸ್ವಾಮಿ! ನಿನ್ನ ಚಕ್ರದ ಪ್ರಭಾವ ಕೇಳಿದ್ದೇನೆ.ಅದರಿಂದ ಮೃತನಾಗಿ ನಾನು ನಿನ್ನ ಮಂದಿರವನ್ನು ಸೇರುತ್ತೇನೆ.*.
*ಈ ಪರ್ವತಕ್ಕೆ ನನ್ನ ಹೆಸರು ಬರುವಂತೆ ಅನುಗ್ರಹ ಮಾಡು ಅಂತ ಪ್ರಾರ್ಥನೆ ಮಾಡಿದ.*.
*ಅವಾಗ ಶ್ರೀ ಹರಿಯು ಅವನಿಗೆ ವರವನ್ನು ಇತ್ತು ಚಕ್ರ ದಿಂದ ಅವನನ್ನು ಸಂಹರಿಸಿ,ಮುನಿಗಳ ಕಷ್ಟ ವನ್ನು ಪರಿಹರಿಸಿದನು.*. *ಹಾಗಾಗಿ ಈ ಕಾರಣದಿಂದ ಈ ಪರ್ವತಕ್ಕೆ ವೃಷಭಾಚಲ ಅಂತ ಹೆಸರು ಬಂದಿತು.* ಅಂತ ಹೇಳುತ್ತಾರೆ.
*(೨)ನಂತರ ತ್ರೇತಾಯುಗದಲ್ಲಿ ಕಪಿಶ್ರೇಷ್ಠ ನಾದ ಕೇಸರಿಯ*
*ಪತ್ನಿಯಾದ ಅಂಜನಾ* *ದೇವಿಯು ಪುತ್ರ ಸಂತಾನಕ್ಕಾಗಿ ಮತಂಗ ಮುನಿಗಳ ಆದೇಶದಂತೆ* *ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿ ವರಾಹದೇವರ ದರುಶನ ಮಾಡಿ ಆಕಾಶಗಂಗಾ ತೀರ್ಥ ಕ್ಕೆ ಹೋಗಿ ಬಹು ಕಠಿಣವಾದ ತಪಸ್ಸು ಇಲ್ಲಿ ಆಚರಿಸಿ ವಾಯುದೇವರ ಅನುಗ್ರಹದಿಂದ ಗರ್ಭವತಿಯಾಗಿ ಹನುಮಂತ ದೇವರನ್ನು ಮಗನಾಗಿ ಪಡೆದಳು.*.
*ಹಾಗಾಗಿ ಇದು ಅಂಜನಾದ್ರಿ ಅಂತ ಹೆಸರು ಬಂದಿತು.*
ಮುಂದಿನ ಸಂಚಿಕೆ ನಂತರ..
🙏ಶ್ರೀ ಕೃಷ್ಣಾ ರ್ಪಣಮಸ್ತು🙏
*ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ|*
*ಕಾಣಿಸಿಕೊಂಬನು ಈ ಗಿರಿಯ ಸ್ಮರಿಸಿದವರಿಗೆ|*
🙏ಶ್ರೀವೆಂಕಟೇಶಾಯ ನಮಃ🙏

Post a Comment