ಅಕ್ಟೋಬರ್ 06, 2022 | , | 8:16PM |
14 ರಾಜ್ಯಗಳಿಗೆ 7183 ಕೋಟಿ ರೂ.ಗಿಂತ ಹೆಚ್ಚಿನ ವಿಕೇಂದ್ರೀಕರಣದ ನಂತರದ ಕಂದಾಯ ಕೊರತೆ ಅನುದಾನದ 7ನೇ ಮಾಸಿಕ ಕಂತು ಬಿಡುಗಡೆ ಮಾಡಿದ ಸರ್ಕಾರ

ಈ ರಾಜ್ಯಗಳು ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ. ಶಿಫಾರಸು ಮಾಡಲಾದ ಅನುದಾನವನ್ನು ರಾಜ್ಯಗಳಿಗೆ 12 ಸಮಾನ ಮಾಸಿಕ ಕಂತುಗಳಲ್ಲಿ ಖರ್ಚು ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ. ಈ ವರ್ಷದ ಅಕ್ಟೋಬರ್ ತಿಂಗಳ 7ನೇ ಕಂತಿನ ಬಿಡುಗಡೆಯೊಂದಿಗೆ ರಾಜ್ಯಗಳಿಗೆ ಬಿಡುಗಡೆಯಾದ ಕಂದಾಯ ಕೊರತೆ ಅನುದಾನದ ಒಟ್ಟು ಮೊತ್ತ 50 ಸಾವಿರದ 282 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
Post a Comment