ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸುಮಾರು 15 ಅಡಿ ಎತ್ತರದ ಶಿವಲಿಂಗದಿಂದ ಕವರ್ ತೆಗೆದು ರಿಮೋಟ್ ಮೂಲಕ ಮಹಾಕಾಲ್ ಲೋಕವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಅಕ್ಟೋಬರ್ 11, 2022
7:58PM

ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸುಮಾರು 15 ಅಡಿ ಎತ್ತರದ ಶಿವಲಿಂಗದಿಂದ ಕವರ್ ತೆಗೆದು ರಿಮೋಟ್ ಮೂಲಕ ಮಹಾಕಾಲ್ ಲೋಕವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

AIR ನಿಂದ ಟ್ವೀಟ್ ಮಾಡಲಾಗಿದೆ
ಪ್ರಧಾನಿ ನರೇಂದ್ರ ಮೋದಿ ಅವರು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸುಮಾರು 15 ಅಡಿ ಎತ್ತರದ ಶಿವಲಿಂಗದಿಂದ ರಿಮೋಟ್ ಮೂಲಕ ಕವರ್ ತೆಗೆದು ಮಹಾಕಾಲ್ ಲೋಕವನ್ನು ಉದ್ಘಾಟಿಸಿದರು. ಅವರು ಮಹಾಕಾಲ ಲೋಕಕ್ಕೆ ಭೇಟಿ ನೀಡಿ ಮಹಾಕಾಲ ಲೋಕದ ವಿವಿಧ ಕಾಮಗಾರಿಗಳ ಬಗ್ಗೆ ವಿಚಾರಿಸಿದರು. ಇ-ಕಾರ್ಟ್ ಮೂಲಕ ಮಹಾಕಾಲ್ ನೈಟ್ ಗಾರ್ಡನ್‌ಗೂ ಪ್ರಧಾನಿ ಭೇಟಿ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಸುಮಾರು 750 ಜನಪದ ಕಲಾವಿದರು ಕೂಡ ತಮ್ಮ ಕಲೆಯನ್ನು ಪ್ರದರ್ಶಿಸಿದರು.

ಇದಕ್ಕೂ ಮುನ್ನ ಮೋದಿ ಅವರು ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಮಂತ್ರಿಯವರು ಭಗವಾನ್ ಶ್ರೀ ಮಹಾಕಾಳನ್ನು ಪೂರ್ಣ ಭಕ್ತಿಯಿಂದ ಪೂಜಿಸಿದರು ಮತ್ತು ಆರತಿ ಮಾಡಿದರು.



ಉದ್ಘಾಟನಾ ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಪಾಲ ಮಂಗುಭಾಯ್ ಪಟೇಲ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉಪಸ್ಥಿತರಿದ್ದರು.

Post a Comment

Previous Post Next Post