ಉತ್ತರ- ಆಶ್ವಯುಜ ಅಮಾವಾಸ್ಯೆ
2. ಈ ಸಲದ ಗ್ರಹಣ ಯಾವ ದಿನಾಂಕ ಬರುತ್ತದೆ?
ಉತ್ತರ – 25.10.22 ಮಂಗಳವಾರ
3. ಈ ಸಲದ ಗ್ರಹಣ ಯಾವ ನಕ್ಷತ್ರದಲ್ಲಿ ಬರುತ್ತೆ?
ಉತ್ತರ – ಚಿತ್ತಾ ನಕ್ಷತ್ರ, ತುಲಾ ರಾಶಿ
4. ಈ ಸಲದ ಗ್ರಹಣ ಕಾಲದಲ್ಲಿ ಯಾವ ಯಾವ ರಾಶಿಗಳಿಗೆ ಅಶುಭಫಲವಿದೆ?
ಉತ್ತರ – ಅಶುಭ ಫಲ – ತುಲಾ, ಕರ್ಕ, ವೃಶ್ಚಿಕ, ಮೀನ ರಾಶಿ
5. ಈ ಸಲದ ಗ್ರಹಣ ಸಮಯ ಬೆಂಗಳೂರಿನಲ್ಲಿ ಯಾವ ಸಮಯದಲ್ಲಿರುತ್ತದೆ?
ಉತ್ತರ – ಬೆಂಗಳೂರಿನಲ್ಲಿ ಸಂಜೆ 5.12pm to 6.20pm
6. ತರ್ಪಣಾಧಿಕಾರಿಗಳು ಯಾವ ಸಮಯದಲ್ಲಿ ತರ್ಪಣ ಕೊಡಬೇಕು?
ಉತ್ತರ – 5.47 pm
7. ಈ ಸಲದ ಗ್ರಹಣ ದೋಷ ಇರುವವರು ಯಾವ ದಾನ ಮಾಡಬೇಕು?
ಉತ್ತರ – ಹುರಳೀ ದಾನ
8. ಸೂರ್ಯಗ್ರಹಣದ ಮುಂಚಿನ ಎಷ್ಟು ಸಮಯದ ಮುಂಚೆ ವೇದಾರಂಭವಾಗುತ್ತೆ?
ಉತ್ತರ – ಗ್ರಹಣಾರಂಭಕ್ಕೆ 12 ಹನ್ನೆರಡು ಗಂಟೆ ಮುಂಚೆ
9. ಗ್ರಹಣ ಸಮಯದಲ್ಲಿ ಹಾಲು, ಮೊಸರು, ತರಕಾರಿ ಮುಂತಾದವುಗಳು ಹಾಳಾಗದಂತೆ ಅವುಗಳ ಮೇಲೆ ಏನನ್ನು ಹಾಕಬೇಕು?
ಉತ್ತರ – ದರ್ಬೆ
10. ಗ್ರಹಣ ಹಿಡಿಯುವ ದಿನ ಯಾವ ಯಾವ ಸಮಯದಲ್ಲಿ ಸ್ನಾನ ಮಾಡಬೇಕು?
ಉತ್ತರ – ಗ್ರಹಣ ಸ್ಪರ್ಶ ಸಮಯದಲ್ಲಿ ಮತ್ತು ಗ್ರಹಣ ಮೋಕ್ಷ ನಂತರ (ಆಯಾ ಪ್ರದೇಶದ ಸಮಯ ಅಂತರ್ಜಾಲ ಮೂಲಕ ತಿಳಿದುಕೊಳ್ಳಿ)
11. ತರ್ಪಣಾಧಿಕಾರಿಗಳು ಯಾವ ನೀರಿನಿಂದ ತರ್ಪಣ ನೀಡಬೇಕು?
ಉತ್ತರ – ನಿರ್ಮಾಲ್ಯತೀರ್ಥದಿಂದ . ನಿರ್ಮಾಲ್ಯ ತೀರ್ಥ ಇಲ್ಲದ ಪಕ್ಷದಲ್ಲಿ ಶುದ್ಧವಾದ ನೀರು ಉಪಯೋಗಿಸಿ. ಸಂಕಲ್ಪಕ್ಕೆ ಉಪಯೋಗಿಸಿದ ನೀರು ಅರ್ಘ್ಯ , ತರ್ಪಣ, ಪೂಜೆಗೆ ಉಪಯೋಗಿಸಬಾರದು.
12. ಗ್ರಹಣದ ದಿನ ಯಾವಾಗ ಅಡುಗೆ ಮಾಡಬೇಕು?
ಉತ್ತರ – ಗ್ರಹಣ ಮೋಕ್ಷಾನಂತರ ಸ್ನಾನ ಮಾಡಿ ನಂತರ ತಯಾರಿಸಬೇಕು. ಆದರೆ ಈ ಸಲ ಗ್ರಹಣ ಮೋಕ್ಷಾನಂತರದಲ್ಲಿ ಸೂರ್ಯಾಸ್ತ ಆಗಿರುವುದರಿಂದ ಬರೀ ಸ್ನಾನ ಅಷ್ಟೇ. ಮಾರನೇ ದಿನ ಬೆಳಿಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜೆ ಮಾಡಿ ಆಹಾರ ಸ್ವೀಕರಿಸಬಹುದು.
13. ಬೆಳಿಗ್ಗೆ ಅಡಿಗೆ ಮಾಡಿ ಮುಚ್ಚಿಟ್ಟು ದರ್ಬೆ ಹಾಕಿಟ್ಟು ಗ್ರಹಣ ಮೋಕ್ಷ ನಂತರ ಸ್ನಾನ ಮಾಡಿ ಊಟ ಮಾಡಬಹುದಾ?
ಉತ್ತರ : ಬೇಡ. ಹಾಲು, ಮೊಹರು, ನೀರು ಮುಂತಾದ ಪದಾರ್ಥಗಳನ್ನು ಮಾತ್ರ ದರ್ಬೆ ಹಾಕಿಟ್ಟು ನಂತರ ಉಪಯೋಗಿಸಬಹುದು.
14. ತರಕಾರಿ ಗ್ರಹಣ ಮುನ್ನ ತಂದಿಟ್ಟು ಹೆಚ್ಚಿಕೊಂಡಿರಬಹುದಾ?
ಉತ್ತರ : ಆಗಬಹುದು
15. ಗ್ರಹಣದ ದಿನ ಹಸ್ತೋದಕ ಯಾವಾಗ ಕೊಡಬೇಕು?
ಉತ್ತರ – ಗ್ರಹಣ ದಿನ ಹಸ್ತೋದಕ ಇಲ್ಲ ಏಕೆಂದರೆ ಯತಿಗಳು ಗ್ರಹಣ ದಿನ ಉಪವಾಸವಿರುತ್ತಾರೆ.
16. ಸೂತಕ ಇದ್ದವರು ಮತ್ತು ರಜಸ್ವಲೆಯಾದವರು ಸ್ನಾನ ಮಾಡಬಹುದಾ ಬೇಡವಾ?
ಉತ್ತರ – ಮಾಡಬೇಕು
17. ಈ ಸಲದ ಆಶ್ವಯುಜ ಅಮಾವಾಸ್ಯೆ ಶ್ರಾದ್ದವಿದ್ದವರು ಎಂದು ಮಾಡಬೇಕು?
ಉತ್ತರ – ಈ ಸಲದ ಅಮಾವಾಸ್ಯೆ ಶ್ರಾದ್ಧವಿರುವವರು 26.10.22ರಂದು ಸೂರ್ಯೋದಯ ನಂತರ ಮಾಡಬೇಕು.
18 ಸೂರ್ಯಗ್ರಹಣದ ಸೂರ್ಯನ ನೇರ ನೋಡಬಹುದಾ?
ಉತ್ತರ – ನೇರ ನೋಡಬಾರದು
19. ಈ ಗ್ರಹಣದ ಸಂದರ್ಭದಲ್ಲಿ ಯಾವ ಯಾವ ಸ್ತೋತ್ರ ಪಾರಾಯಣ ಮಾಡಬಹುದು?
ಉತ್ತರ – ವಿಷ್ಣು ಸಹಸ್ರನಾಮ, ವಾಯು ಸ್ತುತಿ, ರಾಯರ ಸ್ತೋತ್ರ ಗಾಯತ್ರಿ ಜಪ, ವೇದ ಪಾರಾಯಣ,
ಹೆಂಗಸರು ಕೇಶವನಾಮ, ಮಧ್ವನಾಮ, ಲಕ್ಷ್ಮೀ ಶೋಭಾನೆ, ಇತ್ಯಾದಿ.
20. ಹೆಂಗಸರು ಗಾಯತ್ರಿ ಜಪ ಮಾಡಬಹುದಾ?
ಉತ್ತರ – ಮಾಡಬಾರದು. ಹೆಂಗಸರು ಗಾಯತ್ರಿ ಜಪಕ್ಕೆ ಯಾವಾಗಲೂ ಅನರ್ಹರು.
21. ಗ್ರಹಣ ಸಮಯದಲ್ಲಿ ಏನೇನು ಮಾಡಬಾರದು?
ಉತ್ತರ – ನಿದ್ದೆ, ಊಟ, ತಿಂಡಿ, ಮಲಮೂತ್ರ ವಿಸರ್ಜನೆ , ಮೈಥುನ ನಿಷಿದ್ಧ. ಅದರಿಂದ ಅನಾರೋಗ್ಯವಾಗುತ್ತೆ. ಈ ಸಂದರ್ಭದಲ್ಲಿ ಗರ್ಭ ಧರಿಸಿದರೆ ಆ ಮಗುವಿಗೆ ಅಂಗವಿಕಲತೆಯಾಗುವ ಸಂದರ್ಭ ಬರಬಹುದು.
22. ಎಷ್ಟು ಗಂಟೆಯವರೆಗೆ ಊಟ ಮಾಡಬಹುದು.
ಉತ್ತರ – ಈದಿನ ಯಾವುದೇ ಆಹಾರ ಸ್ವೀಕರಿಸುವಂತಿಲ್ಲ. ಅಶಕ್ತರು, ಬಸುರಿ,ಬಾಣಂತಿಯರು, ಮತ್ತು ಎಂಟು ವರ್ಷದ ಒಳಗಿನ ಮಕ್ಕಳು 25.10.22 ಸೂರ್ಯ ಗ್ರಹಣದ ಮೂರು ಗಂಟೆ ಮುನ್ನ ಮಾಡಬಹುದು.
23. ಯಾರು ಅಶಕ್ತರು ?
ಉತ್ತರ – ಬಸುರಿ, ಬಾಣಂತಿ, ೮೦ ವರ್ಷ ದಾಟಿದವರು, ೮ ವರ್ಷದ ಒಳಗಿನ ಮಕ್ಕಳು, ಮತ್ತು ಕಾಯಿಲೆಯಿಂದ ಅಸ್ವಸ್ಥರಾದವರು
24 ಗ್ರಹಣಾನಂತರ ಪೂಜೆಗೆ ಹಿಂದಿನ ದಿನ ಒಣಹಾಕಿದ್ದ ಬಟ್ಟೆ ಉಡಬಹುದಾ?
ಉತ್ತರ – ಇಲ್ಲ. ಗ್ರಹಣಾನಂತರ ಪೂಜೆಗೆ ಹಿಂದಿನ ದಿನ ಹಾಕಿದ್ದ ಬಟ್ಟೆ ಉಡುವಂತಿಲ್ಲ. ನೀರೂ ಕೂಡ ಉಪಯೋಗಿಸುವಂತಿಲ್ಲ. ಸ್ನಾನ ಮಾಡಿ ಮತ್ತೆ ಬಟ್ಟೆಯ ಚೆನ್ನಾಗಿ ಹಿಂಡಿ ಏಳು ಸಲ ಜಾಡಿಸಿ ಉಪಯೋಗಿಸಿ.
25. ರಜಸ್ವಲೆಯಾದವರು ಗ್ರಹಣ ಸಮಯದಲ್ಲಿ ಸ್ನಾನ ಮಾಡುವ ವಿಧಾನವೇನು?
ಉತ್ತರ – ಅವರು ನದೀ, ಬಾವಿಯಲ್ಲಿ ಮಾಡುವಂತಿಲ್ಲ. ಬೇರೆಯವರು ತುಂಬಿಸಿಟ್ಟಿದ್ದ ನೀರಿನಲ್ಲಿ ಸ್ನಾನಗೈದು ದೇವರ ಸ್ಮರಣೆ ಮಾಡಬೇಕು. ಬೇರಾರನ್ನೂ ಮುಟ್ಟುವಂತಿಲ್ಲ.
26. ಜಾತಾಶೌಚ ಮತ್ತು ಮೃತಾಶೌಚ ಇರುವವರು ಹೇಗೆ ಆಚರಿಸಬೇಕು?
ಉತ್ತರ – ಅವರೂ ಸ್ನಾನ ಮಾಡಬೇಕು. ಬಾವಿ, ನದೀ, ಸರೋವರದಲ್ಲಿ ಬೇಡ. ಮನೆಯಲ್ಲಿ ಮಾಡಿ. ಮೃತಾಶೌಚವಿರುವವರು ಬೇರೆಯವರನ್ನು ಮುಟ್ಟುವಂತಿಲ್ಲ. ತಮ್ಮಷ್ಟಕ್ಕೇ ಶುದ್ಧಿಯಾಗಿ ಹರಿಸ್ಮರಣೆ ಮಾಡಿ.
ದಾನಧರ್ಮ ಮಾಡುವಂತಿಲ್ಲ ಸ್ವೀಕರಿಸುವಂತಿಲ್ಲ. ಅವರು ಬೇರೆಯವರಿಗೆ ನಮಿಸುವಂತಿಲ್ಲ. ಬೇರೆಯವರೂ ಅಶೌಚವಿರುವವರಿಗೆ (ಯಾವ ಸಂದರ್ಭದಲ್ಲೂ) ನಮಿಸುವಂತಿಲ್ಲ.
27. ಗ್ರಹಣ ನಿಮಿತ್ತ ದಾನ ಯಾವಾಗ ಕೊಡಬೇಕು?
ಉತ್ತರ – ಗ್ರಹಣ ಮಧ್ಯಕಾಲದಲ್ಲಿ ಕೊಡತಕ್ಕದ್ದು. ಅಕಸ್ಮಾತ್ ಆ ಸಮಯದಲ್ಲಿ ಕೊಡಲಾಗದಿದ್ದರೆ ಸಂಕಲ್ಪ ಮಾಡಿ ತೆಗೆದಿಟ್ಟು ನಂತರ ಕೊಡಬಹುದು
28. ತರ್ಪಣಾಧಿಕಾರಿಗಳು ಅಂದರೆ ಯಾರು ?
ಉತ್ತರ – ತಂದೆ ಇಲ್ಲದವರು. ತಂದೆ ಸತ್ತು ಒಂದು ವರ್ಷ ಆಗಿದ್ರೆ ಮಾತ್ರ. (ತಾಯಿ ಸತ್ತಿದ್ದು ತಂದೆ ಇದ್ದರೆ ತರ್ಪಣ ಇಲ್ಲ.)
29. ಗ್ರಹಣ ಸಮಯದಲ್ಲಿ ದೇವರ ಪೂಜೆ ಮಾಡಬಹುದೇ?
ಉತ್ತರ ; ಗ್ರಹಣ ಸಮಯದಲ್ಲಿ ಸ್ನಾನ ಮಾಡಿ, ಗೋಪೀಚಂದನ ಹಚ್ಚಿ, ನಿರ್ಮಾಲ್ಯ ವಿಸರ್ಜನೆ ಮಾಡಿ, ಜಪ, ಪಾರಾಯಣ, ಮಾಡಿ. ಪೂಜೆ ಗ್ರಹಣ ಮೋಕ್ಷ ನಂತರವೇ ಮಾಡಬೇಕು. ಆದರೆ ಈ ಸಲ ಪೂಜೆ ಇಲ್ಲ. ಮಾರನೇ ದಿನ ಬೆಳಿಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜಿಸಬೇಕು.
30. ಗ್ರಹಣ ಸಮಯದಲ್ಲಿ ಧರಿಸಿದ ವಸ್ತ್ರ ಸ್ನಾನಾನಂತರ ಧರಿಸಬಹುದೇ?
ಉತ್ತರ : ಅವುಗಳನ್ನು ನೆನೆಸಬೇಕು. ಬೇರೆ ವಸ್ತುಗಳನ್ನು ಧರಿಸಿ..
31. ಗ್ರಹಣ ಸಮಯದಲ್ಲಿ ಕೆಲವರು ಆಫೀಸಿನಲ್ಲಿ ಇರಲೇಬೇಕಾಗತ್ತೆ. ಅಥವಾ ಪ್ರಯಾಣದಲ್ಲಿರಬೇಕಾಗತ್ತೆ. ಆ ಸಮಯದಲ್ಲಿ ಸ್ನಾನಕ್ಕೆ ಅವಕಾಶವಿರದಾಗ ಏನು ಮಾಡಬೇಕು?
ಉತ್ತರ : ಸಾಧ್ಯವಾದಷ್ಟೂ ಪ್ರಯತ್ನಿಸಿ. ಅಸಾಧ್ಯವಿದ್ದಲ್ಲಿ, ಕನಿಷ್ಠ ಮಾನಸಿಕವಾಗಿ ಸ್ನಾನ ಮಾಡಿ, ಮನಸ್ಸಿನಲ್ಲೇ ಎಷ್ಟು ಸಾಧ್ಯವೋ ಅಷ್ಟು ಹರಿಧ್ಯಾನ ಮಾಡಿ. ಆಹಾರ ಸೇವಿಸದಿರಿ .
32 ಗ್ರಹಣ ಸಮಯದಲ್ಲಿ ಧರಿಸುವ ಧಾವಳಿ ನೆನೆಸಬಹುದೇ?
ಉತ್ತರ – ದಾವಳಿ ನೆನೆಸಿದರೆ ಮತ್ತೆ ಮಡಿಗೆ ಉಪಯೋಗಕ್ಕೆ ಬರಲ್ಲ.
33 ಗ್ರಹಣ ಸಮಯದಲ್ಲಿ ಭೋಜನ ಮಾಡಿದರೆ ಏನೂ ಆಗಲ್ಲ ಅದೆಲ್ಲ ಮೂಡನಂಬಿಕೆ ಎನ್ನುತ್ತಾರಲ್ಲ ?
ಉತ್ತರ : ಗ್ರಹಣ ಸಮಯದಲ್ಲಿ ಆಹಾರದ ಮೇಲೆ ಪರಿಣಾಮ ಬೀಳಲಿರುವ ಕಿರಣಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅದಕ್ಕೇ ಭುಂಜಿಸಬಾರದು
34 ಈ ಸಲ ಮಾರನೇ ದಿನ ಬಲಿಪಾಡ್ಯಮಿ ಇರುವುದರಿಂದ ಅವತ್ತು ಎಣ್ಣೆ ನೀರು ಹಾಕಿಕೊಳ್ಳಬಹುದಾ ?
ಉತ್ತರ: ಹಾಕಿಕೊಳ್ಳಬಹುದು
35. ಗ್ರಹಣ ಕಾಲದಲ್ಲೇ ಸಂಧ್ಯಾವಂದನೆ ಮಾಡಬಹುದಾ ?
*ಉತ್ತರ* – ಮಾಡಬಹುದು
ಒಟ್ಟಿನಲ್ಲಿ ಗ್ರಹಣವೆಂದು ಹೆದರಿಕೆ ಬೇಡ. ಇದು ನಿಮ್ಮ ಹೆಚ್ಚಿನ ಸಾಧನೆಗೆ, ಪುಣ್ಯಪ್ರಾಪ್ತಿಗೆ ಸಹಾಯಕಾರಿ
ಸಂಗ್ರಹ – ನರಹರಿ ಸುಮಧ್ವ
(ಆಧಾರ – ನಮ್ಮ ತಂದೆ ಶ್ರೀ SN ರಾಮಚಂದ್ರಾಚಾರ್ಯರ. ಮಾರ್ಗದರ್ಶನ ಮತ್ತು ಹಲವಾರು ಮಠಗಳ ಪಂಚಾಂಗ, ಶ್ರೀ ಚತುರ್ವೇದಿ ವೇದವ್ಯಾಸಾಚಾರ್ಯರ ಲೇಖನ, ಹಲವಾರು ಲೇಖನಗಳು)
SURYA GRAHANA ON 25.10.2022*
*Grahana Phala for this Surya Grahana*
Shubha : Dhanu, Makara, Vrushaba, Simha,
Mishra :Kanya, Kumbha, Mesha, Mithuna Ashubha : Tula, Karka, Vruschika, Meena
Tula Rashi & Chitta Nakshatra, Swati Nakshatra have Vishesha Ashubha phala
ಶುಭ ಫಲ – ಧನು, ಮಕರ, ವೃಷಭ, ಸಿಂಹ, ರಾಶಿ
ಮಿಶ್ರ ಫಲ – ಕನ್ಯಾ,ಕುಂಭ, ಮೇಷ, ಮಿಥುನ ರಾಶಿ
ಅಶುಭ ಫಲ – ತುಲಾ, ಕರ್ಕ, ವೃಶ್ಚಿಕ, ಮೀನ ರಾಶಿ
ವಿಶೇಷ ಅಶುಭ ಫಲ – ತುಲಾ ರಾಶಿ, ಚಿತ್ತಾ ನಕ್ಷತ್ರ, ಸ್ವಾತಿ ನಕ್ಷತ್ರ – ಅವರು ಹೆಚ್ಚಿನ ಜಪ, ಪಾರಾಯಣ ಮಾಡಬೇಕು
*Grahana sparsha time for different places*
Bangalore : 5.12 pm
Mysore. : 5.13 pm
Kolar. : 5.12 pm
Bellary. : 5.04 pm
Belgaum. : 5.00 pm
Chennai. : 5.14 pm
Coimbatore. : 5.18pm
Hyderabad : 4.59 pm
Bagalkot. : 5.00 pm
Gulbarga. : 4.57 pm
Kurnool. : 5.02 pm
Hindupur : 5.09 pm
Chittoor. : 5.13 pm
Tirupati. : 5.11 pm
Mumbai. : 4.48 pm
Pune. : 4.51 pm
ಆಯಾ ಪ್ರದೇಶದ ಈ ಸಮಯದ ನಂತರ ಕೂಡಲೇ ಗ್ರಹಣಸ್ಪರ್ಶ ಸ್ನಾನ ಮಾಡುವುದು. ಗ್ರಹಣ ಮೋಕ್ಷ ನಂತರ ಅಂದರೆ 6.20ರ ನಂತರ ಸ್ನಾನ ಮಾಡುವುದು. ಆದರೆ ಪಲಾಹಾರ ಭೋಜನ ಇಲ್ಲ.
ಮಧ್ಯ ಕಾಲ : 05.47 PM
ಸೂರ್ಯಾಸ್ತ ಕಾಲ : 5.57 pm
( ಬೆಂಗಳೂರು )
ಮೋಕ್ಷ ಕಾಲ :6.20 pm
(ಸೂರ್ಯಾಸ್ತ ನಂತರ)
ಗ್ರಹಣದ ಒಟ್ಟು ಕಾಲ : 57 ನಿಮಿಷ
*ವೇಧಾರಂಭ* : 25-10-2022, ಮಂಗಳವಾರ ಸೂರ್ಯೋದಯದಿಂದಲೇ ವೇಧಾರಂಭವಾಗುತ್ತದೆ.
ಶಕ್ತಿಯಿದ್ದವರು ಸುವರ್ಣ, ರಜತ ದಾನ ಮಾಡಿ. ಇಲ್ಲದವರು ಒಂದು ಬಟ್ಟಲಲ್ಲಿ ಅಥವಾ ದೊನ್ನೆಯಲ್ಲಿ ಹುರಳೀ ಯಥಾಶಕ್ತಿ ದಕ್ಷಿಣೆ ಸಹಿತ ದಾನ ಮಾಡಿ.
ಗ್ರಹಣ ಸಮಯದಲ್ಲಿ ಸಾಧ್ಯವಾದಷ್ಟೂ ಸಾಧನೆ ಮಾಡಿಕೊಳ್ಳಿ ಅಧಿಕ ಪುಣ್ಯ ಗಳಿಸಿ.
ಸೂರ್ಯ ಗ್ರಹಣ ಸ್ನಾನ ಸಂಕಲ್ಪ :
ಆಚಮನ, ಕೇಶವಾಯ ಸ್ವಾಹಾ, ನಾರಾಯಣಾಯ ಸ್ವಾಹಾ;
ಮಾಧವಾಯ ಸ್ವಾಹಾ, ಗೋವಿಂದಾಯ ನಮ: ,……….ಹರಯೇ ನಮ:| ಓಂ ಶ್ರೀಕೃಷ್ಣಾಯ ನಮ: |
ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ………
ಶ್ರೀ ……. ನಾಮ ಸಂವತ್ಸರೇ, …. ಆಯನೇ, ….. ಋತೌ. , ಕೃಷ್ಣ ಪಕ್ಷೇ, ಅಮಾವಾಸ್ಯಾಂ ………ವಾಸರೇ, …ನಕ್ಷತ್ರ, ,…. ಯೋಗ, ……. ಕರಣ, ಏವಂಗುಣ ವಿಶೇಷಣ ವಿಶಿಷ್ಟಾಯಾಂ, ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ (ಮನೆದೇವರು),ಪ್ರೇರಣಯಾ, ……. ಪ್ರೀತ್ಯರ್ಥಂ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥಂ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, _______ಸನ್ನಿಧೌ, (ಕ್ಷೇತ್ರದೈವ), ಏವಂಗುಣ.. ಸೂರ್ಯಗ್ರಹಣ ನಿಮಿತ್ತ ಸೂರ್ಯ ಗ್ರಹ ಪೀಡಾ ಪರಿಹಾರಾರ್ಥಂ …ಮಾಸ ನಿಯಾಮಕ ಶ್ರೀ .…. ಶ್ರೀ ಲಕ್ಷ್ಮೀ ನರಸಿಂಹ/ ವೇಂಕಟೇಶ ಪ್ರೀತ್ಯರ್ಥಂ ಸ್ನಾನಂ ಕರಿಷ್ಯೇ.
*ರಾಹು ಕೇತು ಯಾರು* ?
ಭಾರತೀಯ ಪುರಾಣಗಳಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣಗಳನ್ನು ರಾಹು-ಕೇತುಗಳ *ಸಂಕ್ರಮಣವೆಂದು* ಹೇಳಲಾಗಿದೆ.. ಮೂಲತಃ: ರಾಹುಕೇತು *ಸ್ವರ್ಭಾನು* ಎಂಬ ದೈತ್ಯ. ಸಮುದ್ರಮಥನ ವೇಳೆ ಬಂದ ಅಮೃತವನ್ನು ಮೋಹಿನಿ ರೂಪದಲ್ಲಿ ಶ್ರೀಹರಿಯು ಹಂಚುವಾಗ ದೇವತೆಗಳು ಒಂದು ಸಾಲು ಮತ್ತು ದೈತ್ಯರು ಒಂದು ಸಾಲಿನಲ್ಲಿ ಕುಳ್ಳಿರಿಸಿ ಕಣ್ಣು ಮುಚ್ಚಿಕೊಂಡು ಕೂಡುವಂತೆ ಹೇಳುತ್ತಾನೆ. ರಾಕ್ಷಸರಿಗೆ ಅಮೃತ ಪಡೆಯಲು ಯೋಗ್ಯತೆ ಇಲ್ಲದ್ದರಿಂದ ವಿಷ್ಣು ಮೋಹಿನಿ ರೂಪ ತಾಳಿ ದೇವತೆಗಳಿಗೆ ಮಾತ್ರ ಅಮೃತ ನೀಡುತ್ತಿರುತ್ತಾನೆ. ದೇವತೆಗಳಿಗೆ ಅಮೃತ ನೀಡಿದರೆ ದೈತ್ಯರಿಗೆ ಬರೀ ಗೆಜ್ಜೆ ಸಪ್ಪಳ ಕೇಳಿಸುತ್ತದೆ. ವಿಷ್ಣುವಿನ ಮೋಹಿನಿ ರೂಪ ಮತ್ತು ಆತ ರಾಕ್ಷಸರಿಗೆ ಮಾಡುತ್ತಿರುವ ವಂಚನೆ ಸ್ವರ್ಭಾನುವಿಗೆ ಗೊತ್ತಾಗಿ ಅವನು ದೇವತೆಗಳ ಸಾಲಿಗೆ ಹೋಗಿ ಕುಳಿತು ಮೋಹಿನಿ ಕೈಯಿಂದ ಅಮೃತ ಪಡೆಯುತ್ತಾನೆ. ಇದನ್ನು ಸೂರ್ಯ ಮತ್ತು ಚಂದ್ರರು ನೋಡಿ ವಿಷ್ಣುವಿನ ಗಮನಕ್ಕೆ ತರುತ್ತಾರೆ. ಆಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸ್ವರ್ಭಾನುವಿನ ತಲೆ ಕಡಿಯುತ್ತಾನೆ. ರುಂಡ ಮತ್ತು ಮುಂಡ ಬೇರ್ಪಡುತ್ತದೆ ಅಷ್ಟೇ. ರುಂಡವನ್ನ *ರಾಹು* ಎಂದೂ ಮುಂಡವನ್ನು *ಕೇತು” ಎಂದೂ ಕರೆಯಲಾಗುತ್ತದೆ. ಆದರೆ, ಅಷ್ಟರಲ್ಲೇ ಅವನು ಅಮೃತ ಪಾನ ಮಾಡಿರುತ್ತಾನೆ. ಸ್ವರ್ಭಾನು ದೈತ್ಯನಾದರೂ ತನ್ನ ಬಾಯಿಗೆ ಅಮೃತ ಬೀಳಲೆಂದು ಶಿವನಲ್ಲಿ ತಪಗೈದಿರುತ್ತಾನೆ. ಅದೇ ರೀತಿ ಇಲ್ಲಿ ಅವನ ಬಾಯಿಗೆ ಅಮೃತ ಬಿದ್ದಿರುತ್ತದೆ, ಆದರೆ ಕಂಠದಿಂದ ಕೆಳಗೆ ಬೀಳುವ ಮೊದಲೇ ಶಿರಚ್ಛೇದ ಆಗಿರುತ್ತದೆ. ಅವನ ಬಾಯಿಯಲ್ಲಿ ಅಮೃತ ಬೀಳುವ ವರವೂ ಪೂರ್ಣವಾಯಿತು. ಅಮೃತ ಬಿದ್ದಿದ್ದರಿಂದ ಮುಖದ ಭಾಗ ರಾಹುವಾಗಿಯೂ, ಕಂಠದ ಕೆಳಗಿನ ಭಾಗವು ಕೇತುವಾಗಿಯೂ ನವಗ್ರಹಗಳಲ್ಲಿ ಸೇರಿ ಪೂಜೆಗೊಳ್ಳುತ್ತಾರೆ. ಸೂರ್ಯ ಚಂದ್ರರು ವಿಷ್ಣುವಿಗೆ ಹೇಳಿ ತಮ್ಮನ್ನು ಶಿಕ್ಷಿಸಿದ್ದರಿಂದ ಅವರು ಸೂರ್ಯ ಚಂದ್ರರನ್ನು ಆಗಾಗ್ಗೆ ಕಾಡುತ್ತಾರೆ. . ಅದೇ *ಸೂರ್ಯಗ್ರಹಣ* ಮತ್ತು *ಚಂದ್ರಗ್ರಹಣ* ಎಂದು ಪುರಾಣ ಕಥೆಗಳು ಹೇಳುತ್ತವೆ. ವೈಜ್ಞಾನಿಕವಾಗಿ ನೋಡಿದಾಗ ಭೂಮಿ ಮತ್ತು ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯ ಮರೆಯಾದರೆ ಅದು ಸೂರ್ಯಗ್ರಹಣವೆನಿಸುತ್ತದೆ.
ವಾಸ್ತವವಾಗಿ ವೈಜ್ಞಾನಿಕವಾಗಿ ಕೂಡ ನಭೋಮಂಡಲದಲ್ಲಿ ಸೂರ್ಯಗ್ರಹದ ಸುತ್ತ ಭೂಮಿ ಸುತ್ತುತ್ತಿದೆ, ಭೂಮಿಯ ಸುತ್ತ ಚಂದ್ರಗ್ರಹ ಸುತ್ತುತ್ತಿದೆ. ಈ ಅಂಡಾಕಾರದ ಪರಿಕ್ರಮದ ಮಾರ್ಗವನ್ನು ಮಧ್ಯದಿಂದ ವಿಭಜಿಸುವ ಒಂದು ಸರಳರೇಖೆಯುಂಟು… ಆ ಸರಳ ರೇಖೆಯ ಎರಡು ತುದಿಗಳೇ ರಾಹು ಮತ್ತು ಕೇತು ಎಂಬ ಎರಡು ಬಿಂದುಗಳು… ವಿಷ್ಣು ಸ್ವರ್ಭಾನು ಎಂಬ ಅಸುರನನ್ನು ಕೊಂದಾಗ, ರುಂಡವಿರುವ ಭಾಗ ಒಂದು ಬಿಂದು, ಮುಂಡವಿರುವ ಭಾಗ ಇನ್ನೊಂದು ಬಿಂದುವಾಗಿದೆ
ಈ ಸರಳ ರೇಖೆಯನ್ನೇ ಮಧ್ಯಂತರ ರೇಖೆಯಾಗಿರಿಸಿಕೊಂಡು (Equatorial Point) ಎಂಬಂತೆ ನವಗ್ರಹಗಳು ಸೂರ್ಯನ ಸುತ್ತಲೂ ಸುತ್ತುವುದರ ಮತ್ತು ನಕ್ಷತ್ರ ಹಾಗೂ ರಾಶಿಗಳ ವಿಭಜನೆಗೆ ಈ ರೇಖೆ ಸಂಕೇತವಾಗಿದೆ. .ರಾಹು – ಕೇತುಗಳು ಸ್ವತಃ ಗ್ರಹಗಳಲ್ಲದಿದ್ದರೂ ಅವುಗಳ ಸಮಾನ ರೇಖೆಯಲ್ಲಿ ಒಮ್ಮೊಮ್ಮೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋದಾಗ “ಸೂರ್ಯಗ್ರಹಣ”ವಾಗುತ್ತದೆ.. ಅದು ಅಮಾವಾಸ್ಯೆ ದಿನದಂದು ನಡೆಯುತ್ತದೆ. ಅಥವಾ ಚಂದ್ರ ತಾನು ಭೂಮಿಯ ಸುತ್ತ ಸುತ್ತುವಾಗ ಸೂರ್ಯ ಮತ್ತು ಭೂಮಿಯೊಟ್ಟಿಗೆ ಸಮಾನಾಂತರ ರೇಖೆಯಲ್ಲಿ ಚಲಿಸುವಾಗ ಭೂಮಿಯ ಇನ್ನೊಂದು ಭಾಗದಲ್ಲಿ ಅಂದರೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುವ ಸಮಾನಾಂತರ ರೇಖೆಯಲ್ಲಿ ಹುಣ್ಣಿಮೆಯಂದು “ಚಂದ್ರಗ್ರಹಣ”ವಾಗುತ್ತದೆ . ಇದನ್ನೆ ಗ್ಲಹಣಗಳ ಸಂದರ್ಭದಲ್ಲಿ ಸೂರ್ಯ ಅಥವಾ ಚಂದ್ರರನ್ನು ರಾಹು ಕೇತುಗಳು ನುಂಗುತ್ತಾರೆ ಎನ್ನುತ್ತಾರೆ.
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
[19/10, 7:34 PM] pannangaraj1: ಇದರಲ್ಲಿ ನೀವು ಈಗಾ, ಸ್ಪರ್ಶ, ಮೋಕ್ಷ ಕಾಲ ಸ್ಪಷ್ಟ ಮಾಹಿತಿ ಕೊಟ್।। ಧನ್ಯವಾದಗಳು
Post a Comment