ಅಕ್ಟೋಬರ್ 04, 2022 | , | 8:15PM |
ಮಹಿಳಾ ಟಿ20 ಏಷ್ಯಾಕಪ್: ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಭಾರತ 104 ರನ್‌ಗಳಿಂದ ಯುಎಇ ವಿರುದ್ಧ ಜಯ ಸಾಧಿಸಿದೆ

ಇದಕ್ಕೂ ಮೊದಲು ಭಾರತ ಮಹಿಳಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಯಮಿತ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ವಿಶ್ರಾಂತಿ ನೀಡಲಾಗಿದ್ದು, ಸ್ಮೃತಿ ಮಂಧಾನ ತಂಡವನ್ನು ಮುನ್ನಡೆಸಿದ್ದಾರೆ. ಭಾರತ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 178 ರನ್ ಗಳಿಸಿತು, ಜೆಮಿಮಾ ರಾಡ್ರಿಗಸ್ 45 ಎಸೆತಗಳಲ್ಲಿ 11 ಬೌಂಡರಿ ಸೇರಿದಂತೆ ಅಜೇಯ 75 ರನ್ ಗಳಿಸಿದರು. ದೀಪ್ತಿ ಶರ್ಮಾ ಕೂಡ 49 ಎಸೆತಗಳಲ್ಲಿ 64 ರನ್ ಗಳಿಸಿ ನಿರ್ಣಾಯಕ ಪಾತ್ರ ವಹಿಸಿದರು. ಏತನ್ಮಧ್ಯೆ, ಯುಎಇ ಪರ ಛಾಯಾ ಮುಘಲ್, ಮಹಿಕಾ ಗೌರ್, ಇಶಾ ಓಜಾ ಮತ್ತು ಸುರಕ್ಷಾ ಕೊಟ್ಟೆ ತಲಾ ಒಂದು ವಿಕೆಟ್ ದಾಖಲಿಸಿದರು.
ಇಂದು ನಡೆದ ಇನ್ನೊಂದು ಪಂದ್ಯದಲ್ಲಿ ಶ್ರೀಲಂಕಾ ಥಾಯ್ಲೆಂಡ್ ತಂಡವನ್ನು 49 ರನ್ ಗಳಿಂದ ಸೋಲಿಸಿತು.
Post a Comment