ಬೈ(ಅ.25): ದಾಂಪತ್ಯದಲ್ಲಿನ ಸಣ್ಣ ಸಣ್ಣ ಜಗಳಗಳು, ಸಂಶಯಗಳು, ಅನುಮಾನಗಳು ಮುಂದೆ ಅನಾಹುತಕ್ಕೆ ಕಾರಣವಾಗುತ್ತದೆ. ಹೀಗೆ ಅನುಮಾನದ ಮೇಲೆ ಅಥವಾ ಆಕ್ರೋಶದ ವೇಳೆ ಪತಿಯನ್ನು ಕುಡುಕ ಅಥವಾ ಅಕ್ರಮ ಸಂಬಂಧ ಹೊಂದಿದವ ಎಂದು ಕರೆಯುವುದು ಕ್ರೌರ್ಯಕ್ಕೆ ಸಮ.ಇದು ಶಿಕ್ಷೆಗೆ ಅರ್ಹ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಹೀಗಾಗಿ ಸಂಶಯದ ಮೇಲೆ ಏನೋ ಕರೆದು ಎಡವಟ್ಟು ಮಾಡಿಕೊಳ್ಳಲು ಹೋಗಬೇಡಿ. ಕಾರಣ ಪತ್ನಿ ತಾನು ಮಾಡಿರುವ ಆರೋವನ್ನು ಸಾಬೀತುಪಡಿಸಲು ಸಾಧ್ಯವಾಗದೇ ಹೋದರೆ ಶಿಕ್ಷೆಗೆ ಗುರಿಯಾಗುತ್ತಾಳೆ. ಇದೀಗ ಗಂಡನ ವಿರುದ್ಧ ಸಿಟ್ಟಿನ ಭರದಲ್ಲಿ ಏನೋ ಹೇಳಿ ಸಂಕಷ್ಟಕ್ಕೆ ಸಿಲುಕಬೇಡಿ.
ಪುಣೆ ದಂಪತಿಗಳ ವಿಚ್ಚೇದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದೆ.ಜಸ್ಟೀಸ್ ನಿತಿನ್ ಜಮ್ದಾರ್ ಹಾಗೂ ಜಸ್ಟೀಸ್ ಶರ್ಮಿಳಾ ದೇಶಮುಖ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಪತ್ನಿಯಿಂದ ವಿಚ್ಚೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಪುಣೆ ಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ 50 ವರ್ಷದ ಮಹಿಳೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿ, ಮಹಿಳೆ ಛೀಮಾರಿ ಹಾಕಿದೆ.
Divorce: ಹೆಂಡತಿ ಮಾತ್ರವಲ್ಲ, ಗಂಡ ಬೇಕಾದರೂ ಕೇಳಬಹುದು ಜೀವನಾಂಶ, ಕಂಡೀಷನ್ಸ್ ಅಪ್ಲೈ
ಪತಿ ನಿವೃತ್ತಿ ಸೇನಾಧಿಕಾರಿ. ನನ್ನ ಪತಿ ಹಲವು ಅಕ್ರಮ ಸಂಬಂಧ ಹೊಂದಿದ್ದಾರೆ. ಜೊತೆಗೆ ಮದ್ಯವ್ಯಸನಿಯಾಗಿದ್ದಾರೆ. ಇದು ಸ್ತ್ರೀಯ ದಾಂಪತ್ಯ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ಕೋರಿದ್ದರು. ಬಾಂಬೆ ಹೈಕೋರ್ಟ್‌ನಲ್ಲಿ ಕಳೆದ ಕೆಲ ವರ್ಷದಿಂದ ವಿಚಾರಣೆ ನಡೆಯುತಿತ್ತು. ಮಹಿಳೆಯ ಅರ್ಜಿ ತಿರಸ್ಕರಿಸಿದ ಬಾಂಬೇ ಹೈಕೋರ್ಟ್, ಪತಿಯ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದು ಕೌರ್ಯಕ್ಕೆ ಸಮವಾಗಿದೆ ಎಂದಿದೆ.
ಪತಿಯ ಚಾರಿತ್ರ್ಯದ ವಿರುದ್ಧ ಸುಳ್ಳು ಆರೋಪದಿಂದ ಆತನಿಗೆ ಸಮಾಜದಲ್ಲಿರುವ ಘನತೆ ಹಾಗೂ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ. ಅನಗತ್ಯ ಹಾಗೂ ಮಾನಹಾನಿ ಆರೋಪಗಳಿಂದ ಪತಿ ಮಾನಸಿಕ ಯಾತನೆ ಅನುಭವಿಸುವಂತೆ ಮಾಡಲಾಗಿದೆ. ಪತಿಯ ಮೇಲೆ ಮಾಡಿರುವ ಆರೋಪಗಳಿಗೆ ಪತ್ನಿ ಯಾವುದೇ ದಾಖಲೆ ಸಲ್ಲಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಮಹಿಳೆಯ ವಾದವನ್ನು ಬಾಂಬೆ ಹೈಕೋರ್ಟ್ ತರಿಸ್ಕರಿಸಿತು.
ಗರ್ಭಿಣಿಯಾಗೋದು, ಆಗದೇ ಇರೋದು ಮಹಿಳೆಯ ಹಕ್ಕು, ಗಂಡ ಒತ್ತಾಯ ಮಾಡುವಂತಿಲ್ಲ!
ಮುಂಬೈನ ಶೇ.3 ಡಿವೋರ್ಸ್‌ಗೆ ಟ್ರಾಫಿಕ್ ಕಾರಣ: ಫಡ್ನವೀಸ್ ಪತ್ನಿ
ಮುಂಬೈಯಲ್ಲಿ ನಡೆಯುವ ಶೇ. 3 ರಷ್ಟುವಿಚ್ಛೇದನಗಳಿಗೆ ನಗರದ ಟ್ರಾಫಿಕ್ ಕಾರಣವಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಹೇಳಿದ್ದರು. ಮುಂಬೈ ರಸ್ತೆಗಳ ಪರಿಸ್ಥಿತಿ ಹಾಗೂ ಟ್ರಾಫಿಕ್‌ನ ಬಗ್ಗೆ ಪತ್ರಕರ್ತರೊಡನೆ ಮಾತನಾಡಿದ ಅಮೃತಾ, 'ಮುಂಬೈಯ ಟ್ರಾಫಿಕ್ ಕಾರಣದಿಂದಾಗಿ ಜನರಿಗೆ ಕುಟುಂಬದೊಡನೆ ಸರಿಯಾಗಿ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಇದು ಶೇ. 3 ರಷ್ಟುವಿಚ್ಛೇದನಗಳಿಗೆ ಕಾರಣವಾಗಿದೆ. ಇದನ್ನು ಫಡ್ನವೀಸ್ ಪತ್ನಿಯಾಗಿ ಅಲ್ಲ, ಒಬ್ಬ ಸಾಮಾನ್ಯ ಮಹಿಳೆಯಾಗಿ ಹೇಳುತ್ತಿದ್ದೇನೆ. ಟ್ರಾಫಿಕ್, ಪಾಟ್‌ಹೋಲ್‌ಗಳಿಂದ ಭಾರೀ ಸಮಸ್ಯೆ ಎದುರಿಸಿದ್ದೇನೆ' ಎಂದರು.
Post a Comment