ನಿನ್ನೆ ರಾಹುಲ್ ಗಾಂಧಿಯವರು ಕರ್ನಾಟಕ ಸರಕಾರವನ್ನು 40 ಶೇಕಡಾ ಕಮಿಷನ್ ಸರಕಾರ ಎಂದು ಹೇಳಿದ್ದಾರೆ. ಕಬ್ಬಿಣದ ಕಾಲಿನ ರಾಹುಲ್ ಗಾಂಧಿ ಅವರು ಇದಕ್ಕೆ ಆಧಾರ ಒದಗಿಸಬೇಕು ಎಂದು BJP ಆಗ್ರಹಿಸಿ ದೇ


ಕಾಂಗ್ರೆಸ್ ದೇಶದ್ರೋಹಿ, ಭ್ರಷ್ಟಾಚಾರಿಗಳ ಪಕ್ಷ- ಎನ್. ರವಿಕುಮಾರ್
ಬೆಂಗಳೂರು: ಕಾಂಗ್ರೆಸ್ ದೇಶದ್ರೋಹಿಗಳ ಮತ್ತು ಭ್ರಷ್ಟಾಚಾರಿಗಳ ಪಕ್ಷ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ರಾಹುಲ್ ಗಾಂಧಿಯವರು ಕರ್ನಾಟಕ ಸರಕಾರವನ್ನು 40 ಶೇಕಡಾ ಕಮಿಷನ್ ಸರಕಾರ ಎಂದು ಹೇಳಿದ್ದಾರೆ. ಕಬ್ಬಿಣದ ಕಾಲಿನ ರಾಹುಲ್ ಗಾಂಧಿ ಅವರು ಇದಕ್ಕೆ ಆಧಾರ ಒದಗಿಸಬೇಕು ಎಂದು ಆಗ್ರಹಿಸಿದರು. 
ಲೋಕಾಯುಕ್ತಕ್ಕೆ ದಾಖಲೆ ಕೊಡಲಿ. ಪೊಲೀಸರಿಗೆ ಕೊಡಬಹುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ಆದರೂ ಕೂಡ ಸಾಕ್ಷ್ಯಾಧಾರ ಇಲ್ಲದ ಕಾರಣ ದೂರು ಸಲ್ಲಿಸಲು ಆಗುತ್ತಿಲ್ಲ. ಒಂದು ರೀತಿಯಲ್ಲಿ ಬೀದಿಯಲ್ಲಿ ಹೋಗುವ ರಾಮಣ್ಣ, ಸೋಮಣ್ಣನ ಹಾಗೆ ಕಬ್ಬಿಣದ ಕಾಲಿನ ರಾಹುಲಣ್ಣನೂ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಹೆಸರಾಂತ ಪ್ರಧಾನಮಂತ್ರಿಗಳ ಕುಟುಂಬ ಹಾಗೂ ಹೆಸರಾಂತ ಗಾಂಧಿ ಕುಟುಂಬದಿಂದ ಬಂದ ಅವರಿಗೆ ಇಷ್ಟೊಂದು ಕನಿಷ್ಠ ಜ್ಞಾನ ಇಲ್ಲವೇ? ಎಂದು ಪ್ರಶ್ನಿಸಿದರಲ್ಲದೆ ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು.


ಭಾರತ್ ಜೋಡೋ ಯಾತ್ರೆಯ ರಾಹುಲ್ ಗಾಂಧಿಯವರೇ ಈ 10 ಪ್ರಶ್ನೆಗಳಿಗೆ ಉತ್ತರಿಸಿ: ರವಿಕುಮಾರ್
ನುಡಿದಂತೆ ನಡೆದ ಸ್ವಾಭಿಮಾನಿ ಕನ್ನಡಿಗರ ನಾಡಿಗೆ ಸರ್ವ ದೇಶಭಕ್ತರ ಪರವಾಗಿ ಸ್ವಾಗತ ಎಂದು ತಿಳಿಸಿರುವ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು, ರಾಹುಲ್ ಗಾಂಧಿಯವರಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಅಧಿಕಾರ ಅನುಭವಿಸಿದ 75 ವರ್ಷಗಳ ಬಳಿಕವಾದರೂ  ಭಾರತವನ್ನು ಜೋಡಿಸುವ ಒಳ್ಳೆಯ ಕೆಲಸಕ್ಕೆ ಹೊರಟಿರುವ ಮಾನ್ಯಶ್ರೀ ರಾಹುಲ್ ಗಾಂಧಿಯವರೇ ನಿಮಗೆ ಸಪ್ರೇಮ ನಮಸ್ಕಾರಗಳು ಎಂದು ತಿಳಿಸಿದ್ದಾರೆ.

1) ನಿಮ್ಮ ಪಾದಯಾತ್ರೆ ಪಾಪದ ಪ್ರಾಯಶ್ಚಿತ್ತದ್ದಾ?
ನಿಮ್ಮ ಕುಟುಂಬ ಪಕ್ಷ 1947ರಲ್ಲಿ ದೇಶವನ್ನು ವಿಭಜಿಸಿದ್ದಕ್ಕೆ ,ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಿದ್ದಕ್ಕೆ, ಹಿಂದುಗಳಿಗೆ ಹಿಂದೂಸ್ತಾನವನ್ನು ಕೊಡದೇ ಇದ್ದಿದ್ದಕ್ಕೆ ,ನೀವು ಮಾಡುತ್ತಿರುವುದು ದೇಶಭಂಜನೆಯ ಪಾಪದ ಪ್ರಾಯಶ್ಚಿತ್ತದ ಪಾದಯಾತ್ರೇನಾ?ಮೊದಲು ಕ್ಷಮೆ ಯಾಚಿಸಿ ಅನಂತರ ಪಾಪದ ಪ್ರಾಯಶ್ಚಿತ್ತ ಪಾದಯಾತ್ರೆ ಮಾಡಬೇಕಲ್ಲವೇ?

2) ನಿಮ್ಮ ಒಡೆದು ಹೋಗಿರುವ ಮನಸ್ಸುಗಳಿಂದ, ಒಡೆದು ಹೋಗಿರುವ ನಿಮ್ಮ ಪಕ್ಷದಿಂದ ಭಾರತವನ್ನು ಜೋಡಿಸಲು ಸಾಧ್ಯವಾ?
ಅಖಂಡ ಭಾರತವನ್ನು ತುಂಡು ಮಾಡಿದ ನಿಮ್ಮ ಪಕ್ಷ ನಿಮ್ಮ ಕುಟುಂಬ ಹಾಗೂ ನೀವು 75 ವರ್ಷಗಳ ಬಳಿಕ ಈಗ "ಭಾರತ್ ಜೋಡೋ" ಮಾಡಲು ಹೊರಟಿದ್ದೀರಿ! ಅಭಿನಂದನೆಗಳು!! ಆದರೆ ಭಾರತವನ್ನು ತುಂಡರಿಸುವ ನಿಮ್ಮ ಪಕ್ಷದಿಂದ ನಿಮ್ಮ ಕುಟುಂಬದಿಂದ ಭಾರತವನ್ನು ಜೋಡಿಸಲು ಸಾಧ್ಯವಾ? ಪ್ರಾಮಾಣಿಕವಾಗಿ ಉತ್ತರಿಸಿ?

3) 1919ರ ಖಿಲಾಫತ್ ಚಳುವಳಿಯಿಂದ ಹಿಡಿದು ಬಾರತ-ಪಾಕಿಸ್ತಾನ, ಭಾರತ-ಬಾಂಗ್ಲಾ, ಕಾಶ್ಮೀರಕ್ಕೆ 370ನೇ ವಿಧಿ, ವಂದೇ ಮಾತರಂ ವಿಭಜನೆ, ಹೀಗೆ ಮೊನ್ನೆನೊನ್ನೆಯ ಸಿ.ಎ.ಎ.ಕಾಯಿದೆಯವರೆಗೆ ನಿಮ್ಮದು ಹಿಂದೂಗಳನ್ನು ಅನಾಥರನ್ನಾಗಿಸುವ  ಭಾರತದ ಐಕ್ಯತೆಯನ್ನು ಭಗ್ನಗೊಳಿಸಿದ ತೋಡೋ ಯಾತ್ರೆ ಇದಲ್ಲವೇ? 
ನೀವು ಯುವಕರು ರಾಜಕಾರಣಕ್ಕೆ ಬಂದು ದಶಕಗಳೇ ಆಗಿವೆ. ಜೆಎನ್ಯೂ ನಲ್ಲಿ ಭಾರತ ಬರ್ಬಾದ್ ಆಗಲಿ (ಭಾರತ್ ತೇರೆ ತುಕಡೆ ಹೋಂಗೆ, ಅನ್ಸಾ ಅಲ್ಲಾ ಅನ್ಸಾ ಅಲ್ಲಾ, ಕಾಶ್ಮೀರ ಸ್ವತಂತ್ರವಾಗಲಿ, ಕಾಶ್ಮೀರ್ ಕೋ ಚಾಹಿಯೇ ಆಜಾದಿ) ಎಂಬ ಇತ್ಯಾದಿ ಘೋಷಣೆಗಳನ್ನು ಕೂಗಿದ ಯುವಕರ ದಾರಿ ತಪ್ಪಿಸಿದ  ಕನ್ಹಯ್ಯಾ ಕುಮಾರ್ ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡಿರಿ, ಸದಾ ಭಾರತವನ್ನು ಪ್ರಾದೇಶಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ತುಂಡು ಮಾಡುತ್ತಾ ಬಂದಿರುವ ನಿಮ್ಮ ಪಕ್ಷಕ್ಕೆ ಕುಟುಂಬಕ್ಕೆ ಸಿದ್ಧಾಂತಕ್ಕೆ ನಾಯಕತ್ವಕ್ಕೆ ಕಾರ್ಯಕರ್ತರಿಗೆ ನಿಮಗೆ ಎಂದಾದರೂ ಭಾರತವನ್ನು ಜೋಡಿಸಿರುವ ಅನುಭವ ಇದೆಯಾ? ಇದ್ದರೆ ತಿಳಿಸಿ.

4) ದೇಶವನ್ನು ಲೂಟಿ ಮಾಡಿದವರು ನಿಮ್ಮ ಪಕ್ಷ ನಿಮ್ಮ ಕುಟುಂಬವರಲ್ಲವೇ?
ನೆಹರೂ ಅವರ ಸಚಿವಸಂಪುಟಕ್ಕೆ ಶ್ಯಾಮಪ್ರಸಾದ್ ಮುಖರ್ಜಿ ಅವರು ರಾಜೀನಾಮೆ ನೀಡಿದ್ದು ಏಕೆ? ಅಂಬೇಡ್ಕರ್ ರವರು ನಾನು ಜೀವಂತ ಇರುವವರೆಗೂ ಕಾಂಗ್ರೇಸ್ ಪಕ್ಷ ಸೇರಲಾರೆ, ಕಾಂಗ್ರೇಸ್ ಎನ್ನುವುದು ಒಂದು ಉರಿಯುವ ಮನೆ ಎಂದಿದ್ದು ಏಕೆ? ಉತ್ತರಿಸುವಿರಾ? 
ಕಾಶ್ಮೀರದ ಬಗ್ಗೆ ಹಿಂದೂಕೋಡ್ ಬಿಲ್ ಬಗ್ಗೆ ನಿಮ್ಮ ಅಜ್ಜ ನೆಹರೂ ನಿಮ್ಮ ಪಕ್ಷ ಕಾಂಗ್ರೆಸ್ ಯಾವ ನಿಲುವು ತಳೆಯಿತೆಂಬ ಇತಿಹಾಸದ ಬಗ್ಗೆ ತಿಳಿಸುವಿರಾ? 1947ರಲ್ಲಿ ಅಧಿಕಾರ ಸಿಕ್ಕೊಡನೆ ದಲಿತರನ್ನು ದೇಶದ ಗಡಿಯಲ್ಲಿನ ಹಿಂದುಗಳನ್ನು ಕಡೆಗಣಿಸಿದಿರಿ ಮುಸ್ಲಿಂ ಲೀಗಿನೊಂದಿಗೆ ಕಮ್ಯುನಿಸ್ಟ್ ರೊಂದಿಗೆ ಅಧಿಕಾರ ಹಂಚಿಕೊಂಡು ದೇಶವನ್ನು ಲೂಟಿ ಮಾಡಿದವರು ನಿಮ್ಮ ಪಕ್ಷ ನಿಮ್ಮ ಕುಟುಂಬವರಲ್ಲವೇ? ನೀವು ನಿಮ್ಮ ಡಿ.ಕೆ.ಶಿ. ಬೇಲಿನ ಮೇಲೆ ಹೊರಗಿರುವ ಮಹಾ ಭ್ರμÁ್ಟಚಾರದ ಆರೋಪಿಗಳು. ನಿಮ್ಮದೇ ಹಿರಿಯ ನಾಯಕ ಶಾಸಕ ರಮೇಶ್ ಕುಮಾರ್ ಅವರು "ನೆಹರೂ ಅವರ ಕಾಲದಿಂದ ಇಂದಿನವರೆಗೆ ದೇಶವನ್ನು ಲೂಟಿ ಮಾಡಿ ನಾಲ್ಕು ತಲೆಮಾರಿಗೆ ಆಗುವಷ್ಟು ಸಂಪಾದಿಸಿದ್ದೇವೆ" ಎಂದಿರುವ ಬಗ್ಗೆ ನಿಮ್ಮ ನಿಲುವೇನು?

5) ನಿಮ್ಮದು "ಒಳಗೆ ಭಾರತ ತೋಡೋ ಹೊರಗೆ ಭಾರತ ಜೋಡೋ ಒಳಗೆ ಭ್ರμÁ್ಟಚಾರದ ಪರ ಹೊರಗೆ ಭ್ರμÁ್ಟಚಾರ ವಿರೋಧಿ" ಇಂತಹ ಆತ್ಮ ವಂಚನೆ ನಿಮಗೇಕೆ?
ನಿಮ್ಮದು "ಒಳಗೆ ಭಾರತ ತೋಡೋ ಹೊರಗೆ ಭಾರತ ಜೋಡೋ ಒಳಗೆ ಭ್ರμÁ್ಟಚಾರದ ಪರ ಹೊರಗೆ ಭ್ರμÁ್ಟಚಾರ ವಿರೋಧಿ" ಈ ವಂಚನೆಯೇಕೆ?
ಇಂಥ ಎಡಬಿಡಂಗಿತನ ಬುದ್ಧ-ಬಸವಣ್ಣನವರ ನಾಡಿನಲ್ಲಿ ನಡೆಯುವುದಿಲ್ಲ. ಈ ನಿಮ್ಮ ನಾಟಕವನ್ನು ಅಂಬೇಡ್ಕರ್ ವಾದಿಗಳು ಶ್ಯಾಮಪ್ರಸಾದ ಮುಖರ್ಜಿ ವಾದಿಗಳು ಸಹಿಸುವುದಿಲ್ಲ ಎಂಬುದು ನಿಮಗೆ ಗೊತ್ತೇ?

6) ಕರ್ನಾಟಕದಲ್ಲಿ ನಿಮ್ಮ ಪಕ್ಷದ ಡಿ.ಕೆ.ಶಿವಕುಮಾರ್- ಸಿದ್ಧರಾಮಯ್ಯ ಅವರನ್ನು ಜೋಡಿಸಲಾಗದ ನಿಮಗೆ ಭಾರತವನ್ನು ಜೋಡಿಸಲು ಸಾಧ್ಯವೇ? ನೀವು ಕರ್ನಾಟಕದ ಕಾಂಗ್ರೇಸನ್ನು ಜೋಡಿಸಬಲ್ಲಿರಾ?
ನೀವು ದಾವಣಗೆರೆಯಲ್ಲಿ ಡಿಕೆಶಿ ಅವರಿಗೆ ಸಿದ್ದರಾಮಯ್ಯ ಅವರನ್ನು ಅಪ್ಪಿಕೊಳ್ಳಲು ಬಹಿರಂಗವಾಗಿ ಹೇಳಿದಿರಿ. ಮನವಿಲ್ಲದ ಮನದಲ್ಲಿ ಡಿಕೆಶಿ ಅಪ್ಪಿದರು, ಸಿದ್ದು ಡಿಚ್ಚಿ ಕೊಡುತ್ತಿದ್ದಾರೆ. ಡಿಕೆಶಿ ಬಂಡೆ ಸಿಡಿಸುತ್ತಿದ್ದಾರೆ. ಪಾಪ ಜನನಾಯಕ ಸಿದ್ದರಾಮಯ್ಯ ಅವರು ನಿಮ್ಮನ್ನು ಸಿದ್ಧರಾಮೋತ್ಸವಕ್ಕೆ ಕರೆದು ಗೌರವಿಸಿದರು. ಆದರೆ ನಿಮ್ಮ ಪಕ್ಷ ಭಾರತ ಜೋಡೋ ಯಾತ್ರೆಯ ಸಭೆಗೆ ಸಿದ್ಧರಾಮಯ್ಯ ಅವರನ್ನೇ ಕರೆಯಲಿಲ್ಲ. ಅವರು ನನ್ನನ್ನು ಕರೆದಿಲ್ಲ ನಾನ್ಯಾಕೆ ಬರಲಿ ಎಂದು ಸಿಡಿಮಿಡಿಗೊಂಡರು. ಇದು ಹಿರಿಯ ನಾಯಕರಿಗೆ ಕರ್ನಾಟಕದ ದೊಡ್ಡ ಕುರುಬ ಸಮುದಾಯಕ್ಕೆ ಮಾಡಿದ ಅಗೌರವವಲ್ಲವೇ? ಒಕ್ಕಲಿಗರು ಕುರುಬರ ನಡುವೆ ಕದನ ಹಚ್ಚಿ ದಲಿತ ನಾಯಕರಾದ ಪರಮೇಶ್ವರರನ್ನು ಸೋಲಿಸಿ, ಖರ್ಗೆಯವರು ಮುಖ್ಯಮಂತ್ರಿಯ ಕನಸನ್ನು ಕರ್ನಾಟಕದಿಂದಲೇ ಕಣ್ಮರೆಯಾಗುವಂತೆ ಮಾಡಿರುವ ನೀವು ಕರ್ನಾಟಕದಲ್ಲಿ ಕಾಂಗ್ರೇಸನ್ನು ಜೋಡಿಸಬಲ್ಲಿರಾ?

7) ಭಾರತೀಯರು ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಜೋಡಿಸಲಾರದ ನಿಮ್ಮಿಂದ ಭಾರತವನ್ನು ಜೋಡಿಸುವುದು ಸಾಧ್ಯವೇ? ಕಾಂಗ್ರೆಸ್ ಜೋಡೋ ಯಾತ್ರೆಗೇಕೆ ಭಾರತಜೋಡೋ ಎಂದು ಕರೆದಿದ್ದೀರಿ?
ಕಾಂಗ್ರೆಸ್ ಛೋಡೋ ಯಾತ್ರೆ ಮೊನ್ನೆ ಮೊನ್ನೆಯ ಕಪಿಲ್ ಸಿಬಲ್ ,ಗುಲಾಂ ನಬಿ ಆಜಾದ್, ಕರ್ನಾಟಕದ ಸಿ.ಎಂ.ಇಬ್ರಾಹಿಂ ಅವರ ವರೆಗೆ ನಿರಂತರವಾಗಿ ಪ್ರತಿ ರಾಜ್ಯದಲ್ಲಿ ನಿಮ್ಮ ನಾಯಕರುಗಳಿಂದ ಕಾಂಗ್ರೆಸ್  ಛೋಡೋ ನಡೆಯುತ್ತಿದೆ. ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಸೋತಿದೆ. ಆದರೆ ನೀವು ಭಾರತ ಜೋಡೋ ಅನ್ನುತ್ತಿದ್ದೀರಿ. ಅದು ನಿಮ್ಮದೇ ಪಕ್ಷದ ಹಿರಿಯ ದಲಿತ, ಹಿಂದುಳಿz,À ಅಲ್ಪಸಂಖ್ಯಾತ ನಾಯಕರಿಗೆ ಕಾಂಗ್ರೆಸ್ ಛೋಡೋ ಎಂದಂತೆ ಕೇಳಿಸುತ್ತಿದೆ. ಭಾರತೀಯರು ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಜೋಡಿಸಲಾರದ ನಿಮ್ಮಿಂದ ಭಾರತವನ್ನು ಜೋಡಿಸುವುದು ಸಾಧ್ಯವೇ? ಕಾಂಗ್ರೆಸ್ ಜೋಡೋ ಯಾತ್ರೆಗೇಕೆ ಭಾರತಜೋಡೋ ಎಂದು ಕರೆದಿದ್ದೀರಿ? ಭಾರತವೆಂದರೆ ಕಾಂಗ್ರೆಸ್ ಅಲ್ಲ ಕಾಂಗ್ರೆಸ್ ಎಂದರೆ ಭಾರತ ಅಲ್ಲ, ಅಲ್ಲವೇ? ಸೂಕ್ಷ್ಮವಾಗಿ ಯೋಚಿಸಿ. ಪಕ್ಷಕ್ಕಿಂತ ದೇಶಮುಖ್ಯ ಮೊದಲು ಪೂರ್ಣವಾಗಿ ಭಾರತದ ಪ್ರಜೆಯೇ ಆಗಿರದ ನೀವು "ವಿದೇಶದಲ್ಲಿ  ಜೀವ ಭಾರತದಲ್ಲಿ ದೇಹ" ಎಂಬ ಸ್ಥಿತಿ ಇದೆ. ವಿದೇಶಗಳಲ್ಲಿ ಭಾರತವನ್ನು ನಿಂದಿಸಿದ ನಿಮ್ಮಿಂದ ಭಾರತ ಯಾವ ವೈಭವವನ್ನು ಬಯಸಬಹುದು? ಮೊದಲು ಭಾರತೀಯ ಆಗಿ ಅನಂತರ ಪಾದಯಾತ್ರೆ ಮಾಡಿ....

8) ಆತ್ಮಸಾಕ್ಷಿಯಿಂದ ಹೇಳಿ ಇದು ನಿಮ್ಮ ಆತ್ಮವಂಚನೆಯ ಪಾದಯಾತ್ರೆ ಅಲ್ಲವೇ? ನಿಮ್ಮ ಪಕ್ಷದ ಇತಿಹಾಸ ನೋಡಿದರೆ ಅಂದಿನ ಮೂರ್ತಿ ಭಂಜಕರಿಗೂ ಇಂದಿನ ಭಾರತ ಭಂಜಕರಿಗೂ ಏನು ವ್ಯತ್ಯಾಸವಿದೆ? ಮೂರ್ತಿ ಭಂಜಕರಂತೆ ನೀವು ಭಾರತ ಭಂಜಕರಾಗಬಾರದಲ್ಲವೇ?
370ನೆ ವಿಧಿ ತೆಗೆದಿದ್ದನ್ನು ಸಿ.ಎ.ಎ ಕಾನೂನು ತಂದದ್ದನ್ನು ವಿರೋಧಿಸಿದಿರಿ, ಸೈನ್ಯದ ನೈತಿಕ ಸ್ಥೈರ್ಯವನ್ನು ಕುಗ್ಗುಸ್ತೀರಿ, ಕಾಶ್ಮೀರದ ಹಿಂದುಗಳ ಹತ್ಯೆಗಳನ್ನು ಕಡೆಗಣಿಸ್ತೀರಿ, ಒಳಗೊಳಗೇ ಭಯೋತ್ಪಾದಕರನ್ನು ಬೆಂಬಲಿಸ್ತೀರಿ, ದೇಶದಲ್ಲಿ ಹಿಂದುಗಳ ಹತ್ಯೆಯಾದಾಗ ಮೌನವಾಗಿ ಸಂಭ್ರಮಿಸ್ತೀರಿ, ಬಿಜೆಪಿಯನ್ನು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಧಿಸುವುವುದಕ್ಕಾಗಿ ದೇಶವನ್ನೇ ವಿರೋಧಿಸುವ ದೇಶದ್ರೋಹದ ಮಟ್ಟಕ್ಕೂ ಇಳಿಯುತ್ತೀರಿ ಬಾಯಲ್ಲಿ ಮಾತ್ರ ಭಾರತಜೋಡೋ ಎನ್ನುತ್ತೀರಿ. ಎದೆಯಲ್ಲಿ ಭಾರತ ಭಂಜಕರಾಗಿದ್ದೀರಿ. ಆತ್ಮಸಾಕ್ಷಿಯಿಂದ ಹೇಳಿ ಇದು ನಿಮ್ಮ ಆತ್ಮವಂಚನೆಯ ಪಾದಯಾತ್ರೆ ಅಲ್ಲವೇ? ನಿಮ್ಮ ಪಕ್ಷದ ಇತಿಹಾಸ ನೋಡಿದರೆ ಅಂದಿನ ಮೂರ್ತಿ ಭಂಜಕರಿಗೂ ಇಂದಿನ ಭಾರತ ಭಂಜಕರಿಗೂ ಏನು ವ್ಯತ್ಯಾಸವಿದೆ? ಮೂರ್ತಿ ಭಂಜಕರಂತೆ ನೀವು ಭಾರತ ಭಂಜಕರಾಗಬಾರದಲ್ಲವೇ?

9) ನಿಮಗೆ ನಿಮ್ಮ ಪಕ್ಷಕ್ಕೆ ಭಾರತವನ್ನು ಜೋಡಿಸುವ ಪ್ರಾಮಾಣಿಕ ಉದ್ದೇಶವಿದ್ದರೆ ಮುಂದಿನ ಚುನಾವಣೆಯಲ್ಲಿ ಸಮಾನತೆಯನ್ನು ತರಲು ಹಿಂದು-ಮುಸ್ಲಿಂ ಸಮಾನರೆಂಬ ಕಾನೂನನ್ನು ತರುತ್ತೇವೆ ಎಂದು ಘೋಷಿಸುತ್ತೀರಾ? 
ಭಾರತದಲ್ಲಿ ಮತಾಂತರವನ್ನು ಬೆಂಬಲಿಸುತ್ತಾ ಕ್ರಿಶ್ಚಿಯನ್ ಭಾರತ ಮಾಡಲು ಹೊರಟಿರುವ ನೀವು ಮತಾಂತರವನ್ನು ನಿμÉೀಧಿಸುವಿರಾ? ಮುಸ್ಲಿಂ ಮಾತುಗಳಿಂದ ಅಧಿಕಾರವನ್ನು ಹಿಡಿಯಬೇಕೆಂದು ಭಾರತದ ಮುಸ್ಲಿಂ ಮಹಿಳೆಯರು ಬುರ್ಕಾದಲ್ಲೇ ಇರಬೇಕು. ಮದರಸಾದಲ್ಲೇ ಇರಬೇಕು. ಜಿಹಾದಿ ಮನೋಭಾವದವರು ಹಿಂದುಗಳನ್ನು ಕೊಲ್ಲುತ್ತಿರಬೇಕೆಂಬ ನಿಲುವಿನಿಂದಿರುವ ನಿಮ್ಮ ಪಕ್ಷ ಗೋಹತ್ಯೆ ನಿμÉೀಧ, ಬುರ್ಕಾ ಹಿಜಾಬ್ ನಿμÉೀಧ, ತಲಾಖ್ ನಿμÉೀಧ, ಮದರಸಾದಲ್ಲಿ ಆಧುನಿಕ ಶಿಕ್ಷಣ ನೀಡಬಾರದು, ಎನ್ನುವ ನಿಮ್ಮ ದೇಶ ವಿಭಜನೆಯ ಭಾವನೆಗಳನ್ನು ಹೊಂದಿರುವ ಪಕ್ಷ ಭಾರತದಲ್ಲಿ ಸಮಾನತೆಯನ್ನು ತರಬಲ್ಲದೇ?

10) ನೀವು ಈಗಾಗಲೇ ಪ್ರತ್ಯೇಕತೆಯ ಬೀಜ ಬಿತ್ತಿ, ಭಾರತದಲ್ಲಿ ರಕ್ತಪಾತಕ್ಕೆ ಕಾರಣರಾಗಿದ್ದೀರಿ. ಮುಸ್ಲಿಂ ಲೀಗ್ ಕಮ್ಯುನಿಸ್ಟ್ ಹಾಗೂ ದೇಶವಿರೋಧಿಗಳ ಸಹವಾಸದಿಂದ ನಿಮ್ಮ ಪಕ್ಷ ದೇಶದ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ನಿಮ್ಮಲ್ಲಿರುವ ನಾಯಕರೇ ಕಾಂಗ್ರೆಸ್ ಛೋಡೋ ಯಾತ್ರೆ ಆರಂಭಿಸಿದ್ದಾರೆ. ಈಗ ನಿಮ್ಮೊಡನೆ ಭಾರತವನ್ನು ಜೋಡಿಸುವ ಯಾವ ಸಿದ್ಧಾಂತ ಯಾವ ಆದರ್ಶವಾದಿ ಪಕ್ಷ ಯಾವ ಪ್ರಾಮಾಣಿಕತೆ ನಿಮಗಿದೆ? 
ಭಾರತದ ಬಹುಸಂಖ್ಯಾತ ಹಿಂದೂಗಳನ್ನು ಬಲಿಕೊಡುತ್ತಾ ಮುಸ್ಲಿಮರ ಮೂಗಿಗೆ ತುಪ್ಪ ಸವರುತ್ತಾ ದಲಿತರನ್ನು ಬಳಸಿ ಬಿಸಾಕುತ್ತಾ ಬಂದ ನಿಮ್ಮ ಪಕ್ಷ ಮತ್ತು ನೀವು ಹಿಂದುಗಳ ಮುಸ್ಲಿಮರ ದೀನದಲಿತರ ಬಡವರ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೀರಿ. ನಿಮ್ಮ ಓಟ್ ಬ್ಯಾಂಕ್ ರಾಜಕಾರಣ ಮುಗಿದು ಹೋಗಿದೆ. ಭಾರತವನ್ನು ಜೋಡಿಸುವ ಯಾವ ಸಿದ್ಧಾಂತ, ಯಾವ ಆದರ್ಶವಾದಿ, ಪಕ್ಷ ಯಾವ ಪ್ರಾಮಾಣಿಕ ಅನುಭವೀ ನಾಯಕರಿದ್ದಾರೆ? ಕಾಂಗ್ರೇಸನ್ನೇ ಜೋಡಿಸಲಾಗದ ನೀವು ಈಗ ಭಾರತವನ್ನು ಜೋಡಿಸುವ ಯಾತ್ರೆ ನಡೆಸುತ್ತಿರುವುದು ದೇಶದ ಜನರ ಪಕ್ಷದ ಕಾರ್ಯಕರ್ತರನ್ನು ವಂಚಿಸುವ ಒಂದು ನಾಟಕ  ಎಂದೆನಿಸುವುದಿಲ್ಲವೇ? ಇವುಗಳಿಗೆ ಆತ್ಮಸಾಕ್ಷಿಯಿಂದ ಪ್ರಾಮಾಣಿಕವಾಗಿ ಉತ್ತರಿಸಿ ಎಂದು ತಿಳಿಸಿದ್ದಾರೆ.



ರಾಹುಲ್ ಗಾಂಧಿ ಅವರು ಕಾಂಗ್ರೆಸ್ ರಾಷ್ಟ್ರೀಯ ನಾಯಕರು, ಸಂಸದರೂ ಆಗಿದ್ದಾರೆ. ಅವರು ಸ್ವಲ್ಪ ಜ್ಞಾನವನ್ನಿಟ್ಟುಕೊಂಡು ಮಾತನಾಡಬೇಕು ಎಂದು ಒತ್ತಾಯಿಸಿದರು. 40 ಶೇಕಡಾ ಲೂಟಿ ಹೊಡೆದವರು ದೇಶಭಕ್ತರಾ ಎಂಬ ರಾಹುಲ್ ಗಾಂಧಿಯವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಶ್ಮೀರವನ್ನು ಉಳಿಸಿದವರು ದೇಶಭಕ್ತರು, ರೈತರಿಗೆ ಮನೆಮನೆಗೆ ವರ್ಷಕ್ಕೆ 10 ಸಾವಿರದಂತೆ 5 ವರ್ಷಗಳಲ್ಲಿ 50 ಸಾವಿರ ಕೊಟ್ಟವರು ರಾಷ್ಟ್ರಭಕ್ತರು, ಮನೆಮನೆಗೆ ಶೌಚಾಲಯ, ಮನೆಮನೆಗೆ ನಲ್ಲಿ ನೀರು ಕೊಟ್ಟವರು ರಾಷ್ಟ್ರಭಕ್ತರು. ನೀವು ಈ ದೇಶದ ತೆರಿಗೆ ಹಣವನ್ನು ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಹಾಕಿ ಸ್ವಂತ ಮನೆಯ ಆಸ್ತಿ ಮಾಡಿಕೊಂಡವರು. ಇದು ಸುಮಾರು 20 ಸಾವಿರ ಕೋಟಿಗಿಂತ ಹೆಚ್ಚು. ಸ್ವಾತಂತ್ರ್ಯ ಹೋರಾಟಗಾರರು ಷೇರುದಾರರಾಗಿದ್ದÀ ಸಂಸ್ಥೆ ಇದು ಎಂದು ತಿಳಿಸಿದರು.
ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಜಾಮೀನಿನಡಿ ಇರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಜಾಮೀನು ಸಿಗದಿದ್ದರೆ ಇವರು ಜೈಲಿನಲ್ಲಿ ಇರಬೇಕಾಗುತ್ತಿತ್ತು. ನಮ್ಮ ನರೇಂದ್ರ ಮೋದಿಯವರು ಚಹಾ ಮಾರುತ್ತ, ಪೋಸ್ಟರ್ ಅಂಟಿಸುತ್ತ, ಬ್ಯಾನರ್, ಫ್ಲ್ಯಾಗ್ ಕಟ್ಟುತ್ತ, ಶಾಖೆಗೆ ಹೋಗಿ ದುಡಿದವರು. ಲಕ್ಷಾಂತರ ಜನರ ಮನೆಗಳಿಗೆ ಹೋಗಿದ್ದಾರೆ. ಕೋಟ್ಯಾಂತರ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡವರು. ನಮ್ಮ ದೇಶದ ಸರ್ವಾಂಗೀಣ ವಿಕಾಸ ಮಾಡುವ ದೃಷ್ಟಿ ಮೋದಿಯವರಿಗಿದೆ. ದೇಶಭಕ್ತಿಯ ಲವಲೇಶವೂ ರಾಹುಲ್ ಗಾಂಧಿಯವರಿಗೆ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟ ಬಿಜೆಪಿ ಮಾಡಿಯೇ ಇಲ್ಲ ಎನ್ನುತ್ತೀರಿ; ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅವರು ಸ್ವಾತಂತ್ರ್ಯ ಹೋರಾಟಗಾರರು. ಕಾಂಗ್ರೆಸ್‍ನ ಜಂಟಿ ಕಾರ್ಯದರ್ಶಿಯಾಗಿದ್ದರು ಎಂದು ಉತ್ತರ ನೀಡಿದರು.
ದೇಶಭಕ್ತಿಯ ಗಂಧಗಾಳಿಯೂ ನಿಮಗಿಲ್ಲ. ಇದ್ದರೆ ಭಾರತ ಮತ್ತು ಪಾಕಿಸ್ತಾನವನ್ನು ನೀವು ತುಂಡು ಮಾಡುತ್ತಿರಲಿಲ್ಲ. ಇದು ಭಾರತ್ ಜೋಡೋ ಯಾತ್ರೆ ಅಲ್ಲ. ನಿಮ್ಮದು ಇದು ಪ್ರಾಯಶ್ಚಿತ್ತ ಯಾತ್ರೆ. ನಿಮ್ಮ ತಾತ ನೆಹರೂ ಅವರು ಮಾಡಿದ್ದು ತಪ್ಪು. ಅವತ್ತು ಭಾರತ- ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶ; ಅವತ್ತೇ ಕಾಶ್ಮೀರದಲ್ಲಿ 370ನೇ ವಿಧಿಯನ್ನು ಜಾರಿಗೊಳಿಸಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಂಗಾಲವನ್ನು ವಿಭಜಿಸಿದ್ದೀರಿ. ಆಮೇಲೆ ಅದು ಬಾಂಗ್ಲಾ ದೇಶವಾಯಿತು. ಅಸ್ಸಾಂ ಅನ್ನು ವಿಭಜಿಸಿದ್ದೀರಿ. ಅಸ್ಸಾಂನ ಒಂದು ಭಾಗವನ್ನು ಚೀನಾಕ್ಕೆ ಕೊಡಲು ನೆಹರೂ ಅವರು ಹೊರಟಿದ್ದರು. ಈ ಇತಿಹಾಸ ಗೊತ್ತಿದೆಯೇ ಎಂದು ಕೇಳಿದರು. ಭಾರತ್ ಥೋಡೋ ಮಾಡಿದ್ದೀರಿ. ಭಾರತ್ ಜೋಡೋ ಇದಲ್ಲ; ಕಾಂಗ್ರೆಸ್ ಜೋಡೋ ಮಾಡಿ ಎಂದು ಸವಾಲೆಸೆದರು.
ಕಾಶ್ಮೀರದಲ್ಲಿ ಪಂಡಿತರನ್ನು ನಿರಾಶ್ರಿತರನ್ನಾಗಿ ಮಾಡಿದಿರಿ. ಸುಮಾರು 48 ಲಕ್ಷ ಹಿಂದೂಗಳ ಹತ್ಯೆ ಆಗಿದೆ. ಇದರ ಬಗ್ಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು. 
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಅಕ್ಕಪಕ್ಕದಲ್ಲೇ ಇಟ್ಟುಕೊಂಡು ಅವರು ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರೆ. ಹಾಗಿದ್ದರೆ ಡಿ.ಕೆ.ಶಿವಕುಮಾರ್ ಚೀಟಿ ನುಂಗಿದ್ದೇಕೆ ಚೀಟಿ ಶಿವಕುಮಾರ್ ಅವರೇ? ಎಂದು ಕೇಳಿದರು. ನಿಮಗೆ ನಿಮ್ಮ ದುಡಿಮೆಗಿಂತ ವಿಪರೀತ ಹಣ; ಅಂದರೆ 850 ಕೋಟಿ ಎಲ್ಲಿಂದ ಬಂತು? ಈ ತಂತ್ರಜ್ಞಾನ ಜನರಿಗೆ ಹೇಳಿಕೊಡಿ. ಹೊಸ ವಿಶ್ವವಿದ್ಯಾಲಯ ತೆರೆದು ಅದರ ಬಗ್ಗೆ ಜನರಿಗೆ ತಿಳಿಸಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮನೆಮನೆಗೆ ರೈತ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಕೊಟ್ಟ, ಜಿಲ್ಲೆಗಳಲ್ಲಿ ಕೆರೆಗಳ ಹೂಳೆತ್ತಿ ನೀರಿನ ಸಮಸ್ಯೆ ನೀಗಿಸುತ್ತಿರುವ, ದೊಡ್ಡ ಪ್ರಮಾಣದಲ್ಲಿ ನೀರಾವರಿ ಮಾಡಲು ಹೊರಟಿರುವ, ಎಸ್‍ಸಿ, ಎಸ್‍ಟಿ, ಒಬಿಸಿ ವಿದ್ಯಾರ್ಥಿಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾಸ್ಟೆಲ್ ತೆರೆದಿರುವ, ಸುಮಾರು 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿರುವ ಜನಸಾಮಾನ್ಯರ ಮುಖ್ಯಮಂತ್ರಿಗೆ ಕಪ್ಪು ಹೆಸರು ತರಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಇದನ್ನು ಖಂಡಿಸುತ್ತೇವೆ ಎಂದರು.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಭಾಗವಹಿಸಿದ್ದರು.


                                                                   
 (ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ

Post a Comment

Previous Post Next Post