ಅಕ್ಟೋಬರ್ 19, 2022 | , | 9:25PM |
ಗುಜರಾತ್‌ನ ರಾಜ್‌ಕೋಟ್‌ನಲ್ಲಿ 5,900 ಕೋಟಿ ರೂ.ಗಳ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಕಳೆದ 20 ವರ್ಷಗಳಲ್ಲಿ ಗುಜರಾತ್‌ನ ಕೈಗಾರಿಕಾ ಅಭಿವೃದ್ಧಿಯು ಹೊಸ ಎತ್ತರವನ್ನು ಮುಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್‌ಕೋಟ್‌ನಲ್ಲಿ 5 ಸಾವಿರದ 900 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ಆತ್ಮನಿರ್ಭರ್ ಭಾರತ್ ಮಿಷನ್‌ನಲ್ಲಿ ರಾಜ್‌ಕೋಟ್‌ನ ಎಂಜಿನಿಯರಿಂಗ್ ಉದ್ಯಮದ ಕೊಡುಗೆಯನ್ನು ಶ್ಲಾಘಿಸಿದರು.
ಮುಂದಿನ ದಿನಗಳಲ್ಲಿ ಗುಜರಾತ್‌ನ ನಾಲ್ಕನೇ ದೊಡ್ಡ ನಗರವು ವಿಮಾನಗಳ ಬಿಡಿಭಾಗಗಳನ್ನು ಸಿದ್ಧಪಡಿಸಲಿದೆ ಎಂದು ಅವರು ಹೇಳಿದರು. ರಾಜ್‌ಕೋಟ್‌ನ ಅವಳಿ ನಗರ ಮೊರ್ಬಿಯು ವಿಶ್ವದ ಸೆರಾಮಿಕ್ ಉದ್ಯಮದಲ್ಲಿ 13 ಪ್ರತಿಶತ ಪಾಲನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಬಹಿರಂಗಪಡಿಸಿದರು.
ತಂತ್ರಜ್ಞಾನದ ಬಳಕೆಗೆ ಉತ್ತೇಜನ ನೀಡುವ ಮೂಲಕ ನಗರಗಳಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸುವತ್ತ ಸರ್ಕಾರ ಗಮನಹರಿಸುತ್ತಿದೆ ಎಂದು ಅವರು ಹೇಳಿದರು. ಬಿಜೆಪಿ ಸರ್ಕಾರವು ಯುವ ಪೀಳಿಗೆಗೆ ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸಿದೆ ಎಂದು ಪ್ರಧಾನಿ ಹೇಳಿದರು.
ಗುಜರಾತ್ ಅನ್ನು ಸಮರ್ಥ ಮತ್ತು ಸ್ವಾವಲಂಬಿಯನ್ನಾಗಿ ಮಾಡಲು ಸರ್ಕಾರವು ಅವಿರತವಾಗಿ ಶ್ರಮಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಗುಜರಾತ್‌ನ ಬಿಜೆಪಿ ಸರ್ಕಾರವು ರಾಜ್ಯದ ಅಭಿವೃದ್ಧಿ ಮತ್ತು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಕೈಗೊಂಡ ಉಪಕ್ರಮಗಳ ಸರಣಿಯ ಕುರಿತು ಪ್ರಧಾನಿ ಮಾತನಾಡಿದರು.
ಆಯುಷ್ಮಾನ್ ಭಾರತ್ ಯೋಜನೆಯು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಬಡವರಿಗೆ ಆಶೀರ್ವಾದ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಪಿಎಂಎವೈ ಅಡಿಯಲ್ಲಿ ಗುಜರಾತ್‌ನಲ್ಲಿ ಮನೆಯ ಕನಸನ್ನು ನನಸು ಮಾಡಲು 10 ಲಕ್ಷಕ್ಕೂ ಹೆಚ್ಚು ಪಾಕಾ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು.
ಸಮಾರಂಭದಲ್ಲಿ, ಪ್ರಧಾನಮಂತ್ರಿ ಅವರು ಇಂಡಿಯಾ ಅರ್ಬನ್ ಹೌಸಿಂಗ್ ಕಾನ್ಕ್ಲೇವ್ ಅನ್ನು ಉದ್ಘಾಟಿಸಿದರು, ಇದು ಭಾರತದಲ್ಲಿ ವಸತಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡ ಚರ್ಚೆಗಳಿಗೆ ಸಾಕ್ಷಿಯಾಗಲಿದೆ. ಲೈಟ್ ಹೌಸ್ ಯೋಜನೆಯಡಿ ನಿರ್ಮಿಸಲಾದ 1,100 ಮನೆಗಳನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು.
Post a Comment