ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯ ಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲರ ಜನ್ಮದಿನ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*

[31/10, 3:54 PM] Kpcc official: *ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯ ಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲರ ಜನ್ಮದಿನ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*

ಇಂದಿರಾ ಗಾಂಧಿ ಅವರ ಸೇವೆ, ಈ ದೇಶದ ಐಕ್ಯತೆ, ಸಮಗ್ರತೆಗಾಗಿ ಅವರ ತ್ಯಾಗವನ್ನು ನಾವು ಸ್ಮರಿಸುತ್ತಿದ್ದೇವೆ. ಇಂದು ಅವರು ನಮ್ಮೊಡನೆ ಇಲ್ಲದಿದ್ದರೂ ಅವರ ಪ್ರತಿಯೊಂದು ಕಾರ್ಯಕ್ರಮ ಅವರನ್ನು ಇನ್ನು ಜೀವಂತವಾಗಿ ಇಟ್ಟಿದೆ.

ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಸಮಯದಲ್ಲಿ ಒಬ್ಬ ಹಿರಿಯ ಮಹಿಳೆ ಸೌತೆಕಾಯಿ ತಂದು ರಾಹುಲ್ ಗಾಧಿ ಅವರಿಗೆ ಕೊಟ್ಟು, ಇದು ನಿಮ್ಮ ಅಜ್ಜಿ ಕೊಟ್ಟ ಜಮೀನಿನಲ್ಲಿ ಬೆಳೆಯಲಾಗಿದೆ ಎಂದು ಹೇಳಿದ್ದರು. ಮತ್ತೊಂದೆಡೆ ಕಡಲೆಕಾಯಿ ಬೆಳೆಯುವ ರೈತ ಕೂಡ ಈ ಭೂಮಿಯನ್ನು ಇಂದಿರಾ ಗಾಂಧಿ ಅವರು ಕೊಟ್ಟಿದ್ದರು ಎಂದು ಸ್ಮರಿಸಿದರು.

ಹೀಗೆ ದೇಶದ ಬಡವರಿಗೆ ಕ್ರಾಂತಿಕಾರಿ ಕಾರ್ಯಕ್ರಮ ಬಂದಿದ್ದರೆ ಅದು ನೆಹರೂ, ಇಂದಿರಾಗಾಂಧಿ, ಕಾಂಗ್ರೆಸ್ ಸರ್ಕಾರದಿಂದ ಮಾತ್ರ.

ಭಾರತ ಜೋಡೋ ಯಾತ್ರೆ ಸಮಯದಲ್ಲಿ ರಾಹುಲ್ ಗಾಂಧಿ ಅವರು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನರೇಗಾ ಕಾರ್ಮಿಕರ ಕಷ್ಟ ಆಲಿಸಿದರು. ಮಗು ತಾಯಿಯ ಗರ್ಭದಲ್ಲಿ ಇದ್ದಾಗಿನಿಂದ ಅದಕ್ಕೆ 5 ವರ್ಷ ಆಗುವವರೆಗೂ ಅಂಗನವಾಡಿ ಕಾರ್ಯಕರ್ತೆಯರೇ ಕಾಳಜಿ ವಹಿಸುತ್ತಾರೆ. ಈ ಯೋಜನೆಯನ್ನು ಜಾರಿಗೆ ತಂದಿದ್ದು ಶ್ರೀಮತಿ ಇಂದಿರಾ ಗಾಂಧಿ ಅವರು. ಅದೇ ರೀತಿ ಆಶಾ ಕಾರ್ಯಕರ್ತೆಯರು ಮನಮೋಹನ್ ಸಿಂಗ್ ಸರಕಾರದ ಕೊಡುಗೆ ಎಂದು ಸ್ಮರಿಸಿದರು. ಇನ್ನು ಸ್ತ್ರೀಶಕ್ತಿ ಸಂಘ ಸೇರಿದಂತೆ ಮಹಿಳೆಯರ ಸಶಕ್ತೀಕರಣಕ್ಕೆ ಕಾಂಗ್ರೆಸ್ ಸರ್ಕಾರ ಅನೇಕ ಕಾರ್ಯಕ್ರಮ ನೀಡಿದೆ.

ನಮ್ಮ ದೇಶದಲ್ಲಿ ಊಟಕ್ಕೆ ತೊಂದರೆ ಆಗಿ ಗೋಧಿಯನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇಂದಿರಾ ಗಾಂಧಿ ಅವರು ದೇಶದಲ್ಲಿ ಹಸಿರು ಕ್ರಾಂತಿ ಮಾಡಿದ ಪ್ರಯುಕ್ತ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತಾಯಿತು. ನಮ್ಮ ದೇಶ ಶಕ್ತಿಶಾಲಿಯಾಗಿತ್ತು. ಈಗ ಬಿಜೆಪಿ ಸರ್ಕಾರ ಬಂದ ನಂತರ ಸ್ವಲ್ಪ ಹಳಿ ತಪ್ಪಿದೆ. ಈ ವಿಚಾರ ಬೇರೆ ಸಮಯದಲ್ಲಿ ಮಾತನಾಡೋಣ.

*ಇಂದಿರಾ ಕ್ಯಾಂಟೀನ್ ಉಳಿಸಲು ಹೋರಾಟ:*

ನಾವೆಲ್ಲರೂ ಇಂದು ಇಂದಿರಾ ಗಾಂಧಿ ಅವರ ಸ್ಮರಣೆ ಮಾಡುತ್ತಿದ್ದರೆ, ಈ ಸರ್ಕಾರ ಬೆಂಗಳೂರಿನಲ್ಲಿರುವ 40 ಇಂದಿರಾ ಕ್ಯಾಂಟೀನ್ ಗಳಿಗೆ ಬೀಗ ಹಾಕುತ್ತಿದೆ. ಸರ್ಕಾರ ಎಲ್ಲೆಲ್ಲಿ ಇಂದಿರಾ ಕ್ಯಾಂಟೀನ್ ಮುಚ್ಚುತ್ತಿದೆಯೋ ಅಲ್ಲೆಲ್ಲ ಹೋಗಿ ಧರಣಿ ಮಾಡಬೇಕು ಎಂದು ನಾನು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. 

ಆಟೋ ಚಾಲಕರು, ಕಾರ್ಮಿಕರು, ಬಡ ಜನರು 10 ರೂಪಾಯಿಗೆ ಹೊಟ್ಟೆ ತುಂಬ ಊಟ ಮಾಡಿ ಬದುಕುತ್ತಿದ್ದರು. ಈಗ ಅವರ ಹೊಟ್ಟೆ ಮೇಲೆ ಕಲ್ಲು ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನಾವು ಇಂದಿರಾ ಗಾಂಧಿ ಅವರ ಹೆಸರಲ್ಲಿ ಜನರ ಹೊಟ್ಟೆ ತುಂಬಿಸಿದರೆ, ಅದನ್ನು ಯಾಕೆ ನಿಲ್ಲಿಸುತ್ತಿದ್ದೀರಿ. ನೀವು ನಿಮ್ಮ ಜೇಬಿನಿಂದ ಹಣ ನೀಡುತ್ತಿಲ್ಲ. ರಾಜ್ಯದ ಜನರ ತೆರಿಗೆ ಹಣದಲ್ಲಿ ಸರ್ಕಾರ ಈ ಯೋಜನೆ ಮಾಡುತ್ತಿದೆ. ಬೇಕಾದರೆ ನೀವು ನಿಮ್ಮವರ ಹೆಸರಲ್ಲಿ ಬೇರೆ ಯೋಜನೆಗಳನ್ನು ಮಾಡಿ. ಅದನ್ನು ಬಿಟ್ಟು ಇಂತಹ ಜನಪರ ಯೋಜನೆಗಳನ್ನು ಹಾಳು ಮಾಡಬೇಡಿ. ಕಾಂಗ್ರೆಸ್ ಸರ್ಕಾರ ಇಂದಿರಾ ಗಾಂಧಿ ಅವರ ಹೆಸರಲ್ಲಿ ಎಷ್ಟು ಕ್ಯಾಂಟೀನ್ ಆರಂಭಿಸಿತ್ತೋ ಆ ಎಲ್ಲ ಕ್ಯಾಂಟೀನ್ ಗಳು ಚಾಲನೆಯಲ್ಲಿ ಇರಬೇಕು. ಅವುಗಳನ್ನು ಮುಚ್ಚಬಾರದು ಎಂದು ನಾನು ಒತ್ತಾಯಿಸುತ್ತೇನೆ.

ಈ ವಿಚಾರವಾಗಿ ಎಲ್ಲ ಜಿಲ್ಲಾಧ್ಯಕ್ಷರಿಂದ ವರದಿ ತರಿಸಿಕೊಂಡು ಹೋರಾಟ ರೂಪಿಸುತ್ತೇವೆ. ಜನರ ಹಸಿವು ನೀಗಿಸಲು ಕಾಂಗ್ರೆಸ್ ಪಕ್ಷ ಈ ಯೋಜನೆ ಜಾರಿಗೆ ತಂದಿದ್ದು, ಇದನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತೇವೆ.

*ಬಿಜೆಪಿ ಸರ್ಕಾರದಿಂದ ಜನರಿಗೆ ಮರಣ ಭಾಗ್ಯ:*

ಮುಖ್ಯಮಂತ್ರಿಗಳೇ ನೀವು ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದು, ಬೆಂಗಳೂರಿನ ರಸ್ತೆಗಳಲ್ಲಿ ಎಷ್ಟು ಗುಂಡಿಗಳಿವೆಯೋ ಗೊತ್ತಿಲ್ಲ. ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಎರಡು ವರ್ಷದಲ್ಲಿ 18 ಜನ ಸತ್ತಿದ್ದು, ಈ ಮೂಲಕ ನೀವು ಜನತೆಗೆ ಮರಣ ಭಾಗ್ಯ ನೀಡಿದ್ದೀರಿ. ಇದು ಬೆಂಗಳೂರಿಗೆ ನೀವು ಕೊಟ್ಟಿರುವ ಕೊಡುಗೆ. 

ಇಂದು ಬೆಂಗಳೂರು ನಗರಕ್ಕೆ ಇಷ್ಟು ದೊಡ್ಡ ಶಕ್ತಿ, ರಾಜ್ಯಕ್ಕೆ ಗೌರವ ಬಂದಿದ್ದರೆ ಅದು ಕಾಂಗ್ರೆಸ್ ಸರ್ಕಾರದಿಂದ. ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯ ಅತಿ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿ ಪಡೆದಿದೆ. ಇದನ್ನು ತೊಡೆದು ಹಾಕಿ ಮತ್ತೆ ರಾಜ್ಯವನ್ನು ನಂಬರ್ 1 ಮಾಡಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ.

*ಮುಖ್ಯಮಂತ್ರಿಗಳೇ ಧಮ್ ಇದ್ದರೆ ಉತ್ತರ ಕೊಡಿ:*

ನಿನ್ನೆ ಮುಖ್ಯಮಂತ್ರಿಗಳು ಸಾಕಷ್ಟು ವಿಚಾರ ಮಾತನಾಡಿದ್ದಾರೆ. ಅವರು ಯಾತ್ರೆ, ಸಮಾವೇಶ ಮಾಡುತ್ತಿದ್ದಾರೆ. ಅವರು ಧಮ್ಮು ತಾಕತ್ತು ಇದ್ದರೆ ನಿಲ್ಲಿಸಿ ಎಂದು ಸವಾಲು ಹಾಕಿದ್ದಾರೆ. ಅವರ ಸವಾಲಿಗೆ ಪ್ರತ್ಯುತ್ತರ ನೀಡಲು ನಾನು ಸಿದ್ಧನಾಗಿದ್ದೇನೆ. 

ನಾವು ಕಳೆದ ಎರಡು ತಿಂಗಳಿಂದ ನೀವು ಕೊಟ್ಟ ಮಾತಿನಂತೆ ನಡೆಯುತ್ತಿದ್ದೀರಾ ಎಂದು ಪ್ರತಿನಿತ್ಯ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಮುಖ್ಯಮಂತ್ರಿಗಳೇ, ನಿಮಗೆ ಧಮ್ ಇದ್ದರೆ, ಈ ಪ್ರಶ್ನೆಗಳಿಗೆ ಉತ್ತರ ನೀಡಿ. ಕಾಂಗ್ರೆಸ್ ಮಾಡಬಾರದನ್ನು ಮಾಡಿದೆ, ಎಲ್ಲದರ ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ. ಮುಖ್ಯಮಂತ್ರಿಗಳೇ ನಿಮಗೆ ಧಮ್ ಇದ್ದರೆ ನಮ್ಮ ಕಾಲ ಹಾಗೂ ನಿಮ್ಮ ಸರ್ಕಾರದ ಅವಧಿಯಲ್ಲಿನ ಪ್ರಕರಣಗಳ ತನಿಖೆಗೆ ಆಯೋಗ ರಚಿಸಿ ಎಂದು ಸವಾಲು ಹಾಕುತ್ತೇನೆ.

ಈ ಸರಕಾರದ  40% ಕಮಿಷನ್ ಭ್ರಷ್ಟಾಚಾರಕ್ಕೆ ಪಕ್ಕದ ಕ್ಷೇತ್ರದ ಪೊಲೀಸ್ ಇನ್ಸ್ ಪೆಕ್ಟರ್ ಬಲಿಯಾಗಿದ್ದಾರೆ. ಅವರ ಮನೆಗೆ ಭೇಟಿ ನೀಡಲು ನಾನು ಹಾಗೂ ರಾಮಲಿಂಗಾರೆಡ್ಡಿ ಅವರು ನಿರ್ಧರಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಎಂಟಿಬಿ ನಾಗರಾಜ್ ಅವರು 70-80 ಲಕ್ಷ ಕೊಟ್ಟು ಬಂದರೆ ಇನ್ನೇನಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಇದು ಹೃದಯಾಘಾತದ ಸಾವಲ್ಲ, ಸರ್ಕಾರದ ಕೊಲೆ ಎಂದು ಹೇಳಲು ಬಯಸುತ್ತೇನೆ. ಯುವಕರಿಗೆ ಉದ್ಯೋಗ ನೀಡಲು, ಪೋಸ್ಟಿಂಗ್ ಮಾಡಲು ಲಂಚ ಪಡೆಯಲಾಗಿದ್ದು, ಎಲ್ಲ ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. 

*ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಿ:*

ಮುಂದಿನ ತಿಂಗಳ ಒಳಗಾಗಿ ಈ ಕ್ಷೇತ್ರದ 250-300 ಬೂತ್ ಗಳಲ್ಲಿ ಪ್ರತಿ ಬೂತ್ ನಿಂದ 15-20 ಜನರನ್ನು ಸೇರಿಸಿ ಸಭೆ ಮಾಡಬೇಕು ಎಂದು ಈ ಕ್ಷೇತ್ರದ ನಾಯಕರಿಗೆ ಸೂಚನೆ ನೀಡುತ್ತಿದ್ದೇನೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರಿಗೆ ನ್ಯಾಯ ಸಿಗುತ್ತದೆ. ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಪರಿಶಿಷ್ಟ ಸಮುದಾಯದವರ ಹೆಸರನ್ನು ಮತದಾರರ  ಪಟ್ಟಿಯಿಂದ ಕಿತ್ತುಹಾಕುವ ಕೆಲಸವನ್ನು ಬಿಜೆಪಿ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿ ಬೂತ್ ನಲ್ಲಿ ಸಮೀಕ್ಷೆ ಮಾಡಿ ಯಾವ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿದಿದೆ ಎಂದು ಪರಿಶೀಲಿಸಿ, ಕೈಬಿಡಲಾಗಿರುವ ಹೆಸರನ್ನು ಸೇರಿಸಬೇಕು. ಆ ಬಗ್ಗೆ ನೀವು ಜಾಗೃತರಾಗಿ ಕೆಲಸ ಮಾಡಬೇಕು.

ಸಿ.ವಿ ರಾಮನ್ ನಗರದಲ್ಲಿ ಹೆಚ್ಚು ಸದಸ್ಯತ್ವ ಮಾಡಿದ್ದು ಅಭಿನಂದನೆ ಸಲ್ಲಿಸುತ್ತೇನೆ. ನನ್ನಿಂದ ಕೆಲವರಿಗೆ ಸದಸ್ಯತ್ವ ಗುರುತಿನ ಚೀಟಿ ಕೊಡಿಸಿದ್ದು, ಪ್ರತಿಯೊಬ್ಬರಿಗೂ ಅವರ ಮನೆ, ಮನೆಗೆ ಹೋಗಿ ಅದನ್ನು ತಲುಪಿಸುವ ಕೆಲಸ ಆಗಬೇಕು. 

ಸಂಪತ್ ರಾಜ್ ಅವರು ಕೋವಿಡ್ ಸಮಯದಲ್ಲಿ ಜನರಿಗೆ ಹೆಚ್ಚಿನ ನೆರವು ನೀಡಿದ್ದು, ಎಲ್ಲರೂ ಅವರಿಗೆ ಶಕ್ತಿ ತುಂಬಬೇಕು. ಕಾಂಗ್ರೆಸ್ ಪಕ್ಷ ಅವರ ಜತೆಗಿದೆ ಎಂದು ಹೇಳಲು ನಾನಿಲ್ಲಿಗೆ ಬಂದಿದ್ದೇನೆ. ಇಲ್ಲಿ ಯಾರು ಕಷ್ಟ ಪಟ್ಟು ಪಕ್ಷದ ಕೆಲಸ ಮಾಡುತ್ತಾರೋ, ಯಾರು ಕಷ್ಟ ಕಾಲದಲ್ಲಿ ನಮ್ಮ ಪಕ್ಷದ ಪರವಾಗಿ ನಿಂತಿರುತ್ತಾರೋ ಅವರೇ ನಮ್ಮ ನಾಯಕರು.

ಇಲ್ಲಿನ ಶಾಸಕರು ಜನರ ಮಧ್ಯೆ ಇಲ್ಲ. ಕಳೆದು ಹೋಗಿದ್ದಾರೆ. ಹೀಗಾಗಿ ನೀವು ಮುಂದಿನ ಬಾರಿ ಹೊಸ ಶಾಸಕರನ್ನು ಆರಿಸಿ ಕಳುಹಿಸಬೇಕಾಗಿದೆ.

ಬಿಜೆಪಿಯವರು ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳನ್ನು ಬದಲಾಯಿಸಿಕೊಂಡಿದ್ದಾರೆ. ಅವರು ಯಾವುದೇ ಸಮಾವೇಶ ಮಾಡಲಿ, ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನ ಸಂಕಲ್ಪ ಮಾಡಿದ್ದಾರೆ.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಈ ದೇಶಕ್ಕಾಗಿ ಪ್ರಧಾನ ಮಂತ್ರಿ ಹುದ್ದೆ ತ್ಯಾಗ ಮಾಡಿದ್ದಾರೆ. ಅಂತಹ ಕುಟುಂಬದ ನಾಯಕತ್ವದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಈಗ ಅವರು ತಮ್ಮ ಜವಾಬ್ದಾರಿಯನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಿದ್ದಾರೆ. 

ನಾವು ಈ ದೇಶ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಉಳಿಸಿಕೊಂಡು ಅದರಂತೆ ನಾವು ನಡೆಯಬೇಕು. ಇದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಇದು ನಮ್ಮ ರಾಜ್ಯದ ಭಾಗ್ಯ. ಇದನ್ನು ನಾವು ಉಳಿಸಿಕೊಳ್ಳೋಣ. ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನ.6ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರನ್ನು ನಾವು ಅದ್ಧೂರಿಯಾಗಿ ಸ್ವಾಗತಿಸಬೇಕಾಗಿದ್ದು, ಈ ಕ್ಷೇತ್ರದಿಂದ ಹೆಚ್ಚು ಜನ ಆ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಕೇಳಿಕೊಳ್ಳುತ್ತೇನೆ.
[31/10, 3:59 PM] Kpcc official: ರಸ್ತೆ ಗುಂಡಿಗಳ ವಿಚಾರದಲ್ಲಿ ಹೈಕೋರ್ಟ್ ಮೇಲಿಂದಮೇಲೆ ಛೀಮಾರಿ ಹಾಕುತ್ತಿದೆ.

ಇದುವರೆಗೂ ಒಬ್ಬೇ ಒಬ್ಬ ಅಧಿಕಾರಿಯನ್ನು ರಸ್ತೆಗುಂಡಿಗೆ ಹೊಣೆ ಮಾಡಿ ಕ್ರಮ ಕೈಗೊಳ್ಳಲಿಲ್ಲ ಸರ್ಕಾರ.

#PuppetCM ಅವರೇ, ಅಧಿಕಾರಿಗಳು ನಿಮ್ಮ ಮಾತು ಕೇಳುವುದಿಲ್ಲವೇ, ನಿಮ್ಮ ಅಂಕೆಯಲ್ಲಿಲ್ಲವೇ?

ರಸ್ತೆಗುಂಡಿಗಳಿಗೆ ಹೊಣೆ ಯಾರು? ಸಾವುಗಳಿಗೆ ಕಾರಣ ಯಾರು?
#SayCM
[31/10, 3:59 PM] Kpcc official: ಬೆಂಗಳೂರು ಉಸ್ತುವಾರಿಗಾಗಿ ಕಿತ್ತಾಡುವ ಸಚಿವರು ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಅದೇ ಹೋರಾಟ ತೋರುತ್ತಿಲ್ಲವೇಕೆ?

'ಬೊಮ್ಮಾಯಿ ವರ್ಷನ್ ಅಚ್ಛೆ ದಿನಗಳ' ಭಾಷಣ ಕುಟ್ಟುವ #PayCM @BSBommai ಅವರೇ,
ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ನಿಮಗೆ ದಮ್ಮು ತಾಕತ್ತು ಇಲ್ಲದಾಗಿರುವುದೇಕೆ?

ನಿಮ್ಮ ಪ್ರಲಾಪ ಮೈಕ್ ಮುಂದೆ ಮಾತ್ರವೇ?
#SayCM
[31/10, 3:59 PM] Kpcc official: ಸಿನೆಮಾ ಪ್ರಿಯ @BSBommai ಅವರು ಪ್ರತಿದಿನವೂ ಥೇಟ್ ಸಿನೆಮಾ ಶೈಲಿಯಲ್ಲಿ ದಮ್ಮು ತಾಕತ್ತಿನ ಡೈಲಾಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ!

ಮುಖ್ಯಮಂತ್ರಿಗಳೇ, ಸಿನೆಮಾ ಗುಂಗು ಬಿಟ್ಟು ವಾಸ್ತವ ಜಗತ್ತಿನಲ್ಲಿ ಕಣ್ಬಿಟ್ಟು ನೋಡಿ, ರಸ್ತೆ ಗುಂಡಿಗಳು ಕಾಣುತ್ತವೆ.
ಪ್ರಾಣ ಬಿಟ್ಟವರ ಕುಟುಂಬದ ರೋಧನೆ ಕಾಣುತ್ತದೆ,
ನಿಮ್ಮ ವೈಫಲ್ಯಗಳು ಕಾಣುತ್ತವೆ.
#SayCM
[31/10, 3:59 PM] Kpcc official: ಮೊರ್ಬಿ ತೂಗುಸೇತುವೆ ಕುಸಿತದಲ್ಲಿ
100ಕ್ಕೂ ಹೆಚ್ಚು ಸಾವುಗಳಾದ ಘಟನೆ ದೇಶದ ಅತಿ ದೊಡ್ಡ ದುರಂತಗಳಲ್ಲೊಂದು.

ದುರಂತಗಳನ್ನು ಚುನಾವಣೆಗೆ ಬಳಸುವ ಪ್ರಧಾನಿ ಈ ದುರಂತಕ್ಕೆ ಮೌನೇಂದ್ರ ಮೋದಿಯಾಗಿದ್ದಾರೆ.

ಇದು ಗುಜರಾತ್ ಮಾಡೆಲ್‌ನ ಆಕ್ಟ್ ಆಫ್ ಫ್ರಾಡ್ ಅಲ್ಲವೇ @BJP4Karnataka?

40 ಪರ್ಸೆಂಟ್‌
"ಒಂದು ದೇಶ ಒಂದು ಕಮಿಷನ್" ಎಂದು ಜಾರಿಯಾಗಿದೆಯೇ?
[31/10, 5:02 PM] Kpcc official: ಮೊರ್ಬಿ ತೂಗುಸೇತುವೆಯನ್ನು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಸಾರ್ವಜನಿಕ ಪ್ರವೇಶಕ್ಕೆ ಬಿಡಲಾಗಿತ್ತು.

ಅನುಭವವಿಲ್ಲದ ಗಡಿಯಾರ ತಯಾರಿಕಾ ಕಂಪೆನಿಗೆ ದುರಸ್ತಿ ಕೆಲಸ ವಹಿಸಲಾಗಿತ್ತು.

ಟೆಂಡರ್ ಪ್ರಕ್ರಿಯೆಯಲ್ಲಿ ಕಂಪೆನಿಯ ಅನುಭವ ಪರಿಗಣಿಸಿರಲಿಲ್ಲವೇಕೆ?

ಗುಜರಾತಿನಲ್ಲೂ #40PercentSarkara ಸ್ಥಾಪಿಸಿದ್ದೀರಾ @narendramodi ಅವರೇ?

Post a Comment

Previous Post Next Post