ಅಕ್ಟೋಬರ್ 03, 2022 | , | 8:21PM |
ಮಹಾ ಅಷ್ಟಮಿಯನ್ನು ದೇಶದ ವಿವಿಧೆಡೆ ಧಾರ್ಮಿಕ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ

ನವರಾತ್ರಿ ಅಥವಾ ನವದುರ್ಗಾ ಹಬ್ಬದ ಎಂಟನೇ ದಿನವಾದ ಇಂದು ಮಹಾ ಅಷ್ಟಮಿಯನ್ನು ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ, ಹಿಂದೂ ಮನೆಗಳಲ್ಲಿ ಹಬ್ಬವನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಇದನ್ನು ಮುಖ್ಯವಾಗಿ ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರ ಪ್ರದೇಶ, ಗುಜರಾತ್, ಬಿಹಾರ, ಸಿಕ್ಕಿಂ, ಒಡಿಶಾ ಮತ್ತು ಇತರ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ದಿನ ದುರ್ಗಾದೇವಿಯನ್ನು ಮಹಾಗೌರಿ ರೂಪದಲ್ಲಿ ಭಕ್ತರು ಪೂಜಿಸುತ್ತಾರೆ.
ನವರಾತ್ರಿಯ ಮಹಾ ಅಷ್ಟಮಿಯ ಶುಭ ಸಂದರ್ಭದಲ್ಲಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಮಾ ಮಹಾಗೌರಿಯು ಪ್ರತಿಯೊಬ್ಬರ ಜೀವನದಲ್ಲಿ ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಾ ಮಹಾಗೌರಿಯ ಸ್ತುತಿಯ ವಾಚನವನ್ನು ಹಂಚಿಕೊಂಡಿದ್ದಾರೆ
Post a Comment