[10/10, 8:58 AM] +91 99001 58601: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ತಮ್ಮ ಆರ್ ಟಿ ನಗರ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
[10/10, 10:56 AM] +91 99001 58601: https://twitter.com/BSBommai/status/1579339795549270016?t=egnBOAoWurc-Akqf-IXm4w&s=08
[10/10, 10:56 AM] +91 99001 58601: https://twitter.com/BSBommai/status/1579339798372052994?t=dK2kho7rMJY4Pron1y77pQ&s=08
[10/10, 10:56 AM] +91 99001 58601: *ಮುಲಾಯಂ ಸಿಂಗ್ ಯಾದವ್ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ*
ಬೆಂಗಳೂರು, ಅಕ್ಟೋಬರ್ 10: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಮ್ ಮನೋಹರ್ ಲೋಹಿಯಾ, ರಾಜ್ ನಾರಾಯಣ್ ಅವರಂಥ ನಾಯಕರ ಮಾರ್ಗದರ್ಶನದಲ್ಲಿ ಮುನ್ನೆಲೆಗೆ ಬಂದ ಮುಲಾಯಂ ಸಿಂಗ್ ಅವರು ತುರ್ತು ಪರಿಸ್ಥಿತಿ ವಿರೋಧಿಸಿ ಸೆರೆವಾಸ ಅನುಭವಿಸಿದ್ದರು. ಸಮಾಜವಾದಿ ಪಕ್ಷವನ್ನು ಸ್ಥಾಪಿಸಿ, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಮುಲಾಯಂ ಸಿಂಗ್ ಅವರು ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ರಾಷ್ಟ್ರವು ಮುತ್ಸದ್ದಿ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಭಗವಂತ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮಹಾರಾಷ್ಟ್ರದ ಕನ್ನೇರಿ ಸಿದ್ದಗಿರಿ ಮಠದಲ್ಲಿ ನಡೆದ ಸಂತ ಸಮಾವೇಶ ಉದ್ಘಾಟನೆ ಹಾಗೂ ಕರ್ನಾಟಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ , ಕನ್ನೇರಿ ಸಿದ್ದಗಿರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಸ್ವಾಮೀಜಿ, ಸಚಿವರಾದ ಸಿ.ಸಿ.ಪಾಟೀಲ್, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ವಿ.ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.
[10/10, 4:47 PM] +91 99001 58601: ಮುಖ್ಯಮಂತ್ರಿಗಳಿಂದ ಕನ್ನೇರಿ ಸಿದ್ಧಗಿರಿ ಮಠದಲ್ಲಿ 'ಸಂತ ಸಮಾವೇಶ' ಉದ್ಘಾಟನೆ
*ಕನ್ನೇರಿ ಮಠವನ್ನು ಕರ್ನಾಟಕದಲ್ಲಿಯೂ ಸ್ಥಾಪಿಸಲು ಸಿಎಂ ಬೊಮ್ಮಾಯಿ ಆಹ್ವಾನ*
ಮಹಾರಾಷ್ಟ್ರ, ಅಕ್ಟೋಬರ್ 10: ಕರ್ನಾಟಕದಲ್ಲಿ ಕನ್ನೇರಿ ಮಠವನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಹ್ವಾನ ನೀಡಿದರು.
ಅವರು ಇಂದು ಕೊಲ್ಹಾಪುರದಲ್ಲಿ ಆಯೋಜಿಸಿರುವ ‘‘ಸಂತ ಸಮಾವೇಶ"ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಠದ ನಿರ್ಮಾಣಕ್ಕೆ ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಕನ್ನೇರಿ ಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಮೂರು ಕೋಟಿ ಅನುದಾನ ಒದಗಿಸಲಾಗಿದ್ದು ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಮುಂಬರುವ ದಿನಗಳಲ್ಲಿ ಎರಡು ಕೋಟಿ ರೂ.ಗಳ ಅನುದಾನ ಒದಗಿಸುವುದಾಗಿ ತಿಳಿಸಿದರು.
*ಬೌದ್ಧಿಕ ಕೆಲಸಗಳಿಗೆ ಗುರುಗಳು ಅಗತ್ಯ*
ಭೌತಿಕವಾಗಿ ಕೆಲಸ ಮಾಡಲು ಸಾಧ್ಯ, ಬೌದ್ಧಿಕವಾಗಿ ಮಾಡಲು ಗುರುಗಳು ಅಗತ್ಯವೆಂದ ಅವರು ಈ ಪುಣ್ಯಭೂಮಿ ಬಂದು ನಾನು ಸಹ ಪ್ರೇರಿತನಾಗಿದ್ದೇನೆ ಎಂದರು.
ಇಂದು ಸಹೃದಯಿ ಸಂತರ ಸಮಾವೇಶ ನಡೆಯುತ್ತಿರೋದು ಸಂತಸದ ಸಂಗತಿ. ಪ್ರಥಮ ಬಾರಿಗೆ ಇಲ್ಲಿ ಆಗಮಿಸಿದ್ದು, ಭಕ್ತಿ ಭಾವದ ಕಾರ್ಯಕ್ರಮ ಮಠದ ಸೇವೆ ನೋಡಿದಾಗ ಇದು ಭಾರತದ ಆದರ್ಶ ಮಠವಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.
*ಆದರ್ಶ ಮಠ*
ಒಂದು ಮಠ ಆದರ್ಶ ಎನಿಸಿಕೊಳ್ಳಲು ತನ್ನದೇ ಆದ ಆದರ್ಶ ಹೊಂದಿರಬೇಕು. ಕನ್ನೇರಿ ಮಠ ತಮ್ಮದೇ ಆದ ಆದರ್ಶವನ್ನು ಹೊಂದಿ ಭಕ್ತರಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯನ್ನು ಮಾಡುತ್ತಿದೆ. ಭಕ್ತಿ ಅಂದ್ರೆ ಉತ್ಕೃಷ್ಟವಾದ ಪ್ರೀತಿ, ಅಂತಹ ಭಕ್ತಿಯನ್ನು ಇಲ್ಲಿ ಕಾಣಬಹುದು ಎಂದರು.
*ಮಠಗಳಿಂದ ಸಂಸ್ಕೃತಿ ಮತ್ತು ಸಂಸ್ಕಾರ.*
ಮನುಷ್ಯನ ಜೀವನ ತಾಯಿಯ ಗರ್ಭದಿಂದ ಭೂತಾಯಿ ಗರ್ಭದವರೆಗೆ. ತಾಯಿ ಅನ್ನೋದು ಬಹಳ ಶ್ರೇಷ್ಠವಾದದ್ದು, ಜನ್ಮಪೂರ್ವ ಸಂಬಂಧ ಇರುವುದು ತಾಯಿಯೊಂದಿಗೆ ಮಾತ್ರ. ಹಾಗಾಗಿಯೇ ತಾಯಿಗೆ ಉನ್ನತ ಸ್ಥಾನವಿದೆ. ಭೂಮಿಗೆ ಭೂತಾಯಿ, ತಾಯಿ ದೇಶಕ್ಕೆ ಮಾತೃಭೂಮಿ ಎನ್ನುತ್ತೇವೆ ಎಂದರು. ಜನ್ಮಕೊಟ್ಟ ತಾಯಿ, ಸಲಹುವ ತಾಯಿ ಎರಡನ್ನೂ ಪೋಷಿಸಿದಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದರು. ಬೇರೆ ದೇಶಕ್ಕೂ ನಮಗೂ ಇರುವ ವ್ಯತ್ಯಾಸ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ. ಅದು ನಮ್ಮ ದೇಶದ ಮಠ ಮಂದಿರಗಳಲ್ಲಿ ದೊರೆಯುತ್ತದೆ.
ನಾಗರೀಕತೆ ಮತ್ತು ಸಂಸ್ಕೃತಿ ಮಧ್ಯದ ವ್ಯತ್ಯಾಸ ಮರೆತಿದ್ದೇವೆ. ನಾಗರೀಕತೆಯನ್ನೇ ನಾವು ಸಂಸ್ಕೃತಿ ಅಂದುಕೊಂಡಿದ್ದೇವೆ. ಇವತ್ತಿನ ಆಧುನೀಕರಣದಿಂದ ಬೇರ್ಪಡುತ್ತಿವೆ. ಇದು ಸರಿಯಾದ ಬೆಳವಣಿಗೆಯಲ್ಲ. ಸತ್ಯ, ಧರ್ಮ, ನ್ಯಾಯದಿಂದ ಸಂಸ್ಕೃತಿ ಬೆಳೆದು, ಇವು ಮಠಮಾನ್ಯಗಳಲ್ಲಿ ದೊರಕುತ್ತದೆ ಎಂದರು. ಭಾರತ ಸಂಸ್ಕಾರ, ಸಂಸ್ಕೃತಿಯಿಂದ ಕೂಡಿದ ದೇಶ. ನಿರಂತರ ಭಕ್ತಿ ಚಳವಳಿ ಭಾರತದಲ್ಲಿ ಆಗಿದೆ. ಆಧ್ಯಾತ್ಮದ ಚಿಂತನೆ, ಆಧ್ಯಾತ್ಮ ಗುರುಗಳು ನಮ್ಮ ದೇಶದಲ್ಲಿದ್ದಾರೆ ಎಂದರು.
*ಒಂದು ಲಕ್ಷ ಗೋವುಗಳ ರಕ್ಷಣೆ*
ಕರ್ನಾಟಕ ರಾಜ್ಯದಲ್ಲಿ ಪುಣ್ಯಕೋಟಿ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ನೂರು ಕೋಟಿ ರೂಪಾಯಿ ಇದೇ ತಿಂಗಳು ಸಂಗ್ರಹವಾಗುತ್ತಿದ್ದು ಒಂದು ಲಕ್ಷ ಗೋವುಗಳನ್ನು ಜನರ ಹಣದಿಂದ ರಕ್ಷಣೆ ಮಾಡಲಾಗುತ್ತಿದೆ ಎಂದರು.
ಎಕಾನಾಮಿ ಅಂದ್ರೆ ದುಡ್ಡು ಅಲ್ಲ ದುಡಿಮೆ, ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಎನ್ನುವುದು
ಈ ಮಠದಲ್ಲಿ ಕಾರ್ಯಗತವಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ , ಕನ್ನೇರಿ ಸಿದ್ದಗಿರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಸ್ವಾಮೀಜಿ, ಸಚಿವರಾದ ಸಿ.ಸಿ.ಪಾಟೀಲ್, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ವಿ.ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.
[10/10, 7:14 PM] +91 99001 58601: *ಶಾಸಕ ಆನಂದ್ ಮಾಮನಿ ಆರೋಗ್ಯ ವಿಚಾರಿದ ಸಿಎಂ ಬೊಮ್ಮಾಯಿ*
ಬೆಂಗಳೂರು, ಅಕ್ಟೋಬರ್ 10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಮಾಮನಿಯವರ
ಆರೋಗ್ಯ ವಿಚಾರಿಸಿದರು.
ಕೊಲ್ಲಾಪುರದಿಂದ ಬೆಂಗಳೂರಿಗೆ ಹಿಂದಿರುಗಿದ ಬಳಿಕ ನೇರವಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದರು.
ಈ ಸಂದರ್ಭದಲ್ಲಿ ಸಚಿವರಾದ ವಿ. ಸೋಮಣ್ಣ, ಮುರುಗೇಶ್ ನಿರಾಣಿ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ ಉಪಸ್ಥಿತರಿದ್ದರು.
Post a Comment