ಅಕ್ಟೋಬರ್ 26, 2022 | , | 2:22PM |
ಐದು ರಾಷ್ಟ್ರಗಳ ಪ್ರತಿನಿಧಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರುಜುವಾತುಗಳನ್ನು ಸಲ್ಲಿಸಿದರು

@rashtrapatibhvn
ಐದು ರಾಷ್ಟ್ರಗಳ ರಾಯಭಾರಿಗಳು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರುಜುವಾತುಗಳನ್ನು ಸಲ್ಲಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಉಗಾಂಡಾದ ಹೈಕಮಿಷನರ್ ಮತ್ತು ವಿಯೆಟ್ನಾಂ, ಇರಾನ್, ಸ್ವೀಡನ್ ಮತ್ತು ಬೆಲ್ಜಿಯಂನ ರಾಯಭಾರಿಗಳಿಂದ ಶ್ರೀಮತಿ ಮುರ್ಮು ಅವರು ರುಜುವಾತುಗಳನ್ನು ಸ್ವೀಕರಿಸಿದರು. ತಮ್ಮ ರುಜುವಾತುಗಳನ್ನು ಸಲ್ಲಿಸಿದವರು ಉಗಾಂಡ ಗಣರಾಜ್ಯದ ಹೈ ಕಮಿಷನರ್ ಶ್ರೀಮತಿ ಜಾಯ್ಸ್ ಕಾಕುರಾಮತ್ಸಿ ಕಿಕಾಫುಂಡಾ, ವಿಯೆಟ್ನಾಂನ ಸಮಾಜವಾದಿ ಗಣರಾಜ್ಯದ ರಾಯಭಾರಿ ಶ್ರೀ ನ್ಗುಯೆನ್ ಥಾನ್ ಹೈ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ರಾಯಭಾರಿ ಡಾ ಇರಾಜ್ ಇಲಾಹಿ, ಶ್ರೀ ಜಾನ್ ಥೆಸ್ಲೆಫ್, ರಾಯಭಾರಿ ಸ್ವೀಡನ್ ಮತ್ತು ಶ್ರೀ ಡಿಡಿಯರ್ ವಾಂಡರ್ಹಸ್ಸೆಲ್ಟ್, ಬೆಲ್ಜಿಯಂ ಸಾಮ್ರಾಜ್ಯದ ರಾಯಭಾರಿ
Post a Comment