[08/10, 8:15 PM] +1: *ಸಮಾಜ ಮಾಡುವ ನಿರ್ಣಯಕ್ಕೆ ಸರ್ಕಾರ ಸ್ಪಂದಿಸಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು:ಪ್ರಜಾಪ್ರಭುತ್ವದಲ್ಲಿ ಸಮಾಜ ಮಾಡುವ ನಿರ್ಣಯಕ್ಕೆ ಸರ್ಕಾರಗಳು ಸ್ಪಂದಿಸಬೇಕು. ಈಗ ನಾವು ಸ್ಪಂದಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಎಸ್ಸಿ ಎಸ್ಟಿ ಸಮುದಾಯದ ವಿವಿಧ ಮಠಾಧೀಶರು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಬಹಳ ದಿನಗಳಿಂದ ಆಗಬೇಕಿದ್ದ ಕಾರ್ಯ ಈಗ ಆಗಿದೆ. ನಮ್ಮ ದೇಶದ ಸಂಸ್ಕೃತಿಯಲ್ಲಿ ಪರಮಪೂಜ್ಯರಿಗೆ ಗೌರವ ಮತ್ತು ಮಹತ್ವ ಕೊಡುತ್ತೀವಿ. ಇದನ್ನು ಎಲ್ಲ ಸಮಾಜಗಳಲ್ಲೂ ಕಾಣಬಹುದು ಎಂದರು.
*ಚಲನಶೀಲ ಸಂವಿಧಾನ*
ಬಾಬಾ ಸಾಹೇಬ್ ಅಂಬೇಡ್ಕರ್ ರಚನೆ ಮಾಡಿದ್ದು ಚಲನಶೀಲ ಸಂವಿಧಾನ. ಸಂವಿಧಾನದಲ್ಲಿ ಹೊಸ ತಿದ್ದುಪಡಿ ಮತ್ತು ಅನುಚ್ಛೇದವನ್ನು ಸೇರಿಸುವ ಅವಕಾಶವನ್ನು ಅಂಬೇಡ್ಕರ್ ಅವರೇ ಮಾಡಿಕೊಟ್ಟಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬದುಕು ಬದಲಾವಣೆ ಆಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಸಂವಿಧಾನ ಸ್ಪಂದಿಸಬೇಕು ಎನ್ನುವ ಭಾವನೆ ಅಂಬೇಡ್ಕರ್ ಹೊಂದಿದ್ದರು. ಆದ್ದರಿಂದಲೇ ಸ್ಪಂದನಾಶೀಲ ಸಂವಿಧಾನವನ್ನು ಅವರು ರಚಿಸಿದರು ಎಂದರು.
ಸಂವಿಧಾನ ರಚನೆ ಆದಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ತಲಾ 6 ಜಾತಿಗಳು ಮಾತ್ರವೇ ಇದ್ದವು. ಕ್ರಮೇಣ ಹೊಸ ಸಮುದಾಯಗಳು ಸೇರಿಕೊಂಡ ಕಾರಣ ಜನಸಂಖ್ಯೆ ಹೆಚ್ಚಳವಾಯಿತು. ವಿಶೇಷವಾಗಿ ಕರ್ನಾಟಕದಲ್ಲಿ ಎಸ್ಸಿ ಎಸ್ಟಿ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕೊಡಿಸಲು ಹಿಂಜರಿತ, ವಿಳಂಬ, ಮುಂದೂಡಿಕೆ ನೆಪಗಳು ನೋಡಿಕೊಂಡೇ ಬಂದಿದ್ದೀವಿ. ಇಷ್ಟು ವರ್ಷದ ಭಾವನೆಗಳಿಗೆ ಸ್ಪಂದಿಸಿದ ಎಲ್ಲಾ ಗುರುಗಳು ಹೋರಾಟ ಮಾಡಿದಾಗ ಇದಕ್ಕೆ ಬಲ ಬಂತು ಎಂದು ಸಿಎಂ ತಿಳಿಸಿದರು.
*ಅತ್ಯುತ್ತಮ ವರದಿ* –
ಎಸ್ಟಿ ಸಮುದಾಯದ ಪೂಜ್ಯರು ಮೀಸಲಾತಿಗಾಗಿ ಪಾದ ಯಾತ್ರೆ ಮಾಡಿದಾಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ರಚಿಸಲಾಯಿತು. ಆದರೆ ಅವರಿಗೆ 6 ತಿಂಗಳ ಕಾಲಾವಕಾಶ ನೀಡಿದ್ದರಿಂದ ಕೆಲಸವೇ ಆಗಿರಲಿಲ್ಲ. ಆದರೂ ಕೂಡ ವರದಿ ಕೊಡಲು ಸಮಯ ಹೆಚ್ಚಿಗೆ ಮಾಡಿಸಿಕೊಂಡು ಬಹಳಷ್ಟು ವಿಶ್ಲೇಷಣೆಗಳನ್ನು ಮಾಡಿ ಹಿಂದಿನ ಮತ್ತು ಇಂದಿನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಬೇರೆ ಬೇರೆ ರಾಜ್ಯಗಳಲ್ಲಿ ಏನಾಗಿದೆ ಹಾಗೂ ಸಂವಿಧಾನ ಏನು ಹೇಳುತ್ತೆ ಎಂದು ಪರಾಮರ್ಶಿಸಿ ಬಹಳ ಅತ್ಯುತ್ತಮವಾದ ವರದಿಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿದರು ಎಂದು ಸಿಎಂ ಹೇಳಿದರು.
ಇದರ ಅನುಷ್ಠಾನದ ಬಗೆ ಹೇಗೆ ಎನ್ನುವುದಕ್ಕೆ ನ್ಯಾಯಮೂರ್ತಿ ಸುಭಾಷ್ ಅಡಿ ಅವರ ಸಮಿತಿಯನ್ನು ರಚಿಸಲಾಯಿತು. . ಅವರೂ ಕೂಡ ಜಸ್ಟೀಸ್ ನಾಗಮೋಹನ್ ದಾಸ್ ವರದಿ ಅನುಷ್ಠಾನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೀಸಲಾತಿಯನ್ನು ಶೇ 50%ಕ್ಕಿಂತ ಹೆಚ್ಚಿಸಬಹುದು ಎಂಬ ಸಮರ್ಥ ಕಾರಣದಿಂದಲೇ ಇಂದು ಈ ಸಂಬಂಧ ತೀರ್ಮಾನ ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ಇತರೆ ಸಮುದಾಯಗಳ ವಿಶ್ವಾಸ ಗಳಿಕೆ*
ರಾಜಕೀಯವಾಗಿ ಇತರೆ ಸಮುದಾಯಗಳನ್ನು ಮತ್ತು ಎಲ್ಲ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ಹೆಚ್ಚಳ ಸಂಬಂಧ ತೀರ್ಮಾನ ಮಾಡಲಾಗಿದೆ. ಈ ಸಂಬಂಧ ಸರ್ವ ಪಕ್ಷ ಸಭೆ ಕರೆದು ಸರ್ವ ಸಮ್ಮತವಾಗಿ ಒಪ್ಪಿಗೆ ಪಡೆಯಲಾಗಿದೆ. ಸಚಿವ ಸಂಪುಟ ದಲ್ಲಿ ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಮುಂದೆಯೂ ಅಷ್ಟೇ ಬದ್ಧತೆಯಿಂದ ನಾವು ಇದನ್ನು ಅನುಷ್ಠಾನ ಮಾಡುವ ಕೆಲಸವನ್ನು ಮಾಡುತ್ತೇವೆ. ಈ ಸಂಬಂಧ ಸರ್ಕಾರಿ ಆದೇಶವೂ ಹೊರಬೀಳಲಿದೆ. ಜತೆಗೆ ಪರಿಚ್ಛೇದ 9 ರ ಅಡಿಯಲ್ಲಿ ಇದನ್ನು ತರಲು ಚರ್ಚೆ ಆಗಿದೆ. ಕಾನೂನು ತಜ್ಞರು ಮತ್ತು ಕಾನೂನು ಆಯೋಗದೊಂದಿಗೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು. ಈಗಾಗಲೇ ಕಾನೂನು ಮಂತ್ರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಹೇಳಿದರು.
*ಹೊಸದಕ್ಕೆ ಸವಾಲು ಹೆಚ್ಚಿರುತ್ತೆ*
ಯಾವತ್ತಿಗೂ ಬದಲಾವಣೆ ಸುಲಭದಲ್ಲಿ ಆಗುವುದಿಲ್ಲ. ಹೊಸತನಕ್ಕೆ ಸಹಜವಾಗಿ ಸವಾಲುಗಳು ಹೆಚ್ಚು ಇರುತ್ತದೆ. ಆದರೆ ಬದಲಾವಣೆ ಮಾಡುವ ದಿಟ್ಟ ಹೆಜ್ಜೆ ಇಟ್ಟಾಗಲೇ ಮುಂದೆ ದಾರಿ ಕಾಣುವುದು. ಕೇವಲ ಊಹೆಗಳನ್ನು ಮಾಡಿಕೊಂಡೇ ಕೂತಿದ್ದಕ್ಕೆ ಇಷ್ಟು ದಿನ ಏನೂ ಬದಲಾವಣೆ ಆಗಿರಲಿಲ್ಲ. ಈಗ ಅದನ್ನೆಲ್ಲಾ ಬಿಟ್ಟು ಸವಾಲುಗಳಿಗೆ ಪರಿಹಾರ ಹುಡುಕಿ ಮುಂದುವರಿಯುವುದಕ್ಕೆ ಬದ್ಧರಾಗಿದ್ದೇವೆ. ಇನ್ನು ಮುಂದೆ ಅವಕಾಶ ವಂಚಿತ ಹಾಗೂ ತುಳಿತಕ್ಕೆ ಒಳಪಟ್ಟವರಿಗೆ ನ್ಯಾಯ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಗುರು ಪೀಠದ ಶ್ರೀ ಪಸನ್ನಾನಂದ ಸ್ವಾಮೀಜಿ, ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ , ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ, ಬಿ ಶ್ರೀರಾಮುಲು , ಆನಂದ ಸಿಂಗ್, ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕರಾದ ರಾಜುಗೌಡ, ರೇಣುಕಾಚಾರ್ಯ ಮತ್ತಿತರರು ಹಾಜರಿದ್ದರು.
ಕೋಟ್..
ಪ್ರಸನ್ನಾನಂದ ಪುರಿ ಸ್ವಾಮೀಜಿ. ವಾಲ್ಮೀಕಿ ಗುರು ಪೀಠ
ಹಿಂದಿನ ಎಲ್ಲ ಸರ್ಕಾರಗಳು ನಿರ್ಲಕ್ಷ ಮಾಡಿದ್ದರು. ಈಗಿನ ಸಿಎಂ ಬೊಮ್ಮಾಯಿಯವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಅವರ ತಂದೆಯ ಸಾಮಾಜಿಕ ಬದ್ದತೆಯನ್ನು ತೋರಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಬದಲ್ಲಿ ನಮ್ಮ ಸಮುದಾಯಗಳಿಗೆ ಅಮೃತ ಸಿಕ್ಕಿದೆ.
ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮಿಜಿ.
ಸ್ವತಂತ್ರ ಭಾರತದ ಒಂದು ಐತಿಹಾಸಿಕ ದಿನ ಎಂದು ಹೇಳಲು ಹೆಮ್ಮೆಯನಿಸುತ್ತದೆ. ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೀಸಲಾತಿ ನೀಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ.
ಶ್ರೀ ಸಿದ್ದರಾಮೇಶ್ವರ ಸ್ವಾಮಿಜಿ, ಭೋವಿ ಪೀಠ.
ಸಿಎಂ ಬೊಮ್ಮಾಯಿಯವರು ಹೆಚ್ಚು ಮಾತನಾಡದೇ ಆಚರಣೆಗೆ ತರುವ ಮುಖ್ಯಮಂತ್ರಿ. ಅವರು ರಾಜನಂತೆ ನಮಗೆ ರಕ್ಷಣೆ ಮಾಡಿದ್ದಾರೆ. ರಾಜಗುರುವಾಗಿ ವಾಲ್ಮಿಕಿ ಸ್ವಾಮಿಜಿಗಳು ಇದ್ದಾರೆ. ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶ ಮಾಡಿ ಅಭಿನಂದನಾ ಸಮಾರಂಭ ಮಾಡುತ್ತೇವೆ.
[08/10, 8:31 PM: ಚಿಕ್ಕಬಳ್ಳಾಪುರ, ಅಕ್ಟೋಬರ್ 08 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶಾ ಫೌಂಡೇಶನ್ ವತಿಯಿಂದ ಈಶಾ ಯೋಗ ಕೇಂದ್ರದಲ್ಲಿ ನಿರ್ಮಿಸಿರುವ ‘ನಾಗ ಮಂಟಪ’ವನ್ನು ಉದ್ಘಾಟಿಸಿದರು.
ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ವಾಸುದೇವ್, ಆರೋಗ್ಯ ಸಚಿವ ಡಾ: ಕೆ.ಸುಧಾಕರ್ ಉಪಸ್ಥಿತರಿದ್ದರು.
[08/10, 10:02 PM] +91 99001 58601: .
*ಸದ್ಗುರುಗಳ ರೈತರ ಆದಾಯ ದ್ವಿಗುಣಗೊಳಿಸುವ ಕೆಲಸಕ್ಕೆ ಸರ್ಕಾರದ ಬೆಂಬಲ* *ಸಿಎಂ ಬೊಮ್ಮಾಯಿ*
ಚಿಕ್ಕಬಳ್ಳಾಪುರ, ಅಕ್ಟೋಬರ್ 08: ರೈತ ಉತ್ಪಾದಕ ಕೇಂದ್ರ ರೂಪಿಸಲು ಸದ್ಗುರುಗಳು ಮುಂದಾಗಿದ್ದು, ನಮ್ಮ ಸರ್ಕಾರ ನೂರಕ್ಕೆ ನೂರು ಅವರಿಗೆ ಸಹಕಾರ ನೀಡಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈಶಾ ಫೌಂಡೇಶನ್ ನಿರ್ಮಿಸಿರುವ ನಾಗ ಮಂಟಪವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರದಲ್ಲಿ ರೈತರ ಆದಾಯ ಎರಡು ಪಟ್ಟು ಮಾಡುವ ಕಾರ್ಯ ಪೂರ್ಣವಾದ ನಂತರ ಸರ್ಕಾರ ಇಡೀ ರಾಜ್ಯಾದ್ಯಂತ ಮಾದರಿಯಾಗಿ ವಿಸ್ತರಿಸುತ್ತದೆ ಎಂದರು. ಸದ್ಗುರುಗಳು ನೀಡಿದ್ದ ಮಣ್ಣು ಉಳಿಸಿ ಪುಸ್ತಕವನ್ನು ಪರಿಸರ ಇಲಾಖೆಗೆ ನೀಡಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಉದ್ದೇಶಕ್ಕಾಗಿ 100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಹಾಗೂ ಮಣ್ಣು ಉಳಿಸಲು ಮಹತ್ವ ನೀಡಲಾಗಿದೆ ಎಂದರು. ಅಧಿಕಾರಿಗಳು ಯೋಜನೆ ಯಶಸ್ವಿಗೊಳಿಸಿದರೆ ಇನ್ನಷ್ಟು ಅನುದಾನ ನೀಡುವ ಭರವಸೆ ನೀಡಿರುವುದಾಗಿ ಅವರು ತಿಳಿಸಿದರು.
ಸದ್ಗುರುಗಳು ಕಾರ್ಮಿಕರ ಶ್ರಮಕ್ಕೆ ರೈತರ ಬೆವರಿಗೆ ಬೆಲೆ ಕೊಡುವ ಮಾತಾನಾಡಿದ್ದಾರೆ. ಮಾನವ ಕಲ್ಯಾಣಕ್ಕೆ ಹಾಕುವ ಎಲ್ಲಾ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಇದೊಂದು ಮಾದರಿ ಪ್ರೇರಣಾ ಕೇಂದ್ರವಾಗಿ ವಿಶ್ವಮಟ್ಟದಲ್ಲಿ ಬೆಳೆಯಲಿ ಎಂದರು.
*ಮಾದರಿ ಕ್ಷೇತ್ರವಾಗಿ ವಿಶ್ವಮಟ್ಟದಲ್ಲಿ ಬೆಳೆಯಲಿ*
ಚಿಕ್ಕಬಳ್ಳಾಪುರ ಹಾಗೂ ಕೊಲಾರ ಭಾಗದಲ್ಲಿ ಅನೇಕ ವರ್ಷಗಳಿಂದ ನೀರಿನ ಬವಣೆ ಇತ್ತು. ಕಳೆದ ಒಂದೂವರೆ ವರ್ಷದಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ.
ನಮ್ಮ ಆಡಳಿತ ಕಾಲದಲ್ಲಿ ಮರು ಭೂಮಿ ಕೃಷಿ ಭೂಮಿ ಯಾಗಿ ಪರಿವರ್ತನೆಯಾಗಿರುವುದು ಸಂತಸ ತಂದಿದೆ. ಯೋಗ ಕೇಂದ್ರ ಮುಂತಾದವು ಇಲ್ಲಿ ಸ್ಪಾಪನೆಯಾಗುತ್ತಿದೆ. ನಾಲ್ಕು ತಿಂಗಳಲ್ಲಿ ಆದಿಗುರು ಮೂರ್ತಿ ನಿರ್ಮಾಣ ಮಾಡಿರುವುದು ದೇವರ ಆಶೀರ್ವಾದ ಎಂದರು.
ಸದ್ಗುರುಗಳು ಕಂಡಿರುವ ಹೊರ ಜಗತನ್ನು ಎಲ್ಲರಿಗಾಗಿ ಸೃಷ್ಟಿಸಿದ್ದಾರೆ. ಅವರೊಬ್ಬ ಮಹಾನ್ ಸೃಷ್ಟಿಕರ್ತ. ಕ್ರಿಯಾಶೀಲತೆ ಇದೆ. ಅವರಲ್ಲೊಬ್ಬ ಕಲಾವಿದರಿದ್ದಾರೆ. ನಾಗಮಂಟಪ ದಿಂದ ಎಲ್ಲವೂ ಅವರ ಸೃಷ್ಟಿಯ ಫಲಿತಾಂಶ. ಸಣ್ಣ ವಿಚಾರಗಳಲ್ಲಿ ಅವರು ಹೀಗೆ ಮಾಡಲು ಅವರಲ್ಲಿರುವ ವಿನ್ಯಾಸಕಾರನಿದ್ದಾನೆ. ದೇವರು ಕೂಡ ಒಬ್ಬ ವಿನ್ಯಾಸಕಾರ. ದೇವರು ಸೃಷ್ಟಿಸಿರುವ ತಂತ್ರಾಂಶ ವನ್ನು ಲೋಕಕಲ್ಯಾಣಕ್ಕೆ ಉಪಯೋಗವಾಗಲು ಸದ್ಗುರುಗಳನ್ನು ಅನುಸರಿಸಬೇಕು. ಅವರು ಮಾನವೀಯ ಮೌಲ್ಯಗಳನ್ನು ಉಳ್ಳ ವ್ಯಕ್ತಿ. ಮಣ್ಣು ಉಳಿಸಿದರೆ ಭವಿಷ್ಯದ ಮಾನವನನ್ನು ಉಳಿಸಲು ಸಾಧ್ಯ ಎಂದು ಮಣ್ಣು ಉಳಿಸಿ ಅಭಿಯಾನ ಕೈಗೊಂಡಿದ್ದಾರೆ ಎಂದರು.
*ಜ್ಞಾನ ಮತ್ತು ಕರ್ಮದಿಂದ ಸಾಧನೆ ಮಾಡುವವರಿಗೆ ಅವಕಾಶ*
ಮುಂದಿನ ಪೀಳಿಗೆಗೆ ಆಧ್ಯಾತ್ಮಿಕ ಹಾಗೂ ತತ್ವಜ್ಞಾನದ ಕೇಂದ್ರವನ್ನು ರೂಪಿಸುವುದು ಸದ್ಗುರುಗಳ ಉದ್ದೇಶ. ನಾವು ಮುಂದಿನ ಜನಾಂಗಕ್ಕೆ ಏನು ಬಿಟ್ಟು ಹೋಗುತ್ತೇವೆ ಎನ್ನುವುದು ಮುಖ್ಯ. ಜನ ಸಾಮಾನ್ಯರ ಮಿತಿಗಳು ಅವರಿಗೆ ಗೊತ್ತಿದೆ. ಜ್ಞಾನದಿಂದ ಸಾಧನೆ ಮಾಡುವುದು ಬೇರೆ , ಕರ್ಮದಿಂದ ಸಾಧನೆ ಮಾಡುವುದು ಬೇರೆ ಇದೆ. ಜ್ಞಾನ ಮತ್ತು ಕರ್ಮದಿಂದ ಸಾಧನೆ ಮಾಡುವವರಿಗೆ ಇಲ್ಲಿ ಅವಕಾಶವಿದೆ. ಬಹಳ ಅದ್ಬುತವಾದ ಕಲ್ಪನೆ. ನಾನು ಪ್ರತಿ ಸಾರಿ ಅವರನ್ನು ಭೇಟಿ ಮಾಡಿದಾಗ ವೈಚಾರಿಕವಾಗಿ ಚರ್ಚೆ ಮಾಡಿದಾಗ ಜ್ಞಾನ, ಪ್ರಶ್ನೆಗಳಿಗೆ ಉತ್ತರ ದೊರಕಿದೆ ಎಂದರು.
*ಶ್ರೇಷ್ಠ ಚಿಂತನೆ*
112 ನಾಗದೇವತೆಗಳಲ್ಲಿ ಅಮರತ್ವವಿದೆ. ಸೃಷ್ಟಿಯ ಅಮರತ್ವವನ್ನು ಇಲ್ಲಿ ಬಿಂಬಿಸಲಾಗಿದೆ. ಶ್ರೇಷ್ಠ ಚಿಂತನೆ ಇಲ್ಲಿ ಮೂಡಿ ಬಂದಿದೆ. ಹಿಂದೆ ಇದ್ದದ್ದು ನಾಗರಿಕತೆ, ಏನಾಗಿದ್ದೇವೆ ಎನ್ನುವುದು ಸಂಸ್ಕೃತಿ, ಇಲ್ಲಿಗೆ ಬಂದರೆ ನಾವೇನಾಗಿದ್ದೇವೆ ಎನ್ನುವುದು ತಿಳಿಯುತ್ತದೆ ಎಂದರು. ಜ್ಞಾನದ ಬಾಗಿಲನ್ನು ತೆರೆಯುವ, ಅಂತರಾತ್ಮದ ಜಾಗೃತಿ ಮೂಡಿಸುವ
ಮಾನಸಿಕ ನೆಮ್ಮದಿ ಮನಸ್ಸು ಶುದ್ದ ಇದ್ದರೆ ಮಾತ್ರ ದೊರೆಯುತ್ತದೆ. ನಮ್ಮಲ್ಲಿರುವ ವಿಸ್ಮಯ ಗುಣಗಳನ್ನು ದೂರ ಮಾಡಿ ಚಾರಿತ್ರ್ಯ ನಿರ್ಮಾಣ ಮಾಡಲು ಈ ಸ್ಥಳ ಸ್ಥಾಪನೆಯಾಗಿದೆ.
*ಕರ್ನಾಟಕ ನೀಡಿರುವ ಜಾಗತಿಕ ಗುರು- ಸದ್ಗುರು*
ಸದ್ಗುರುಗಳು ಕನ್ನಡದವರು. ಕರ್ನಾಟಕ ನೀಡಿರುವ ಜಾಗತಿಕ ಗುರು- ಸದ್ಗುರುಗಳು. ಅವರ ತಾಯಿ ಊರು ಚಿಕ್ಕಬಳ್ಳಾಪುರ. ಖಂಡಿತವಾಗಿಯೂ ಈ ಕೇಂದ್ರ ಅಂತರರಾಷ್ಟ್ರೀಯ ಕೇಂದ್ರವಾಗಲಿದೆ ಎಂದರು.
Post a Comment