ಚಿಕ್ಕಬಳ್ಳಾಪುರ, ಅಕ್ಟೋಬರ್ 08: ರೈತ ಉತ್ಪಾದಕ ಕೇಂದ್ರ ರೂಪಿಸಲು ಸದ್ಗುರುಗಳು ಮುಂದಾಗಿದ್ದು, ನಮ್ಮ ಸರ್ಕಾರ ನೂರಕ್ಕೆ ನೂರು ಅವರಿಗೆ ಸಹಕಾರ ನೀಡಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈಶಾ ಫೌಂಡೇಶನ್ ನಿರ್ಮಿಸಿರುವ ನಾಗ ಮಂಟಪವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರದಲ್ಲಿ ರೈತರ ಆದಾಯ ಎರಡು ಪಟ್ಟು ಮಾಡುವ ಕಾರ್ಯ ಪೂರ್ಣವಾದ ನಂತರ ಸರ್ಕಾರ ಇಡೀ ರಾಜ್ಯಾದ್ಯಂತ ಮಾದರಿಯಾಗಿ ವಿಸ್ತರಿಸುತ್ತದೆ ಎಂದರು. ಸದ್ಗುರುಗಳು ನೀಡಿದ್ದ ಮಣ್ಣು ಉಳಿಸಿ ಪುಸ್ತಕವನ್ನು ಪರಿಸರ ಇಲಾಖೆಗೆ ನೀಡಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಉದ್ದೇಶಕ್ಕಾಗಿ 100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಹಾಗೂ ಮಣ್ಣು ಉಳಿಸಲು ಮಹತ್ವ ನೀಡಲಾಗಿದೆ ಎಂದರು. ಅಧಿಕಾರಿಗಳು ಯೋಜನೆ ಯಶಸ್ವಿಗೊಳಿಸಿದರೆ ಇನ್ನಷ್ಟು ಅನುದಾನ ನೀಡುವ ಭರವಸೆ ನೀಡಿರುವುದಾಗಿ ಅವರು ತಿಳಿಸಿದರು.
ಸದ್ಗುರುಗಳು ಕಾರ್ಮಿಕರ ಶ್ರಮಕ್ಕೆ ರೈತರ ಬೆವರಿಗೆ ಬೆಲೆ ಕೊಡುವ ಮಾತಾನಾಡಿದ್ದಾರೆ. ಮಾನವ ಕಲ್ಯಾಣಕ್ಕೆ ಹಾಕುವ ಎಲ್ಲಾ ಕಾರ್ಯಕ್ರಮಗಳಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಇದೊಂದು ಮಾದರಿ ಪ್ರೇರಣಾ ಕೇಂದ್ರವಾಗಿ ವಿಶ್ವಮಟ್ಟದಲ್ಲಿ ಬೆಳೆಯಲಿ ಎಂದರು.
*ಮಾದರಿ ಕ್ಷೇತ್ರವಾಗಿ ವಿಶ್ವಮಟ್ಟದಲ್ಲಿ ಬೆಳೆಯಲಿ*
ಚಿಕ್ಕಬಳ್ಳಾಪುರ ಹಾಗೂ ಕೊಲಾರ ಭಾಗದಲ್ಲಿ ಅನೇಕ ವರ್ಷಗಳಿಂದ ನೀರಿನ ಬವಣೆ ಇತ್ತು. ಕಳೆದ ಒಂದೂವರೆ ವರ್ಷದಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ.
ನಮ್ಮ ಆಡಳಿತ ಕಾಲದಲ್ಲಿ ಮರು ಭೂಮಿ ಕೃಷಿ ಭೂಮಿ ಯಾಗಿ ಪರಿವರ್ತನೆಯಾಗಿರುವುದು ಸಂತಸ ತಂದಿದೆ. ಯೋಗ ಕೇಂದ್ರ ಮುಂತಾದವು ಇಲ್ಲಿ ಸ್ಪಾಪನೆಯಾಗುತ್ತಿದೆ. ನಾಲ್ಕು ತಿಂಗಳಲ್ಲಿ ಆದಿಗುರು ಮೂರ್ತಿ ನಿರ್ಮಾಣ ಮಾಡಿರುವುದು ದೇವರ ಆಶೀರ್ವಾದ ಎಂದರು.
ಸದ್ಗುರುಗಳು ಕಂಡಿರುವ ಹೊರ ಜಗತನ್ನು ಎಲ್ಲರಿಗಾಗಿ ಸೃಷ್ಟಿಸಿದ್ದಾರೆ. ಅವರೊಬ್ಬ ಮಹಾನ್ ಸೃಷ್ಟಿಕರ್ತ. ಕ್ರಿಯಾಶೀಲತೆ ಇದೆ. ಅವರಲ್ಲೊಬ್ಬ ಕಲಾವಿದರಿದ್ದಾರೆ. ನಾಗಮಂಟಪ ದಿಂದ ಎಲ್ಲವೂ ಅವರ ಸೃಷ್ಟಿಯ ಫಲಿತಾಂಶ. ಸಣ್ಣ ವಿಚಾರಗಳಲ್ಲಿ ಅವರು ಹೀಗೆ ಮಾಡಲು ಅವರಲ್ಲಿರುವ ವಿನ್ಯಾಸಕಾರನಿದ್ದಾನೆ. ದೇವರು ಕೂಡ ಒಬ್ಬ ವಿನ್ಯಾಸಕಾರ. ದೇವರು ಸೃಷ್ಟಿಸಿರುವ ತಂತ್ರಾಂಶ ವನ್ನು ಲೋಕಕಲ್ಯಾಣಕ್ಕೆ ಉಪಯೋಗವಾಗಲು ಸದ್ಗುರುಗಳನ್ನು ಅನುಸರಿಸಬೇಕು. ಅವರು ಮಾನವೀಯ ಮೌಲ್ಯಗಳನ್ನು ಉಳ್ಳ ವ್ಯಕ್ತಿ. ಮಣ್ಣು ಉಳಿಸಿದರೆ ಭವಿಷ್ಯದ ಮಾನವನನ್ನು ಉಳಿಸಲು ಸಾಧ್ಯ ಎಂದು ಮಣ್ಣು ಉಳಿಸಿ ಅಭಿಯಾನ ಕೈಗೊಂಡಿದ್ದಾರೆ ಎಂದರು.
*ಜ್ಞಾನ ಮತ್ತು ಕರ್ಮದಿಂದ ಸಾಧನೆ ಮಾಡುವವರಿಗೆ ಅವಕಾಶ*
ಮುಂದಿನ ಪೀಳಿಗೆಗೆ ಆಧ್ಯಾತ್ಮಿಕ ಹಾಗೂ ತತ್ವಜ್ಞಾನದ ಕೇಂದ್ರವನ್ನು ರೂಪಿಸುವುದು ಸದ್ಗುರುಗಳ ಉದ್ದೇಶ. ನಾವು ಮುಂದಿನ ಜನಾಂಗಕ್ಕೆ ಏನು ಬಿಟ್ಟು ಹೋಗುತ್ತೇವೆ ಎನ್ನುವುದು ಮುಖ್ಯ. ಜನ ಸಾಮಾನ್ಯರ ಮಿತಿಗಳು ಅವರಿಗೆ ಗೊತ್ತಿದೆ. ಜ್ಞಾನದಿಂದ ಸಾಧನೆ ಮಾಡುವುದು ಬೇರೆ , ಕರ್ಮದಿಂದ ಸಾಧನೆ ಮಾಡುವುದು ಬೇರೆ ಇದೆ. ಜ್ಞಾನ ಮತ್ತು ಕರ್ಮದಿಂದ ಸಾಧನೆ ಮಾಡುವವರಿಗೆ ಇಲ್ಲಿ ಅವಕಾಶವಿದೆ. ಬಹಳ ಅದ್ಬುತವಾದ ಕಲ್ಪನೆ. ನಾನು ಪ್ರತಿ ಸಾರಿ ಅವರನ್ನು ಭೇಟಿ ಮಾಡಿದಾಗ ವೈಚಾರಿಕವಾಗಿ ಚರ್ಚೆ ಮಾಡಿದಾಗ ಜ್ಞಾನ, ಪ್ರಶ್ನೆಗಳಿಗೆ ಉತ್ತರ ದೊರಕಿದೆ ಎಂದರು.
*ಶ್ರೇಷ್ಠ ಚಿಂತನೆ*
112 ನಾಗದೇವತೆಗಳಲ್ಲಿ ಅಮರತ್ವವಿದೆ. ಸೃಷ್ಟಿಯ ಅಮರತ್ವವನ್ನು ಇಲ್ಲಿ ಬಿಂಬಿಸಲಾಗಿದೆ. ಶ್ರೇಷ್ಠ ಚಿಂತನೆ ಇಲ್ಲಿ ಮೂಡಿ ಬಂದಿದೆ. ಹಿಂದೆ ಇದ್ದದ್ದು ನಾಗರಿಕತೆ, ಏನಾಗಿದ್ದೇವೆ ಎನ್ನುವುದು ಸಂಸ್ಕೃತಿ, ಇಲ್ಲಿಗೆ ಬಂದರೆ ನಾವೇನಾಗಿದ್ದೇವೆ ಎನ್ನುವುದು ತಿಳಿಯುತ್ತದೆ ಎಂದರು. ಜ್ಞಾನದ ಬಾಗಿಲನ್ನು ತೆರೆಯುವ, ಅಂತರಾತ್ಮದ ಜಾಗೃತಿ ಮೂಡಿಸುವ
ಮಾನಸಿಕ ನೆಮ್ಮದಿ ಮನಸ್ಸು ಶುದ್ದ ಇದ್ದರೆ ಮಾತ್ರ ದೊರೆಯುತ್ತದೆ. ನಮ್ಮಲ್ಲಿರುವ ವಿಸ್ಮಯ ಗುಣಗಳನ್ನು ದೂರ ಮಾಡಿ ಚಾರಿತ್ರ್ಯ ನಿರ್ಮಾಣ ಮಾಡಲು ಈ ಸ್ಥಳ ಸ್ಥಾಪನೆಯಾಗಿದೆ.
*ಕರ್ನಾಟಕ ನೀಡಿರುವ ಜಾಗತಿಕ ಗುರು- ಸದ್ಗುರು*
ಸದ್ಗುರುಗಳು ಕನ್ನಡದವರು. ಕರ್ನಾಟಕ ನೀಡಿರುವ ಜಾಗತಿಕ ಗುರು- ಸದ್ಗುರುಗಳು. ಅವರ ತಾಯಿ ಊರು ಚಿಕ್ಕಬಳ್ಳಾಪುರ. ಖಂಡಿತವಾಗಿಯೂ ಈ ಕೇಂದ್ರ ಅಂತರರಾಷ್ಟ್ರೀಯ ಕೇಂದ್ರವಾಗಲಿದೆ ಎಂದರು.
[09/10, 10:48 AM] +91 99001 58601: ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಶಾಸಕರ ಭವನದ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪಗುಚ್ಚ ಅರ್ಪಿಸಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಭೋವಿ ಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಮತ್ತಿತರರು ಹಾಜರಿದ್ದರು.
[09/10, 12:30 PM] +91 99001 58601: *ತುಳಿತಕ್ಕೊಳಗಾದವರಿಗೆ ಸಮಾನ ಅವಕಾಶ ಹಾಗೂ ಸ್ವಾಭಿಮಾನದ ಬದುಕು ಕಲ್ಪಿಸಲು ಸರ್ಕಾರ ಬದ್ಧ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಅಕ್ಟೋಬರ್ 09: ತುಳಿತಕ್ಕೆ ಒಳಪಟ್ಟ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಆತ್ಮಗೌರವ , ಆತ್ಮಸನ್ಮಾನ , ಸಮಾನ ಅವಕಾಶ ಹಾಗೂ ಸ್ವಾಭಿಮಾನದ ಬದುಕು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಾಲ್ಮೀಕಿ ಜಯಂತಿಯ ಅಂಗವಾಗಿ ಇಂದು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಪರಿವರ್ತನೆಯ ಹರಿಕಾರ, ಶ್ರೇಷ್ಠ ಮಾನವತಾವಾದಿ, ರಾಮಾಯಣದ ರಚನಕಾರ, ಇಡೀ ಜಗತ್ತಿಗೆ ದಾರಿದೀಪವಾಗಿರುವ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಅತ್ಯಂತ ವಿಜ್ರೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಸರ್ಕಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ತೀರ್ಮಾನ ಮಾಡಿದ್ದು ಗುಲ್ಬರ್ಗಾದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಚಿವರಾದ ಶ್ರೀರಾಮುಲು, ಗೋವಿಂದ ಕಾರಜೋಳ ಹಾಗೂ ನಾನು ಕೂಡ ಭಾಗವಹಿಸಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಅಂದಿನಿಂದ ಇಂದಿನವರೆಗೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಾಡಿನಾದ್ಯಂತ ಅರ್ಥಪೂರ್ಣ ವಾಗಿ ಆಚರಿದಲಾಗುತ್ತಿದೆ. ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಸರ್ಕಾರ, ಸಮಾಜ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಲು ಅಗತ್ಯವಿರುವ ಕಾರ್ಯಕ್ರಮಗಳನ್ನು ನಾವು ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.
*ಮಹರ್ಷಿ ವಾಲ್ಮೀಕಿಯವರ ತತ್ವ, ಆದರ್ಶಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲಾಗುವುದು*
ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ವಿಶ್ವದ ಹತ್ತು ಶ್ರೇಷ್ಠ ಗ್ರಂಥಗಳಲ್ಲಿ ಶ್ರೇಷ್ಠವಾಗಿದೆ. ರಾಮಾಯಣ ರಚಿಸಿ ಜೀವನದ ಮಾರ್ಗ ಮತ್ತು ಸಾರವನ್ನು ವಾಲ್ಮೀಕಿ ಕೊಟ್ಟಿದ್ದಾರೆ. ರಾಮಾಯಣದ ಎಲ್ಲಾ ಪ್ರಸಂಗಗಳು ಅನುಕರಣೀಯ. ಮುಖ್ಯಮಂತ್ರಿಯಾಗಿ ಮಹರ್ಷಿ ವಾಲ್ಮೀಕಿಯವರ ತತ್ವ, ಆದರ್ಶಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಭೋವಿ ಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಮತ್ತಿತರರು ಹಾಜರಿದ್ದರು.
[09/10, 4:23 PM] +91 99001 58601: *ತಳಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಒತ್ತು:* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಅಕ್ಟೋಬರ್ 09 : ಶಿಕ್ಷಣ ಮತ್ತು ಉದ್ಯೋಗ 21ನೇ ಶತಮಾನದ ಅವಶ್ಯಕತೆಗಳು. ಸರ್ಕಾರ ತಳಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಗೆ ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಆಶಯವನ್ನು ಸಾಕಾರಗೊಳಿಸಬೇಕಿದೆ. ಈ ನಿಟ್ಟಿನಲ್ಲಿ
ವಿಧಾನಸೌಧದಿಂದ ಹೊರಡುವ ಪ್ರತಿಯೊಂದು ಆದೇಶವೂ ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳಿಂದ ಕೂಡಿದ್ದು ತಳಸಮುದಾಯ ಏಳಿಗೆಗೆ ಪೂರಕವಾಗಿರಲಿವೆ ಎಂದರು.
ಸಮಾಜದಲ್ಲಿ ಎಲ್ಲ ವರ್ಗದವರೂ ಅಣ್ಣತಮ್ಮಂದಿರಂತೆ ಬಾಳುವ ಮೂಲಕ ಮಹರ್ಷಿ ವಾಲ್ಮೀಕಿಯವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಲ್ಲರಿಗೂ ಸಮಾನ ಅವಕಾಶ ನೀಡುವುದೇ ರಾಮರಾಜ್ಯ. ವಾಲ್ಮೀಕಿ ಸೇರಿದಂತೆ ಬುದ್ಧ, ಬಸವ ಹಾಗೂ ಸಂವಿಧಾನದಲ್ಲಿಯೂ ಸಮಾನತೆಯನ್ನು ಪ್ರತಿಪಾದಿಸಲಾಗಿದೆ. ಹೆಜ್ಜೆ ಮುಂದಿಟ್ಟಾಗ ಮಾತ್ರ ಯಶಸ್ಸು ದೊರೆಯುತ್ತದೆ. ಇಚ್ಛಾಶಕ್ತಿಯಿಂದ ಮುನ್ನಡೆದಾಗ ಯಶಸ್ಸು ನಮ್ಮದಾಗುತ್ತದೆ. ಎಸ್ ಸಿ ಎಸ್ ಟಿ ಜನಾಂಗಗಳಿಗೆ ನ್ಯಾಯ ದೊರೆಯುವಂತಾಗಬೇಕು. ವ್ಯವಸ್ಥೆಯಲ್ಲಿ ಸಮಾನದ ಅವಕಾಶ ನೀಡಬೇಕು ಎಂದರು.
*ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ಕೆಲಸ*
ಮಠಮಾನ್ಯಗಳ ಶ್ರೀಗಳು ತುಳಿತಕ್ಕೊಳಗಾದ ಜನಾಂಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. 101 ಡಾ.ಬಿ.ಆರ್. ಅಂಬೇಡ್ಕರ್ ಹಾಸ್ಟೆಲ್ ಗಳನ್ನು ಹಾಗೂ 5 ಮೆಗಾ ಹಾಸ್ಟೆಲ್ಗಳನ್ನು ನಿರ್ಮಿಸಲಾಗುತ್ತಿದೆ. 28000 ಕೋಟಿ ಎಸ್ ಸಿ ಎಸ್ ಟಿ ಕಾರ್ಯಕ್ರಮಗಳಿಗೆ ನೀಡಲಾಗಿದ್ದು, 6000 ಕೋಟಿ ರೂ. ಎಸ್ ಸಿ ಎಸ್ ಟಿ ಇಲಾಖೆಗಳಿಗೆ ನೀಡಲಾಗಿದೆ. ಎಸ್ ಸಿ ಎಸ್ ಟಿ ಸಮುದಾಯಗಳು ಭೂಮಿ ಪಡೆಯಲು 20 ಲಕ್ಷ ರೂ, ಮನೆ ನಿರ್ಮಾಣಕ್ಕೆ 2ಲಕ್ಷ ರೂ. ಬಡ ಪರಿಶಿಷ್ಟ ಜಾತಿ, ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪ್ರತಿ ಕ್ಷೇತ್ರದಲ್ಲಿ ನೂರು ಯುವಕರಿಗೆ 10 ಲಕ್ಷ ರೂ ಸ್ವಯಂ ಉದ್ಯೋಗಕ್ಕಾಗಿ ಒದಗಿಸಲಾಗುತ್ತಿದ್ದು, ಬಾಬು ಜಗಜೀವನರಾಮ್ ಹೆಸರಿನಲ್ಲಿ ಅನುದಾನ ನೀಡಲಾಗುತ್ತಿದೆ.
ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ಕೆಲಸ ಮಾಡಲಾಗುತ್ತಿದೆ . ಮುಂದಿನ ದಿನಗಳಲ್ಲಿ ನಿಮ್ಮ ಪರ ಕೆಲಸ ಮಾಡಲು ನಿಮ್ಮ ಆಶೀರ್ವಾದ ಬೇಕು ಎಂದರು.
*ಸಮಾನತೆಗೆ ಅವಕಾಶ*
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲು ನಿಮ್ಮ ಸಮುದಾಯದ ಪ್ರೀತಿ, ವಿಶ್ವಾಸ, ನನಗೆ ಪ್ರೇರಣೆಯಾಗಿದೆ. ಅಂತೆಯೇ ಬುದ್ದ, ಬಸವ, ಅಂಬೇಡ್ಕರ್, ವಾಲ್ಮೀಕಿ, ನನಗೆ ಸ್ಪೂರ್ತಿಯಾಗಿದ್ದಾರೆ. ಕಠಿಣ ಪರಿಶ್ರಮ ನಡೆಸುವವರ ಬದುಕನ್ನು ಹತ್ತಿರದಿಂದ ಕಂಡಿದ್ದೇನೆ.ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಬೇಕು. ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಹಾಗೂ ಅಡಿ ಯವರಿಗೆ ಅಭಿನಂದನೆ ಸಲ್ಲಿಸಬೇಕು. ಸಮಷ್ಟಿಯ ಒಳಿತಿಗೆ ಈ ನಿರ್ಣಯ ಕೈಗೊಳ್ಳಲಾಗಿದೆ. ಸರ್ವ ಪಕ್ಷದ ನಾಯಕರೂ ಈ ನಿರ್ಣಯಕ್ಕೆ ಒಕ್ಕೊರಲಿನ ಬೆಂಬಲ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಾರ್ಗದರ್ಶನ ಪಡೆಯಲಾಗಿದೆ ಎಂದರು.
*ವಾಲ್ಮೀಕಿ ಶ್ರೇಷ್ಠ ಮಾನವತಾವಾದಿ*
ವಾಲ್ಮೀಕಿ ಶ್ರೇಷ್ಠ ಮಾನವತಾವಾದಿ. ಪರಿವರ್ತನೆಯ ಸಂಕೇತವಾಗಿರುವ ಅವರು ತಮ್ಮ ಹಿಂದಿನ ಬದುಕು ಪರಿವರ್ತನೆ ಮಾಡಿಕೊಂಡು ಇಡೀ ವಿಶ್ವಕ್ಕೇ ಪರಿವರ್ತನೆಯ ಸಂದೇಶ ಸಾರಿದರು. ಅವರು ರಚಿಸಿದ ರಾಮಾಯಣ ಮನಮುಟ್ಟುವಂತೆ ಬರೆದಿದ್ದಾರೆ. ವಿಶ್ವದ ಶ್ರೇಷ್ಠ 10 ಗ್ರಂಥಗಳಲ್ಲಿಯೇ ಅತ್ಯಂತ ಶ್ರೇಷ್ಠ ಗ್ರಂಥ. ಶ್ರೀರಾಮ ಅಂದ್ರೆ ನ್ಯಾಯ, ನೀತಿ, ಧರ್ಮ, ಎಲ್ಲ ಗುಣಗಳ ಸಂಕೇತ .ರಾಮನಿಗೆ ಸರಿಸಾಟಿ ಯಾರೂ ಇಲ್ಲ. ತಂದೆ ಮಗನ ಸಂಬಂಧ, ಅಣ್ಣ ತಮ್ಮಂದಿರ ಸಂಬಂಧ ,ಪತಿ ಪತ್ನಿ ಸಂಬಂಧ, ಗುರು ಶಿಷ್ಯರ ರಾಮ ಆಂಜನೇಯನ ಸಂಬಂಧ ಗಳನ್ನು ತಿಳಿಯಬೇಕೆಂದರೆ ರಾಮಾಯಣ ಓದಬೇಕು. ಆದರ್ಶಗಳು ಕೂಡಿರುವ ಧರ್ಮ ಗ್ರಂಥ ವಾಲ್ಮೀಕಿ ರಾಮಾಯಣ ಎಂದು ತಿಳಿಸಿದರು.
*ವಾಲ್ಮೀಕಿ ಸಮುದಾಯದವರು ಯಾರಿಗೂ ಕಡಿಮೆಯಿಲ್ಲ*
ವಾಲ್ಮೀಕಿ ಸಮುದಾಯದವರು ಯಾರಿಗೂ ಕಡಿಮೆ ಇಲ್ಲ, ವಿದ್ಯೆ, ಬುದ್ದಿ, ಶಕ್ತಿ ,ಸಾಹಸದಲ್ಲಿ ಯಾವುದರಲ್ಲಿಯೂ ಕಡಿಮೆ ಇಲ್ಲ. ಬೇಡರ ಕಣ್ಣಪ್ಪನಂತ ಭಕ್ತ ಯಾರಿದ್ದಾರೆ. ದೇವರಿಗೆ ತನ್ನ ಕಣ್ಣು ಅರ್ಪಿಸಿ ದೇವರನ್ನೇ ತನ್ನ ಕಡೆಗೆ ಸೆಳೆದುಕೊಂಡ ವಾಲ್ಮೀಕಿ ಸಮುದಾಯ ಅಂದರೆ ಸ್ವಾಭಿಮಾನಿಗಳು, ನೀವು ಯಾರಿಗೂ ಗುಲಾಮರಾಗುವುದು ಬೇಡ. ರಾಜ್ಯವಾಳಿದ ಮದಕರಿ ನಾಯಕನ ಶೌರ್ಯ,ಒನಕೆ ಓಬವ್ವ, ಸುರಪುರದ ರಾಜಾ ವೆಂಕಟಪ್ಪ ನಾಯಕರು ಅವರ ಸಾಧನೆಗಳು ಅಪಾರ. ವಾಲ್ಮೀಕಿ ಜನಾಂಗದ ಪ್ರೀತಿ, ವಿಶ್ವಾಸ, ನಂಬಿಕೆ, ನಿಮ್ಮ ಪ್ರೀತಿಗೆ ನಾನು ಸೋತಿದ್ದೇನೆ. ಇದು ನಿಮ್ಮ ಹೊರಾಟದ ಗೆಲುವು ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೇ ವಚನಾನಂದ ಸ್ವಾಮೀಜಿ, ಸಚಿವ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಶಾಸಕ ರಾಜುಗೌಡ ಮೊದಲಾದವರು ಉಪಸ್ಥಿತರಿದ್ದರು.
Post a Comment