*ಶ್ರೀ ವೆಂಕಟೇಶ ಮಹಾತ್ಮೆ ಚರಿತ್ರೆ* day#7*ವೆಂಕಟೇಶನೆ ನಮೊ ವೆಂಕಟೇಶನೆ ನಮೊ|**ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||*

*ಶ್ರೀ ವೆಂಕಟೇಶ ಮಹಾತ್ಮೆ ಚರಿತ್ರೆ* day#7
*ವೆಂಕಟೇಶನೆ ನಮೊ ವೆಂಕಟೇಶನೆ ನಮೊ|*
*ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||*
 ✍ಶತಾನಂದರು ಜನಕರಾಜನ ಪ್ರಾರ್ಥನೆ ಯಂತೆ ಭಗವಂತನು ಭೂಲೋಕಕ್ಕೆ ಬಂದ ಬಗ್ಗೆ ಮತ್ತು ವೆಂಕಟ ಗಿರಿಯ ಮಹಿಮೆಯನ್ನು ಹೇಳಿ ಮುಂದೆ ಅಲ್ಲಿ ಇರುವ ತೀರ್ಥಾದಿಗಳ ವೈಶಿಷ್ಟ್ಯ ಹಾಗು ಮುಂದಿನ ಕತೆಯನ್ನು ನಿರೂಪಣೆ ಮಾಡುತ್ತಾರೆ.
*ರಾಜನೇ! ಕೇಳು.*
*ಶ್ರೀ ವೆಂಕಟ ಗಿರಿಯ ಮೇಲ್ಭಾಗದಲ್ಲಿ ಸ್ವಾಮಿ ಪುಷ್ಕರಣಿ ಎಂಬ ಪವಿತ್ರ ತೀರ್ಥವು ವಿರಾಜಿಸುತ್ತಿದೆ.ಅದು ಬಹು ಉತ್ತಮ ವಾದ ತೀರ್ಥವು.*.
*ಸಕಲ ಜಲಚರಗಳಿಂದ ಅದುಕೂಡಿದೆ.ಸಕಲ ನದಿ ತೀರ್ಥಗಳಿಂದ ಕೂಡಿದ ಆ ಪುಷ್ಕರಣಿ ಯಲ್ಲಿ ಸ್ನಾನ ಮಾಡುವವರು ಕೃತಾರ್ಥರು ಮತ್ತು ಪುಣ್ಯ ಶಾಲಿಗಳು.*.
*ಸೂರ್ಯನು ಧನು ರಾಶಿಯಲ್ಲಿ ಇರುವಾಗ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ಅರುಣೋದಯ ಕಾಲದಲ್ಲಿ ಸಮಸ್ತ ದೇವತೆಗಳು, ಋಷಿಗಳು ಪರಮ ಮಂಗಳಕರವಾದ ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಲು ಅಪೇಕ್ಷಿತ ಪಡುತ್ತಾರೆ.*.
ಅಂದಮೇಲೆ ಮಾನವರು ಸ್ನಾನ ಮಾಡುವದು ಅವಶ್ಯಕ ಎಂದು ಬೇರೆ ಹೇಳಬೇಕಾಗಿಲ್ಲ.
*ಶ್ರೀ ಸ್ವಾಮಿ ಪುಷ್ಕರಣಿ ತೀರ್ಥ ದಲ್ಲಿ ಬ್ರಾಹ್ಮಣರು ಪಿತೃಗಳ ತೃಪ್ತಿ ಗಾಗಿ ಶ್ರಾದ್ಧ ತರ್ಪಣಾದಿ ಕರ್ಮಗಳನ್ನು ನೆರವೇರಿಸಿದರೆ ಅಂತಹವರ ಪಿತೃಗಳು ಸಂತುಷ್ಟರಾಗಿ ಶ್ರೀ ಹರಿಯ ವೈಕುಂಠ ಲೋಕದಲ್ಲಿ ನರ್ತಿಸುವರು.*.
*ಒಂದು ವೇಳೆ ಅವರು ನೆರವೇರಿಸದಿದ್ದಲ್ಲಿ ಭಗವಂತನ ಅನುಗ್ರಹದಿಂದ ದೊರಕಿದ ಮಾನವ ಜನ್ಮದಿಂದ ಪ್ರಯೋಜನ ವೇನು??..*
*ವ್ಯರ್ಥ ವಲ್ಲವೇ ಜನುಮ ವ್ಯರ್ಥ ವಲ್ಲವೇ??..*
*ಆ ಪವಿತ್ರ ಸ್ವಾಮಿ ಪುಷ್ಕರಣಿ ತೀರ್ಥ ದಲ್ಲಿ ಸ್ನಾನ ಮಾಡಿ ದಾನ ಮಾಡುವುದರಿಂದ ಮಾನವರು ಭಾಗ್ಯ ಶಾಲಿಗಳಾಗುವರು.*
*(೧)ಹಿಂದೆ ಶಂಖನೆಂಬ ರಾಜನು ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿದ ಮಾತ್ರ ದಿಂದಲೇ ಸ್ವರ್ಗಲೋಕವನ್ನು ಪಡೆದನು.*.
*(೨)ಪೂರ್ವ ದಲ್ಲಿ ನಾರಾಯಣ ನೆಂಬ ಹೆಸರಿನ ಅಂಗಿರಸರಿಗೆ ಪುತ್ರನಾದ ಭೂಸುರನು ಸ್ನಾನ ಮಾಡಿದರ ಫಲದಿಂದ ಭಗವಂತನ ದರುಶನ ವಾಗಿ ಮೋಕ್ಷ ವನ್ನು ಪಡೆದನು.*.
*(೩)ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವರು ಸಹ ಇಲ್ಲಿ ಬಂದು ಸ್ನಾನ ಮಾಡಿದ ಫಲದಿಂದ ರಾವಣನ ಸಂಹಾರ ಮಾಡಿ ಸೀತಾದೇವಿ ಯನ್ನು ಪಡೆದನು.*
ಇಂತು ಶುಭಕರವಾದ ಸ್ವಾಮಿ ಪುಷ್ಕರಣಿ  ಸಕಲ ತೀರ್ಥ ಗಳಲ್ಲಿ ಶ್ರೇಷ್ಠ ವಾಗಿ ಕಂಗೊಳಿಸುತ್ತದೆ.
*ಆ ಸ್ವಾಮಿ ಪುಷ್ಕರಣಿಯ ಪಶ್ಚಿಮ ದಿಕ್ಕಿನಲ್ಲಿ ತನ್ನ ಸತಿಯಾದ ಭೂದೇವಿಯನ್ನು ಆಲಂಗಿಸಿಕೊಂಡು ವರಾಹರೂಪಿಯಾದ ಶ್ರೀಹರಿ ಅಶ್ವತ್ಥ ವೃಕ್ಷ ದಿಂದ ಶೋಭಿಸುವ ಆ ಸ್ಥಳ ದಲ್ಲಿ ವಿರಾಜಿಸಿದ್ದಾನೆ.*.
*ಮೂರು ಕೋಟಿ ಸಂಖ್ಯೆಯ ವಿವಿಧ ತೀರ್ಥ ಗಳಿಗೆ ಈ ವೆಂಕಟ ಗಿರಿಯು ಮಾತೃ ಸ್ಥಾನವಾಗಿದೆ.*.
ಇಂತಹ ಶ್ರೇಷ್ಠ ವಾದ ವೆಂಕಟಾಚಲಕ್ಕೆ ಬಂದು *ಸ್ವಾಮಿಯು ಇದು  ವೈಕುಂಠಕ್ಕಿಂತ ಮಿಗಿಲೆಂದೂ ತೋರಿಸಲೋಸುಗ ಅಲ್ಲಿ ವಿಹಾರ ಮಾಡುತ್ತಾ ಇದ್ದನು.* ಇಂತು ತಿರುಗಾಡುತ್ತಿರುವ ಶ್ರೀ *ರಮಾ ಪತಿಯು ರಹಸ್ಯ ವಾಗಿ ವಾಸಿಸಲು ಸರಿಯಾದ ಜಾಗವು ದೊರಕಲಿಲ್ಲ ವಲ್ಲಾ ಎಂದು ಯೋಚಿಸುತ್ತಿರುವಾಗ ಸ್ವಾಮಿ ಪುಷ್ಕರಣಿಯ ದಕ್ಷಿಣ ಭಾಗದಲ್ಲಿ ನಿರ್ಮಲವು,ದೇವತಾ ಯೊಗ್ಯವು ಆದ ಹುಣಸೇಮರದ ಅಡಿಯಲ್ಲಿ ಇರುವ ಒಂದು ಹುತ್ತವನ್ನು ಕಂಡು ಜಗತ್ ಪ್ರಭು ವಾದ ಭಗವಂತನು ಇದೇ ತಾನು ಗುಪ್ತ ವಾಗಿರಲು ಯೋಗ್ಯವಾದ ಸ್ಥಳವೆಂದು ಆಲೋಚಿಸಿ ಆ ಹುತ್ತದಲ್ಲಿ ಮರೆಯಾದನು.*.
*ಇಂತು ಭಗವಂತನು ೧೦,೦೦೦ವರ್ಷಗಳ ಕಾಲ ಅಲ್ಲಿ ವಾಸವಾಗಿದ್ದ ನು.*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಪುಷ್ಕರಾದ್ರಿಯ ನೋಡಿ ಪುಣ್ಯವಂತರ ಕೂಡಿ|*
*ದುಷ್ಕರ್ಮಗಳ ಅಳಿದು   ದುರ್ಜನ ಸಂಗ ಹಳಿದು|*
*ನಿಷ್ಕಾಮ ವರವೆ ಉಂಟು| ನಿತ್ಯಾ ಮುಕ್ತಿಗೆ ಗಂಟು|*
...
*ಪುಷ್ಕರಾಕ್ಷ ತಿಮ್ಮ ವಿಜಯವಿಠ್ಠಲ ಒಡೆಯ|*
*ಪುಷ್ಕರಣಿಯ ಮತಿ ಪುಷ್ಕಳವಾಗಿ ಕೊಡುವ|*
🙏 ಹರೇಶ್ರೀನಿವಾಸ🙏

Post a Comment

Previous Post Next Post