vijayavitthala blr: *||ಪಿಬತ ಭಾಗವತಂ ರಸಮಾಲಯಂ*||

[08/10, 5:29 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ*||
*✍️ಭಗವಂತನ ಮಹಿಮೆಯನ್ನು ಸಾರುವ ಈ ಶ್ರೀ ಮದ್ ಭಾಗವತ ಶ್ರವಣ ಪರಮ ಪುಣ್ಯ ಕರ..*.
ಇದರಲ್ಲಿ ಭಗವಂತ ಪಾಲಕ,ಶರಣಾಗತರಾದ ಜೀವಿಗೆ ರಕ್ಷಣಾ ಮಾಡುತ್ತಾನೆ ಅಂತ ಹೇಳುತ್ತಾರೆ. 
ನಮಗೆ ಬೇಕಾದಷ್ಟು ಜನ ಪಾಲಕರು ಇದ್ದಾರೆ. 
*ಆದರೆ ಈ ಭಗವಂತ ಎಂತಹ ಪಾಲಕ ಅಂದರೆ ಇವನಿಗೆ ಉದಾಹರಣೆ ಕೊಡಲು ಯಾರು ಸಮರಲ್ಲ.*
ಇನ್ನೂ ತಂದೆ ತಾಯಿಗಳು, ಬಂಧು ಬಳಗ,ಸ್ನೇಹಿತರು ನಮಗೆ ಪಾಲಕರು ಆಗಬಹುದು. ಆದರೆ ಅವರದ್ದು ಏನಾದರು ಅಪೇಕ್ಷಿತ ಇರುತ್ತದೆ ಅಥವ ನಮ್ಮ ಇಂದ ತಮ್ಮ ಹೊಗಳಿಕೆ ನಿರೀಕ್ಷಿತ ಮಾಡುತ್ತಾರೆ.
ಆದರೆ ಭಗವಂತ ಹಾಗಲ್ಲ.
*ಅವನು ಪರಿಪೂರ್ಣ ಪಾಲಕ. ಯಾರಿಂದಲೂ ಅವನಿಗೆ ಅಪೇಕ್ಷಿತ ಇಲ್ಲ.*
*ನಾವು ಅವನನ್ನು ಹೊಗಳಿದರು ಸರಿಯೇ,ತೆಗಳಿದರು ಸರಿಯೇ..ನಮ್ಮ ನಮ್ಮ ಕರ್ಮಾನುಸಾರ ಮತ್ತು ,ಕಾಲನು ಸಾರವಾಗಿ ಸುಖ, ದುಃಖ ಗಳನ್ನು ನಾವು ಕೇಳಲಿ,ಬಿಡಲಿ ಕೊಡುವನು.*.
ಇವಾಗ ಭಗವಂತ ಪರಿಪೂರ್ಣ ನಾಗಿ ಪಾಲಕ ವೆನ್ನುವದಕ್ಕೆ ಯಾವ ದೃಷ್ಟಾಂತ ಕೊಡಬಹುದು??.
*ತಾಯಿಯ ದೃಷ್ಟಾಂತ ಕೊಡಬಹುದು ಅಂದರೆ ತಾಯಿ ತನ್ನ ಮಗುವನ್ನು ಪಾಲನೆ ಮಾಡುವಾಗ ಏನನ್ನೂ ಅಪೇಕ್ಷಿತ ಪಡುವದಿಲ್ಲ.* ಯಾಕೆಂದರೆ ಕೆಲವು ತಾಯಿಯರು ತಮಗೆ ವೃದ್ಯಾಪ್ಯ ಬಂದಾಗ ಮಕ್ಕಳು ಕಾಪಾಡಬೇಕು ಅಂತ ನಿರೀಕ್ಷಿತ ಮಾಡುತಾರೆ.ಕೆಲವರು ಮಾಡುವದಿಲ್ಲ.
ಒಳ್ಳೆಯ ಮಕ್ಕಳು, ಸುಸಂಸ್ಕೃತ ವಾತಾವರಣ ದಲ್ಲಿ ಬೆಳೆದ ಮಕ್ಕಳು ತಂದೆ ತಾಯಿಯನ್ನು ವೃದ್ಯಾಪ್ಯದಲ್ಲಿ ಕಾಪಾಡುತ್ತಾರೆ.
ಆದ್ದರಿಂದ ಈ ದೃಷ್ಟಾಂತ ಸರಿ ಹೋಗುವುದಿಲ್ಲ.
*ವೇದದಲ್ಲಿ ತನ್ನ ಕರುವನ್ನು ಆಕಳು ಹೇಗೆ ಕಾಪಾಡುವುದು ಹಾಗೇ ಭಗವಂತ ಕಾಪಾಡುತ್ತಾನೆ ಅಂತ ಹೇಳಿದೆ.*.
ಏಕೆಂದರೆ 
*ಹಸು ತನ್ನ ಕರುವನ್ನು ಹಾಲು ಉಣಿಸಿ ಕಾಪಾಡಿದ ಮೇಲೆ ತಾನಂತೂ ಬಾಯಿ ಬಿಟ್ಟು ನೀನು ನನ್ನನ್ನು ವೃದ್ಧಾಪ್ಯದ ಸಮಯದಲ್ಲಿ ಕಾಪಾಡಬೇಕು ಅಂತ ಕೇಳುವದಿಲ್ಲ.ಕೊನೆಗೆ ಅದರಿಂದ ಏನಾದರು ಉಪಯೋಗ ಪಡಿಯುವದು ಇಲ್ಲ.*
*ಅದು ದೊಡ್ಡದಾದ ಮೇಲೆ ತಾನು ಒಂದು ಕಡೆ,ಅದು ಒಂದು ಕಡೆ.ಅದೇ ರೀತಿ ಪರಮಾತ್ಮ ನಿಗೆ ಯಾರಿಂದಲು ಏನು ನಿರೀಕ್ಷಿತ ಮಾಡುವುದಿಲ್ಲ.ತನ್ನ ಭಕ್ತ ರನ್ನು,ಹಾಗು ಸಕಲ ಜೀವಿಗಳನ್ನು ಪಾಲನೆ ಮಾಡುತ್ತಾನೆ..*
*ಆದರೆ ಈ ಹಸು,ಮನುಷ್ಯರು ವೃದ್ಯಾಪ್ಯದಲ್ಲಿ ಯಾರ ಯಾರದ್ದು ಆಶ್ರಯ ಪಡೆಯುವ ಕಾರಣ ಇವರಾರು ಪಾಲಕರಲ್ಲ.*
*ನಿಜವಾದ ಪಾಲಕ ಆ ಶ್ರೀ ಹರಿ ಒಬ್ಬನೇ.*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|*
🙏ಶ್ರೀ ಕೃಷ್ಣಾಯ ನಮಃ🙏
[08/10, 11:06 AM] vijayavitthala blr: *||ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ||*
ಶ್ರೀ ಅಭಿನವ ಸುಳಾದಿ ಪ್ರಚಾರ ಕೇಂದ್ರ ವಾರ್ಷಿಕ ಉತ್ಸವ ಸಮಾರೋಪ ಸಮಾರಂಭವನ್ನು ಸುಕ್ಷೇತ್ರ ಇಭರಾಮಪುರ ಶ್ರೀ ಅಪ್ಪಾವರ ಕಟ್ಟಿಯಲ್ಲಿ ರವಿವಾರ ದಂದು 9/10/22 
ಮತ್ತು
 10/10/22 ರಂದು  ಸುಕ್ಷೇತ್ರ ಕೌತಾಳಂ ಶ್ರೀ ಗುರು ರಾಘವೇಂದ್ರ ಗುರುಗಳ  ಮತ್ತು ಶ್ರೀ ಗುರುಜಗನ್ನಾಥ ದಾಸರ ಸನ್ನಿಧಿಯಲ್ಲಿ ಅವರ ಆರಾಧನಾ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದೆ.
ಸಕಲರಿಗು ಸುಸ್ವಾಗತ🙇‍♂️🙏💐💐.
ಇತಿ
ಗ್ರೂಪ ಅಡ್ಮಿನ
ಅಭಿನವ ಸುಳಾದಿ ಪ್ರಚಾರ ಕೇಂದ್ರ.

Post a Comment

Previous Post Next Post