[10/10, 3:08 AM] vijayavitthala blr: ||ಕೌತಾಳಂ ಶ್ರೀ ಗುರು ಜಗನ್ನಾಥ ದಾಸರ ಆರಾಧನಾ ಪರ್ವಕಾಲ ಇಂದು.|
*✍️ಜ್ಞಾನ ಭಕ್ತಿ ವೈರಾಗ್ಯ ಗಳೆಂಬ ನಿಜ ಸಂಪತ್ತಿನಿಂದ ಉಳ್ಳ ಹರಿದಾಸರಿಗೆ ಈ ಲೌಕಿಕ ಸಂಪತ್ತು ಸಂಗ್ರಹಣೆ ಅವಶ್ಯಕತೆ ಇರುವದಿಲ್ಲ.*
ಈ ತರಹದ ಘಟನೆ ನಮ್ಮ ಕೌತಾಳಂ ಗುರು ಜಗನ್ನಾಥ ದಾಸರ ಚರಿತ್ರೆಯಲ್ಲಿ ಬರುತ್ತದೆ.
*ಶ್ರೀ ಗುರು ಜಗನ್ನಾಥ ದಾಸರಿಗೆ ಲೌಕಿಕದ ಮೋಹವಿಲ್ಲ..*
*ದಾಸರು ಎಂದು ಭವಿಷ್ಯವನ್ನು ಕುರಿತು ಆಲೋಚನೆ ಮಾಡಿದವರಲ್ಲ.ಭಗವಂತ ಏನು ಕೊಟ್ಟಿದ್ದಾನೆ ಅದರಲ್ಲಿ ತೃಪ್ತಿ ಪಡುವದು ಅವರ ಸ್ವಭಾವ.*
ರಾಯರ ಆರಾಧನೆಹತ್ತಿರ ಬಂತು. ಬೇಕಾದ ಸಾಮಗ್ರಿಗಳು ಸಂಗ್ರಹಣೆ ಆಗಿಲ್ಲ..
ದಾಸರ ಶಿಷ್ಯರಿಗೆ ಚಿಂತೆ ಯಾಯಿತು.ಆರಾಧನೆಗೆ ಇನ್ನೂ ಒಂದೇ ದಿನ ಉಳಿದಿದೆ.
*ಆರಾಧನೆಗೆ ಸಾಮಗ್ರಿಗಳನ್ನು ತರಲು ದಾಸರ ಬಳಿ ಧನವಿಲ್ಲ..*
ಬರುವ ಭಕ್ತಾದಿಗಳ ಸಂಖ್ಯೆ ಬಹಳ..ಹೇಗೆ ಅಂತ ಚಿಂತೆ..
ಆದರೆ ಆ ಊರಿನ ಕೆಲವರು ಗಣ್ಯರು
*ದಾಸರು ನಮ್ಮ ಬಳಿ ಬಂದು ಕೇಳಲಿ, ಸಂಪೂರ್ಣ ಖರ್ಚು ಕೊಡುತ್ತೇವೆ ಅಂತ ಶಿಷ್ಯರ* ಮುಂದೆ ಹೇಳುತ್ತಾ ಇದ್ದರು.
ಆ ದಿನ ಸಾಯಂಕಾಲ ಭಜನೆ ಆಯಿತು.
ಅವಾಗ್ಗೆ ಶಿಷ್ಯರು
*ಮುತ್ಯಾ !! ರಾಯರ ಆರಾಧನೆ ಹತ್ತಿರ ಬಂತು.ಮಾಡಬೇಕಾದ ಕೆಲಸ ಬಹಳವಿದೆ.ನೀವು ಒಮ್ಮೆ ಕೇಳಿದರೆ ಸಾಕು ಕೊಡಲು ಬಹಳಷ್ಟು ಜನ ಸಿದ್ದರಿದ್ದಾರೆ*
ಅಂತ ಹೇಳಿದಾಗ
ದಾಸರು ನಗುತ್ತಾ ಹೇಳುತ್ತಾರೆ.
*"ಮಗುವಿನ ಚಿಂತೆ ತಾಯಿಗೆ ಹೊರತು ಮಗುವಿಗೆ* *ಇರುವದಿಲ್ಲ".*
*"ಕಾರ್ಯವನ್ನು ಮಾಡಿ, ಮಾಡಿಸುವವನು ಆ ಭಗವಂತ"..*
*"ಅಸ್ವತಂತ್ರನಾದ ಜೀವಿ ಇಲ್ಲದ ಕತೃತ್ವ,ಭಾರ ಹೊರಬಾರದು.."*
*ನಮ್ಮ ಪುರಂದರದಾಸರ ತಾರಕ ಮಂತ್ರ ..*
*ಹಾಡಿದರೆ ಎನ್ನೊಡೆಯನ ಹಾಡುವೆ|*
*ಬೇಡಿದರೆ ಎನ್ನೊಡೆಯನ ಬೇಡುವೆ*|
*ಎನ್ನೊಡೆಯನಿಗೆ ಒಡಲನು ತೋರುವೆ*|
*ಮಾಡಿದ ಕೆಲಸದಿಂದ ಬೇಡಿದ ಸುಖ ಬರದೇ ಇದ್ದರು ಪರವಾಗಿಲ್ಲ.ಅದರಿಂದ ದುಖಃ ಬರಬಾರದು..*
*"ನರರನ್ನು ಬೇಡಿ ಸುಖ ಪಡುವದಕ್ಕಿಂತ ಭಗವಂತನನ್ನು ಬೇಡಿ ಕಷ್ಟ ಪಡುವದೇ ಲೇಸು"..*
*ನರರನ್ನು ಬೇಡಿದಾಗ ಇಹದಲ್ಲಿ ಸುಖ..ಆದರೆ ಪರದಲ್ಲಿ ದುಖಃ..*
*"ಅದೇ ಭಗವಂತನಲ್ಲಿ ಬೇಡಿದಾಗ ಈಗ ಮತ್ತು ಪರದಲ್ಲಿ ಸುಖವನ್ನು ಕರುಣಿಸುವನು"..*
ಅಂತ ಹೇಳಿ
*ಏಕಾಂತದಿ ಶ್ರೀಕಾಂತನ*
*ಭಜಿಸಲು|*
*ಲೋಕಾಂತರ ಸುಖ ಪ್ರಾಪ್ತಿ|*
ಅನ್ನುವ ಕೃತಿಯೊಂದಿಗೆ ಆ ದಿನ ಉಪದೇಶ ಮುಗಿಸುತ್ತಾರೆ.
ಎಲ್ಲಾ ಶಿಷ್ಯರಿಗು ಗುರುಗಳ ಮಾತಿನ ಮೇಲೆ ವಿಶ್ವಾಸ.
*ಮರುದಿನ ಬೆಳಿಗ್ಗೆ ರಾಯರ ಸೂಚನೆಯಂತೆ ತಿರುಮಲ ರಾಯರೆಂಬ ಜಡ್ಜ್ ಗಳು ಧಾರವಾಡದಿಂದ ಬಂದು ರಾಯರ ಆರಾಧನೆಗೆ ಬೇಕಾದ ಹಣವನ್ನು ದಾಸರಿಗೆ ಸಮರ್ಪಣೆ ಮಾಡುತ್ತಾರೆ..*
ಆಗ ಗುರು ಜಗನ್ನಾಥ ದಾಸರು ತಿರುಮಲರಾಯರನ್ನು ಆಶೀರ್ವದಿಸಿ,ರಾಯರ ಕಾರುಣ್ಯ ವನ್ನು ನೆನೆದು
*ನಂಬಿ ಕೆಟ್ಟವರಿಲ್ಲವೋ*
*ಈ ಗುರುಗಳ|*
*ನಂಬದೆ ಕೆಡುವರುಂಟೋ*||
*ನಂಬಿದ ಜನರಿಗೆ ಬೆಂಬಲ* *ತಾನಾಗಿ|*
*ಹಂಬಲಿಸಿದ ಫಲ ತುಂಬಿ* *ಕೊಡುವ ರನ್ನ|*|
ಅನ್ನುವ ೦೩ನುಡಿಗಳುಳ್ಳ ಕೃತಿಯನ್ನು ರಚನೆ ಮಾಡಿ ಅವರಿಗೆ ಸಮರ್ಪಣೆ ಮಾಡುತ್ತಾರೆ.
ಇದು ದಾಸರಲ್ಲಿ ನಿಂತು ಭಗವಂತ ತೋರಿದ ಲೀಲೆ.
ದಾಸರ ಅನುಗ್ರಹ ನಮ್ಮ ಎಲ್ಲರ ಮೇಲೆ ಇರಲಿ ಎಂದು ಪ್ರಾರ್ಥನೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣ ಮಸ್ತು 🙏
*ವರದೇಶ ವಿಠ್ಠಲನ್ನ ಸ್ಥಿರ ದಾಸ್ಯ ತನವೆಂಬೊ*|
*ಗುರುತು ತೋರುವದಯ್ಯ ಗುರು ಜಗನ್ನಾಥಾರ್ಯ*||
🙏ಶ್ರೀ ಕಪಿಲಾಯ ನಮಃ🙏

Post a Comment