ಚುನಾವಣಾ ಆಯೋಗವು ಡಿಸೆಂಬರ್ 5 ರವರೆಗೆ ನಿರ್ಗಮನ ಸಮೀಕ್ಷೆಗಳನ್ನು ನಿಷೇಧಿಸಿದೆ

ನವೆಂಬರ್ 19, 2022
6:00PM

ಚುನಾವಣಾ ಆಯೋಗವು ಡಿಸೆಂಬರ್ 5 ರವರೆಗೆ ನಿರ್ಗಮನ ಸಮೀಕ್ಷೆಗಳನ್ನು ನಿಷೇಧಿಸಿದೆ

ಫೈಲ್ ಚಿತ್ರ
ಚುನಾವಣಾ ಆಯೋಗವು ಎಕ್ಸಿಟ್ ಪೋಲ್‌ಗಳನ್ನು ನಡೆಸುವುದು ಮತ್ತು ಪ್ರಕಟಿಸುವುದನ್ನು ನಿಷೇಧಿಸಿದೆ. ಹಿಮಾಚಲ ಪ್ರದೇಶ, ಗುಜರಾತ್‌ನ ವಿಧಾನಸಭಾ ಚುನಾವಣೆ ಮತ್ತು ಐದು ರಾಜ್ಯಗಳ ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಷೇಧವು ಡಿಸೆಂಬರ್ 5 ರಂದು ಸಂಜೆ 6:30 ರವರೆಗೆ ಜಾರಿಯಲ್ಲಿರುತ್ತದೆ. ಉಪಚುನಾವಣೆ ನಡೆಯುವ ರಾಜ್ಯಗಳೆಂದರೆ ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ, ಬಿಹಾರ ಮತ್ತು ಛತ್ತೀಸ್‌ಗಢ. ಯಾವುದೇ ವಿದ್ಯುನ್ಮಾನ ಮಾಧ್ಯಮದಲ್ಲಿ ಯಾವುದೇ ಅಭಿಪ್ರಾಯ ಸಂಗ್ರಹ ಅಥವಾ ಇತರ ಯಾವುದೇ ಸಮೀಕ್ಷೆಯ ಫಲಿತಾಂಶಗಳು ಸೇರಿದಂತೆ ಯಾವುದೇ ಚುನಾವಣಾ ವಿಷಯವನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗುವುದು ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ಆಯೋಗವು ಈ ಸಂಬಂಧ ಈ ರಾಜ್ಯಗಳ ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದೆ.

Post a Comment

Previous Post Next Post