ನವೆಂಬರ್ 19, 2022 | , | 9:25PM |
ಪ್ರಧಾನಿ ಮೋದಿಯವರು ಗುಜರಾತ್ ವಿಧಾನಸಭಾ ಚುನಾವಣೆಯ ಚುನಾವಣಾ ಪ್ರಚಾರವನ್ನು ವಲ್ಸಾದ್‌ನಲ್ಲಿ ರೋಡ್‌ಶೋ ಮೂಲಕ ಪ್ರಾರಂಭಿಸಿದರು

ಹೊಸ ಮತದಾರರು ದೇಶದ ಭವಿಷ್ಯವನ್ನು ರೂಪಿಸುತ್ತಿದ್ದಾರೆ ಎಂದು ಮೋದಿ ಹೇಳಿದರು. ದೇಶದ ಯುವ ಜನತೆಯ ಕನಸುಗಳನ್ನು ನನಸು ಮಾಡಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದರು. ಪ್ರಧಾನಮಂತ್ರಿಯವರು ರಾಜ್ಯದ ಉದ್ಯಮಶೀಲತಾ ಮನೋಭಾವವನ್ನು ಶ್ಲಾಘಿಸಿದರು. ಉಜ್ವಲ ಭವಿಷ್ಯಕ್ಕಾಗಿ ಯುವ ಪೀಳಿಗೆ ಮತದಾನ ಮಾಡುವಂತೆ ಕೋರಿದರು.
ಮತದಾರರ ಮನಗೆಲ್ಲಲು ಎಲ್ಲಾ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರು ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಮೊದಲ ಹಂತದ ವಿಧಾನಸಭಾ ಚುನಾವಣೆಯ 89 ಸ್ಥಾನಗಳಿಗೆ 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದ ಮತದಾನ ಡಿಸೆಂಬರ್ 1 ರಂದು ನಡೆಯಲಿದೆ.
Post a Comment