*ಶ್ರೀ ೧೦೦೮ ಶ್ರೀ #ಪದ್ಮನಾಭತೀರ್ಥರ ಆರಾಧನಾ ನಿಮಿತ್ತವಾಗಿ ಅವರ #ಸ್ಮರಣೆ :-*

[22/11, 6:11 AM] +91 89713 62063: *ಶ್ರೀ ೧೦೦೮ ಶ್ರೀ #ಪದ್ಮನಾಭತೀರ್ಥರ ಆರಾಧನಾ ನಿಮಿತ್ತವಾಗಿ ಅವರ #ಸ್ಮರಣೆ :-*
🌺🌺🌺🌺🌺🌺
*ವಿದ್ವತ್ತಿಮಿಂಗಿಲರು ಶ್ರೀ ಶ್ರೀ #ಪದ್ಮನಾಭತೀರ್ಥರು*
🌺🌺🌺🌺🌺🌺🌺
ಶ್ರೀ ಶ್ರೀಪದ್ಮನಾಭತೀರ್ಥರು ಪೂರ್ವಾಶ್ರಮದಲ್ಲಿ *ಗೋದಾವರಿ ತೀರದ ಹೆಸರಾಂತ ಪಾಂಡುರಂಗಿ ಮನೆತನದ ಬ್ರಾಹ್ಮಣರು ಶೋಭನಭಟ್ಟರು* ಎಂದು ಪ್ರಸಿದ್ಧರಾಗಿದ್ದರು. ಇವರನ್ನು ನಾರಾಯಣಪಂಡಿತಾಚಾರ್ಯರು ಶ್ರೀಮತ್ಸುಮಧ್ವವಿಜಯದಲ್ಲಿ "ವಿದ್ವತ್ತಿಮಿಂಗಿಲ" ಎಂದು ಹೊಗಳಿದ್ದಾರೆ. "ವೈರಾಗ್ಯವೆಂಬ ಭಾಗ್ಯವನ್ನು ಪಡೆದವರು ಪದ್ಮನಾಭತೀರ್ಥರು" ಎಂದು  ಹೊಗಳಿದವರು ಶ್ರೀಮಜ್ಜಯತೀರ್ಥರು.

ಭರತಖಂಡದ ಮಧ್ಯಭಾಗ ಗೋದಾವರಿ ನದಿ ತೀರದ ಒಂದು ನಗರ, ಪ್ರತಿವರ್ಷದಂತೆ ಅಲ್ಲಿ ಭಾರತೀಯ ಸಮಸ್ತ ತತ್ವಜ್ಞಾನಗಳ ಸಮ್ಮೇಳನ, ಎಲ್ಲ ಮತಗಳ ಪಂಡಿತರು ತಮ್ಮ ತಮ್ಮ ಮತಗಳನ್ನು ಅಲ್ಲಿ ಮಂಡಿಸಿ, ವಾಕ್ಯಾರ್ಥ ಮಾಡಬೇಕು, ಗೆದ್ದವರಿಗೆ ಅಭೂತಪೂರ್ವ ಸನ್ಮಾನ. ಇಂತಹ ಸಭೆಯ ಆಯೋಜಕರು ಶ್ರೀ ಶೋಭನ ಭಟ್ಟರು ವಿದ್ವಾಂಸರು, ಪ್ರಕಾಂಡ ಪಂಡಿತರು,  ಶ್ರೀ ಮಧ್ವಾಚಾರ್ಯರು ತಮ್ಮ ಬದ್ರಿ ಯಾತ್ರೆ ಮುಗಿಸಿಕೊಂಡು ಸಭೆಗೆ ಆಮಂತ್ರಣವಿರುವ ನಿಮಿತ್ತ ಸರಿಯಾದ ಸಮಯಕ್ಕೆ ಆ ನಗರಕ್ಕೆ ಪ್ರವೇಶ ಮಾಡಿದರು. ಅವರೊಂದಿಗೆ ಶೋಭನ ಭಟ್ಟರದು ಸುಮಾರು ದಿನಗಳವರೆಗೆ ವಾದ ನಡೆಯಿತು. ಕಡೆಗೆ ಮಧ್ವ ಮತಕ್ಕೆ ಶರಣಾಗಿ ಅದನ್ನು ಒಪ್ಪಿ ಅಪ್ಪಿ ಮುಂದೆ ತಪ್ಪು ಮಾಡದೆ ಮಧ್ವಾಚಾರ್ಯರ ಶಿಷ್ಯರಾದರು, ಶೋಭನ ಭಟ್ಟರು ಅವರಿಂದಲೇ ಸನ್ಯಾಸ ಸ್ವೀಕರಿಸಿ ಪ್ರಪ್ರಥಮಟೀಕಾಕಾರರೆಂದೇ ಪ್ರಸಿದ್ಧರಾದವರು ಶ್ರೀಪದ್ಮನಾಭತೀರ್ಥರು. ಅವರು ರಚಿಸಿದ ಟೀಕೆಗಳೂ ಪರಮಾದ್ಭುತ. ಶ್ರೀಮದಾಚಾರ್ಯರ 
ಬ್ರಹ್ಮಸೂತ್ರಭಾಷ್ಯಕ್ಕೆ ಸತ್ತರ್ಕದೀಪಾವಲಿ, ಅನುವ್ಯಾಖ್ಯಾನಕ್ಕೆ ಸನ್ಯಾಯರತ್ನಾವಲಿ, ಖಂಡನತ್ರಯಗಳಿಗೆ ಟೀಕೆ, ಗೀತಾಭಾಷ್ಯ ಹಾಗೂ ಗೀತಾತಾತ್ಪರ್ಯಗಳಿಗೆ ಟೀಕೆ, ತತ್ವದ್ಯೋತ ತತ್ವನಿರ್ಣಯ ತತ್ವಸಂಖ್ಯಾನ ಕರ್ಮನಿರ್ಣಯಗಳಿಗೆ ಟೀಕೆ, ಹೀಗೆ ಶ್ರೀಮದಾಚಾರ್ಯರ ಅನೇಕ ಗ್ರಂಥಗಳಿಗೆ ಟೀಕೆಯನ್ನು ಬರೆದ ಮಹಾನುಭಾವರು ಶ್ರೀ ಪದ್ಮನಾಭತೀರ್ಥರು.
ಸತ್ಸಿದ್ಧಾಂತವಾದ, ವಾಯುದೇವರ ಅವತಾರರಾದ ಆನಂದತೀರ್ಥರ ಶಾಸ್ತ್ರವಾದ ದ್ವೈತಸಿದ್ಧಾಂತವನ್ನು ಓದಿದರೇ ಮೋಕ್ಷಾದಿ ಪುರುಷಾರ್ಥಗಳು ಎಂದು ಗಟ್ಟಿಯಾಗಿ ನಂಬಿರುವವರು ಇವರು. ಸ್ವಯಂ ವಾಯುದೇವರ ಅವತಾರಿಗಳಾದ ಶ್ರೀಮದಾಚಾರ್ಯರಿಂದಲೇ ನೇರವಾಗಿ ಸರ್ವ ಶಾಸ್ತ್ರಗಳನ್ನು ಓದುವ ಸೌಭಾಗ್ಯ ಪಡೆದವರಲ್ಲಿ ಅತ್ಯುತ್ತಮರು ಶ್ರೀ ಪದ್ಮನಾಭತೀರ್ಥರು. 
ಶ್ರೀಮದಚಾರ್ಯರು  ಎಂಭತ್ತು ವರ್ಷಗಳ ಕಾಲ ನಿರಂತರ ಪೂಜಿಸಿದ *ಶ್ರೀ ದಿಗ್ವಿಜಯರಾಮ ದೇವರನ್ನು* ಶ್ರೀಮದಾಚಾರ್ಯರ ನಂತರ ಮೊಟ್ಡ ಮೊದಲು ಪೂಜಿಸುವ ಸೌಭಾಗ್ಯ ಪಡೆದವರು ಶ್ರೀ ಪದ್ಮನಾಭತೀರ್ಥರು.
ಸಾಕ್ಷಾತ್ ಬ್ರಹ್ಮದೇವರಿಂದ  ಪೂಜಿತವಾದ, ನರಹರಿತೀರ್ಥರಿಂದ  ತರಲ್ಪಟ್ಟ *ಶ್ರೀಮನ್ಮೂಲರಾಮ ಶ್ರೀಮೂಲಸೀತಾದೇವಿಯರನ್ನು*  ಸತತ ಏಳು ವರ್ಷಗಳ ಕಾಲ ನಿರಂತರ ಆರಾಧಿಸುವ ದೊಡ್ಡ ಸೌಭಾಗ್ಯವನ್ನು ಪಡೆದವರು ಶ್ರೀ ಪದ್ಮನಾಭತೀರ್ಥರು. 
ಜಗದೊಡೆಯನಾದ ನಾರಾಯಣಾವತಾರಿಯಾದ  ಶ್ರೀವೇದವ್ಯಾಸದೇವರು ಶ್ರೀಮದಾಚಾರ್ಯರಿಗೆ ಪ್ರೀತಿಯಿಂದ ಅನುಗ್ರಹಪೂರ್ವಕ ಕೊಡಲ್ಪಟ್ಟ *ಎಂಟು ವ್ಯಾಸಮುಷ್ಟಿಗಳಲ್ಲಿ ಐದು ವ್ಯಾಸಮುಷ್ಟಿಗಳನ್ನು* ಇವರಿಗೇ ಶ್ರೀಮದಾಚಾರ್ಯರು ದಯಪಾಲಿಸಿದರು.
 
ಶ್ರೀ ಪದ್ಮನಾಭ ತೀರ್ಥ ಶ್ರೀಪಾದ ಗುರುಭ್ಯೋ ನಮಃ 🙏
[[22/11, 6:35 AM] vijayavitthala blr: *||ಸ್ಮರಿಸು ಗುರುಗಳ ಮನವೇ||*
*✍️ಬಹಳ ಕಾಲದ ತನಕ ಗುಹೆಯೊಳಗೆ ಕತ್ತಲೆ ತುಂಬಿದ್ದರೂ..*
*ಒಂದು ಸಣ್ಣ ದೀಪದ ಪ್ರವೇಶ ಕ್ಷಣಾರ್ಧದಲ್ಲಿ ಕತ್ತಲೆಯನ್ನು ಓಡಿಸುವಂತೆ..*
*ಗುರುಗಳ ಅನುಗ್ರಹ ಕೃಪೆ* *ಎಂಬುದು ಪಾಪದ*
*ಕತ್ತಲೆಯ ನಾಶಪಡಿಸುವುದು..*
*ಅಂತಹ ಗುರುಗಳ ಸಂತತಿಗೆ ನಮೋ ನಮಃ...*
*ನಮ್ಮ ಗುರು ಮಧ್ವ ಸಂತತಿಗೆ ನಮೋ ನಮಃ..*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಗುರುಗಳಿಂತಧಿಕ ಇನ್ನಾರು ಆಪ್ತರು ನಿನಗೆ|*
*ಗುರುಗಳೇ ಪರಮ‌ಹಿತಕರು ನೋಡು*|
🙏ಶ್ರೀ ಕಪಿಲಾಯ ನಮಃ🙏
[22/11, 7:03 AM] vijayavitthala blr: *||ಸ್ಮರಿಸು ಗುರುಗಳ ಮನವೇ||*
*✍️ಬಹಳ ಕಾಲದ ತನಕ ಗುಹೆಯೊಳಗೆ ಕತ್ತಲೆ ತುಂಬಿದ್ದರೂ..*
*ಒಂದು ಸಣ್ಣ ದೀಪದ ಪ್ರವೇಶ ಕ್ಷಣಾರ್ಧದಲ್ಲಿ ಕತ್ತಲೆಯನ್ನು ಓಡಿಸುವಂತೆ..*
*ಗುರುಗಳ ಅನುಗ್ರಹ ಕೃಪೆ* *ಎಂಬುದು ಪಾಪದ*
*ಕತ್ತಲೆಯ ನಾಶಪಡಿಸುವುದು..*
*ಅಂತಹ ಗುರುಗಳ ಸಂತತಿಗೆ ನಮೋ ನಮಃ...*
*ನಮ್ಮ ಗುರು ಮಧ್ವ ಸಂತತಿಗೆ ನಮೋ ನಮಃ..*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಗುರುಗಳಿಂತಧಿಕ ಇನ್ನಾರು ಆಪ್ತರು ನಿನಗೆ|*
*ಗುರುಗಳೇ ಪರಮ‌ಹಿತಕರು ನೋಡು*|
🙏ಶ್ರೀ ಕಪಿಲಾಯ ನಮಃ🙏

Post a Comment

Previous Post Next Post