ಅರುಣ್ ಸಿಂಗ್ ಅವರ ರಾಜ್ಯ ಪ್ರವಾಸ ವಿವರ


ಅರುಣ್ ಸಿಂಗ್ ಅವರ ರಾಜ್ಯ ಪ್ರವಾಸ ವಿವರ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ನವೆಂಬರ್ 7ರಿಂದ ರಾಜ್ಯದ ವಿವಿಧೆಡೆ ಪ್ರವಾಸ ಮಾಡಲಿದ್ದು, ವಿವರ ಹೀಗಿದೆ.
7ರಂದು ರಾತ್ರಿ 11 ಗಂಟೆಗೆ ಬೆಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸುವ ಅವರು ಬಳಿಕ ಕುಮಾರಕೃಪ ಗೆಸ್ಟ್ ಹೌಸಿನಲ್ಲಿ ವಾಸ್ತವ್ಯ ಇರುವರು. 8ರಂದು ಅವರು ಕಲ್ಬುರ್ಗಿಗೆ ತೆರಳುವ ಅವರು ಇಂಡಿ ಮತ್ತು ಸಿಂದಗಿಗಳಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು. ರಾತ್ರಿ ಹೊಸಪೇಟೆಯಲ್ಲಿ ವಾಸ್ತವ್ಯ ಇರುವರು.
9ರಂದು ಚಿತ್ರದುರ್ಗ ಹಾಗೂ ಮಾಯಕೊಂಡಗಳಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು. ದಾವಣಗೆರೆಯಲ್ಲಿ ಅವರು ವಾಸ್ತವ್ಯ ಇರುವರು. 10ರಂದು ತುಮಕೂರು ಜಿಲ್ಲೆಯ ಸಿರಾದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಜೆ ಜಗನ್ನಾಥ ಭವನಕ್ಕೆ ಭೇಟಿ ಕೊಡಲಿದ್ದು, ರಾತ್ರಿ ಕುಮಾರಕೃಪ ಗೆಸ್ಟ್ ಹೌಸಿನಲ್ಲಿ ವಾಸ್ತವ್ಯ ಇರುವರು. 11ರಂದು ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಸಂಜೆ ಬೆಂಗಳೂರು ವಿಮಾನನಿಲ್ದಾಣದಿಂದ ದೆಹಲಿಗೆ ತೆರಳಲಿದ್ದಾರೆ.

                                                                    
  (ಕರುಣಾಕರ ಖಾಸಲೆ)
 ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ

Post a Comment

Previous Post Next Post