cm, ಪ್ರವಾಸ, ಪ್ರಶಸ್ತಿ

[18/11, 7:29 PM] Cm Ps: ಬೆಂಗಳೂರು ಟೆಕ್ ಸಮ್ಮಿಟ್ ಸಮಾರೋಪ ಸಮಾರಂಭದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಟಾರ್ಟ್ ಅಪ್ ಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ  ಸಂದರ್ಭದಲ್ಲಿ ಕೇಂದ್ರ ಸಚಿವ ಪಿಯುಷ್ ಗೋಯಲ್, ಉನ್ನತ ಶಿಕ್ಷಣ ಹಾಗೂ  ಐಟಿ ಬಿಟಿ ಸಚಿವ ಡಾ.‌ಅಶ್ವತ್ಥ್ ನಾರಾಯಣ, ಸ್ಟಾರ್ಟ್ ಅಪ್ ವಿಸನ್ ಗ್ರುಪ್ ನ ಪ್ರಶಾಂತ್‌ ಪ್ರಕಾಶ್, ಕೈಗಾರಿಕೆ ಇಲಾಖೆ‌ ಎಸಿಎಸ್  ರಮಣ ರೆಡ್ಡಿ ಐಟಿ ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಹಾಜರಿದ್ದರು.‌
[18/11, 7:57 PM] Cm Ps: *ಬೆಂಗಳೂರು ದೇಶದ ಆರ್ಥಿಕತೆಯ ರಾಜಧಾನಿಯಾಗಲಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ನವೆಂಬರ್ 18 :

 ಬೆಂಗಳೂರು ಕೇವಲ ತಂತ್ರಜ್ಞಾನದ ನಗರವಾಗಿರದೇ, ಮುಂದಿನ 5 ವರ್ಷಗಳಲ್ಲಿ ದೇಶದ ಆರ್ಥಿಕತೆಯ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರು ಟೆಕ್ ಸಮ್ಮಿಟ್  2022 ರ ಸಮಾರೋಪ ಸಮಾರಂಭದಲ್ಲಿ  ಪಾಲ್ಗೊಂಡು  ಯೂನಿಕಾರ್ನ್ಗಳ ಅಭಿನಂದನಾ ಹಾಗೂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. 

ಕರ್ನಾಟಕ ವಿದೇಶಿ ಬಂಡವಾಳ ಹೂಡಿಕೆ ಹಾಗೂ ಸ್ಟಾರ್ಟ್ ಅಪ್ ಗಳಲ್ಲಿ ಉತ್ತಮ ಸ್ಥಾನದಲ್ಲಿದೆ. ಬಿಯಾಂಡ್ ಬೆಂಗಳೂರು ಅಭಿವೃದ್ಧಿಯಾಗಬೇಕು. ಕೃಷಿ, ತಂತ್ರಜ್ಞಾನ, ಆರ್ಥಿಕತೆ ಹೀಗೆ ಎಲ್ಲ ರಂಗಗಳಲ್ಲಿಯೂ ಕರ್ನಾಟಕ ಹಾಗೂ ಬೆಂಗಳೂರು  ಅತ್ಯುತ್ತಮ ಶ್ರೇಯಾಂಕ ಹೊಂದಿದೆ. ಇದರಿಂದಾಗಿ ನಮ್ಮ ಜವಾಬ್ದಾರಿಯೂ ಹೆಚ್ಚಿದೆ ಎಂದರು.

*ಆತ್ಮವಿಶ್ವಾಸವೇ  ಟೆಕ್ ಸಮಿಟ್ ನ ಸ್ಪೂರ್ತಿ :*
ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವುದರ ಜೊತೆಗೆ ಪ್ರಥಮ ಸ್ಥಾನವನ್ನು ಕಾಯ್ದಿರಿಸಿಕೊಂಡಿರುವುದು ಸವಾಲಿನ ಕೆಲಸವಾಗಿದ್ದು, ಇದಕ್ಕಾಗಿ ದೊಡ್ಡ ಪ್ರಮಾಣದ ಪರಿಶ್ರಮ ಬೇಕಾಗಿದೆ. ಈ ನಿಟ್ಟಿನಲ್ಲಿ ನಾಡಿನ ಇಂಜಿನಿಯರ್ಸ್ ಹಾಗೂ ವಿಜ್ಞಾನಿಗಳು ಹಾಗೂ ಅವರ ಪರಿಶ್ರಮದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ.  ಆಧುನಿಕ ತಂತ್ರಜ್ಞಾನ ಮಾನವನ ಒಳಿತಿಗೆ  ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಬಳಕೆಯಾಗಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಬದಲಾವಣೆಯನ್ನು ತರಬಹುದು. ಸೋಲಿಗೆ ಹೆದರದೇ ಗೆಲ್ಲಲೇಬೇಕೆಂಬ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಈ ಆತ್ಮವಿಶ್ವಾಸವೇ ಟೆಕ್ ಸಮಿಟ್ ನ ಸ್ಪೂರ್ತಿಯಾಗಿದೆ. ಉದ್ಯಮಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಸಫಲರಾದಾಗ ಮಾತ್ರ ಇಂದಿನ ಟೆಕ್ ಸಮಿಟ್ ಯಶಸ್ವಿಯಾಗುತ್ತದೆ. ಅನೇಕ ಪ್ರಮುಖ ಸಂಶೋಧನೆಗಳು ವೈಯಕ್ತಿಕವಾಗಿ ಆಗಿವೆಯೇ ಹೊರತು ಸಂಸ್ಥೆಯಿಂದಲ್ಲ ಎಂದರು.

*ಟೆಕ್ ಸಮ್ಮಿಟ್  ಯಶಸ್ವಿ*
ಬೆಂಗಳೂರಿನಲ್ಲಿ ಎಲ್ಲರೂ ಒಟ್ಟುಗೂಡಿ ಟೆಕ್ ಸಮ್ಮಿಟ್  ನ್ನು ಯಶಸ್ವಿಗೊಳಿಸಿದ್ದೇವೆ. ಇದನ್ನು ಮುಂದಕ್ಕೆ ಕೊಂಡೊಯ್ಯಬೇಕು.  ಮೂರು ದಿನದ ಈ ಉತ್ಸವದ ಪಾಲಗೊಂಡವರ  ಭಾವನೆಗಳೇನು ಎನ್ನುವುದು ಬಹಳ ಮುಖ್ಯ. ಚಿಂತನೆಗಳು ತಂತ್ರಜ್ಞಾನದ ಜೊತೆಗೂಡಿದೆ.  ಕ್ರಿಯೆಗೆ  ಗುರಿಯನ್ನು, ಅಭಿವೃದ್ಧಿಗೆ ಶ್ರಮ,  ನಾಯಕತ್ವ, ಸುಸ್ಥಿರತೆ,  ಸ್ನೇಹಕ್ಕೆ ಸಂಬಂಧ ಹಾಗೂ ಬೆಂಗಳೂರನ್ನು ಬೆಂಗಳೂರು ಭೇಟಿಯಾಗಿದೆ. ಬೆಂಗಳೂರು ಎಂದರೆ ಬಂಗಾರದ ಊರು. ಬಂಗಾರದಂಥ ಹೃದಯವುಳ್ಳ ಜನರ ನಗರವಿದು ಎಂದರು.

ಕೇಂದ್ರ ವಾಣಿಜ್ಯ ಮತ್ತು  ಕೈಗಾರಿಕಾ ಸಚಿವ ಪಿಯೂಶ್ ಗೋಯಲ್, ಐಟಿಬಿಟಿ ಸಚಿವ  ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್,  ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ , ಸ್ಟಾರ್ಟ್ ಅಪ್  ವಿಷನ್ ಗುಂಪಿನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಐಟಿಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣ ರೆಡ್ಡಿ, ಐಟಿಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.
[18/11, 8:17 PM] Cm Ps: ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತ ಹೊಟೆಲ್ ಹಾಗೂ ರೆಸ್ಟೋರೆಂಟ್ ಅಸೊಶಿಯೇಶನ್ ನ (ಶಿಹ್ರಾ) ವಾರ್ಷಿಕ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ದಕ್ಷಿಣ ಭಾರತದ ಹೊಟೆಲ್ ಹಾಗೂ ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಶ್ಯಾಮ ರಾಜು, ತಮಿಳುನಾಡು ಪ್ರವಾಸೋದ್ಯಮ ಸಚಿವ ಮುತ್ತಿವೆಣೈ , ಪಾಂಡಿಚೆರಿ ಪ್ರವಾಸೋದ್ಯಮ ಸಚಿವ ಲಕ್ಷ್ಮೀನಾರಾಯಣ, ಪ್ರವಾಸೋದ್ಯಮ ಇಲಾಖೆ ಎಸಿಎಸ್ ಕಪಿಲ್ ಮೋಹನ್ ಹಾಗೂ ಮತ್ತಿತತರು ಹಾಜರಿದ್ದರು.
[18/11, 9:14 PM] Cm Ps: ಬೆಂಗಳೂರು, ನವೆಂಬರ್ 18 *: ಮಾನ್ಯ* *ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ* ಅವರು *ಇಂದು ದಕ್ಷಿಣ ಭಾರತ* *ಹೊಟೇಲ್* ಮತ್ತು *ರೆಸ್ಟೋರೆಂಟ್‍ಗಳ ಸಂಘದ* ಹಾಗೂ *ಪ್ರವಾಸೋದ್ಯಮ* ಇಲಾಖೆಯ ಸಹಯೋಗದೊಂದಿಗೆ *ಅರಮನೆ ರಸ್ತೆಯ ಹೊಟೇಲ್* *ಶಾಂಗ್ರಿಲಾದಲ್ಲಿ* ಆಯೋಜಿಸಿರುವ *19ನೇ ಸಿಹ್ರಾ* (SIHRA) *ವಾರ್ಷಿಕ ಸಮಾವೇಶ –* *2022ರ ಉದ್ಘಾಟಿಸಿ* ಕಾರ್ಯಕ್ರಮವನ್ನುದ್ದೇಶಿಸಿ *ಮಾತನಾಡಿದರು.*
[18/11, 10:05 PM] Cm Ps: *ಕೆ.ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7 ನೇ ವೇತನ ಆಯೋಗ ರಚನೆಗೆ ಅನುಮೋದನೆ*
ಮೂವರು ಸದಸ್ಯರ ನೇಮಕ

ಬೆಂಗಳೂರು, ನ. 18- ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದನೆ ನೀಡಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ. ರಾಮಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕರಾದ ಶ್ರೀಕಾಂತ್ ಬಿ. ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಮೂಲಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
7ನೇ ವೇತನ ಆಯೋಗವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿ (ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಯ ವೇತನ ಪಡೆಯುತ್ತಿರುವವರನ್ನು ಹೊರತು ಪಡಿಸಿ)ಯ ವೇತನ ಹಾಗೂ ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಿ, ಕಾರ್ಯಸಾಧುವಾದ ನೂತನ ವೇತನ ಶ್ರೇಣಿಯನ್ನು ಶಿಫಾರಸು ಮಾಡುವುದು, ಕೇಂದ್ರದ ವೇತನ ಶ್ರೇಣಿಯನ್ನು ರಾಜ್ಯದಲ್ಲಿ ಅಳವಡಿಸುವ ಕುರಿತು ಪರಿಶೀಲಿಸುವುದು, ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ನೀಡಲು ಅನುಸರಿಸಬೇಕಾದ ಸೂತ್ರವನ್ನು ರೂಪಿಸುವುದು, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಪ್ರವಾಸ ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳನ್ನು ನಿಗದಿ ಪಡಿಸಲು ಹಾಗೂ ಸುಧಾರಣೆ ತರಲು ಸಲಹೆ ನೀಡುವುದು, ನಿವೃತ್ತಿ ವೇತನ ಮತ್ತು ಸಂಬಂಧಿತ ಸೌಲಭ್ಯಗಳ ಪರಿಷ್ಕರಣೆ ಮೊದಲಾದ ಅಂಶಗಳ ಕುರಿತು ವೇತನ ಆಯೋಗವು ಪರಿಶೀಲಿಸಿ ಶಿಫಾರಸು ನೀಡಲಿದೆ.
ಸರ್ಕಾರದ ಸಂಪನ್ಮೂಲಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲ ಮತ್ತು ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ವೇತನ ಆಯೋಗವು ಆರು ತಿಂಗಳ ಒಳಗಾಗಿ  ತನ್ನ ಶಿಫಾರಸುಗಳನ್ನು ಮಾಡಲಿದೆ.
[18/11, 10:31 PM] Cm Ps: *ಬೆಂಗಳೂರಿನ ಸಮಸ್ಯೆಗಳಿಗೆ ಶೀಘ್ರ ಪರಿಹಾರ*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ನವೆಂಬರ್ 17: ಬೆಂಗಳೂರಿನ ಸಮಸ್ಯೆಗೆ ಪರಿಹಾರ ‌ದೊರಕಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು   ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತೀಯ ಹೋಟೆಲ್ ಮತ್ತು ರೆಸ್ಟರಾಂಟ್ ಗಳ ಸಂಘದ  ವಾರ್ಷಿಕ  ಸಮ್ಮೇಳನವನ್ನು ಇಂದು    ಉದ್ಘಾಟಿಸಿ ಮಾತನಾಡಿದರು.  

ಬೆಂಗಳೂರಿಗೆ ನಿತ್ಯ ಲಕ್ಷಾಂತರ ಜನರು ಬರುತ್ತಿರುವುದರಿಂದ ಇಲ್ಲಿ ಹೂಡಿಕೆ ಹಾಗೂ ಕೆಲಸ ಮಾಡುವವರು ಹೆಚ್ವಿರುವುದರಿಂದ  ಸಂಚಾರ ದಟ್ಟಣೆ ಸಾಮಾನ್ಯ. 

ರಾಜ್ಯದಲ್ಲಿ ಐದು ಹೊಸ ನಗರಗಳ ನಿರ್ಮಾಣ ಮಾಡಲು ತೀರ್ಮಾನಿಸಿದ್ದು,  ನಗರದಲ್ಲಿ ಆಧುನಿಕ ಸೌಲಭ್ಯಗಳುಳ್ಳ  ವ್ಯವಸ್ಥೆ ಕಲ್ಪಿಸಲಾಗುವುದು. ಇದ್ದನ್ನು ನಾವು ನವ ಕರ್ನಾಟಕ ಎಂದು ಕರೆಯುತ್ತೇವೆ.    ಈ ವರ್ಷ ಮೂರು ವಿಮಾನ ನಿಲ್ದಾಣಗಳ ಆರಂಭಿಸಲಿದ್ದು  ಮುಂದಿನ ವರ್ಷ ಮತ್ತೆ ಮೂರು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದ್ದೇವೆ.  ದೂರದ ಸ್ಥಳಗಳನ್ನು ತಲುಪಲು ಏರ್ ಸ್ಟ್ರಿ ಪ್ಸ್  ನಿರ್ಮಾಣವಾಗಲಿದೆ ಎಂದರು. ನ್

*ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ದಿ*
ರಾಜ್ಯದ ಅನೇಕ  ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ದಿ ಮಾಡಲಿದ್ದೇವೆ‌. ಅಂಜನಾದ್ರಿ ಹಾಗೂ ಜೋಗ ಫಾಲ್ಸ್ ಸೇರಿದಂತೆ ಒಟ್ಟು ಆರು  ರೋಪ್ ವೇಗಳ  ನಿರ್ಮಾಣವಾಗುತ್ತಿದೆ. ಪ್ರಗತಿಪರ, ಸ್ನೇಹಮಯಿ ರಾಜ್ಯ ವಾಗಿದ್ದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತಿಥ್ಯ ಪ್ರಮುಖ ಪ್ರಾತ್ರ ವಹಿಸುತ್ತದೆ. ಉತ್ತಮ ಆತಿಥ್ಯ ಜನರನ್ನು ಆಕರ್ಷಿಸುತ್ತದೆ ಮಾತ್ರವಲ್ಲದೆ ರಾಜ್ಯದ ಬಗ್ಗೆಯೂ ಉತ್ತಮ ಅಭಿಪ್ರಾಯ ಮೂಡಿಸುತ್ತದೆ. ಸಂಘದ ಬೇಡಿಕೆಗಳನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.   ಜಿ.ಎಸ್.ಟಿ ಯಲ್ಲಿ ರಿಯಾಯಿತಿ ನೀಡುವ ಬಗ್ಗೆ ಪರಿಶೀಲಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು. 

*ಗಾಡ್ಸ್ ಮೋಸ್ಟ್ ಲವ್ಡ್ ಕಂಟ್ರಿ*
ಒಂದು ರಾಜ್ಯ ಹಲವು ಜಗತ್ತು ಎಂಬ ರಾಜ್ಯದ ಪ್ರವಾಸೋದ್ಯಮ ಘೋಷವಾಕ್ಯಕ್ಕೆ  ಗಾಡ್ಸ್ ಮೋಸ್ಟ್ ಲವ್ಡ್ ಕಂಟ್ರಿ  ಎಂದು ಹೊಸ ಟ್ಯಾಗ್ ಲೈನ್ ನೀಡಬೇಕು ಎಂದು ಸಲಹೆ ನೀಡಿದರು.  
ಹೊಸ ಆಲೋಚನೆ ಹೊಸ ವಿಚಾರ ಗಳೊಂದಿಗೆ ಬನ್ನಿ ನಮ್ಮ ಸರ್ಕಾರ ನಿಮಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದರು. 

*ಪ್ರವಾಸೋದ್ಯಮ ಸರ್ಕಿಟ್*

ಕರ್ನಾಟಕ, ತಮಿಳುನಾಡು, ಕೇರಳ ಎಲ್ಲ ರಾಜ್ಯಗಳು ಒಂದೆ ರೀತಿಯಲ್ಲಿ ಪ್ರವಾಸಿಗರನ್ನು ಸೆಳೆಯಬೇಕು.
ಕರ್ನಾಟಕ ಅತಿ ಉದ್ದವಾದ ಪಶ್ಚಿಮ ಘಟ್ಟ ಪ್ರದೇಶ ಹೊಂದಿದೆ. ಪಶ್ಚಿಮ ಘಟ ಸ್ವಿಡ್ಜರ್ ಲ್ಯಾಂಡ್ ಗಿಂತ ಸುಂದರವಾಗಿದೆ. ಆದರೆ, ನಾವು ಅದನ್ನು ಗುರುತಿಸುತ್ತಿಲ್ಲ. ನಮ್ಮಲ್ಲಿ ಧಾರ್ಮಿಕ ಸ್ಥಳಗಳೂ ಇವೆ. 
ಪ್ರವಾಸೋದ್ಯಮ ವಲಯದಲ್ಲಿ ಕರ್ನಾಟಕ ಒಳ್ಳೆಯ ಸೇವೆ ಸಲ್ಲಿಸುತ್ತಿದೆ. ಪ್ರವಾಸೋದ್ಯಮ ನೀತಿ  ಹೊಂದಿದ್ದು,  ಮೈಸೂರು ಹಾಗೂ ಹಂಪಿ ಪ್ರವಾಸಿ ಸರ್ಕಿಟ್ ಹೊಂದಲಿದ್ದೇವೆ.   ಒಂದು ಟಿಕೆಟ್ ನಲ್ಲಿ ಎಲ್ಲವನ್ನು ನೋಡುವ ವ್ಯವಸ್ಥೆ ಕಲ್ಪಿಸಲಾಗುವುದು.  ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯ. ಬೆಂಗಳೂರನ್ನು ಎಲ್ಲರೂ ಪ್ರೀತಿಸುತ್ತಾರೆ. ಪ್ರತಿ ದಿನ ಐದರಿಂದ ಹತ್ತು ಸಾವಿರ ವಿಜ್ಞಾನಿಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ವಿಶ್ವದ ಯಾವುದೇ ರಾಜ್ಯದಲ್ಲಿರದ  400 ಆರ್ ಆಂಡ್ ಡಿ ಕೇಂದ್ರಗಳು  ಬೆಂಗಳೂರಿನಲ್ಲಿವೆ. ದೇಶದಲ್ಲಿಯೇ ಅತಿ ಹೆಚ್ಚಿನ ಜನರು ಬಂದು ಹೋಗುವ ತಾಣ ಬೆಂಗಳೂರು ಎಂದರು. 

*ಯೋಜನಾಬದ್ಧವಾಗಿ ಪ್ರವಾಸೋದ್ಯಮದ ಅಭವೃದ್ಧಿಗೆ ಯೋಜನೆ ರೂಪಿಸಿಕೊಳ್ಳಿ :*
ಪ್ರವಾಸೋದ್ಯಮ ಎಲ್ಲ ವ್ಯವಸ್ಥೆ ಕಲ್ಪಿಸಬೇಕು. ವಿವಿಧ ಕಾರಣಗಳಿಗಾಗಿ ಬರುವ ಜನರ  ಅವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆಯತ್ತ ಗಮನಹರಿಸಬೇಕು.  ಯೋಜನಾಬದ್ಧವಾಗಿ ಪ್ರವಾಸೋದ್ಯಮದ ಅಭವೃದ್ಧಿಗೆ ಯೋಜನೆ ರೂಪಿಸಿಕೊಳ್ಳಲು ಸಲಹೆ ನೀಡಿ ಪ್ರವಾಸೋದ್ಯಮಕ್ಕೆ ಯಾವುದೇ ಗಡಿಗಳ ಮಿತಿ ಇಲ್ಲ ಎಂದರು.

*ಪ್ರಕೃತಿದತ್ತ ಬೀಚ್ ಗಳ  ಅಭಿವೃದ್ಧಿ:*
ಕರ್ನಾಟಕ ಅತಿ ಉದ್ದವಾದ ಪಶ್ಚಿಮ ಘಟ್ಟ ಪ್ರದೇಶ ಹೊಂದಿದೆ. ಪಶ್ಚಿಮ ಘಟ್ಟ ಸ್ವಿಡ್ಜರ್ ಲ್ಯಾಂಡ್ ಗಿಂತ ಸುಂದರವಾಗಿದೆ. ಆದರೆ, ನಾವು ಅದನ್ನು ಗುರುತಿಸುತ್ತಿಲ್ಲ. ನಮ್ಮಲ್ಲಿ ಧಾರ್ಮಿಕ ಸ್ಥಳಗಳೂ ಇವೆ. 
ಪ್ರವಾಸೋದ್ಯಮ ವಲಯದಲ್ಲಿ ಕರ್ನಾಟಕ ಒಳ್ಳೆಯ ಸೇವೆ ಸಲ್ಲಿಸುತ್ತಿದೆ. ನಾವು ಪ್ರವಾಸೋದ್ಯಮ ನೀತಿ ಹೊಂದಿದ್ದೆವೆ.ಕರಾವಳಿ ಭಾಗದ ಪ್ರವಾಸೋದ್ಯಮದ ಅಭಿೃದ್ಧಿಗೆ ಹೊಸ ಸಿ ಅರ್ ಝೆಡ್ ನಿಯಮಾವಳಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕರ್ನಾಟಕದಲ್ಲಿ ಪ್ರಕೃತಿದತ್ತ ಬೀಚ್ ಗಳಿದ್ದು , ಇವುಗಳ ಅಭಿವೃದ್ಧಿಗೆ ಈ ನಿಯಮಗಳು ಸಹಕಾರಿಯಾಗಲಿದೆ ಎಂದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್,  ಸಂಘದ ಅಧ್ಯಕ್ಷ ಕೆ.ಶ್ಯಾಮ ರಾಜು ಹಾಗೂ ಸಂಘದ  ಪದಾಧಿಕಾರಿಗಳು ಉಪಸ್ಥಿತರಿದ್ದರು
[19/11, 11:26 AM] Cm Ps: *ಮಂಗಳೂರಿಗೆ ಬಂದಿಳಿದ ಮುಖ್ಯಮಂತ್ರಿಗಳು*

ಮಂಗಳೂರು,ನ.19(ಕ.ವಾ):- ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ‌ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲು  ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನ.19ರ ಶನಿವಾರ ಬಜಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

 ಈ ಸಂದರ್ಭದಲ್ಲಿ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಹಾಗೂ ಜನಪ್ರತಿನಿಧಿಗಳು ಆತ್ಮೀಯವಾಗಿ ಸ್ವಾಗತಿಸಿದರು.

ಶಾಸಕಾರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮಂಗಳೂರು ಮೇಯರ್ ಜಯಾನಂದ ಅಂಚನ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಸಹಾಯಕ‌ ಆಯುಕ್ತ ಮದನ್ ಮೋಹನ್  ಹಾಗೂ ಇತರೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.
[19/11, 12:12 PM] Cm Ps: *ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಕರಾವಳಿಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆ*: *ಸಿಎಂ ಬೊಮ್ಮಾಯಿ*

ಮಂಗಳೂರು, ನವೆಂಬರ್ 19: ಬಂಡವಾಳ ಹೂಡಿಕೆದಾರರ ಸಮಾವೇಶದಿಂದ  ನವೀಕರಿಸಬಹುದಾದ ಇಂಧನ,  ಹೈಡ್ರೋಜನ್ ಇಂಧನ ಮತ್ತು ಕಡಲನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಂದೂವರೆಯಿಂದ ಎರಡು ಲಕ್ಷ ಕೋಟಿ ಬಂಡವಾಳದ ನಿರೀಕ್ಷೆ ಇದೆ.  ದೊಡ್ಡ ಪ್ರಮಾಣದ ಹೂಡಿಕೆ ಕರಾವಳಿಯಲ್ಲಿ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 

*ಹಸಿರು ಯೋಜನೆ*
 ಉತ್ಪಾದನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತಯಾರಿ ನಡೆಸಲಾಗಿದೆ. ಈಗಾಗಲೇ ಮೂರು ನವೀಕರಿಸಬಹುದಾದ ಇಂಧನ ಕಂಪೆನಿಗಳೊಂದಿಗೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಯಲ್ಲಿ  ಅನುಮೋದನೆ ನೀಡಲಾಗಿದೆ. ಬಹಳ ವೇಗದಲ್ಲಿ ಕೆಲಸಗಳಾಗುತ್ತಿದ್ದು, ಮಾರ್ಚ್ ಏಪ್ರಿಲ್ ವೇಳೆಗೆ ಕೆಲಸ ಪ್ರಾರಂಭ ಮಾಡುವುದಾಗಿ 2-3 ಕಂಪನಿಗಳು ಹೇಳಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರಾವಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಪಾತ್ರ ವಹಿಸಿದೆ. ಹೈಡ್ರೋಜನ್ ಹಾಗೂ ಅಮೋನಿಯಾ ಉತ್ಪಾದನೆಯ ಎರಡು ಪ್ರಮುಖ ಯೋಜನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬರಲಿದ್ದು,  ಗಲ್ಫ್ ದೇಶದಲ್ಲಿ  ಮತ್ತು ಮಂಗಳೂರಿನಲ್ಲಿ  ತಲೆ ಎತ್ತಲಿದೆ. ಮಂಗಳೂರಿನ ಆಸುಪಾಸಿನಲ್ಲಿ ಕಡಲ ನೀರಿನಿಂದ ಅಮೋನಿಯಾ ತಯಾರು ಮಾಡುವ ಪ್ರಮುಖ ಘಟ್ಟ ಬರಲಿದೆ. ನವೀಕರಿಸಬಹುದಾದ ಇಂಧನ ಘಟಕ್ಕೆ ಅಗತ್ಯ ವಿರುವ ಇಂಧವನ್ನೂ ನವೀಕರಿಸಬಹುದಾದ ಇಂಧನ ಮೂಲಗಳಾದ ಸೋಲಾರ್, ವಿಂಡ್ ಮಿಲ್ ಗಳಿಂದಲೇ ಪಡೆಯಲಾಗುವುದು. ಸಂಪೂರ್ಣವಾಗಿ ಹಸಿರು ಯೋಜನೆಯಾಗಲಿದೆ ಎಂದರು. 

*ಉದ್ಯೋಗ ಸೃಜನೆ*
ನೇರ ಹಾಗೂ ಪರೋಕ್ಷವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಜನೆಯಾಗಿ ಈ ಭಾಗದ ಯುವಕರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ ಎಂದರು. 

*ಆದ್ಯತೆ ಮೇರೆಗೆ ಮಂಗಳೂರು- ಬೆಂಗಳೂರು ಹೆದ್ದಾರಿ ದುರಸ್ತಿ*
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ  ದುರಸ್ತಿ ಕಾಮಗಾರಿ  ನಿರಂತರವಾಗಿ ಮಳೆ ಬಂದಿದ್ದರಿಂದ  ತಡವಾಗಿದೆ. ಮುಂದಿನ ವಾರ ದೆಹಲಿಗೆ ತೆರಳಲಿದ್ದು,  ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಬೇಕಿದೆ. ಈ ವಾರದಲ್ಲಿ ಅದಕ್ಕೆ ಪೂರಕವಾಗಿ ಇಡೀ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಭೆ ಕರೆಯಲಾಗುವುದು. ಆದ್ಯತೆ ಮೇರೆಗೆ ಮಂಗಳೂರು- ಬೆಂಗಳೂರು ಹೆದ್ದಾರಿ ದುರಸ್ತಿ ಕೆಲಸಗಳಾದ ಸುರಂಗ ಮಾರ್ಗ, ವೈಟ್ ಟಾಪಿಂಗ್ ಮುಂತಾದ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಅಲ್ಪಾವಧಿ ಕಾಮಗಾರಿಯಲ್ಲಿ ರಸ್ತೆಯಲನ್ನು ಬಳಕೆಗೆ ಯೋಗ್ಯವಾಗಿಸುವುದು ಹಾಗೂ ದೀರ್ಘಾವಧಿ ಕಾಮಗಾರಿ ಗಳಲ್ಲಿ ಸುರಂಗ ಮಾರ್ಗ ನಿರ್ಮಾಣ ಕೈಗೊಳ್ಳಲಾಗುವುದು ಎಂದರು. 
 
*ಮತದಾರರ ಪರಿಷ್ಕರಣೆ*
ಮತದಾರರ ಪರಿಷ್ಕರಣೆ ಪ್ರತಿ ವರ್ಷ ಹಾಗೂ ಚುನಾವಣೆ ಸಂದರ್ಭದಲ್ಲಿ ಮಾಡಲಾಗುತ್ತದೆ. ಚುನಾವಣಾ ಆಯೋಗದ ನಿರಂತರ ಪ್ರಕ್ರಿಯೆಯಾಗಿದೆ ಎಂದರು. 

*ತೀವ್ರಗತಿಯಲ್ಲಿ ಪೊಲೀಸ್ ತನಿಖೆ*

ವಿರೋಧ ಪಕ್ಷದವರು  ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಎಲ್ಲದ್ದಕ್ಕೂ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಬಿಡಿಎ ವಿಚಾರದಲ್ಲಿ ನ್ಯಾಯಾಂಗ ತನಿಖೆಯಾದಾಗ ಅದರಿಂದ ಪಾರಾಗಲು ಅನುಕೂಲವಾಯಿತು. ಶೀಘ್ರವಾಗಿ ಅಪರಾಧದ ವಿರುದ್ಧ  ಪೊಲೀಸ್ ಕೆಲಸ ಮಾಡುತ್ತದೆ. ಈಗಾಗಲೇ ಬಂಧವವೂ ಆಗಿದೆ. ತೀವ್ರಗತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
[19/11, 12:14 PM] Cm Ps: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ, ಐಟಿ, ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ,  ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಶಾಸಕರು, ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
[19/11, 2:06 PM] Cm Ps: ಮಂಗಳೂರು, ನವೆಂಬರ್ 19: ಇಂದು *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ* ಅವರು ಜಿಲ್ಲಾಡಳಿತ ದಕ್ಷಿಣ ಕನ್ನಡ, ಮಂಗಳೂರು ಮಹಾನಗರ ಪಾಲಿಕೆ ಮತ್ತು *ಸ್ವಾತಂತ್ರ್ಯ ಹೋರಾಟಗಾರ* *ಕೆದಂಬಾಡಿ* *ರಾಮಯ್ಯಗೌಡ ಸ್ಮಾರಕ* ಉಸ್ತುವಾರಿ ಸಮಿತಿ (ರಿ) ಮಂಗಳೂರು ಇವರÀ ಸಹಯೋಗದೊಂದಿಗೆ *ಬಾವುಟಗುಡ್ಡೆ / ಕರಾವಳಿ ಉತ್ಸವ* *ಮೈದಾನದಲ್ಲಿ* ಆಯೋಜಿಸಿರುವ *ಸ್ವಾತಂತ್ರ್ಯ* *ಹೋರಾಟಗಾರ, ಸಂಘಟನಾ* ಚತುರ, ಸಮರವೀರ ಹುತಾತ್ಮ “ *_ಕೆದಂಬಾಡಿ ರಾಮಯ್ಯ ಗೌಡರ_* *ಶೌರ್ಯದ ಪ್ರತಿಮೆ* *ಅನಾವರಣ* ” ಗೊಳಿಸಿ ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
[19/11, 3:21 PM] Cm Ps: *ಬೆಂಗಳೂರಿನಲ್ಲಿ  ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ*

ಮಂಗಳೂರು, ನವೆಂಬರ್ 19 : 

 ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನೊಳಗೊಂಡ ಸ್ಮಾರಕವನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಘೋಷಿಸಿದರು.

ಅವರು ಇಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.

ದೇಶವಿದೇಶಗಳಲ್ಲಿ ಇಂತಹ ಸ್ಮಾರಕಗಳಿಗೆ ಬಹಳ ಮಹತ್ವವಿದೆ. ಇಂತಹ ಸ್ಮಾರಕಗಳು ನಮ್ಮ ಇತಿಹಾಸ, ಸಂಸ್ಕೃತಿ-ಪರಂಪರೆಗಳನ್ನು ಬಿಂಬಿಸುವ ಜೊತೆಗೆ ನಮ್ಮ ಅಸ್ಮಿತೆಯನ್ನೂ ಬಿಂಬಿಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯತೆ, ಇದಕ್ಕೆ ಪೂರಕವಾದ ಸರ್ಕಾರದ ನೀತಿಗಳು ಭಾರತದ ಅಸ್ಮಿತೆಯನ್ನು ಗಟ್ಟಿಗೊಳಿಸುತ್ತದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಅನೇಕ ಅನಾಮಧೇಯ ಹೋರಾಟಗಾರರ ಬಗ್ಗೆ ನಮ್ಮ ಯುವಜನತೆಗೆ , ದೇಶವಿದೇಶಗಳಿಗೆ ಅರಿವು ಮೂಡಿಸಬೇಕು. ಜಪಾನ್ ನಲ್ಲಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಅಮೆರಿಕಾದಲ್ಲಿ ಮಹಾತ್ಮಗಾಂದಿ ಸ್ಮಾರಕ ನಮಗೆ ಸ್ಪೂರ್ತಿ ನೀಡುತ್ತಿದೆ ಎಂದರು.

*ಬೆಂಗಳೂರಿನಲ್ಲಿಯೂ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ನಿರ್ಮಾಣ:*
ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನು ಬೆಂಗಳೂರಿನಲ್ಲಿಯೂ ನಿರ್ಮಿಸಲಾಗುವುದು. ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿಯೂ ಅಳವಡಿಸಲಾಗುವುದು. ಮಂಗಳೂರು ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ನಾಮಕರಣ ಮಾಡುವ ಬಗ್ಗೆ ಸೂಕ್ತ ನಿರ್ಣಯಗಳನ್ನು ಶೀಘ್ರದಲ್ಲಿ ತೆಗೆದುಕೊಳ್ಳಲಾಗುವುದು. ಲೋಕಮಾನ್ಯ ತಿಲಕರು, ಕಾಲಪಾನಿ ಶಿಕ್ಷೆ ಅನುಭವಿಸಿದ ಸಾರ್ವರ್ಕರ್ ರವರು, ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ರವರ ತ್ಯಾಗಬಲಿದಾನಗಳನ್ನು ಮರೆಯಬಾರದು. ಇದನ್ನು ಮರೆಯುವವರು ನಿಜ ದೇಶಭಕ್ತರಾಗಲು ಸಾಧ್ಯವಿಲ್ಲ ಎಂದರು.

*ರೈತರು ಯೋಧರಾದಾಗ ಕ್ರಾಂತಿಯಾಗುತ್ತದೆ :*
ಭಾರತಕ್ಕೆ ಸ್ವಾತಂತ್ರ್ಯ ಸುಲಭವಾಗಿ ನಮಗೆ ದೊರಕಲಿಲ್ಲ. ಹಲವರು ತಮ್ಮ ಬದುಕು ಜೀವವನ್ನೇ ತ್ಯಾಗ ಮಾಡಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಟ ಮೊದಲು ರೈತರಿಂದ ಪ್ರಾರಂಭವಾಯಿತು.ಕೆದಂಬಾಡಿ ರಾಮಯ್ಯ ಗೌಡರು ರೈತ ಕುಟುಂಬದಲ್ಲಿ ಹುಟ್ಟಿ, ವೀರ ಯೋಧರಾಗಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ರೈತರು ಯೋಧರಾದಾಗ ಕ್ರಾಂತಿಯಾಗುತ್ತದೆ.  ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಯಂತಹ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದಾಗ ಬ್ರಿಟೀಷರಿಗೆ ತಮಗೆ ಇನ್ನು ಉಳಿಗಾಲವಿಲ್ಲ ಎಂಬ ಸತ್ಯದ ಅರಿವಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ನಡೆದ ರೈತ ಸತ್ಯಾಗ್ರಹ ಬ್ರಿಟೀಷರನ್ನು ಕಂಗೆಡಿಸಿತು ಎಂದರು.

*ದೇಶಭಕ್ತಿಯೊಂದೇ ಸ್ಪೂರ್ತಿ :*
ದುಡಿಯುವ ವರ್ಗ  ಬ್ರಿಟೀಷರ ವಿರುದ್ಧ ತಿರುಗಿಬಿದ್ದಾಗ, ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಚಿಂತನೆ ಪ್ರಾರಂಭೀಸಿದರು. ಅನಾಮಧೇಯ ಹೋರಾಟಗಾರರ ಸಂಖ್ಯೆ ಸಾಕಷ್ಟಿದೆ. ಇಂತಹ ಅನೇಕರ ತ್ಯಾಗಬಲಿದಾನಗಳಿಗೆ ನ್ಯಾಯ ದೊರೆತಿಲ್ಲ. ನರಗುಂದ ಬಾಬಾಸಾಹೇಬ, ಮಹಾದೇವ  ಅವರು ಬೆಳಗಾವಿ , ಬಿಜಾಪುರ ಭಾಗಗಳಲ್ಲಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. 12 ವರ್ಷದ ಬಾಲಕ, ನಾರಾಯಣ ಮಹಾದೇವ ಧೋನಿ, ವಂದೇ ಭಾರತ ಪಠಿಸುತ್ತಲೇ ಬ್ರಿಟೀಷರ ಗುಂಡಿಗೆ ಬಲಿಯಾಗುತ್ತಾನೆ. ಈ ಬಾಲಕನಿಗೆ ದೇಶಭಕ್ತಿಯೊಂದೇ ಸ್ಪೂರ್ತಿಯಾಗಿತ್ತು. ಇಂತಹ ಕಥೆಗಳು ನೂರಾರಿವೆ ಎಂದರು.

*ನಾಡಪ್ರಭು ಕೆಂಪೇಗೌಡು ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಪ್ರೇರಣೆ :*
ಇತ್ತೀಚೆಗೆ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಯಿತು. ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃಗಳಾಗಿದ್ದು, ಕೋಟೆಗಳು, ಕೆರೆಗಳು, ಮಾರುಕಟ್ಟೆ, ಆಧುನಿಕ ನಗರ ನಿರ್ಮಿಸಿದರು. ಆರ್ಥಿಕ ಬೆಳವಣಿಗೆಗೆ ಪೂರಕವಾದ ನಗರದ ಮಾದರಿಯನ್ನು ಅಭಿವೃದ್ಧಿಪಡಿಸಿದವರು. ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗವನ್ನು ಬೆಂಗಳೂರಿನಲ್ಲಿ ಸೃಷ್ಟಿಸಿದರು. ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದಾರೆ ಎಂದರು.

*ದೇಶಕ್ಕಾಗಿ ಬದುಕುವ ಸಂಕಲ್ಪ :*
ದೇಶಕ್ಕಾಗಿ ಬದುಕುವುದನ್ನು ಇಂದಿನ ಯುವಜನರು ಸಂಕಲ್ಪ ಮಾಡಿದರೆ, ನಮ್ಮ ದೇಶ ಸಮೃದ್ಧವಾಗುತ್ತದೆ. ಭಾರತೀಯ ಸಂಸ್ಕೃತಿ ಪರಂಪರೆಗಳು ನಮ್ಮನ್ನು ಕಾಪಾಡುತ್ತಿವೆ. ಪ್ರಪಂಚದ ಅನೇಕ ದೇಶಗಳು ಆರ್ಥಿಕ ಹಿನ್ನಡೆ ಹಾಗೂ ಹಣದುಬ್ಬರ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಮ್ಮ ದೇಶ ಶೇ.6 ರಷ್ಟು ಪ್ರಗತಿಯನ್ನು ತೋರಿಸುತ್ತಿದೆ. ಭಾರತದಲ್ಲಿ ಉಳಿತಾಯ ಸಂಸ್ಕೃತಿಯಿದ್ದು, ದೇಶದ ಆರ್ಥಿಕತೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.ತಾನು ಹುಟ್ಟಿದ ಭೂಮಿಗೆ ನಿಷ್ಠೆಯಿಂದರಬೇಕೆಂದು ಎಲ್ಲ ಧರ್ಮಗಳೂ ಭೋದಿಸುತ್ತವೆ. ಆದರೆ ಇತ್ತೀಚೆನ  ದಿನಗಳಲ್ಲಿ ಇದು ಪರಿಪಾಲನೆ ಆಗದಿರುವುದು ದು:ಖದ ಸಂಗತಿ. ಭಾರತದಲ್ಲಿ ಚರಿತ್ರೆಯಿದ್ದು, ಚಾರಿತ್ರ್ಯ ಬೇಕಿದೆ ಎಂದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ, ಐಟಿ, ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ,  ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಶಾಸಕರು, ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
[19/11, 5:06 PM] Cm Ps: ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ  ಅವರನ್ನು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ   ಭೇಟಿಯಾಗಿ ಚರ್ಚಿಸಿದರು. 

ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[19/11, 5:33 PM] Cm Ps: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ರೈಲ್ವೆ, ಸಂಪರ್ಕ, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ರಾಜ್ಯದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ, ಸಂಸದರಾದ ಎಸ್. ಮುನಿಸ್ವಾಮಿ,  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
[19/11, 7:11 PM] Cm Ps: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ರಾಜ್ಯ ರೈಲು ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ
*ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ರೈಲ್ವೆ- ರಾಜ್ಯ ಸರ್ಕಾರದ ಅಧಿಕಾರಿಗಳ ತಂಡ ರಚನೆಗೆ ತೀರ್ಮಾನ*
ಬೆಂಗಳೂರು, ನವೆಂಬರ್ 19- 
ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ರೈಲ್ವೆ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತೀರ್ಮಾನಿಸಿದರು.
ರಾಜ್ಯದಲ್ಲಿ ಕೇಂದ್ರ ಸರ್ಕಾರದೊಂದಿಗೆ 50:50 ವೆಚ್ಚ ಹಂಚಿಕೆ ಆಧಾರದಲ್ಲಿ 9 ಹೊಸ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆಗಳ ಪ್ರಗತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಉತ್ತಮ ಸಮನ್ವಯ ಸಾಧಿಸುವ ಹಾಗೂ ತೊಡಕುಗಳನ್ನು ತ್ವರಿತವಾಗಿ ನಿವಾರಿಸುವ ಉದ್ದೇಶದಿಂದ ಅಧಿಕಾರಿಗಳ ತಂಡ ರಚಿಸುವುದಾಗಿ ಅವರು ತಿಳಿಸಿದರು.
*ಭೂಸ್ವಾಧೀನಕ್ಕೆ ಆದ್ಯತೆ*
ರೈಲ್ವೆ ಯೋಜನೆಗಳಿಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದ ಮುಖ್ಯಮಂತ್ರಿಗಳು, ಅತಿ ಹೆಚ್ಚು ಬೇಡಿಕೆಯ ಹಾಗೂ ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಿರುವ ಯೋಜನೆಗಳಿಗೆ ಆದ್ಯತೆಯ ಮೇರೆಗೆ ಭೂಸ್ವಾಧೀನ ಮಾಡುವಂತೆ ಸೂಚಿಸಿದರು. 
9 ರೈಲ್ವೆ ಯೋಜನೆಗಳಿಗೆ ಒಟ್ಟು 15 ಸಾವಿರ ಎಕರೆ ಭೂಮಿಯ ಅಗತ್ಯವಿದ್ದು, ಈ ವರೆಗೆ  9000 ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 6000 ಎಕರೆ ಭೂಸ್ವಾಧೀನ ಮಾಡಿಕೊಡಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರಗಳು ರೈಲ್ವೆ ಯೋಜನೆಗಳಿಗೆ ಪರಸ್ಪರ ಪೂರಕವಾಗಿ ಅನುದಾನ ಬಿಡುಗಡೆ ಮಾಡಬೇಕು. ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡುವುದರಿಂದ ನಿಗದಿತ ಕಾಲಾವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*‘ಸಮನ್ವಯ ಅಗತ್ಯ’*
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಾತನಾಡಿ, ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನ ನಮ್ಮ ಆದ್ಯತೆಯಾಗಿದೆ. ಇದಕ್ಕಾಗಿ ಹೆಚ್ಚಿನ ಸಮನ್ವಯದೊಂದಿಗೆ ರಾಜ್ಯ ಸರ್ಕಾರ ಹಾಗೂ ರೈಲ್ವೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.
ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿರುವ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗದಗ –ವಾಡಿ, ರಾಯದುರ್ಗ- ತುಮಕೂರು, ಗಿಣಿಗೇರಾ- ರಾಯಚೂರು, ತುಮಕೂರು-ಚಿತ್ರದುರ್ಗ-ದಾವಣಗೆರೆ, ಬಾಗಲಕೋಟೆ- ಕುಡಚಿ, ಕಡೂರು-ಚಿಕ್ಕಮಗಳೂರು-ಬೇಲೂರು, ಹಾಸನ – ಬೇಲೂರು, ಶಿವಮೊಗ್ಗ ರಾಣೆಬೆನ್ನೂರು, ಮಾರಿಕುಪ್ಪಂ-ಕುಪ್ಪಂ, ಬೆಳಗಾವಿ-ಧಾರವಾಡ ಮೊದಲಾದ ಹೊಸ ರೈಲು ಮಾರ್ಗಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಇದರೊಂದಿಗೆ ಬೆಂಗಳೂರು ಸಬ್ ಅರ್ಬನ್ ರೈಲು ಮಾರ್ಗ, ರೈಲು ಮಾರ್ಗಗಳ ವಿದ್ಯುದೀಕರಣ ಮೊದಲಾದ ವಿಷಯಗಳ ಕುರಿತು ಸಹ ಚರ್ಚಿಸಲಾಯಿತು.
ಮಾರ್ಚ್ 2023ರಲ್ಲಿ ಹುಬ್ಬಳ್ಳಿ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡುವ ಗುರಿಯಿದ್ದು, ಇದಕ್ಕೆ ಪೂರಕವಾಗಿ ರೈಲು ಮಾರ್ಗ ವಿದ್ಯುದೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮಗಳನ್ನು ಕೈಗೊಳ್ಳಲು ಕೆಪಿಟಿಸಿಎಲ್ ಗೆ ಸೂಚಿಸಲಾಯಿತು.
ಸಭೆಯಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ, ಸಂಸದರಾದ ಎಸ್. ಮುನಿಸ್ವಾಮಿ,  ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
[19/11, 7:20 PM] Cm Ps: ನಾಗರಾಜ ಜಮಖಂಡಿ ಮೆಮೊರಿಯಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಸ್ಕೌಟ್ಸ್  ಆಂಡ್ ಗೈಡ್ಸ್  ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ. ನಾಗರಾಜ ಜಮಖಂಡಿ ಸ್ಮಾರಕ ಮಾಧ್ಯಮ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ನೀಡಿದರು. 
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ  ಹಾಗೂ ನಾಗರಾಜ್ ಜಮಖಂಡಿ ಟ್ರಸ್ಟ್ ನ ಅಧ್ಯಕ್ಷ ಮೋಹನ್  ಲಿಂಬಿಕಾಯಿ, ಕಾರ್ಯದರ್ಶಿ ಮಂಗಳಾ ನಾಗರಾಜ್, ಗೌರವಾಧ್ಯಕ್ಷ  ಪಾಲಾಕ್ಷ ಬಾಣದ, ಪ್ರಶಸ್ತಿ ಪುರಕಸೃತರಾದ ಸಂಜೆವಾಣಿ ಮುಖ್ಯವರದಿಗಾರರಾದ ಮಲ್ಲಪ್ಪ, ಸುವರ್ಣ ನ್ಯೂಸ್ ನ ಪ್ರಶಾಂತ ನಾತು ಹಾಗೂ ದೀಪಾ ಗುರುಲಿಂಗಸ್ವಾಮಿ ಹೊಳಿಮಠ ಹಾಜರಿದ್ದರು.
[19/11, 9:08 PM] Cm Ps: ವಿಆರ್ ಎಲ್ ಪ್ರೊಡಕ್ಷನ್ ಅಡಿಯಲ್ಲಿ  ನಿರ್ಮಾಣವಾಗಿರುವ ವಿಜಯಾನಂದ ಚಿತ್ರದ ಟ್ರೈಲರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್,  ವಿಆರ್ ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ವಿಜಯಾನಂದ ಸಂಕೇಶ್ವರ್, ಶ್ರೀಮತಿ ಲಲಿತಾ ವಿಜಯಾನಂದ ಸಂಕೇಶ್ವರ್ ಆನಂದ ಸಂಕೇಶ್ವರ ಹಾಜರಿದ್ದರು.
[19/11, 10:12 PM] Cm Ps: *ವಿಜಯಾನಂದ ಸಿನೆಮಾ ಮೆಗಾ ಹಿಟ್ ಆಗಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*

ಬೆಂಗಳೂರು: ವಿಜಯ ಸಂಕೇಶ್ವರ್ ಅವರಿಗೆ  ಯಶಸ್ಸಿನ ಹಸಿವಿದೆ‌.‌ ಅವರು ಏನಾದರೂ ಹೊಸದನ್ನು ಮಾಡುತ್ತಲೇ ಇರುತ್ತಾರೆ. ಅವರಿಗೆ ವಯಸ್ಸಿನ ಹಂಗಿಲ್ಲ. ಅವರ ಜೀವನಾಧಾರಿತ ಚಿತ್ರ ಮೆಗಾ ಹಿಟ್ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಶುಭ ಕೋರಿದರು.

ಇಂದು ನಗರದ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ವಿಜಯಾನಂದ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ವಿಜಯ ಸಂಕೇಶ್ವರ ಅವರು ಯಾವಾಗಲೂ ಅಡ್ವೆಂಚರ್ ಮಾಡುತ್ತಾರೆ. ಇಡೀ ಜಗತ್ತು ಎಲ್ಲಿ ಹೋಗಬೇಡ ಅಂತ ಹೇಳುತ್ತದೆಯೋ ಅಲ್ಲಿಗೆ ಅವರು ಹೋಗುತ್ತಾರೆ. ಯಾವುದು ಮಾಡಬೇಡ ಅನ್ನುತ್ತಾರೋ ಅದನ್ನೇ ಮಾಡುತ್ತಾರೆ. ಅವರು ನೋ ಎನ್ನುವುದು ಸ್ಪಷ್ಟವಾಗಿ ಹೇಳುತ್ತಾರೆ. ನೋ ಎನ್ನುವುದು ಎಲ್ಲರಿಗೂ ಆಗುವುದಿಲ್ಲ. ಅವರು ಯಶಸ್ವಿ ಆಗಿರುವುದು ಸರಿ ತಪ್ಪು ಹೇಳಿದ್ದರಿಂದ ಮತ್ತು ಸಮಯ ಪ್ರಜ್ಞೆಯಿಂದ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ಸತ್ಯವನ್ನೇ ಹೇಳಿದರೂ, ಜನ ಬೆಂಬಲಿಸಿ ಮೂರು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದರು. ಅವರಿಗೆ ಬಹಳ ಜನ ಪತ್ರಿಕೆ ತೆರೆಯಬೇಡ ಅಂತ ಹೇಳಿದ್ದರು. ಆದರೂ ಅವರು ಅದನ್ನು ಆರಂಭಿಸಿ ಯಶಸ್ವಿಯಾದರು. 
ಅವರು ಪತ್ರಿಕೆಯನ್ನು ಒಂದು ರೂಪಾಯಿಗೆ ಮಾರಾಟ ಮಾಡಿದರು. ಅದರಲ್ಲಿ ನಷ್ಟ ಅನುಭವಿಸಿದರೂ ಅವರು ಅದನ್ನು ಹೇಗೆ ಯಶಸ್ವಿ ಮಾಡಬೇಕೆಂಬ ಸತ್ಯ ಗೊತ್ತಿತ್ತು. ಲಾಜಿಸ್ಟಿಕ್ಸ್ ನಲ್ಲಿಯೂ ಯಶಸ್ವಿಯಾಗಿದ್ದಾರೆ. ನಮ್ಮ‌ ಕಡೆ ಒಂದು ಗಾದೆ ಮಾತು ಇದೆ. ಯಾರನ್ನಾದರೂ ಮುಗಿಸಬೇಕು ಎಂದರೆ ಹಳೆ ಲಾರಿ ಕೊಟ್ಟು ನೋಡಿ ಅಂತ ಎಂದು ಹೇಳಿ ಸಿಎಂ ಬಸವರಾಜ ಬೊಮ್ಮಾಯಿ‌ ನಗೆ ಚಟಾಕಿ ಹಾರಿಸಿದರು.

*ಜೀವನದ ಬಗ್ಗೆ ಐಐಎಂ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು*

ವಿಜಯ ಸಂಕೇಶ್ವರ ಅವರ ಬದುಕೇ ಒಂದು ರೀತಿ ಅದ್ಬುತ, ಅದ್ಬುತ. ಅವರ ಬಗ್ಗೆ ಸಿನೆಮಾ ಮಾಡಿದ್ದು ಒಳ್ಳೆಯದ್ದಾಗಿದೆ. ಅವರ ಜೀವನದ ಬಗ್ಗೆ ಐಐಎಂ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು ಅನ್ನುವುದು ನನ್ನ ಬಯಕೆ. ಅವರಿಗೆ ಎಂಎಲ್ ಸಿ ಮಾಡಿದಾಗ ಅವರು ಇಲ್ಲಿ ಕುಳಿತು ಸಮಯ ವ್ಯರ್ಥ ಮಾಡುವುದಿಲ್ಲ ಅಂತ ರಾಜೀನಾಮೆ ನಿಡಿದರು. ಅವರು ಅತ್ಯಂತ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ವ್ಯಕ್ತಿ. 
ಅವರು ಫ್ಲೈಟ್ ತೆಗೆದುಕೊಂಡು ಲಾಭ ಮಾಡಿದ್ದಾರೆ‌.  ಅವರಿಗೆ ದೇಶ, ಧರ್ಮದ ಬಗ್ಗೆ ಅಪಾರವಾದ ಗೌರವ ನಂಬಿಕೆ ಇದೆ. ಅವರು ಕಾಯಕ ನಂಬಿದವರು. ಅವರು ಸವಾಲು ಎದುರಿಸಿದಾಗ ಕಾಯಕ ಶಕ್ತಿ ಅವರನ್ನು ಕೈ ಹಿಡಿದಿದೆ. ರಾಜ್ಯದಲ್ಲಿ ಒಬ್ಬ ಕಾಯಕ ಜೀವಿ , ಇದು ಡಿಸೆಂಬರ್ 9 ರಂದು ಸಿನೆಮಾ ಬಿಡುಗಡೆ ಆಗಲಿದ್ದು, 1400. ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗಲಿದೆ. ಹೊರ ದೇಶ ಅಮೆರಿಕದಲ್ಲಿ 200  ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನೆಮಾ ಎಲ್ಲರಿಗೂ ಪ್ರೇರಣೆ ಆಗಲಿ‌ ಈ ಚಿತ್ರದಿಂದ ರಾಜ್ಯದಲ್ಲಿ ನೂರು ವಿಜಯಾನಂದರು ಹುಟ್ಟಲಿ. ಈ ಚಿತ್ರ ಯಶಸ್ಬಿಯಾಗಲಿ ಎಂದು ಹರಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್,  ವಿಆರ್ ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ವಿಜಯ್ ಸಂಕೇಶ್ವರ್, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ್, ಆನಂದ ಸಂಕೇಶ್ವರ, ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮಾ ಹಾಜರಿದ್ದರು.
[19/11, 10:56 PM] Cm Ps: *ಪತ್ರಿಕಾ ಪ್ರಕಟಣೆ*

*ಬಿ.ಬಿ.ಎಂ.ಪಿ ಮತದಾರರ ಪರಿಷ್ಕರಣೆ ಕುರಿತು ಸತ್ಯಾಂಶಗಳು*

1. ಕಾಂಗ್ರೇಸ್‌ ಮತದಾರರನ್ನು ಗುರಿಯಾಗಿಸಿ ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ:
 ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿ ಪರಿಷ್ಕರಣೆಯ ಯಾವುದೇ ಜವಾಬ್ದಾರಿಯನ್ನು ನೀಡಿರುವುದಿಲ್ಲ, ಕೇವಲ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಆದೇಶ ನೀಡಲಾಗಿರುತ್ತದೆ.
 ಭಾರತ ಚುನಾವಣಾ ಆಯೋಗವು ನೀಡಿದ PSE ದತ್ತಾಂಶ ಮತ್ತು ಸ್ವೀಕೃತಗೊಂಡ ಅರ್ಜಿಗಳನ್ನು ಪರಿಗಣಿಸಿ, ಸರ್ಕಾರಿ ಅಧಿಕಾರಿಗಳು ಮನೆ-ಮನೆ ಬೇಟಿ ನೀಡಿ, ಒದಗಿಸಿದ ವರದಿಯನ್ನು ಆಧರಿಸಿ ಮತದಾರರನ್ನು ಕೈಬಿಡಲಾಗಿರುತ್ತದೆ.
 ಆದರೆ ವಾಸ್ತವವಾಗಿ, 2017ರಲ್ಲಿ ಅಂದಿನ ಸಿದ್ದರರಾಮಯ್ಯನವರ ಕಾಂಗ್ರೇಸ್‌ ಸರ್ಕಾರವು ಚಿಲುಮೆ ಸಂಸ್ಥೆಗೆ ಮತದಾರರ ಪರಿಷ್ಕರಣೆ ಕಾರ್ಯವನ್ನು ಹಾಗೂ ಕೆಲವು ಕಡೆ ಬಿ.ಎಲ್.ಓ ಗಳನ್ನೂ ಕೂಡ ಭರ್ತಿಮಾಡಿಕೊಳ್ಳುವ ಕಾರ್ಯನಿರ್ವಹಿಸುವ ಗುರುತರ ಜವಾಬ್ದಾರಿಯನ್ನೂ ಕಾನೂನು ಬಾಹಿರವಾಗಿ ನೀಡಲಾಗಿರುತ್ತದೆ.
 ತಾವು ಮಾಡಿರುವ, ತಮ್ಮ ಅವಧಿಯಲ್ಲಿ ಮಾಡಿರುವ ಕಾನೂನು ಬಾಹಿರ ಚಟುವಟಿಕೆಯನ್ನು/ಕಾರ್ಯವನ್ನು ಇಂದಿನ ನಮ್ಮ ಸರ್ಕಾರದ ಮೇಲೆ ಸುಲ್ಳು ಆರೋಪ ಮಾಡುತ್ತಿರುವುದು, ಭೂತದ ಬಾಯಿಯಲ್ಲಿ ಭಗವದ್ಗೀತೆ ಹೇಳಿದಂತಿದೆ.

2. ಚಿಲುಮೆ – ಬಿ.ಜೆ.ಪಿ ಅನುಮತಿ ನೀಡಿದ ಸಂಸ್ಥೆ:
 ಚಿಲುಮೆ ಸಂಸ್ಥೆಯನ್ನು ಚುನಾವಣಾ ಪೂರ್ವ ತಯಾರಿ ಪ್ರಕ್ರೀಯೆಯಲ್ಲಿ ಮೊದಲು ಪರಿಚಯಿಸಿದ್ದು, ಕ್ರಾಂಗ್ರೇಸ್‌ ಆಡಳಿತ ಅವಧಿಯಲ್ಲಿ, ಶ್ರೀ ಸಿದ್ದರಾಮಯ್ಯನವರೇ ಸಿ.ಎಂ. ಆಗಿದ್ದರು ಎನ್ನುವುದು ವಿಪರ್ಯಾಸದ ಸಂಗತಿ.
 ಪರಿಷ್ಕರಣೆ ಕಾರ್ಯವು ಸಂಪೂರ್ಣವಾಗಿ ಸರ್ಕಾರಿ ಅಧಿಕಾರಿಗಳು ಕೈಗೊಳ್ಳಬೇಕಾದ ಕಾರ್ಯವಾಗಿದ್ದಾಗ್ಯೂ, ಚಿಲುಮೆ ಸಂಸ್ಥೆ ಅಂದಿನ ಸರ್ಕಾರ ನೀಡಿರುವುದು ಅಕ್ರಮವಾಗಿರುತ್ತದೆ.
 ಇದೇ ಸಿದ್ದರಾಮಯ್ಯನವರ ಅವಧಿಯಲ್ಲಿ, ದಿನಾಂಕ: 15.09.2017ರಂದು ಕೆ.ಆರ್.‌ ಪುರ ತಹಶೀಲ್ದಾರ್‌ರವರು ಚಿಲುಮೆ ಟ್ರಸ್ಟ್‌ಗೆ ನೀಡಿರುವ ಆದೇಶದಲ್ಲಿ, ಮತದಾರರ ಪರಿಷ್ಕರಣೆ ಕಾರ್ಯಕ್ಕೆ ಚಿಲುಮೆ ಸಂಸ್ಥೆಯು ಬಿ.ಎಲ್.ಓ ಗಳ ಭರ್ತಿಮಾಡಿಕೊಂಡು ಕಾರ್ಯನಿರ್ವಹಿಸುವ ಗುರುತರ ಜವಾಬ್ದಾರಿಯನ್ನೂ ಸಹ ಕಾನೂನು ಬಾಹಿರವಾಗಿ ನೀಡಲಾಗಿರುತ್ತದೆ. ಅದಲ್ಲದೆ, ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನೂ ಕೂಡ ಚಿಲುಮೆ ಸಂಸ್ಥೆಗೆ ಕಾನೂನು ಬಾಹಿರವಾಗಿ ಅಧಿಕಾರನ್ನು ನೀಡಲಾಗಿರುತ್ತದೆ.
3. ಕಾಂಗ್ರೇಸ್‌ ಶಾಸಕರ ಕ್ಷೇತ್ರಗಳನ್ನು ಗುರಿಯಾಗಿಸಿ ಹೆಚ್ಚು ಮತದಾರರನ್ನು ಕೈಬಿಡಲಾಗುತ್ತಿದೆ.
 ಶುದ್ಧ ಸುಳ್ಳು.
 ಉದಾ: ಬಿ.ಬಿ.ಎಂ.ಪಿ ವ್ಯಾಪ್ತಿಯ ೨೮ ಕ್ಷೇತ್ರಗಳ ಪೈಕಿ ಅತೀ ಕಡಿಮೆ ಮತದಾರರನ್ನು ಕೈಬಿಟ್ಟ ೫ ಕ್ಷೇತ್ರಗಳ ಪೈಕಿ ೩ ಕ್ಷೇತ್ರಗಳು ಕಾಂಗ್ರೇಸಿನವಾಗಿರುತ್ತದೆ.
 ಕಾಂಗ್ರೇಸ್‌ ಆರೋಪಿಸುತ್ತಿರುವ ಶಿವಾಜಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇವಲ 14,737 ಮತದಾರರನು ಕೈಬಿಡಲಾಗಿದ್ದು, ಕೆ.ಆರ್.‌ ಪುರಂ ಕ್ಷೇತ್ರದಲ್ಲಿ 45,985 ಮತದಾರರನ್ನು ಕೈಬಿಡಲಾಗಿರುತ್ತದೆ.
 ಈ ರೀತಿಯಲ್ಲಿ, ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರದ ವಿವರವನ್ನು ಗಮನಿಸಬಹುದಾಗಿದೆ.

4. ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನೀಡಲಾಗಿರುತ್ತದೆ.
 ಸಂಪೂರ್ಣ ಸುಳ್ಳು.
 ೨೦೧೭-೧೮ನೇ ಸಾಲಿನಲ್ಲಿ ಅಂದಿನ ಕಾಂಗ್ರೇಸ್‌ ಸರ್ಕಾರದ ಅವಧಿಯಲ್ಲಿ ಚಿಲುಮೆ ಸಂಸ್ಥೆಗೆ ಬಿ.ಬಿ.ಎಂ.ಪಿ ಅಧಿಕಾರಿಗಳೇ ನಿರ್ವಹಿಸಬೇಕಾದ ಮತದಾರರ ಪರಿಷ್ಕರಣೆಯನ್ನು ಚಿಲುಮೆ ಸಂಸ್ಥೆ ನೀಡಿರುವುದು ದಾಖಲೆಗಳಿಂದ ಸಾಬೀತಾಗಿದೆ.
 ಪ್ರಸ್ತುತ 2022-23ನೇ ಸಾಲಿನಲ್ಲಿ ಚಿಲುಮೆ ಸಂಸ್ಥೆಗೆ ಕೇವಲ ಮತದಾರರ ಜಾಗೃತಿ ಕಾರ್ಯಕ್ರಮದ ಕೆಲಸವನ್ನು ನೀಡಲಾಗಿರುತ್ತದೆ.
 ಸಂಸ್ಥೆ ವತಿಯಿಂದ ಯಾವುದಾದರೂ ನಿಯಮ ಉಲ್ಲಂಘನೆಯಾಗಿರುವ ಅಂಶ ಮೇಲ್ನೋಟಕ್ಕೆ ಕಂಡುಬಂದ ತಕ್ಷಣ, ಸಂಸ್ಥೆಯನ್ನು ವಜಾ ಗೊಳಿಸಿ, 17.11.2022 ರಂದು ಪೊಲೀಸ್‌ ದೂರು ನೀಡಿ, ತೀಕ್ಷ್ಣವಾಗಿ ಕ್ರಮ ಕೈಗೊಳ್ಳಲಾಗಿದೆ.
 ಇದೇ ಸಿದ್ದರಾಮಯ್ಯನವರ ಅವಧಿಯಲ್ಲಿ, ದಿನಾಂಕ: 15.09.2017ರಂದು ಕೆ.ಆರ್.‌ ಪುರ ತಹಶೀಲ್ದಾರ್‌ರವರು ಚಿಲುಮೆ ಟ್ರಸ್ಟ್‌ಗೆ ನೀಡಿರುವ ಆದೇಶದಲ್ಲಿ, ಮತದಾರರ ಪರಿಷ್ಕರಣೆ ಕಾರ್ಯಕ್ಕೆ ಚಿಲುಮೆ ಸಂಸ್ಥೆಯು ಬಿ.ಎಲ್.ಓ ಗಳ ಭರ್ತಿಮಾಡಿಕೊಂಡು ಕಾರ್ಯನಿರ್ವಹಿಸುವ ಗುರುತರ ಜವಾಬ್ದಾರಿಯನ್ನೂ ಸಹ ಕಾನೂನು ಬಾಹಿರವಾಗಿ ನೀಡಲಾಗಿರುತ್ತದೆ.

5. ಬೆಂಗಳೂರಿನಲ್ಲಿ ೨೭ ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
 ಹಸೀ ಸುಳ್ಳು.
 ಭಾರತ ಚುನಾವಣಾ ಆಯೋಗವು ನೀಡಿದ PSE ಸಂಶಯಾಸ್ಪದ 12,13,644 ಮತದಾರರ ಪಟ್ಟಿಯಿಂದ 6.73 ಲಕ್ಷ ಮತದಾರರನ್ನು ಮಾತ್ರ ಕೈಬಿಡಲಾಗಿದ್ದು, ಇದರ ಅರ್ಥ ಅವರ ಮತದಾನದ ಹಕ್ಕನ್ನು ಕಸಿದು ಕೊಳ್ಳುವುದಲ್ಲ, ಬದಲಿಗೆ ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾನ ಮಾಡುವ ದುರುದ್ಧೇಶಕ್ಕೆ ಕೊನೆಗಾಣಿಸಲು, ದೇಶಾದ್ಯಂತ ಈ ಕ್ರಮವನ್ನು ಚುನಾವಣಾ ಆಯೋಗ ಕೈಗೊಂಡಿದೆ. ಮೇಲ್ಕಂಡ ಕಾರಣದಿಂದ ರಾಜ್ಯದಲ್ಲಿ ಸುಮಾರು 16 ಲಕ್ಷ ಹಾಗೂ ದೇಶಾದ್ಯಂತ ಈವರೆಗೆ 1.02 ಕೋಟಿ ಹೆಸರನ್ನು ಕೈಬಿಡಲಾಗಿದೆ.
 ಹಾಗೂ, ಚುನಾವಣಾ ಆಯೋಗವು ಈಗ ಪ್ರಚುರಪಡಿಸಿರುವ ಬಿ.ಬಿ.ಎಂ.ಪಿ ಕರಡು ಮತದಾರರ ಪಟ್ಟಿಯಲ್ಲಿನ ನ್ಯೂನತೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ನಂತರ ಆಕ್ಷೇಪಣೆ ಪರಿಗಣಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆದ್ದರಿಂದ, ಕಾಂದ್ರೇಸ್‌ ಪಕ್ಷವು ಅರ್ಹ ಮತದಾರರ ಹಕ್ಕನ್ನು ಕಸಿದುಕೊಂಡಿದೆ ಎಂಬುದಕ್ಕೆ ಯಾವುದೇ ಅರ್ಥ ಇಲ್ಲ.
 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇರುವುದೇ, ಒಟ್ಟು 91,15,805 ಮತದಾರರು, ಇದರಲ್ಲಿ ೨೭ ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂಬ ಆರೋಪ ಅತ್ಯಂತ ನಿರಾಧಾರ.
 ಆದರೆ, ಬಿ.ಬಿ.ಎಂ.ಪಿ ಇಂದ ಕೈಬಿಡಲಾಗಿರುವ ಮತದಾರರ ಸಂಖ್ಯೆ ಕೇವಲ 6.73 ಲಕ್ಷ ಮಾತ್ರ. ರಾಜ್ಯದಲ್ಲಿ ಒಟ್ಟು ೧೬ ಲಕ್ಷ.


,*ಮತದಾರರ ಪರಿಷ್ಕರಣೆಗೆ ಬಿ.ಬಿ.ಎಂ.ಪಿ ತೆಗೆದುಕೊಂಡ ಕ್ರಮ*

1. ಚಿಲುಮೆ ಸಂಸ್ಥೆಗೆ ನೀಡಿದ ಅನುಮತಿ ಅನುಮತಿ ರದ್ದತಿ: 02.11.2022
2. ಮುಖ್ಯ ಚುನಾವಣಾಧಿಕಾರಿಗೆ ತಿಳುವಳಿಕೆ: 04.11.2022
3. BLO ಗುರುತಿನ ಚೀಟಿ ಪ್ರಕರಣದ ದೂರು: 10.11.2022
4. Mahadevapura ERO ವತಿಯಿಂದ ಲೋಕೇಶರವರ ಮೇಲೆ FIR: 15.11.2022
5. ಜನರಿಗೆ ಎಚ್ಚರಿಕೆವಹಿಸಲು ಪತ್ರಿಕಾ ಪ್ರಕಟಣೆ 16.11.2022
6. ಜಿಲ್ಲಾಧಿಕಾರಿ ಹಾಗೂ ಅಪರ ಚುನಾವಣಾಧಿಕಾರಿಯವರ ವರದಿ: 17.11.2022
7. ಚಿಲುಮೆ ಸಂಸ್ಥೆ ಮೇಲೆ FIR: 17.11.2022

ಬಿ.ಬಿ.ಎಂ.ಪಿ ಸ್ವಯಂಪ್ರೇರಿತವಾಗಿ, ಚಿಲುಮೆ ಸಂಸ್ಥೆಗೆ ನೀಡಿದ ಆದೇಶ ರದ್ದತಿ ಹಾಗೂ ತೆಗೆದುಕೊಂಡ ಕ್ರಮ ಮತ್ತು ಪತ್ರಿಕಾ ಪ್ರಕಟಣೆ ನೋಡಿ ಕಾಂಗ್ರೇಸ್‌ ಪತ್ರಿಕಾ ಘೋಷ್ಠಿ ಮಾಡಿರುತ್ತದೆ.
[19/11, 11:03 PM] Cm Ps: *ಸ್ಟಾರ್ಟ್ ಅಪ್ ಗಳಿಗೆ ಸೂಕ್ತ ಸ್ಥಳ ಬೆಂಗಳೂರು – ಸಿಎಂ ಬೊಮ್ಮಾಯಿ*

ಬೆಂಗಳೂರು: ಬೆಂಗಳೂರು ಸ್ಟಾರ್ಟ್ ಅಪ್ ಗಳಿಗೆ ಸೂಕ್ತ ಸ್ಥಳವಾಗಿದ್ದು, ಇಲ್ಲಿ ಉತ್ತಮ ವಾತಾವರಣ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು. 
ಎಕನಾಮಿಕ್ ಟೈಮ್ಸ್ ಅವರು ಪ್ರತಿ ವರ್ಷ ಸ್ಟಾರ್ಟ್ ಅಪ್ ಪ್ರಶಸ್ತಿ ಕೊಡುತ್ತಿದ್ದಾರೆ. ಪ್ರತಿಬಾರಿಯೂ ಅವರು ಇದನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡುತ್ತಿದ್ದಾರೆ. ಇದು ಖುಷಿಯ ವಿಚಾರ. ಯಾಕೆಂದರೆ ಇದು ಸೂಕ್ತ ಸ್ಥಳ ಎಂದು ಪತ್ರಿಕೆಯವರಿಗೂ ಗೊತ್ತಿದೆ ಎಂದು  ಅವರು ಹೇಳಿದರು.

ಅವರು ದಿ ಎಕನಾಮಿಕ್ ಟೈಮ್ಸ್ ದಿನಪತ್ರಿಕೆ ಆಯೋಜಿಸಿದ್ದ “ದಿ ಎಕನಾಮಿಕ್ ಟೈಮ್ಸ್ ಸ್ಟಾರ್ಟ್ ಅಪ್ ಪ್ರಶಸ್ತಿ - 2022” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಕನಾಮಿಕ್ ಟೈಮ್ಸ್ ಹೆಸರೇ ಹಲವು ವಿಷಯಗಳನ್ನು ಹೇಳುತ್ತದೆ. ಆರ್ಥಿಕತೆ ಮತ್ತು ಸಮಯ ಎರಡೂ ಸಹ ಬಹಳ ಹತ್ತಿರವಾದವುಗಳು. ಹಣಕ್ಕೆ ನಿಜವಾದ ಅರ್ಥ ಬರುವುದು ನಮಗೆ ಬೇಕಾದ ಸಮಯಕ್ಕೆ ಸಿಕ್ಕಾಗ ಮಾತ್ರ. ನಮಗೆ ಬೇಡದಿದ್ದಾಗ ಹಣ ಸಿಕ್ಕರೆ ಅದಕ್ಕೆ ಮೌಲ್ಯ ಇರುವುದಿಲ್ಲ. ನಮಗೆ ಬೇಕಾದಾಗಲೂ ಹಣ ಸಿಗದಿದ್ದಾಗ ಅದಕ್ಕೆ ಮೌಲ್ಯ ಇರುವುದಿಲ್ಲ. ಇದೆಲ್ಲವನ್ನೂ ಎಕನಾಮಿಕ್ ಟೈಮ್ಸ್ ಹೇಳುತ್ತದೆ. ಭಾರತೀಯ ವ್ಯವಹಾರದಲ್ಲಿ ಈ ಎಕನಾಮಿಕ್ ಟೈಮ್ಸ್ ಸದಾ ಮುಂದಿದೆ. ಅವರು ಮೊದಲಿನಿಂದಲೂ ವರದಿಗಾರಿಕೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಂಡಿಕೊಂಡು ಬಂದಿದ್ದಾರೆ. ಪ್ರತಿ ವ್ಯವಹಾರ ಮಾಡುವವ ಎಕನಾಮಿಕ್ ಟೈಮ್ಸ್ ಅನ್ನು ಬೈಬಲ್ ನಂತೆ ಓದಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಸ್ಟಾರ್ಟ್ ಅಪ್ ಗೆ ಸಂಬಂಧಿಸಿದಂತೆ ನೀವು ಕಳೆದೊಂದು ವಾರದಿಂದ ನೋಡುತ್ತಲೇ ಬಂದಿದ್ದೀರಿ. ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಸುಮಾರು 300ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿದ್ದರು. ಸುಮಾರು 130ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಲವಾರು ವಿಷಯಗಳು ಮಾತುಕತೆಗೆ ಬಂದವು. ಮಾನವನ ಜೀವನ ಸುಧಾರಣೆಗೆ ತಂತ್ರಜ್ಞಾನ ಬಳಕೆ ವಿಷಯ ಇನ್ನಷ್ಟು ಮುಂದಕ್ಕೆ ಹೋದವು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

*ಬೆಂಗಳೂರು ನಂಬರ್ 1 ಆಗಬೇಕು*
ನಮ್ಮ ಅಧಿಕಾರಿಗಳಿಗೆ ನಾನು ಕೆಲವೊಂದು ಗುರಿಗಳನ್ನು ನೀಡಿದ್ದೀನಿ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ, ಸ್ಟಾರ್ಟ್ ಅಪ್ ಗಳಲ್ಲಿ ಬೆಂಗಳೂರು ನಂಬರ್ 1 ಆಗಬೇಕು. ಜತೆಗೆ ಬೆಂಗಳೂರು ದೇಶದ ಆರ್ಥಿಕತೆಯ ರಾಜಧಾನಿ ಆಗಬೇಕು. ಸ್ಟಾರ್ಟ್ ಅಪ್ ಎಂಬುದು ಒಂದು ವಿಶೇಷ ಅನುಭವ. ಸ್ಟಾರ್ಟ್ ಅಪ್ ಗಳಲ್ಲಿ ಏನು ಮಾಡುತ್ತೀರೆಂಬ ಖಚಿತತೆ ನಿಮಗಿರುವುದಿಲ್ಲ. ಸಂಸ್ಥೆ ಎಲ್ಲಿಗೆ ಹೋಗುತ್ತದೆ ಎಂದೂ ಗೊತ್ತಿರುವುದಿಲ್ಲ. ಗುರಿ ಹೊಂದಿದ್ದರೂ ನಿಜವಾದ ಗುರಿ ಏನೆಂದು ಗೊತ್ತಿರುವುದಿಲ್ಲ. ಆದರೂ ಸಾಹಸಮಯವಾಗಿರುವುದು ಬಹಳ ಕ್ರಿಯಾಶೀಲವಾಗಿರುತ್ತದೆ. ಈ ಮೂಲಕ ಏನಾದರೊಂದು ಸಾಧನೆ ಮಾಡುವಂತೆ ಪ್ರೇರಣೆ ಕೊಡುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಉದ್ಯಮಗಳನ್ನು ಮಾಡುವ ಆಸೆ ಹೊಂದಿರುವವರು ಸ್ಟಾರ್ಟ್ ಅಪ್ಗಳ ಕಡೆ ಬರಬೇಡಿ. ಸ್ಟಾರ್ಟ್ ಅಪ್ ಎನ್ನುವುದು ಬಹಳ ದೊಡ್ಡ ಸಾಹಸ. ಇದೊಂದು ರೀತಿ ಕತ್ತಲಲ್ಲಿ ಪಟಾಕಿ ಹೊಡೆಯುವಂತೆ. ಹೊಡೆದರೆ ದಿವಾಲಿ. ಹೊಡೆಯದಿದ್ದರೆ ದಿವಾಳಿ ಎಂದು ಹಾಸ್ಯಭರಿತವಾಗಿ ನಗೆ ಚಟಾಕಿಯನ್ನು ಹಾರಿಸಿದರು. 

*ಸ್ಟಾರ್ಟ್ ಅಪ್ ಹುಟ್ಟುಹಾಕುವುದು ಹವ್ಯಾಸವಾಗಿದೆ*
ಬೆಂಗಳೂರು ಸ್ಟಾರ್ಟ್ ಅಪ್ಗಳ ಕೇಂದ್ರವಾಗಿದೆ. ಆ ರೀತಿಯ ಸಂಸ್ಕೃತಿ ಬೆಂಗಳೂರಿನಲ್ಲಿ ಬೆಳೆಯುತ್ತಿದೆ. ಕೃಷಿ ತಂತ್ರಜ್ಞಾನದಿಂದ ಹಿಡಿದು ಬಾಹ್ಯಾಕಾಶ ವಲಯಗಳ ವರೆಗೆ ಸ್ಟಾರ್ಟ್ ಅಪ್ ಗಳು ಬೆಂಗಳೂರಿನಲ್ಲಿ ಇದೆ. ಬೆಂಗಳೂರಿಗರಿಗೆ ಸ್ಟಾರ್ಟ್ ಅಪ್ ಹುಟ್ಟುಹಾಕುವುದು ಮತ್ತು ಯೂನಿಕಾರ್ನ್ ಸಂಸ್ಥೆಗಳನ್ನಾಗಿ ಮಾಡುವುದು ಹವ್ಯಾಸವಾಗಿದೆ. ಅದೇ ರೀತಿ ಡೆಕಾಕಾರ್ನ್ ಮಾಡುವುದೂ ಹವ್ಯಾಸ ಆಗಬೇಕು. ಮುಂದಿನ ವರ್ಷಕ್ಕೆ ಬೆಂಗಳೂರಿನಲ್ಲಿ ಕನಿಷ್ಠ 10 ಡೆಕಾಕಾರ್ನ್ ಸಂಸ್ಥೆಗಳು ಇರಬೇಕೆಂಬುದು ನನ್ನ ಆಸೆ. ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

*ಬೆಂಗಳೂರು ಪ್ರತಿಭೆಗಳ ತವರು*
ಬೆಂಗಳೂರಿನಲ್ಲಿ ಪ್ರತಿಭೆಗಳು ಸಾಕಷ್ಟಿದ್ದಾರೆ. ಇದೆಲ್ಲವೂ ರಾತ್ರೋ ರಾತ್ರಿ ಆದದ್ದಲ್ಲ. ಹಲವಾರು ವರ್ಷಗಳ ಸಂಸ್ಥೆಗಳ, ಪರಿಣಿತರ ಹಾಗೂ ಹಲವು ಸರ್ಕಾರಗಳ ಕಠಿಣ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಆದರೆ ನಮ್ಮ ಸರ್ಕಾರ ಇತರೆ ಸರ್ಕಾರಗಳಿಂದ ಕೊಂಚ ಭಿನ್ನವಾಗಿದೆ. ಹಿಂದಿನ ಸರ್ಕಾರಗಳು ಕೇವಲ ವಲಯದ ವಿಸ್ತರಣೆಗೆ ಒತ್ತು ನೀಡಿದವು. ಆದರೆ ನಾವು ಇರುವುದನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನ ಪಡುತ್ತಿದ್ದೇವೆ. ಶಾಸ್ತ್ರೀಯ ಚಿಂತನೆಯಿಂದ ಹೊರಬಂದು ಔಟ್ ಆಫ್ ದಿ ಬಾಕ್ಸ್ ಯೋಚನೆ ಮಾಡಬೇಕು. ಈ ಮೂಲಕ ಯಶಸ್ಸು ಗಳಿಸಿ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಹಾಜರಿದ್ದರು.

Post a Comment

Previous Post Next Post