[17/12, 7:53 AM] +91 89713 62063: ##########
*ಧನುರ್ಮಾಸ*
##########
*17.12.2022 ರಿಂದ 14.1.2023ರವರೆಗೆ*
ಈ ವರ್ಷ ಸೂರ್ಯನು ಧನು ರಾಶಿಯನ್ನು 16.12.2022 ಮಧ್ಯಾಹ್ನ 12.16 ಘಂಟೆಗೆ ಸೇರುತ್ತಾನೆ. ಆದರೆ ಪ್ರಾತಃ: ಕಾಲದಲ್ಲಿ ಧನುಸಂಕ್ರಮಣ ಆಗಿಲ್ಲದಿರುವುದರಿಂದ ಧನುರ್ಮಾಸವನ್ನು ಮಾರನೇ ದಿನ ಆಚರಿಸಲಾಗುತ್ತದೆ.
ಸೂರ್ಯನು ಧನುರಾಶಿಗೆ ಪ್ರವೇಶಿಸುವ ಕಾಲವನ್ನು *ಧನುರ್ಮಾಸ* ಎನ್ನುತ್ತಾರೆ.
ಒಟ್ಟು ರಾಶಿಗಳ ಸಂಖ್ಯೆ 12. ಧನುರಾಶಿಯು 9ನೇಯದು.
ಸೂರ್ಯನು ಧನುರಾಶಿಯನ್ನು ಪ್ರವೇಶಿಸಿ, ಅಲ್ಲಿದ ಮಕರ ರಾಶಿಯನ್ನು ಸೇರುವವರೆಗೂ ಧನುರ್ಮಾಸ ಆಚರಿಸಲಾಗುತ್ತದೆ. ಯಾವ ಸಮಯದಲ್ಲಿ ಸೂರ್ಯನು ಧನುರಾಶಿಯನ್ನು ಪ್ರವೇಶಿಸುತ್ತಾನೋ ನಂತರವೇ ಧನುರ್ಮಾಸ ಆಚರಣೆ ಮಾಡಬೇಕಾಗುತ್ತದೆ. ಉದಾಹರಣೆಗೆ ಸೂರ್ಯನು ಬೆಳಿಗ್ಗೆಯಿಂದಲೇ ಧನುರಾಶಿಯನ್ನು ಪ್ರವೇಶಿಸಿದರೆ, ಅಂದೇ ಧನುರ್ಮಾಸ ಆರಂಭವಾಗುತ್ತದೆ. ಆದರೆ ಕೆಲವು ಸಮಯ ಸೂರ್ಯನು ಮಧ್ಯಾಹ್ನದ ನಂತರ ಪ್ರವೇಶಿಸುತ್ತಾನೆ ಅಂತಹ ಸಂದರ್ಭದಲ್ಲಿ ಮಾರನೇ ದಿನ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಈ ಕಾಲವು ಡಿಸೆಂಬರ್ ಮಾಹೆಯ 16 ಅಥವ 17ರಂದು ಕಂಡು ಜನವರಿ ಮಾಹೆಯ 14 ಅಥವಾ 15ರಂದು ಉತ್ತರಾಯಣ ಆರಂಭದೊಂದಿಗೆ ಸಮಾಪ್ತವಾಗುತ್ತದೆ.
ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ. ಉತ್ತರಾಯಣವು ಹಗಲಾಗಿದೆ. ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವೆನಿಸಿದೆ. ಶ್ರೀಹರಿಯ ಪೂಜೆಗೆ ವಿಶೇಷ ಕಾಲವೆನಿಸಿದೆ.
*ಧನುರ್ಮಾಸದ ನಿಯಮಗಳು* :
ತಸ್ಮಾತ್ ಸರ್ವಪ್ರಯತ್ನೇನ ಚಾಪಮಾಸೇ ದಿನೆ ದಿನೆ |
ಉಷ:ಕಲೆ ತು ಸಂಪ್ರಾಪ್ತೇ ಅರ್ಚಯಿತ್ವಾ ಜನಾರ್ಧನಂ|
ಉಪಚಾರೈ: ಷೋಡಶೀಭಿರ್ಮುದ್ಗಾನ್ನಂ ಚ ನಿವೇದಯೇತ್ |
ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇಲ್ಪದ್ವಾದಶೀದಿನೇ |
ತಥಾ ಪ್ರಾತರ್ಧನುರ್ಮಾಸೇ ತ್ಯಕ್ತಾ ವ ಕರ್ಮಾಣ್ಯರ್ಚಯೇಚ್ಚಮಾಂ |
ಅ. ಉಷ:ಕಾಲದಲ್ಲೇ ಏಳಬೇಕು.
ಆ. ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಹೊತ್ತಿಗೆ ಮಾಡಿದ ಪೂಜೆ ಶ್ರೇಷ್ಠ.
ನಂತರ ಮಧ್ಯಮ. ಸೂರ್ಯೋದಯಾನಂತರ ಅಧಮ, ನಿಷ್ಫಲ. (ಕೃಷ್ಣಾಚಾರ್ಯ ಸ್ಮೃತಿಮುಕ್ತಾವಲಿ)
ಇ. ಪ್ರತಿನಿತ್ಯ ದೇವರಿಗೆ ಮುದ್ಗಾನ್ನ ನೈವೇದ್ಯ ಸಮರ್ಪಿಸಬೇಕು.
ಈ. ಪಾರಾಯಣಾದಿಗಳನ್ನು ನೈವೇದ್ಯ ನಂತರ ಮಾಡಬಹುದು.
ಉ. ಶ್ರಾದ್ಧಾದಿಗಳನ್ನು ಮಾಡುವವರು ಸೂರ್ಯೋದಯಕ್ಕಿಂತ ಮುಂಚಿತವಾಗಿ ಮಾಡುವುದು ಉತ್ತಮ
ಊ. ಸಂಧ್ಯಾವಂದನ, ನಿತ್ಯಾಹ್ನಿಕವನ್ನು ಪೂಜಾನಂತರ ಮಾಡಿದರೂ ದೋಷವಿಲ್ಲ
ಧನುರ್ಮಾಸದಲ್ಲಿ ಬ್ರಹ್ಮಯಜ್ಞ, ಶ್ರಾದ್ಧಾದಿ ಪಿತೃಕಾರ್ಯಗಳನ್ನೂ ಸೂರ್ಯೋದಯ ನಂತರ ಕೂಡ ಪೂರೈಸಬಹುದು.
*ಧನುರ್ಮಾಸ ಆಚರಣೆಯಿಂದ ಪ್ರಾಪ್ತಿ* :
ಧನುರ್ಮಾಸದಲ್ಲಿನ ಮುದ್ಗಾನ್ನ ನಿವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಪಾತ್ರವಾದುದು, ಇದರಿಂದ ಶತ್ರುಗಳು ನಶಿಸುವರು
ದೀರ್ಘಾಯಸ್ಸು ಪಡೆಯುವರು.
ಧನಧಾನ್ಯ ಸಂಪತ್ತು ಭರಿತವಾಗುವುದು. ವೇದಶಾಸ್ತ್ರಾಭ್ಯಾಸ, ಎಲ್ಲಕ್ಕೂ ಸಾಧನವಾಗಿದೆ.
ಸೂರ್ಯೋದಯಕ್ಕಿಂತ ಮುಂಚಿ ಮುದ್ಗಾನ್ನ ನಿವೇದಿಸಬೇಕು. ಆದರೆ ನಾವು ಭೋಜನವನ್ನು ಸೂರ್ಯೋದಯ ನಂತರವೇ ಮಾಡಬೇಕು. ಯಾವುದೇ ಸಂದರ್ಭದಲ್ಲೂ ಸೂರ್ಯೋದಯಕ್ಕಿಂತ ಮುಂಚಿತ ಭೋಜನ ಕೂಡದು.
*ನಿಷೇಧ* – ಉಪನಯನ, ಗೃಹಪ್ರವೇಶ, ಮದುವೆ ಮುಂತಾದವು ಧನುರ್ಮಾಸ ಕಾಲದಲ್ಲಿ ನಿಷೇಧ.
*ಧನುರ್ಮಾಸ ಆಚರಿಸದಿದ್ದರೆ ಹಾನಿ* : ದಾರಿದ್ರ್ಯಬುದ್ಧಿಯಿಂದಾಗಿ ಅವನಿಗೆ ಮುಂದಿನ ಏಳು ಜನುಮಗಳಲ್ಲೂ ದಾರಿದ್ರ್ಯ, ಕ್ಷಯರೋಗಗಳೂ ಮಂದಬುದ್ಧಿಯೂ ಬರುತ್ತದೆ. (ಆಗ್ನೇಯ ಪುರಾಣ ವಾಕ್ಯ)
*ಮುದ್ಗಾನ್ನದಲ್ಲಿ ಅಕ್ಕಿ ಹೆಸರುಬೇಳೆಗಳ ಪ್ರಮಾಣ* –
ಅಕ್ಕಿ ಮತ್ತು ಹೆಸರುಬೇಳೆ ಸಮ ಪ್ರಮಾಣದಲ್ಲಿ ಸೇರಿಸಿ ಮಾಡುವುದು ಅತ್ಯುತ್ತಮ.
ಅಕ್ಕಿಯ ಪ್ರಮಾಣದ ಅರ್ಧದಷ್ಟು ಹೆಸರು ಬೇಳೆ ಸೇರಿಸಿ ಮಾಡುವುದು ಮಧ್ಯಮ.
ಅಕ್ಕಿಯ ಪ್ರಮಾಣಕ್ಕಿಂತ ಕಾಲುಭಾಗ ಹೆಸರುಬೇಳೆ ಸೇರಿಸಿ ಮಾಡುವುದು ಅಧಮ.
*ಹುಗ್ಗಿಯಲ್ಲಿ ಉಪಯೋಗಿಸಬೇಕಾದ ವಸ್ತುಗಳು* –
ಹೆಸರುಬೇಳೆ, ಅಕ್ಕಿ, ಬೆಲ್ಲ, ಶುಂಠಿ, ಏಲಕ್ಕಿ, ತುಪ್ಪ,
ಹುಗ್ಗಿಯ ಜೊತೆಗೆ ಹುಣಿಸೇ ಗೊಜ್ಜು, ಬೆಲ್ಲ, ಸಕ್ಕರೆ, ಬೆಣ್ಣೆ ಉಪಯೋಗಿಸುವ ಸಂಪ್ರದಾಯವಿದೆ.
ಧನುರ್ಮಾಸದಲ್ಲಿ ವಿಶೇಷವಾಗಿ ಮುಂಜಾನೆ ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತಂ, ಶ್ರೀ ವಿಷ್ಣು ಸೂಕ್ತಂ , ಲಕ್ಷ್ಮೀ ಸ್ತೋತ್ರ , ಲಕ್ಷ್ಮೀ ಶೋಭಾನೆ, ವಾಯುಸ್ತುತಿ ಪಾರಾಯಣ, ಮಾಡಲಾಗುತ್ತದೆ.
ಹಿಂದೆ ದೇವ ರಾಜನಾದ ಇಂದ್ರನು ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ವಿಷ್ಣುವಿಗೆ ಸಮರ್ಪಿಸಿ, ಶ್ರೀಹರಿಯೊಂದಿಗೆ ಮಹಾಲಕ್ಷ್ಮಿಯನ್ನೂ ದ್ವಾದಶನಾಮಗಳಿಂದ ಸ್ತುತಿಸಿದಳಂತೆ, ಇದರ ಫಲವಾಗಿ ಇಂದ್ರನು ರಾಜ್ಯವನ್ನು ಮರಳಿ ಪಡೆದನು ಎನ್ನುವ ಪುರಾಣ ಕಥೆಯಿದೆ. ಈ ಪಾರಾಯಣಕ್ಕಿಂತ ಮುಖ್ಯ ಮುದ್ಗಾನ್ನ ನೈವೇದ್ಯ. ನಂತರ
ಪಾರಾಯಣಾದಿ ಮಾಡಬಹುದು.
*ಧನುರ್ವ್ಯತೀಪಾತ ಯೋಗ* – ವ್ಯತೀಪಾತವೆಂಬುದು ಒಂದು ವಿಶೇಷ ಯೋಗವಾಗಿದ್ದು, ಚಂದ್ರ ಸೂರ್ಯರು ಪರಸ್ಪರ ಒಬ್ಬರ ಮೇಲೊಬ್ಬರ ದೃಷ್ಠಿ ಬಿದ್ದ ಪರಿಣಾಮ ಕೋಪದ ಸಂಪಾತದಿಂದ ಒಬ್ಬ ಭಯಂಕರವಾದ ಪ್ರಲಯಾಗ್ನಿ ಸದೃಶನಾದ ಒಬ್ಬ ವ್ಯಕ್ತಿ ಜನಿಸಿದನು – ಅವನೇ “ವ್ಯತೀಪಾತ”.
ಧನುರ್ಮಾಸದಲ್ಲಿ ವ್ಯತೀಪಾತಯೋಗವು ಸಹಸ್ರ ಅರ್ಧೋದಕಕ್ಕೆ ಸಮಾನ. ಈ ದಿನ ಪಿತೃ ತರ್ಪಣವನ್ನು ಕೊಡಬೇಕು. ಮೇಷದಲ್ಲಿ ರವಿಯಿದ್ದು, ಸಿಂಹರಾಶಿಯಲ್ಲಿ ಗುರು ಹಾಗೂ ಕುಜರಿದ್ದು. ಹಾಗೂ ಶುಕ್ಲಪಕ್ಷ ದ್ವಾದಶಿಯಲ್ಲಿ ಹಸ್ತಾ ನಕ್ಷತ್ರವಿದ್ದರೂ ವ್ಯತೀಪಾತ ಯೋಗವೆನಿಸುವುದು.
29.12.22 ಧನುರ್ವ್ಯತೀಪಾತ ಯೋಗ
08.01.23 ಧನುರ್ವೈಧೃತಿ ಯೋಗ ಮತ್ತು ಪುಷ್ಯಾರ್ಕ ಯೋಗ
02.01.23 ವೈಕುಂಠ ಏಕಾದಶಿ
☘️☘️☘️☘️☘️
ನರಹರಿ ಸುಮಧ್ವ
🌹🌹🌹🌹🌹
[17/12, 7:55 AM] +91 72598 25934: ಎಲ್ಲ ವಿದ್ಯಾರ್ಥಿಗಳು ಗಮನಿಸಿ
ಈ ದಿನದಿಂದ ರಾತ್ರಿ 8:30ಕ್ಕೆ ಸರಿಯಾಗಿ ಸೌಂದರ್ಯ ಲಹರಿ ಪಾಠಗಳು ಶುರುವಾಗುತ್ತವೆ. ಪ್ರತಿಯೊಬ್ಬರೂ ಸಹ ಪಾಠಗಳಿಗೆ ಸೇರಿಕೊಳ್ಳಿ ಹಾಗೂ ನಿಮಗೆ ಪರಿಚಯವಿರುವ ಎಲ್ಲ ಗ್ರೂಪ್ನಲ್ಲಿ ಸೌಂದರ್ಯ ಲಹರಿಯ ಪಾಠ ನಡೆಯುತ್ತಿರುವ ಬಗ್ಗೆ ವಿಷಯವನ್ನು ತಿಳಿಸಿ. ನಿಮ್ಮ ಸ್ನೇಹಿತರನ್ನು ನಿಮ್ಮ ಮನೆಯವರನ್ನು ಪಾಠಗಳಿಗೆ ಸೇರಿಸಿ..ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 8.30 ರಿಂದ 9 ಗಂಟೆಯವರೆಗೆ ಉಚಿತವಾಗಿ ಸೌಂದರ್ಯ ಲಹರಿ ಪಾಠಗಳು ಹೇಳಿಕೊಡಲಾಗುತ್ತದೆ...ಎಲ್ಲರಿಗೂ ಸಹ ಭಗವತಿ ಅನುಗ್ರಹ ಪ್ರಾಪ್ತವಾಗಲಿ, ಕೆಳಗಿನ ಲಿಂಕ್ ಅನ್ನು ಎಲ್ಲಾ ಕಡೆಯಲ್ಲೂ ಆದಷ್ಟು ಶೇರ್ ಮಾಡಿ ಪಾಠಗಳ ಬಗ್ಗೆ ಎಲ್ಲರಿಗೂ ತಿಳಿಸಿ ಇಂತಹ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದರೆ ಮಾತ್ರ ಸಾಧ್ಯವಾಗುತ್ತದೆ... ಈ ಮೆಸೇಜಿನನ್ನು ಎಲ್ಲ ಗ್ರೂಪ್ನಲ್ಲೂ ಶೇರ್ ಮಾಡಿ
ಅಮೃತಬಿಂದು ಗ್ರೂಪಿನ ಲಿಂಕ್
https://chat.whatsapp.com/LKiBV37SAbr71TW3hYwsPA
Post a Comment