*AAP ಈಗ 9 ನೇ ರಾಷ್ಟ್ರೀಯ ಪಕ್ಷವಾಗಿ ಮುಂಚೂಣಿಯಲ್ಲಿ.*
ಆಪ್ ಈಗ 9ನೇ ರಾಷ್ಟ್ರೀಯ ಪಕ್ಷ ಚುನಾವಣಾ ಆಯೋಗದ ಪ್ರಕಾರ, ದೇಶದಲ್ಲಿ 3 ವಿಧದ ಪಕ್ಷಗಳಿವೆ. ರಾಷ್ಟ್ರೀಯ, ರಾಜ್ಯ ಮತ್ತು ಪ್ರಾದೇಶಿಕ ಪಕ್ಷಗಳು, ಒಟ್ಟು 2858 ರಾಜಕೀಯ ಪಕ್ಷಗಳು ನೋಂದಾಯಿಸಲ್ಪಟ್ಟಿವೆ. ಈ ಪೈಕಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿರುವುದು ಕೇವಲ 8 ಪಕ್ಷಗಳು: ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ, ಸಿಪಿಐ, ಸಿಪಿಎಂ, ಎನ್‌ಸಿಪಿ, ಎನ್‌ಪಿಪಿ ಮತ್ತು ಟಿಎಂಸಿ. ಇವುಗಳೊಂದಿಗೆ ಈಗ 9ನೇ ರಾಷ್ಟ್ರೀಯ ಪಕ್ಷವಾಗಿ ಆಪ್ ಸೇರ್ಪಡೆಗೊಂಡಿದೆ. 350ಕ್ಕೂ ಪ್ರಮುಖ ಪ್ರಾದೇಶಿಕ ಪಕ್ಷಗಳಿವೆ.
4 ಲೋಕಸಭಾ ಸ್ಥಾನಗಳ ಜೊತೆಗೆ, ಪಕ್ಷವು - ಲೋಕಸಭೆಯಲ್ಲಿ ಶೇ.6 ಮತಗಳನ್ನು ಅಥವಾ ಯಾವುದೇ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಶೇ.6 ರಷ್ಟು ಮತಗಳನ್ನು ಗಳಿಸಬೇಕು. ಆಪ್ ಈ ಶ್ರೇಣಿ ಮೂಲಕ ಅರ್ಹತೆ ಪಡೆದಿದೆ.
ರಾಷ್ಟ್ರೀಯ ಪಕ್ಷದ ರಚನೆ ಹೇಗೆ? ಷರತ್ತುಗಳೇನು?
ಭಾರತದ ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡುತ್ತದೆ. ಇದಕ್ಕಾಗಿ ನಿಗದಿತ ಷರತ್ತುಗಳನ್ನೂ ವಿಧಿಸುತ್ತದೆ. ಈ ಪೈಕಿ ಒಂದನ್ನು ಪೂರೈಸಿದರೂ ಅದಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಲಾಗುತ್ತದೆ.
ರಾಷ್ಟ್ರೀಯ ಪಕ್ಷವಾದರೆ ಏನು ಪ್ರಯೋಜನ?
1. ಪಕ್ಷದ ಚಿಹ್ನೆಯನ್ನು ಭಾರತದಾದ್ಯಂತ ಬೇರಾವುದೇ ರಾಜಕೀಯ ಪಕ್ಷವು ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ.
2. ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಕಚೇರಿ ಸ್ಥಾಪಿಸಲು ಸರಕಾರದಿಂದ ಭೂಮಿ ಅಥವಾ ಕಟ್ಟಡವನ್ನು ಪಡೆಯುತ್ತವೆ.
3 ರಾಜ್ಯಗಳ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಶೇ,2ಸ್ಥಾನ ಗೆಲ್ಲ ಬೇಕು 4 ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಪಕ್ಷವು ಪ್ರಾದೇಶಿಕ ಪಕ್ಷವಾಗಿ ಗುರುತಿಸಲ್ಪಡುವುದು,
4,ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಕ್ಕೆ ಚುನಾವಣಾ ಆಯೋಗವು 2 ಸೆಟ್ ಮತದಾರರ ಪಟ್ಟಿಗಳನ್ನು ಉಚಿತವಾಗಿ ನೀಡುತ್ತದೆ. ಅಲ್ಲದೆ, ರಾಷ್ಟ್ರೀಯ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತದಾರರ ಪಟ್ಟಿಯ ಪ್ರತಿಯನ್ನು ಉಚಿತವಾಗಿ ಪಡೆಯುತ್ತಾರೆ.
Post a Comment