ಹೇಮಾವತಿ ಕಾಲುವೆಗಳ ಆಧುನೀಕರಣ ಹಾಗೂ ವಿಸ್ತರಣೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

[07/12, 5:48 PM] Cm Ps: *ಹೇಮಾವತಿ ಕಾಲುವೆಗಳ ಆಧುನೀಕರಣ ಹಾಗೂ ವಿಸ್ತರಣೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ತುಮಕೂರು, ಡಿಸೆಂಬರ್ 7 :

 ಹೇಮಾವತಿ ಕಾಲುವೆಗಳ ಆಧುನೀಕರಣ ಹಾಗೂ ವಿಸ್ತರಣೆಯನ್ನು ನಮ್ಮ ಸರ್ಕಾರ ಶೀಘ್ರದಲ್ಲಿಯೇ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಅವರು ಇಂದು ಬಿಜೆಪಿ ವತಿಯಿಂದ ಏರ್ಪಡಿಸಿರುವ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ಬರುವ ದಿನಗಳಲ್ಲಿ ಕುಣಿಗಲ್ ತಾಲ್ಲೂಕಿನ ರೈತರಿಗೆ ಅನ್ನ ನೀಡುವ ಎರಡು ನೀರಾವರಿ ಯೋಜನೆಗಳನ್ನು ನಮ್ಮ ಸರ್ಕಾರ ಪೂರ್ಣ ಮಾಡುತ್ತದೆ. ನೀರಾವರಿ ಸೌಲಭ್ಯವನ್ನು ಇದೇ ಕ್ಷೇತ್ರದ ರಾಮಯ್ಯ ಅವರು  ದೊಡ್ಡ ಪಾದಯಾತ್ರೆ ಮಾಡಿ ಹೇಮಾವತಿ ನೀರಿಗೆ ತುಮಕೂರಿಗೂ ಹಕ್ಕಿದೆ ಎಂದು ಹೋರಾಟ ಮಾಡಿದರು. ಈ ಭಾಗದ ಜನರಿಗೆ ಹೋರಾಟದ ಪ್ರತಿಫಲವಾಗಿ ರಾಮಕೃಷ್ಣ ಹೆಗಡೆ ಅವರು ನೀರು ಒದಗಿಸಿದರು. ಹೋರಾಟದಿಂದ ಲಭಿಸಿದ ಯೋಜನೆಗೆ ಕಾಯಕಲ್ಪ ನೀಡಬೇಕು. ನೀರಿನ ನಿರ್ವಹಣೆ ಮಾಡಿದರೆ ಕೊನೆ ಭಾಗಕ್ಕೂ ನೀರು ತಲುಪಿಸಬಹುದು. ನಮ್ಮ ಸರ್ಕಾರ ಎಲ್ಲಾ ಭಾಗಗಳಿಗೂ ನೀರು ಒದಗಿಸದೆ. ಕುಣಿಗಲ್  ಭಾಗದಲ್ಲಿ ನೀರನ್ನು ಕಾಲುವೆ ಮೂಲಕ ನೀಡಬೇಕಿದೆ.  ಹೇಮಾವತಿ ಕಾಲುವೆಗಳ ಆಧುನೀಕರಣ ಹಾಗೂ ವಿಸ್ತರಣೆಯನ್ನು ಮಾಡಬೇಕಿದೆ. ಮಾರ್ಕಾಂಡಳ್ಳಿ ಅಣೆಕಟ್ಟಿನಿಂದ ಮಂಗಳ ಜಲಾಶಯಕ್ಕೆ ನೀರು ಒದಗಿಸಲು ಬಹಳ ದಿನಗಳ ಬೇಡಿಕೆ ಇದೆ. ಅದಕ್ಕೆ ಫೀಡರ್ ಚಾನಲ್ ನಿರ್ಮಿಸಲು ಮಾಧುಸ್ವಾಮಿಯವರು ಮಂಜೂರಾತಿ ಮಾಡಿಸಿದ್ದಾರೆ. ಇಲ್ಲಿ ಯಾರಿಗೂ  ಅಡಿಗಲ್ಲು ಹಾಕಲು ಬಿಡುವುದಿಲ್ಲ ಎನ್ನುತ್ತಾರೆ. ಇದು ಪ್ರಜಾಪ್ರಭುತ್ವ. ಸ್ವಂತ ಆಸ್ತಿಯಲ್ಲ. ಕಾಲುವೆಗೆ ಅಡಿಗಲ್ಲು ಹಾಕಲು ನಾನೇ ಬರುತ್ತೇನೆ ಎಂದರು.

*ತುಮಕೂರಿನಲ್ಲಿ 1000 ಎಕರೆಯ ಕೈಗಾರಿಕಾ ಟೌನ್ :*
ಕುಣಿಗಲ್ ಸ್ಟಡ್ ಫಾರ್ಮ್ ಬಗ್ಗೆ ಈ ಭಾಗದ ಜನನಾಯಕರೊಂದಿಗೆ ಚರ್ಚಿಸಿ, ಕುಣಿಗಲ್ ನಲ್ಲಿ ದೊಡ್ಡ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಅದರಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದಂತಹ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು. ಕೃಷಿ, ತೋಟಗಾರಿಕೆ, ತೆಂಗು , ಅಡಿಕೆಗೆ ಬೆಳೆಗೆ ಖ್ಯಾತಿ ಹೊಂದಿರುವ ತುಮಕೂರು ಔದ್ಯೋಗೀಕರಣದಲ್ಲೂ ಮುಂದಿದೆ. ತುಮಕೂರಿನಲ್ಲಿ 1000 ಎಕರೆಯ ಕೈಗಾರಿಕಾ ಟೌನ್ ಸ್ಥಾಪಿಸಲಾಗುತ್ತಿದೆ.ಈ ಭಾಗವನ್ನು ವಿಶೇಷ ಹೂಡಿಕಾ ಪ್ರದೇಶ ಯೋಜನೆ ಮಾಡಿ, ಈ ಭಾಗದಲ್ಲಿ ಬರುವ  ಕೈಗಾರಿಕೆಗಳಿಗೆ ಎಲ್ಲ ಅನುಮೋದನೆಗಳನ್ನು ನೀಡಲಾಗುವುದು, ಇದರಿಂದ ಉದ್ಯೋಗಳಿಗೂ ಅನುಕೂಲ ಕಲ್ಪಿಸಿದಂತಾಗುತ್ತದೆ.ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ನಂ.1 ಜಿಲ್ಲೆಯಾಗಲಿದೆ. ಕೆಲವೇ ವರ್ಷಗಳಲ್ಲಿ ತುಮಕೂರು ವಾಣಿಜ್ಯವಾಗಿ ಬೆಳೆಯಲಿದೆ.  ಕುಣಿಗಲ್ ನಲ್ಲಿ ಯಾವುದೇ ಪೈಪೋಟಿ ಇಲ್ಲ. ಈ ಭಾಗದ ಅಭಿವೃದ್ಧಿಗೆ ಇಲ್ಲಿನ ಜನನಾಯಕರ  ಕೊಡುಗೆಯನ್ನು ಪರಿಗಣಿಸಲಾಗುವುದು. ತುಮಕೂರು ಜಿಲ್ಲೆಯಲ್ಲಿ ಭಾಜಪ ಕಮಲವನ್ನು ಅರಳಿಸಬೇಕೆಂದು ಜನರಿಗೆ  ಕರೆ ನೀಡಿದರು.

*ದುಡಿಯುವ ವರ್ಗದ ಸಶಕ್ತೀಕರಣ :*
ಸ್ವಾಮಿ ವಿವೇಕಾನಂದ ಯುವಶಕ್ತಿಯೋಜನೆಯ ಮೂಲಕ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡಲಾಗುತ್ತಿದೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಮೂಲಕ ನಾಡು ಕಟ್ಟಬಹುದು. ದುಡಿಮೆಯೇ ದೊಡ್ಡಪ್ಪ ಎಂಬ ನಂಬಿಕೆಯೊಂದಿಗೆ ದುಡಿಯುವ ವರ್ಗವನ್ನು ಸಶಕ್ತಗೊಳಿಸಲಾಗುತ್ತಿದೆ. ಪ್ರಧಾನ ಮಂತ್ರಿಯವರು  ಕಿಸಾನ್ ಸಮ್ಮಾನ್ ಯೋಜನೆಯಡಿ, 20 ಸಾವಿರ ಕೋಟಿ ಅನುದಾನವನ್ನು ಜನರಿಗೆ ತಲುಪಿಸಿದ್ಧಾರೆ. ಜಲಜೀವನ್ ಮಿಷನ್ ಅಡಿ 10 ಕೋಟಿಗೂ ಹೆಚ್ಚು ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಿದ ಧೀಮಂತ ನಾಯಕರಾಗಿದ್ದಾರೆ. ಕರ್ನಾಟಕದಲ್ಲಿ ಕಳೆದ ವರ್ಷ 25 ಲಕ್ಷ ಮನೆಗಳಿಗೆ ನೀರು ಒದಗಿಸಿದ್ದು, ಈ ವರ್ಷ 30 ಲಕ್ಷ ಮನೆಗಳಿಗೆ ನಳಸಂಪರ್ಕ ಕೊಡುವ ಗುರಿ ಹೊಂದಲಾಗಿದೆ ಎಂದರು.

*8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ:*
ಈ ವರ್ಷ ರಾಜ್ಯದಲ್ಲಿ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಇಂತಹ ಸಾಧನೆ ಆಗಿರಲಿಲ್ಲ. ಭಾಜಪ ಸರ್ಕಾರ ಈ ಕೆಲಸವನ್ನು ಮಾಡುತ್ತಿದೆ. 100 ಅಂಬೇಡ್ಕರ್ ಹಾಸ್ಟೆಲ್, 50 ಕನಕದಾಸ ಹಾಸ್ಟೆಲ್, 5 ಮೆಗಾ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಲಾಗಿದೆ. ಈ ಸಮುದಾಯಗಳು ಸ್ವಾಭಿಮಾನದ ಬದುಕು ನಡೆಸಲು ಸರ್ಕಾರದ ಈ ನಿರ್ಧಾರ ವರದಾನವಾಗಿದೆ. 40 ವರ್ಷದ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ.  ಭಾಜಪ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಜೆ.ಸಿ. ಮಾಧುಸ್ವಾಮಿ, ಕೆ‌. ಗೋಪಾಲಯ್ಯ, ಬಿ.ಸಿ‌. ನಾಗೇಶ್, ಶಾಸಕರಾದ ಜ್ಯೋತಿ ಗಣೇಶ್ , ಡಾ. ರಾಜೇಶ್ ಗೌಡ, ಮಸಾಲೆ ಜಯರಾಮ್,  ವಿಧಾನ ಪರಿಷತ್ ಸದಸ್ಯರಾದ    ಸಿ.ಪಿ. ಯೋಗೇಶ್ವರ್, ರವಿಕುಮಾರ್, ವೈ.ಎ. ನಾರಾಯಣಸ್ವಾಮಿ,  ಕೆ.ಎಸ್. ನವೀನ್, ವಿಧಾನ ಪರಿಷತ್  ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ, ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಕಷ್ಣಕುಮಾರ್, ಮಾಜಿ ಸಂಸದ ಮುದ್ದ ಹನುಮೇಗೌಡ ಹಾಜರಿದ್ದರು.
[07/12, 5:50 PM] Cm Ps: *ಕಾಂಗ್ರೆಸ್ ಕರ್ನಾಟಕದಲ್ಲಿ ಸಂಪೂರ್ಣವಾಗಿ ನೆಲಕಚ್ಚಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ತುಮಕೂರು, ಡಿಸೆಂಬರ್ 07:  ಕಾಂಗ್ರೆಸ್ ಕರ್ನಾಟಕದಲ್ಲಿ ಸಂಪೂರ್ಣವಾಗಿ ನೆಲಕಚ್ಚುವುದು ನೂರಕ್ಕೆ ನೂರು ಸತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕುಣಿಗಲ್ ನಲ್ಲಿ ಭಾಜಪ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

 ಕರ್ನಾಟಕದಲ್ಲಿ ಅತಿ ಹೆಚ್ಚು ಆಡಳಿತ ಮಾಡಿರುವುದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಸರ್ಕಾರ ಜನರನ್ನು ಮರಳು ಮಾಡಿ, ಕೇವಲ ತಮ್ಮ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಜನರನ್ನು ದಾರಿತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಭಾಜಪ ಪರ್ಯಾಯ ಶಕ್ತಿಯಾಗಿ ರೂಪುಗೊಂಡ ಮೇಲೆ ಇಡೀ ಭಾರತದಲ್ಲಿ ಕಾಂಗ್ರೆಸ್ ನೆಲೆಕಳೆದುಕೊಂಡಿದೆ.  ಆದರೆ  ಈಗ ಎಲ್ಲವೂ ಬಯಲಾಗಿದೆ. ಜಾತಿಯ ಆಧಾರದ  ಮೇಲೆ ಮತ ಕೇಳುವುದು, ಧರ್ಮವನ್ನು ಒಡೆಯುವ ಕೆಲಸ.  ಉಪಜಾತಿಗಳನ್ನು ನಿರ್ಮಿಸುವ ಕೆಲಸ, ಸಾಮಾಜಿಕ ನ್ಯಾಯ, ನಾವು ದೀನದಲಿತರ, ಹಿಂದುಳಿದವರ ಉದ್ಧಾರಕರು ರಂದು ಹೇಳಿ ಭಾಷಣ ಮಾಡುತ್ತಾರೆ. ನಾವಿಲ್ಲದಿದ್ರೆ ನಿಮಗೆ ರಕ್ಷಣೆ ಇಲ್ಲ ಎನ್ನುತ್ತಾರೆ. ಹಿಂದುಳಿದವರು ಹಿಂದುಳಿದೇ ಇದ್ದಾರೆ. ಆ ಸಮುದಾಯಗಳೆಲ್ಲವೂ ಜಾಗೃತರಾಗಿದ್ದಾರೆ. ಏನು ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.  ಸರ್ಕಾರ ವೆಚ್ಚ ಮಾಡಿರುವ ಅನುದಾನ ನೋಡಿದರೆ, ಅವರ ಬದುಕು ಮೇಲ್ಮಟ್ಟದಲ್ಲಿರಬೇಕಿತ್ತು. ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರೆಯಲು ಆಗಲಿಲ್ಲ ಎಂದರು.

*2 ಲಕ್ಷ ಕೋಟಿ ಸಾಲ*
ರಾಜ್ಯದ ಅಭಿವೃದ್ದಿ ಕುಂಠಿತವಾಗಿತ್ತು. ಸಿದ್ದರಾಮಯ್ಯ ಆಡಳಿತ ಮಾಡುವಾಗ ಕೋವಿಡ್ ಇರಲಿಲ್ಲ. ಹಣಕಾಸಿನ ಸ್ಥಿತಿ ಗಂಭೀರವಾಗಿತ್ತು. ಆದರೆ 2 ಲಕ್ಷ ಕೋಟಿ ಸಾಲವನ್ನು ಕರ್ನಾಟಕದ ಜನತೆಯ ಮೇಲೆ ಹೇರಿದರು. ಇಷ್ಟು ಸಾಲ ತಂದು ರಾಜ್ಯದ ಅಭಿವೃದ್ಧಿಯಾಗಬೇಕಾಗಿತ್ತು. ಬಿಜೆಪಿ 5 ವರ್ಷಗಳಲ್ಲಿ ಸುಮಾರು 32 ಸಾವಿರ ಕೋಟಿ ಖರ್ಚು ಮಾಡಿ 7 ಲಕ್ಷ ನೀರಾವರಿ ವ್ಯವಸ್ಥೆ ಕಲ್ಪಿಸಿದೆ. ಕಾಂಗ್ರೆಸ್ ಪಕ್ಷ 5 ವರ್ಷಗಳಲ್ಲಿ 54 ಸಾವಿರ ಕೋಟಿ ಖರ್ಚು ಮಾಡಿ ಕೇವಲ 2 ಲಕ್ಷ ಎಕರೆಗೆ ನೀರಾವರಿ ಕಲ್ಪಿಸಿದೆ. ಎಲ್ಲಿ ಹೋಯಿತು ಈ ದುಡ್ಡು. ಯಾರ ಕಿಸೆಗೆ ಹೋಯ್ತು ಈ ದುಡ್ಡು ಎಂದು ಪ್ರಶ್ನಿಸಿದರು.

*ಅನ್ನಭಾಗ್ಯದಲ್ಲಿಯೂ ಕನ್ನ*
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಭ್ರಷ್ಟಾಚಾರ ಮುಚ್ಚಿಹಾಕಲು ಲೋಕಾಯುಕ್ತ ಸಂಸ್ಥೆಯನ್ನು  ಮುಚ್ಚಿ ಎಸಿಬಿಯನ್ನು ತಂದರು. ಸುಮಾರು  50 ಪ್ರಕರಣಗಳಿಗೂ ಹೆಚ್ಚು ಮುಖ್ಯಮಂತ್ರಿಗಳು ಹಾಗೂ ಅವರ ಮಂತ್ರಿಮಂಡಲದವರ ಮೇಲೆ ಆರೋಪ ಹಾಗೂ ದೂರು ಇತ್ತು. ದಾಖಲೆ ಸಮೇತ ಇರುವ ಎಲ್ಲಾ ದೂರುಗಳ ಮೇಲೆ ಬಿ ವರದಿಯನ್ನು ಸಲ್ಲಿಸಲಾಯಿತು. ಆ ಪ್ರಕರಣಗಳೇ ಸಾಕ್ಷಿ ಇವರ ಭ್ರಷ್ಟಾಚಾರಕ್ಕೆ. ಲೋಕಾಯುಕ್ತ ಮುಚ್ಚಿದ್ದೇ ಸಾಕ್ಷಿ ಎಂದರು.  ಸಣ್ಣ ನೀರಾವರಿ ಯೋಜನೆಯಡಿ ಕೊಪ್ಪಳದಲ್ಲಿ  ಕೆಲಸ ಮಾಡದೇ ಬಿಲ್ ಪಾವತಿಯಾಗಿದೆ. ಬಿಡಿಎ ಜಮೀನು ಬಿಟ್ಟುಕೊಡುವರೀತಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಡವರಿಗೆ ನೀಡುವ ದಿಂಬು ಹಾಸಿಗೆಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಈ ರಾಜ್ಯದಲ್ಲಿ ರೇಷನ್ ಕೊಡಲು ಪ್ರಾರಂಭವಾಗಿ 30- 40 ವರ್ಷಗಳ ಹಿಂದೆ ಪ್ರಾರಂಭವಾಯಿತ. ರಾಮಕೃಷ್ಣ ಹೆಗಡೆಯವರು 2 ರೂ.ಗಳಿಗೆ ಅಕ್ಕಿ ನೀಡಿದರು.  ನಾವು 30 ಕೆಜಿ ಅಕ್ಕಿಯನ್ನು 3 ರೂ.ಗಳಿಗೆ ನೀಡಿದ್ದೇವೆ ಇವರು ಬಂದು ಅದಕ್ಕೆ  7 ಕೆಜಿಗೆ ನಂತರ 4 ಕೆಜಿಗೆ ಇಳಿಸಿದರು ಚುನಾವಣೆ ಬಂದಾಗ ಪುನ: 7 ಕೆಜಿ ಮಾಡಿದರು. ಈ ರೀತಿ ಜನರನ್ನು ಯಾಮಾರಿಸುತ್ತಾ ಅನ್ನಭಾಗ್ಯದಲ್ಲಿಯೂ ಕನ್ನ ಹಾಕಿದ್ದಾರೆ ಎಂದರು.

*ತುಮಕೂರು ಜಿಲ್ಲೆಯಲ್ಲಿ ಭಾಜಪ ಗಾಳಿ*
ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಜನಸಂಕಲ್ಪ ಯಾತ್ರೆಯನ್ನು ಪೂರೈಸಿ ತುಮಕೂರಿಗೆ ಬಂದಿದ್ದೇವೆ.  ಹೋದಲ್ಲೆಲ್ಲಾ ಇದೇ ರೀತಿ ಜನಬೆಂಬಲ ಮತ್ತು ಜನರ ಪ್ರೀತಿ ನಿರೀಕ್ಷೆ ಮೀರಿ ದೊರೆಯುತ್ತಿದೆ.  ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳು ಕಾರಣ ಹಾಗೂ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳಿಗೆ ಜನ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಭಾಜಪ ಗಾಳಿ ಬೀಸುತ್ತಿದೆ. ಕಳೆದ ಬಾರಿ ನಾವು ಕುಣಿಗಲ್, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿಗಳಲ್ಲಿ ಅಲ್ಪಮತಗಳ ಅಂತರದಿಂದ ಸೋತಿದ್ದೇವೆ. ಆದರೆ ಈ ಬಾರಿ ಈ ಎಲ್ಲಾ ಕ್ಷೇತ್ರಗಳನ್ನು ಭಾಜಪ ಅಭೂತಪೂರ್ವ ಅಂತರದಿಂದ ಗೆಲ್ಲಲಿದೆ. ಇದನ್ನು ಬರೆದಿಟ್ಟುಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಜೆ.ಸಿ. ಮಾಧುಸ್ವಾಮಿ, ಕೆ‌. ಗೋಪಾಲಯ್ಯ, ಬಿ.ಸಿ‌. ನಾಗೇಶ್, ಶಾಸಕರಾದ ಜ್ಯೋತಿ ಗಣೇಶ್ , ಡಾ. ರಾಜೇಶ್ ಗೌಡ, ಮಸಾಲೆ ಜಯರಾಮ್,  ವಿಧಾನ ಪರಿಷತ್ ಸದಸ್ಯರಾದ    ಸಿ.ಪಿ. ಯೋಗೇಶ್ವರ್, ರವಿಕುಮಾರ್, ವೈ.ಎ. ನಾರಾಯಣಸ್ವಾಮಿ,  ಕೆ.ಎಸ್. ನವೀನ್, ವಿಧಾನ ಪರಿಷತ್  ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ, ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಕಷ್ಣಕುಮಾರ್, ಮಾಜಿ ಸಂಸದ ಮುದ್ದ ಹನುಮೇಗೌಡ ಹಾಜರಿದ್ದರು.
[07/12, 6:06 PM] Cm Ps: ತುಮಕೂರು ಜಿಲ್ಲೆ, ಡಿಸೆಂಬರ್ 07: *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ* ಅವರು ಭಾರತೀಯ ಜನತಾ ಪಕ್ಷದ ವತಿಯಿಂದ *ಕೊರಟಗೆರೆಯ* *ಸರ್ಕಾರಿ ಜೂನಿಯರ್ ಕಾಲೇಜು* ಮೈದಾನದಲ್ಲಿ ಆಯೋಜಿಸಿರುವ “ *ಜನ ** *ಸಂಕಲ್ಪ* *ಯಾತ್ರೆ”** ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
[07/12, 7:27 PM] Cm Ps: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಾಲಿನ್ಸ್ ಏರೋಸ್ಪೇಸ್ ಗ್ಲೋಬಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ನ್ನು ಉದ್ಘಾಟಿಸಿದರು.

ಕಾಲಿನ್ಸ್ ಸಂಸ್ಥೆಯ ಅಧ್ಯಕ್ಷ ಸ್ಟೀಫನ್ ಟಿಮ್ಸ್ , ಕೈಗಾರಿಕಾ ಇಲಾಖೆ ಆಯುಕ್ತೆ  ಗುಂಜನ್ ಕೃಷ್ಣಾ ಮತ್ತಿತರರು ಉಪಸ್ಥಿತರಿದ್ದರು.
[07/12, 8:29 PM] Cm Ps: *ಫೆಬ್ರವರಿಯಲ್ಲಿ ಏರ್ ಶೋ- ಪ್ರಧಾನಿ ಮೋದಿಯವರಿಂದ ಉದ್ಘಾಟನೆ*

ಬೆಂಗಳೂರು, ಡಿಸೆಂಬರ್ 7 : 

 2023ರ ಫೆಬ್ರವರಿ ತಿಂಗಳಲ್ಲಿ  ಬೆಂಗಳೂರಿನಲ್ಲಿ ಏರ್ ಶೋ ಆಯೋಜಿಸಲಾಗಿದ್ದು, ಪ್ರಧಾನಿ‌ ಮೋದಿಯವರು  ಏರ್ ಶೋಗೆ ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಾಲಿನ್ಸ್ ಏರೋಸ್ಪೇಸ್ ಗ್ಲೋಬಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ನ್ನು ಉದ್ಘಾಟಿಸಿ ಮಾತನಾಡಿದರು

ಈ ಏರ್ ಶೋ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿರುವ ಏರೋಸ್ಪೇಸ್ ಸಂಶೋಧನಾ ಕೇಂದ್ರದ ಬಗ್ಗೆ, ವಿಮಾನಯಾನ, ವಿಮಾನ ಉತ್ಪಾದನಾ ರಂಗಗಳಲ್ಲಿನ ಅವಕಾಶಗಳು ಹಾಗೂ ಸಾಧ್ಯತೆಗಳ ಬಗ್ಗೆ   ಬಗ್ಗೆ ಬೆಳಕು ಚೆಲ್ಲಬೇಕು. ಏರ್ ಶೋ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ ಎಂದರು.

*ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರ :*
ಭಾರತದ ಎಂಜನೀಯರಗಳ ಸಾಮರ್ಥ್ಯ ಉತ್ತಮ ವಾಗಿದೆ.ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳನ್ನೂ ಒಳಗೊಂಡ ಸಂಪೂರ್ಣ ವಿಮಾನದ ಉತ್ಪಾದನೆಯನ್ನು ಬೆಂಗಳೂರಿನಲ್ಲಿಯೇ ಆಗಬೇಕೆಂಬುದು ನನ್ನ ಕನಸಾಗಿದೆ. ಏರೊಸ್ಪೇಸ್  ಕ್ಷೇತ್ರಕ್ಕೆ ಬೆಂಗಳೂರು ಉತ್ತಮ ಸ್ಥಳವಾಗಿದ್ದು, ಇಲ್ಲಿ ಡಿಆರ್ ಡಿ ಒ, ಎನ್ ಎ ಎಲ್, ಎಚ್ ಎ ಎಲ್ ನಂತಹ ಸಂಸ್ಥೆಗಳಿವೆ.ಬೆಂಗಳೂರಿನಲ್ಲಿ ಏರೋಸ್ಪೇಸ್, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಸೆಮಿ ಕಂಡಕ್ಟರ್ ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ ಎಂದರು.

*ಶ್ರಮದ ಫಲ:*
ಕೊಲಿನ್ಸ್ ಏರೊಸ್ಪೆಸ್ ಎಂಜನೀಯರಿಂಗ್ ಸಂಸ್ಥೆಯನ್ನು ಆರಂಭಿಸಿದ್ದು ಸಂತಸವಾಗಿದೆ. ಈ ಸಂಸ್ಥೆ ಬೆಂಗಳೂರಿನಲ್ಲಿ 25 ವರ್ಷ ಪೂರೈಸಿದೆ. ಇದು ಸಂಸ್ಥೆಯ ಸಾಧನೆಯನ್ನು ತೋರಿಸುತ್ತದೆ‌. ಈ ಸಂಸ್ಥೆ ಬೆಂಗಳೂರಿನ ಪ್ರಮುಖ ಇಂಜಿನಿಯರಿಂಗ್ ಕೇಂದ್ರವಾಗಿದೆ ಇದು ನಿಮ್ಮ ಶ್ರಮದ ಫಲ. ಬೆಂಗಳೂರು, ಕರ್ನಾಟಕ, ಭಾರತ ಹೆಮ್ಮೆ ಪಡುವಂತೆ ಸಂಸ್ಥೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಏರೋ ಸ್ಪೇಸ್ ಅತ್ಯಂತ ವಿಶೇಷ ಇದು ಮನುಷ್ಯನನ್ನು ಮತ್ತೊಂದು ಲೋಕಕ್ಕೆ ತೆಗೆದುಕೊಂಡು ಹೋಗುತ್ತದೆ. ಮನುಷ್ಯನ ಮನಸ್ಸನ್ನು ಒಂದು ಹಂತದವರೆಗೆ ವಿಸ್ತರಣೆ ಮಾಡಬಹುದು. ಮನುಷ್ಯನ ಬುದ್ದಿ ಶಕ್ತಿ ಶೇ 80 ರಷ್ಟು ಬಳಕೆಯಾಗುವುದಿಲ್ಲ. ಪರಮಹಂಸ ಅತ್ಯಂತ ಭಾರವಾದ ಮತ್ತು ಶುಭ್ರ ಪಕ್ಷಿ ಅದು ಅತಿ ಎತ್ತರದಲ್ಲಿ  ಹಾರಬಹುದು. ಅದು ಮಾನಸ ಸರೋವರದಲ್ಲಿ ಇರುತ್ತದೆ. ಅದೇ ರೀತಿ ಏರೊಸ್ಪೇಸ್ ಅತ್ಯಂತ ಎತ್ತರದಲ್ಲಿ ಹಾರಬಹುದು.

ಈ ಸಂದರ್ಭದಲ್ಲಿ ಕಾಲಿನ್ಸ್ ಸಂಸ್ಥೆಯ ಅಧ್ಯಕ್ಷ ಸ್ಟೀಫನ್ ಟಿಮ್ಸ್ , ಕೈಗಾರಿಕಾ ಇಲಾಖೆ ಆಯುಕ್ತೆ  ಗುಂಜನ್ ಕೃಷ್ಣಾ ಮತ್ತಿತರರು ಉಪಸ್ಥಿತರಿದ್ದರು.
[07/12, 10:22 PM] Cm Ps: *ಕಾಂಗ್ರೆಸ್ ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ತುಮಕೂರು, ಡಿಸೆಂಬರ್ 07:  ಭಾಜಪದ ಜನಸಂಕಲ್ಪ ಯಾತ್ರೆಗೆ ಜನಬೆಂಬಲ ದೊರೆತಿದ್ದು, ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಈ ಸುನಾಮಿಯ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿ  ತನ್ನ ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೊರಟಗೆರೆ  ತಾಲ್ಲೂಕಿನಲ್ಲಿ ಭಾಜಪ ವತಿಯಿಂದ ಆಯೋಜಿಸಿದ್ದ ಜನಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಹಲವಾರು ಸಂದರ್ಭಗಳಲ್ಲಿ ಆಯ್ಕೆ ಮಾಡಿದ್ದ  ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಂದಾಗಿ ಕೊರಟಗೆರೆ ಹಿಂದುಳಿದಿದೆ. ಈ ತಾಲ್ಲೂಕಿನ ಅಭಿವೃದ್ಧಿ ದೊಡ್ಡ ಪ್ರಮಾಣದಲ್ಲಿ ಆಗಬೇಕಿತ್ತು. ಇಲ್ಲಿನ ಜನಪ್ರತಿನಿಧಿಗಳು ಜನರನ್ನು ಮತಬ್ಯಾಂಕ್ ಮಾಡಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಲವಾರು ಭರವಸೆಗಳನ್ನು ನೀಡಿ ಜನರನ್ನು ಕತ್ತಲಲ್ಲಿ ಇಟ್ಟು ಹಿಂದುಳಿಯಲು ಕಾರಣರಾಗಿದ್ದಾರೆ. ಅದಕ್ಕಾಗಿ ಇಲ್ಲಿ ಬದಲಾವಣೆಯ ಅಗತ್ಯವಿದೆ ಎಂದರು.

*ವಿಜಯದ ರಥ ಯಾತ್ರೆ*
ನಾಳೆ ಗುಜರಾತ್, ಹಿಮಾಚಲ್ ಪ್ರದೇಶ ರಾಜ್ಯಗಳ  ಚುನಾವಣಾ ಫಲಿತಾಂಶ ಬರಲಿದೆ. ನಾಳೆ  ಇಷ್ಟುಹೊತ್ತಿಗೆ ಇಡೀ ಭಾರತದಲ್ಲಿ ಭಾಜಪ ಗುಜರಾತ್  ಮತ್ತು ಹಿಮಾಚಲ್ ಪ್ರದೇಶದ ವಿಜಯೋತ್ಸವವನ್ನು ಆಚರಿಸುತ್ತೇವೆ. ವಿಜಯದ ರಥ ಯಾತ್ರೆ ಕರ್ನಾಟಕದಲ್ಲಿಯೂ ಮುಂದುವರೆದು 2023 ರಲ್ಲಿ ಭಾಜಪ ವಿಜಯಶಾಲಿಯಾಗಲಿದೆ. ಪ್ರತಿ ತಾಲ್ಲೂಕು, ಜಿಲ್ಲೆಯಲ್ಲಿ ಸಭೆಗಳಲ್ಲಿ ಸೇರಿರುವ ಜನರ ಉತ್ಸಾಹ ಕಂಡು ವಿಜಯಸಂಕಲ್ಪ ಯಾತ್ರೆಯಾಗಿ ಪರಿವರ್ತನೆಯಾಗಲಿದೆ.

*ಕಾಂಗ್ರೆಸ್ ನಿರ್ನಾಮ*
ಕಾಂಗ್ರೆಸ್ ಪಕ್ಷ ಇಡೀ ರಾಷ್ಟ್ರದಲ್ಲಿ ನಿರ್ನಾಮವಾಗಿದೆ. ಇಲ್ಲಿಯೂ ನಿರ್ನಾಮವಾಗಲಿದೆ. ಕಾಂಗ್ರೆಸ್ ಮುಳುಗುತ್ತಿರವ ಹಡಗು. ಪರಮೇಶ್ವರ್ ಅವರಿಗೆ ಅತಿ ಹೆಚ್ಚಿನ ವೈರಿಗಳು ಕಾಂಗ್ರೆಸ್ ನಲ್ಲಿದ್ದಾರೆ.  ಅವರನ್ನು ಸೋಲಿಸುವ ಕೆಲಸ ಕಾಂಗ್ರೆಸ್ ಮಾಡುತ್ತದೆ. ನಾವು ಭಾಜಪದಲ್ಲಿ ವರಿಷ್ಠರು ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು. ಈ ಭಾಗದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.  ಕೊರಟಗೆರೆ ತಾಲ್ಲೂಕನ್ನು ಮಾದರಿ ತಾಲ್ಲೂಕು ಆಗಿಸಲು ಸಂಕಲ್ಪ ಮಾಡಿದ್ದೇವೆ ಎಂದರು.

*ವಿಶ್ವಮಾನ್ಯತೆ*
ನಮ್ಮ ಪ್ರಧಾನಿಗಳು ಇಡೀ ವಿಶ್ವದಲ್ಲಿಯೇ ಮಾನ್ಯತೆ ಪಡೆದಿದೆ.  ಕಾಂಗ್ರೆಸ್ಸಿನ ಪ್ರಧಾನಿಗಳು ಬೇರೆ ದೇಶಕ್ಕೆ ಹೋದರೆ ಕ್ಯಾರೇ ಎನ್ನುತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯವರಿಗೆ ವಿಶ್ವವೇ ಮಾನ್ಯತೆ ನೀಡಿದೆ. ಅವರ ನಾಯಕತ್ವಕ್ಕೆ ಮನ್ನಣೆ ದೊರೆತಿದೆ.  ಮೋದಿ ಅವರ ಕಾರ್ಯಕ್ರಮಗಳ ಪೈಕಿ ಜಲಜೀವನ್ ಮಿಷನ್ ಯೋಜನೆ ಜಾರಿ ಮಾಡಿ 10 ಕೋಟಿ ಗೂ ಹೆಚ್ಚು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಿದ್ದಾರೆ. ರಾಜ್ಯದಲ್ಲಿ 75 ವರ್ಷಗಳು ಸೇರಿ  ಕೇವಲ 25 ಲಕ್ಷ ಮನೆಗಳಗೆ ನಲ್ಲಿ ಸಂಪರ್ಕ ನೀಡಿದ್ದರು. ನಮ್ಮ ಸರ್ಕಾರ ಕಳೆದ 2 ವರ್ಷಗಳಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದೆ.  ಇದು ಅಭಿವೃದ್ಧಿ. ಒಂದೇ ವರ್ಷದಲ್ಲಿ 30 ಲಕಷ್ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲು ಯೋಜನೆ ರೂಪಿಸಿದ್ದು, ಈಗಾಗಲೇ 13 ಲಕ್ಷ ಮನೆಗಳಿಗೆ ನೀರು ಕೊಡಲಾಗುವುದು ಎಂದರು.

*ರಾಜಕೀಯ ಇಚ್ಛಾಶಕ್ತಿಯನ್ನು ತೋರಿಲ್ಲ.*
ಅಲ್ಪಸಂಖ್ಯಾತರು, ಹಿಂದುಳಿದವರು, ದೀನದಲಿತರ ಹೆಸರಿನಲ್ಲಿ  ಕಲ್ಯಾಣ ಮಾಡುವುದಾಗಿ ಹೇಳುತ್ತಿದ್ದರು. ಯಾರೋ ಒಬ್ಬರು ಅಧಿಕಾರಿಯಿಂದ ಜನ ಉದ್ಧಾರವಾಗುವುದಿಲ್ಲ. ಹಳ್ಳಿಯಲ್ಲಿರುವ ಕೂಲಿಕಾರ, ದೀನದಲಿತರ ಬದುಕು ಉದ್ದಾರವಾಗಬೇಕು.  ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿಯನ್ನು ಹೆಚ್ಚಿಸಿದೆ. ಮಲ್ಲಿಕಾರ್ಜು ಖರ್ಗೆ, ಸಿದ್ಧರಾಮಯ್ಯ ಅವರು  ಯಾಕೆ ಮೀಸಲಾತಿ ಹೆಚ್ಚಿಸುವ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಲ್ಲ.  ಭಾಜಪ ಸರ್ಕಾರ ಬರಬೇಕಾಯಿತು ಇದನ್ನು ಮಾಡಲು. ಅವರ ಮತ ಪಡೆದು, ಅಧಿಕಾರವನ್ನು ಮಾಡಿ, ಮನೆಗಳ ಮೇಲೆ ಮನೆ ನಿರ್ಮಾಣಮಾಡಿಕೊಂಡಿದ್ದಾರೆ. ಅವರನ್ನು ಗುಡಿಸಿಲಲ್ಲಿಯೇ ಇಟ್ಟಿದ್ದಾರೆ. ದುಡಿಯುವ ವರ್ಗವನ್ನು ಕಡೆಗಣಿಸಲಾಗಿದೆ. ದೀನದಲಿತ, ಹಿಂದುಳಿದ ವರ್ಗದವರ ಬೆಂಬಲ ಇರುವವವರೆಗೂ ಯಾರಿಗೂ ಅಂಜುವುದಿಲ್ಲ.  ಯಾವುದೇ ಅಡ್ಡಿ ಆತಂಕ ಬಂದಾಗ ನನಗೆ ಶಕ್ತಿ ತುಂಬಿದ್ದೀರಿ,. ಜನಶಕ್ತಿಯ ಮುಂದೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಶಕ್ತಿ ನಡೆಯುವುದಿಲ್ಲ ಎಂದರು.
ವಕ್ಫ್ ಮಂಡಳಿ ಆಸ್ತಿಯನ್ನು ಕಾಂಗ್ರೆಸ್ ಲೂಟಿ ಮಾಡಿದೆ.
ಐದು ಸಾವಿರ ಕೋಟಿ ರೂ.ಗಳಷ್ಟು ಮುಸಲ್ಮಾನರ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನವರು ತಿಂದು ತೇಗಿದ್ದಾರೆ. ಆ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಅವರ ಆಸ್ತಿಯನ್ನು ಲೂಟಿ ಮಾಡಿದ್ದಾರೆ. ಅವರ ಮತ ಕೇಳುವ  ನೈತಿಕ ಹಕ್ಕಿಲ್ಲ. ಜನರಿಗೆ ಒಳಸಂಚು ಅರ್ಥವಾಗಿದೆ ಎಂದರು.  
ದೇಶ ಭಕ್ತಿಯ ಪಾಠ ಕಾಂಗ್ರೆಸ್ಸಿನಿಂದ  ಕಲಿಯಬೇಕಿಲ್ಲ
 ರಾಹುಲ್ ಗಾಂಧಿ ಸಿಯಾ ರಾಮ್ ಎನ್ನುವುದಿಲ್ಲ ಎಂದಿದ್ದಾರೆ.  ರಾಮನಲ್ಲಿ ಸೀತೆ, ಲಕ್ಷ್ಮಣ, ಹನುಮರೂ ಇದ್ದಾರೆ.  ಇಷ್ಟು ಪ್ರಾಥಮಿಕ ಜ್ಞಾನ ಅವರಿಗೆ ಇಲ್ಲ. ಭಾರತ್ ಮಾತಾಕಿ ಜೈ ಎನ್ನುವುದು ಭಾಜಪದ ಘೋಷಣೆ, ನಂಬಿಕೆ ಮತ್ತು ವಿಶ್ವಾಸ. ಕಾಂಗ್ರೆಸ್ ಪಕ್ಷದ್ದು ಸೋನಿಯಾ ಮಾತಾಕಿ ಜೈ. ಜನ ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು. ದೇಶ ಭಕ್ತಿಯ ಪಾಠ ಇವರಿಂದ ಕಲಿಯಬೇಕಿಲ್ಲ ಎಂದರು. 
 
*ಮತಾಂತರದ ಹುನ್ನಾರ*
ಆಸೆ ಆಮಿಷ ತೋರಿಸಿ ಮತಾಂತರ ಮಾಡುವ ಅಂತರರಾಷ್ಟ್ರೀಯ ಮಟ್ಟದ ಹುನ್ನಾರ ಈ ದೇಶದಲ್ಲಿ ನಡೆಯುತ್ತಿದೆ. ಅದನ್ನು ನಿಷೇಧ ಮಾಡಿದ್ದೇವೆ.  ಮತಾಂತರ ನಿಷೇಧ ಕಾಯ್ದೆ ಸಂವಿಧಾನಬದ್ಧವಾಗಿದೆ ಇದನ್ನು ತರಲೇಬೇಕೆಂದು ಸುಪ್ರೀಂ ಕೋರ್ಟ್ ಹೇಳಿತು.  ಕಾಂಗ್ರೆಸ್ಸಿನ ಹಲವಾರು ಹಗರಣಗಳು ಹೊರಗೆ ಬರುತ್ತಿದೆ. ಅಂದಿನ ಮುಖ್ಯಮಂತ್ರಿಗಳೂ, ಮಂತ್ರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಅದನ್ನು ಮುಚ್ಚಿಹಾಕಲು ಲೋಕಾಯುಕ್ತ ಮುಚ್ಚಿದರು.  ಈಗ ಪುನ:  ಮುಚ್ಚಿಹಾಕಿದ್ದ 50 ಪ್ರಕರಣಗಳನ್ನು ತೆರೆಯಲಾಗುವುದು.   ಬರುವ ದಿನಗಳಲ್ಲಿ ತನಿಖೆ ಮಾಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು.  ಕೊರಟಗೆರೆಯಲ್ಲಿ ಭಾಜಪ ಬೇರನ್ನು ಗಟ್ಟಿಗೊಳಿಸಬೇಕು ಎಂದರು.

*ಎತ್ತಿನಹೊಳೆ ಮೂರು ಸಾವಿರ ಕೋಟಿ ರೂ.ಗಳನ್ನು ಮಂಜೂರು*
ಕೊರಟಗೆರೆ ಯಲ್ಲಿ ಅಭಿವೃಧಿಯ ಹೊಳೆ ಹರಿಯಲಿದೆ. ವಿದ್ಯೆ ಮತ್ತು ಉದ್ಯೋಗಕ್ಕೆ ಒತ್ತು ನೀಡಲಾಗಿದೆ. ಕೆಳಸ್ತರದಲ್ಲಿರುವ ಮಾನವಶಕ್ತಿ ಬಳಕೆ ಮಾಡಿ ನಾಡು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಎತ್ತಿನಹೊಳೆ ಯೋಜನೆಯನ್ನು ನಮ್ಮ ಕಾಲದಲ್ಲಿ ಪ್ರಾರಂಭಿಸಿದ್ದೆವು. ಕಾಂಗ್ರೆಸ್ ಸಂಪೂರ್ಣವಾಗಿ ನಿಲ್ಲಿಸಿತು. ಯೋಜನೆಗೆ ಮೂರು ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಇಲ್ಲಿಯೂ ಕೂಡ ಎತ್ತಿನಹೊಳೆಯ ನೀರನ್ನು ಕೊರಟಗೆರೆ ತಾಲ್ಲೂಕಿನ ನೀರನ್ನು ತುಂಬಿಸುವ  ಸಂಕಲ್ಪ ಮಾಡುತ್ತಿದ್ದೇವೆ. ನಾವು ಪ್ರಾರಂಭಿಸಿದ ಯೋಜನೆಯನ್ನು ನಾವೇ ಮುಕ್ತಾಯಮಾಡುತ್ತೇವೆ. ಈ ಭಾಗದ ಬರಪೀಡಿತರ ಸಮಸ್ಯೆಗಳು ತಿಳಿದಿದೆ. ತುಮಕೂರು ಜಿಲ್ಲೆ  ಅಭಿವೃದ್ಧಿಯ ಪರವಾಗಿರುವ ಜಿಲ್ಲೆ. ಬೆಂಗಳೂರಿನ ನಂತರ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗಲಿದೆ.  ಅಭಿವೃದ್ಧಿಯಲ್ಲಿ ಕೊರಟಗೆರೆ ಪಾಲು ಪಡೆಯಲು  ಭಾಜಪ ಆಯ್ಕೆ  ಮಾಡಬೇಕು. ಕಾಂಗ್ರೆಸ್ಸಿಗರನ್ನು ಅವರೇ ಸೋಲಿಸುತ್ತಾರೆ. ಇದು ಪರಮೇಶ್ವರ್ ಅವರಿಗೂ ತಿಳಿಸಿದೆ.  ನಾವು ಜನರ ಬಳಿಗೆ ಹೋಗಿ ಬಿಜೆಪಿ ಗೆಲ್ಲಿಸೋಣ ಎಂದರು.


--

Post a Comment

Previous Post Next Post