ಡಿಸೆಂಬರ್ 08, 2022 | , | 8:16PM |
ಪ್ರಮುಖ ವಿಜೇತರಲ್ಲಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಹಿಮಾಚಲ ಪ್ರದೇಶದ ಸಿಎಂ ಜೈ ರಾಮ್ ಠಾಕೂರ್ ಮತ್ತು ಎಚ್‌ಪಿ ಅಸೆಂಬ್ಲಿಯ ಮುಖೇಶ್ ಅಗ್ನಿಹೋತ್ರಿ ಸೇರಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಪರೇಶ್ ಧನಾನಿ ಮತ್ತು ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾ ಸೋತಿದ್ದಾರೆ. ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇಶುದನ್ ಗಧ್ವಿ ಕೂಡ ಖಂಭಾಲಿಯಾ ಕ್ಷೇತ್ರದಲ್ಲಿ ಬಿಜೆಪಿಯ ಅಯರ್ ಮುಲುಭಾಯ್ ಹರ್ದಾಸ್‌ಭಾಯ್ ಬೇರಾ ವಿರುದ್ಧ 18745 ಮತಗಳ ಅಂತರದಿಂದ ಸೋತಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನಲ್ಲಿ ಇಂದು ಗೆಲುವು ದಾಖಲಿಸಿದ ಪ್ರಮುಖ ಅಭ್ಯರ್ಥಿಗಳೆಂದರೆ, ಹರೋಲಿ ವಿಧಾನಸಭಾ ಕ್ಷೇತ್ರದಿಂದ ಮುಖೇಶ್ ಅಗ್ನಿಹೋತ್ರಿ, ನಾದೌನ್‌ನಿಂದ ಸುಖವಿಂದರ್ ಸಿಂಗ್ ಮತ್ತು ಶಿಮ್ಲಾ ಗ್ರಾಮಾಂತರ ಕ್ಷೇತ್ರದಿಂದ ವಿಕ್ರಮಾದಿತ್ಯ ಸಿಂಗ್. ಕಿನ್ನೌರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಜಗತ್ ಸಿಂಗ್ ನೇಗಿ ಅವರು ತಮ್ಮ ಸಮೀಪದ ಬಿಜೆಪಿ ಪ್ರತಿಸ್ಪರ್ಧಿ ಸೂರತ್ ನೇಗಿ ಅವರನ್ನು ಆರು ಸಾವಿರದ ಒಂಭೈನೂರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು,
ಬಿಜೆಪಿ ನಾಯಕ ಮತ್ತು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಸೇರಾಜ್ ಕ್ಷೇತ್ರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಚೇತ್ ರಾಮ್ ಅವರನ್ನು ಸೋಲಿಸಿದ್ದಾರೆ. ಮೂವತ್ತೆಂಟು ಸಾವಿರಕ್ಕೂ ಅಧಿಕ ಮತಗಳ ಅಂತರ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು. ಮುಂಬರುವ ಸರಕಾರ ಸಾರ್ವಜನಿಕರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸುಂದರನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಕೇಶ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸೋಹನ್ ಲಾಲ್ ಅವರನ್ನು ಎಂಟು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು.
ಬಿಜೆಪಿಯ ಅನಿಲ್ ಶರ್ಮಾ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಚಂಪಾ ಠಾಕೂರ್ ಅವರನ್ನು ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುವ ಮೂಲಕ ಮಂಡಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ನೂರ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಣಬೀರ್ ಸಿಂಗ್ ಅವರು ಕಾಂಗ್ರೆಸ್‌ನ ಅಜಯ್ ಮಹಾಜನ್ ಅವರನ್ನು ಹದಿನೆಂಟು ಸಾವಿರದ ಏಳುನೂರು ಮತಗಳ ಅಂತರದಿಂದ ಸೋಲಿಸಿದರು.
Post a Comment