ಬಾಬಾ ಸಾಹೇಬ್ ಡಾ|| ಅಂಬೇಡ್ಕರ್ ಅವರ “ಮಹಾ ಪರಿನಿರ್ವಾಣ ದಿನಾಚರಣೆ”ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಬಿಜೆಪಿ ಮೋಡಿ-ಎನ್.ರವಿಕುಮಾರ್


ಬಾಬಾ ಸಾಹೇಬ್ ಡಾ|| ಅಂಬೇಡ್ಕರ್ ಅವರ “ಮಹಾ ಪರಿನಿರ್ವಾಣ ದಿನಾಚರಣೆ”
ಬೆಂಗಳೂರು: ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ರಾಜ್ಯ ಎಸ್‍ಸಿ ಮತ್ತು ಎಸ್‍ಟಿ ಮೋರ್ಚಾಗಳ ಸಹಯೋಗದೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ “ಮಹಾ ಪರಿನಿರ್ವಾಣ ದಿನಾಚರಣೆ” ನಡೆಯಿತು. ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಎಸ್‍ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯಕ ಅವರು ಭಾಗವಹಿಸಿ ಮಾತನಾಡಿ, ಸಂವಿಧಾನ ಕರ್ತೃ ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಾನ್ ನಾಯಕತ್ವ ಹೊಂದಿದ್ದರು. ಅವರ ಶ್ರೇಷ್ಠ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಂ.ಬಿ. ಭಾನುಪ್ರಕಾಶ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಪಕ್ಷದ ಮುಖಂಡರು, ಕಾರ್ಯಕರ್ತರು, ಕಾರ್ಯಾಲಯದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಬಿಜೆಪಿ ಮೋಡಿ-ಎನ್.ರವಿಕುಮಾರ್
ಬೆಂಗಳೂರು: ಗುಜರಾತ್ ನಲ್ಲಿ 27 ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಎಂದರೆ ಅಭಿವೃದ್ಧಿ, ಬಿಜೆಪಿ ಎಂದರೆ ರೈತಪರ, ಸ್ವಚ್ಛ ಭಾರತ ಎಂದರೆ ಬಿಜೆಪಿ, ಮೂಲಸೌಕರ್ಯ, ರಸ್ತೆಗಳ ನಿರ್ಮಾಣ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಇಡೀ ದೇಶಕ್ಕೇ ಗೌರವ, ಗೌರವಯುತ ಪಾರ್ಟಿ ಎಂದರೆ ಬಿಜೆಪಿ- ಹೀಗೆ ಭಾರತೀಯ ಜನತಾ ಪಾರ್ಟಿ ದೇಶದ 130 ಕೋಟಿ ಜನರು ದೇಶದ ಕುರಿತು ಹೆಮ್ಮೆ ಪಡುವ ರೀತಿಯಲ್ಲಿ ಕೇಂದ್ರ- ವಿವಿಧ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ ಎಂದು ತಿಳಿಸಿದರು.
ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಬಿಜೆಪಿ ಮೋಡಿ ಮಾಡಲಿದೆ. ಮತ್ತೆ ಅಧಿಕಾರಕ್ಕೆ ಏರಲಿದೆ. ಬೊಮ್ಮಾಯಿ- ಯಡಿಯೂರಪ್ಪ ಅವರ ಜೋಡಿಯು ಈ ಮೋಡಿ ಮಾಡುವುದು ಖಚಿತ ಎಂದು ಅವರು ನುಡಿದರು.
ಎಸ್‍ಸಿ, ಎಸ್‍ಟಿ ಮೀಸಲಾತಿಯನ್ನು ನಮ್ಮ ಸರಕಾರ ಹೆಚ್ಚಿಸಿದೆ. 55 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಲಾಗಿದೆ. ರೈತರ ಮಕ್ಕಳಿಗೆ, ನೇಕಾರರ ಮಕ್ಕಳಿಗೆ, ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಸ್ಕಾಲರ್‍ಶಿಪ್ ಕೊಡುತ್ತಿದ್ದಾರೆ. ಪ್ರವಾಹಪೀಡಿತರ ಪರಿಹಾರ ಹೆಚ್ಚಿಸಲಾಗಿದೆ ಎಂದು ನುಡಿದರು.
ಹಸು, ಎತ್ತು, ಮೇಕೆ ಕಳಕೊಂಡವರಿಗೆ ಪರಿಹಾರವನ್ನೂ ನಮ್ಮ ಸರಕಾರ ಕೊಡುತ್ತಿದೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಅಭಿವೃದ್ಧಿಯ ಪರ್ವ ನಡೆಯುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷದವರು ಸುಮ್ಮನೆ ಬೊಗಳೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಬರಿಯ ಭಾಷಣ ಮಾಡಿಕೊಂಡು ಓಡಾಡುತ್ತಿದ್ದಾರೆ. ಅವರೇನೂ ಜನ ಸೇರಿಸಬೇಕಿಲ್ಲ ಎಂದು ಆರೋಪಿಸಿದರು.

(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
  ಬಿಜೆಪಿ ಕರ್ನಾಟಕ

Post a Comment

Previous Post Next Post