☆☆🌹 ಶ್ರೀ ದತ್ತ ಜಯಂತಿ 🌹☆☆

[07/12, 8:30 AM] +91 91644 68888: ☆☆🌹 ಶ್ರೀ ದತ್ತ ಜಯಂತಿ 🌹☆☆

‘ಮಾಸಾನಾಂ ಮಾರ್ಗಶೀರ್ಷೋಸ್ಮಿ’ ಎಂಬ ಗೀತಾಚಾರ್ಯನ ವಾಣಿಯಂತೆ ಮಾಸಗಳಲ್ಲಿ ಮಾರ್ಗಶೀರ್ಷ ಅತಿಶ್ರೇಷ್ಠವಾದುದು. ಈ ತಿಂಗಳಲ್ಲೇ ‘ಚಂಪಾಷಷ್ಠಿ’, ‘ಗೀತಾಜಯಂತಿ’, ‘ದತ್ತಜಯಂತಿ’ ಮುಂತಾದ ಹಬ್ಬಗಳು ಬರುವುದು ಸ್ಮರಣೀಯ. ‘ಭಗವದ್ಗೀತೆ’ ಹೇಗೆ ಅಪೂರ್ವ ಜ್ಞಾನನಿಧಿಯಾಗಿದೆಯೋ ಹಾಗೇ, ಒಂದೇ ದೇಹ, ಮೂರು ತಲೆ, ಆರು ಕೈಗಳ ‘ತ್ರಿಮೂರ್ತಿ’ ಸ್ವರೂಪವಾದ, ದತ್ತಾತ್ರೇಯನ ಕಲ್ಪನೆಯೂ ಅಪೂರ್ವವಾದುದು. ‘ಶ್ರೀ ಗುರುಚರಿತ್ರೆ’ ದತ್ತನ ಪೂರ್ಣ ವೈಭವವನ್ನು ಸಾರುತ್ತದೆ. ದತ್ತ ಜಯಂತಿಯನ್ನು ಮಾರ್ಗಶೀರ್ಷ ಶುದ್ಧ ಹುಣ್ಣೀಮೆಯಂದು ಆಚರಿಸುತ್ತಾರೆ. ಈ ಉತ್ಸವವನ್ನು ವಿಶೇಷವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಉತ್ತರಭಾರತದಲ್ಲಿ ಆಚರಿಸುತ್ತಾರೆ. ಈ ದಿನ ‘ಶ್ರೀ ಗುರುಚರಿತ್ರೆ’ ಪಾರಾಯಣ, ‘ಔದುಂಬರ ವೃಕ್ಷ’ ಹಾಗೂ ‘ಶ್ರೀ ದತ್ತಮೂರ್ತಿ’ಗೆ ಪೂಜಾರ್ಚನೆ ವೈಭವದಿಂದ ನಡೆಯುತ್ತದೆ. ಪೂಜ್ಯರಾದ ಜನಾರ್ಧನ ಸ್ವಾಮಿ, ಏಕನಾಥ, ದಾಸೋಪಂಥ, ಮಾಣಿಕ್ಯಪ್ರಭು, ಶ್ರೀಧರ ಸ್ವಾಮಿಗಳೇ ಮೊದಲಾದ ಸಾಧು ಶ್ರೇಷ್ಠರು ಈ ಆಚರಣೆಯನ್ನು ವಿಶೇಷವಾಗಿ ಪ್ರಚಾರಕ್ಕೆ ತಂದು, ಅನೇಕ ಕಡೆ ದತ್ತ ಮಂದಿರಗಳನ್ನು ಸ್ಥಾಪಿಸಿದ್ದಾರೆ.

ಶ್ರೀ ಗುರುಚರಿತ್ರೆಯ ಪ್ರಕಾರ ಯತಿಶ್ರೇಷ್ಠರಾದ ಶ್ರೀಪಾದ ಶ್ರೀವಲ್ಲಭರು, ಶ್ರೀ ನರಸಿಂಹಸರಸ್ವತಿ ಯತಿಗಳು, ದತ್ತಾತ್ರೇಯರ ಅವತಾರವೆಂದೇ ಪ್ರಸಿದ್ಧಿ. ದತ್ತಕ್ಷೇತ್ರಗಳಾದ ಬಾಬಾಬುಡನ್ ಗಿರಿ, ಶ್ರೀ ನೃಸಿಂಹ ಸರಸ್ವತಿಗಳ ವಾಸಸ್ಥಾನವಾಗಿದ್ದ ಗಾಣಗಾಪುರಗಳಲ್ಲಿ, ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸುವುದನ್ನು ಇಂದಿಗೂ ಕಾಣಬಹುದು. ಔದುಂಬರ, ಮಾಹೂರ, ಗಾಣಗಾಪುರ, ನರಸೋಬವಾಡಿಯ ದತ್ತ ದೇವಾಲಯಗಳು ಇಂದಿಗೂ ಜಾಗೃತ ಸ್ಥಾನಗಳಾಗಿವೆ. ಶಿವಮೊಗ್ಗ ಜಿಲ್ಲೆಯ ವರದಹಳ್ಳಿ, ಉತ್ತರ ಕನ್ನಡ ಜಿಲ್ಲೆಯ ಶೀಗೆಹಳ್ಳಿ, ಗೋರೆ, ರಾಮತೀರ್ಥ ಮುಂತಾದ ಕ್ಷೇತ್ರಗಳಲ್ಲಿ ‘ದತ್ತ ಜಯಂತಿ’ ಅದ್ಧೂರಿಯಾಗಿ ನಡೆಯುತ್ತದೆ. ಈ ದಿನ ದತ್ತ ಕ್ಷೇತ್ರಗಳಲ್ಲೆಲ್ಲಾ ಅಖಂಡ ಭಜನೆ, ನಾಮ ಸಂಕೀರ್ತನೆಗಳು ನಡೆಯುತ್ತವೆ. ಅಲ್ಲದೇ ವರುಷದುದ್ದಕ್ಕೂ ದತ್ತ ಕ್ಷೇತ್ರಗಳಲ್ಲಿ ನಾಮ ಸಂಕೀರ್ತನೆ ಹಾಗೂ ಭಜನೆಗೆ ಎಲ್ಲಿಲ್ಲದ ಪ್ರಾಶಸ್ತ್ಯ. ಅನೇಕ ದತ್ತಕ್ಷೇತ್ರಗಳಲ್ಲಿ ವೈದಿಕ ಪಾಠಶಾಲೆಗಳಿರುವುದು ಇನ್ನೊಂದು ವಿಶೇಷ.
ದತ್ತ ಕಥೆಯ ವೈಶಿಷ್ಟ್ಯ: ದತ್ತಾತ್ರೇಯನ ಕಥೆಯ ಹಿಂದೆ ಚಾರಿತ್ರ್ಯ ರಕ್ಷಣೆಯ ಹಿರಿಮೆ, ಪಾತಿವ್ರತ್ಯ ಪ್ರಭಾವದ ಮಹಿಮೆಯೂ ಅಡಗಿದೆ. ಪಾತಿವ್ರತ್ಯದ ಮುಂದೆ ತ್ರಿಮೂರ್ತಿಗಳೂ, ಅವರವರ ಪತ್ನಿಯರೂ ಸೋಲನ್ನು ಒಪ್ಪಲೇಬೇಕಾಯಿತು. ದತ್ತಾತ್ರೇಯನ ಕಥೆ ಬೇರೆ ಬೇರೆ ಪುರಾಣಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಚಿತ್ರಿತವಾಗಿದೆ. ಅದನ್ನು ಈ ರೀತಿಯಾಗಿ ಸಂಗ್ರಹಿಸಬಹುದು.

1) ಭಾಗವತದಲ್ಲಿ ಚಿತ್ರಿತನಾದ ದತ್ತಾತ್ರೇಯ: ಇಲ್ಲಿ ದತ್ತಾತ್ರೇಯ ಅತ್ರಿ ಮಹರ್ಷಿಯ ಪುತ್ರ. ಅತ್ರಿ ಮಹರ್ಷಿಯ ತಪಸ್ಸಿಗೆ ಮೆಚ್ಚಿದ ಮಹಾವಿಷ್ಣು ಅವನ ಕೋರಿಕೆಯಂತೆ ತಾನೇ ಅವನಿಗೆ ‘ದತ್ತ’ನಾದುದರಿಂದ, ಅತ್ರಿ-ಅನಸೂಯೆಯರ ಮಗನಿಗೆ ‘ದತ್ತಾತ್ರೇಯ’ರೆಂದು ಹೆಸರಾಯಿತು.

2) ಮಾರ್ಕಂಡೇಯ ಪುರಾಣದಲ್ಲಿ ಮೂಡಿಬಂದ ದತ್ತಾತ್ರೇಯ: ಈ ಪುರಾಣದಂತೆ ಪ್ರತಿಷ್ಠಾನಪುರದ ‘ಕೌಶಿಕ’ನೆಂಬ ಬ್ರಾಹ್ಮಣ ಕುಷ್ಠರೋಗ ಪೀಡಿತನಾಗಿದ್ದ. ಪತಿವ್ರತಾ ಶಿರೋಮಣಿಯಾದ ಅವನ ಪತ್ನಿ, ಒಮ್ಮೆ ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವಾಗ, ಆ ಕುಷ್ಠರೋಗಿಯ ಕಾಲು ಆಣಿಮಾಂಡವ್ಯ ಮಹರ್ಷಿಗೆ ತಾಗಿತು. ರೋಗಿಯ ಕಾಲು ತಾಗಿದ್ದರಿಂದ ಕೋಪಗೊಂಡ ಆಣಿಮಾಂಡವ್ಯರು, ಸೂರ್ಯೋದಯವಾದೊಡನೆ ಅವನು ಸಾಯುವಂತೆ ಶಪಿಸುತ್ತಾರೆ. ಕೌಶಿಕನ ಪತ್ನಿ ತನ್ನ ಪಾತಿವ್ರತ್ಯ ಪ್ರಭಾವದಿಂದ ಸೂರ್ಯೋದಯವೇ ಆಗದಂತೆ ತಡೆಯುತ್ತಾಳೆ. ಲೋಕದಲ್ಲೆಲ್ಲಾ ಕಗ್ಗತ್ತಲೆ ಆವರಿಸುತ್ತದೆ. ರೋಗ-ರುಜಿನಗಳು ತುಂಬಿ, ಹಾಹಾಕಾರ ಉಂಟಾದಾಗ, ದೇವತೆಗಳೆಲ್ಲಾ ಸೇರಿ ಅಸೂಯೆಯನ್ನೇ ಅರಿಯದ ‘ಅನಸೂಯೆ’ಯಲ್ಲಿ ಪ್ರಪಂಚಕ್ಕೆ ಬೆಳಕು ತೋರುವಂತೆ ಪ್ರಾರ್ಥಿಸುತ್ತಾರೆ. ಆಗ ಅನಸೂಯೆಯು ದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿ, ಕೌಶಿಕನ ಪತ್ನಿಯೆಡೆ ಬಂದು ಸೂರ್ಯೋದಯವಾಗಲು ಸಮ್ಮತಿಸುವಂತೆಯೂ, ಅವಳ ಪತಿಯನ್ನು ತಾನು ಬದುಕುವಂತೆ ಮಾಡುತ್ತೇನೆಂದು ಮಾತುಕೊಟ್ಟು, ಸೂರ್ಯೋದಯವಾಗುವಂತೆ ಮಾಡುತ್ತಾಳೆ. ಅನಸೂಯೆ ತನ್ನ ಪಾತಿವ್ರತ್ಯ ಪ್ರಭಾವದಿಂದ ಕೌಶಿಕನು ಬದುಕುವಂತೆಯೂ, ಕುಷ್ಠರೋಗದಿಂದ ಮುಕ್ತನಾಗುವಂತೆಯೂ ಮಾಡುತ್ತಾಳೆ. ಸೂರ್ಯೋದಯ ಆದದ್ದನ್ನು ಕಂಡು ಸಂತುಷ್ಟರಾದ ದೇವತೆಗಳ ಹತ್ತಿರ ಅನಸೂಯೆ, ತ್ರಿಮೂರ್ತಿಗಳನ್ನು ತನ್ನ ಮಕ್ಕಳಾಗಿ ಪಡೆಯಬೇಕೆಂಬ ಆಶೆಯನ್ನು ವ್ಯಕ್ತಪಡಿಸುತ್ತಾಳೆ. ಅದರ ಫಲವಾಗಿ ಅತ್ರಿ-ಅನಸೂಯೆ ಇವರಿಗೆ ಬ್ರಹ್ಮನೇ ಚಂದ್ರನಾಗಿಯೂ, ರುದ್ರನೇ ದೂರ್ವಾಸನಾಗಿಯೂ, ವಿಷ್ಣುವೇ ದತ್ತಾತ್ರೇಯನಾಗಿಯೂ ಜನಿಸುತ್ತಾರೆ. ಮಾರ್ಕಂಡೇಯ ಪುರಾಣದಲ್ಲಿ ಇನ್ನೂ ಒಂದು ವೃತ್ತಾಂತ ಬರುತ್ತದೆ. ರಾಕ್ಷಸರ ಹಾವಳಿ ತಡೆಯಲಾಗದೆ ದೇವತೆಗಳೆಲ್ಲಾ ದತ್ತಾತ್ರೇಯರ ಮೊರೆಹೊಕ್ಕರು. ದತ್ತಾತ್ರೇಯರು ಅವರಿಗೆ ಅಭಯ ನೀಡಿ ಎಲ್ಲಾ ದೇವತೆಗಳಿಗೆ ತಮ್ಮ ಆಶ್ರಮದಲ್ಲಿ ಆಶ್ರಯ ನೀಡುತ್ತಾರೆ. ಅದನ್ನರಿತ ರಾಕ್ಷಸರು ಹೊಂಚುಹಾಕಿ ಅವರ ಆಶ್ರಮದಲ್ಲಿದ್ದ ಲಕ್ಷ್ಮಿಯನ್ನು ಅಪಹರಿಸಿಕೊಂಡು ಹೋಗಲು ಯತ್ನಿಸಿದಾಗ, ದತ್ತರ ತಪೋಮಹಿಮೆಯಿಂದ ತಮ್ಮಷ್ಟಕ್ಕೆ ತಾವೇ ಸತ್ತು ಬೀಳುತ್ತಾರೆ.

3) ಅನಸೂಯೆಯ ಸತಿ ಮಹಾತ್ಮೆಯನ್ನು ವಿವರಿಸುವ ಮತ್ತೊಂದು ಸ್ವಾರಸ್ಯಪೂರ್ಣ ಕಥೆ: ಒಮ್ಮೆ ನಾರದರು ತ್ರಿಮೂರ್ತಿಗಳ ಪತ್ನಿಯರಿಗೆ ಅಸೂಯೆ ಹುಟ್ಟುವಂತೆ ‘ಅನಸೂಯೆಯ ಪಾತಿವ್ರತ್ಯ ಮಹಾತ್ಮೆ’ ವರ್ಣಿಸುತ್ತಾರೆ. ಆಗ ತ್ರಿಮೂರ್ತಿಗಳ ಪತ್ನಿಯರು ಅನಸೂಯೆಯನ್ನು ಪರೀಕ್ಷಿಸಲು ತಮ್ಮ ತಮ್ಮ ಪತಿಗಳನ್ನು ಕಳುಹಿಸುತ್ತಾರೆ. ಅತ್ರಿ ಮಹರ್ಷಿಗಳು ಯಜ್ಞಕ್ಕೆ ಹೋದ ವೇಳೆ ಸಾಧಿಸಿ, ಬ್ರಾಹ್ಮಣ ವೇಷದಿಂದ ಬಂದ ತ್ರಿಮೂರ್ತಿಗಳು, ಭೋಜನ ಬೇಡುತ್ತಾರೆ. ಅತಿಥಿ ಸತ್ಕಾರ ಸಂಪನ್ನಳಾದ ಅನಸೂಯೆ ಎಲೆಯಿಟ್ಟು ಬಡಿಸ ಹೊರಟಾಗ, ವಿವಸ್ತ್ರಳಾಗಿ ಬಡಿಸಬೇಕೆಂಬ ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾರೆ. ಇದರಿಂದ ಧೃತಿಗೆಡದ ಅನಸೂಯೆ, ಪತಿಯು ಯಜ್ಞಕ್ಕೆ ಹೋದಾಗ ತನ್ನ ರಕ್ಷಣೆಗಾಗಿ ಇಟ್ಟುಕೊಂಡಿದ್ದ ಪತಿಯ ಪಾದೋದಕವನ್ನು ತಂದು ಪ್ರೋಕ್ಷಿಸುತ್ತಾಳೆ. ಆಗ ಮೂವರೂ ಒಂದೇ ಆಕಾರದ ಹಸುಗೂಸುಗಳಾಗುತ್ತಾರೆ. ಆಕೆ ತಾಯಿಯಂತೆ ಮೊಲೆಯೂಡಿಸಿ ತೃಪ್ತಿಪಡಿಸಿ, ಮುದ್ದಾಡಿ, ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡುತ್ತಾಳೆ. ಇತ್ತ ಬಹುಕಾಲವಾದರೂ ಪತಿಯರು ಬರದಿದ್ದರಿಂದ, ಅಲ್ಲೇ ಉಳಿದಿರಬಹುದೆಂದು ತ್ರಿಮೂರ್ತಿಗಳ ಪತ್ನಿಯರು ಶಂಕಿಸುತ್ತಿರಲು, ಅಲ್ಲಿಗೆ ಬಂದ ನಾರದರು ವಿಷಯ ತಿಳಿಸುತ್ತಾರೆ. ತಕ್ಷಣ ಅತ್ರಿ ಮುನಿಗಳ ಆಶ್ರಮಕ್ಕೆ ಧಾವಿಸಿದ ತ್ರಿಮೂರ್ತಿಗಳ ಪತ್ನಿಯರು ಅನಸೂಯೆಯಲ್ಲಿ ಕ್ಷಮೆಕೋರಿ, ಪತಿಭಿಕ್ಷೆ ಬೇಡುತ್ತಾರೆ. ಅವರಲ್ಲಿ ಅನುಕಂಪ ತೋರಿದ ಅನಸೂಯೆ, ಮತ್ತೆ ಪಾದೋದಕವನ್ನು ಪ್ರೋಕ್ಷಿಸಿದಾಗ ತ್ರಿಮೂರ್ತಿಗಳು ಮೊದಲಿನಂತಾಗುತ್ತಾರೆ.

ಮಕ್ಕಳಾಗಿ ತನ್ನ ಎದೆ ಹಾಲು ಕುಡಿದ ಆ ಮೂರೂ ಶಿಶುಗಳನ್ನು ಬಿಟ್ಟುಕೊಡುವಾಗ, ಅವರ ಅಂಶಗಳನ್ನೆಲ್ಲ ಒಂದಾಗಿಸಿ, ಲೋಕ ಕಲ್ಯಾಣಕ್ಕಾಗಿ ಮೂರು ತಲೆ, ಆರು ಕೈಗಳು, ಒಂದೇ ದೇಹವುಳ್ಳ ‘ದತ್ತಾತ್ರೇಯ ಮೂರ್ತಿ’ಯನ್ನು ಸೃಷ್ಟಿಸುತ್ತಾಳೆ. ದತ್ತಾತ್ರೇಯಸ್ವಾಮಿ ‘ನೈಷ್ಠಿಕ ಬ್ರಹ್ಮಚರ್ಯ’ ನಿರತ.  ಮಹಾಸಾಧಕರೂ, ಮಹಾವೀರರೂ, ಮಹಾಭಕ್ತರೂ ಆದ ಗಂಡುಗೊಡಲಿಯ ಪರಶುರಾಮ, ಅಲರ್ಕ, ಪ್ರಹ್ಲಾದ, ಯಮ, ಕಾರ್ತವೀರ್ಯ, ಮುಂತಾದವರು ದತ್ತಾತ್ರೇಯರ ಶಿಷ್ಯರಾಗಿ ಜ್ಞಾನೋಪದೇಶ ಪಡೆದರು.

ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರು, ತಮ್ಮ ‘ದತ್ತಾತ್ರೇಯ’ ಎಂಬ ಗ್ರಂಥದಲ್ಲಿ ಪರಮ ‘ಅದ್ವೈತ’ದ ಸಾಕಾರರೂಪವೇ ದತ್ತಾತ್ರೇಯರೆಂದು ಸಿದ್ಧಾಂತ ಪಡಿಸಿದ್ದಾರೆ. ದತ್ತಾತ್ರೇಯ ವಿರಚಿತ ‘ಜೀವನ್ಮುಕ್ತಗೀತ’ ಮತ್ತು ‘ಅವಧೂತ ಗೀತಗಳ’ ವ್ಯಾಖ್ಯಾನವೂ ದತ್ತಾತ್ರೇಯ ಗ್ರಂಥದಲ್ಲಿದೆ.

☆☆ದತ್ತಾತ್ರೇಯ ಮೂರ್ತಿಯ ಸಂಕೇತ ಹಾಗೂ ಸಂದೇಶ ☆☆

ತ್ರಿಮೂರ್ತಿಗಳ ಸಂಕೇತವೇ ದತ್ತಾತ್ರೇಯ ಮೂರ್ತಿ. ‘ಏಕಂಸದ್ ವಿಪ್ರಾ ಬಹುಧಾವದಂತಿ’ ಎಂಬ ವೇದೋಕ್ತಿಯ ಸಾಕಾರ ಪ್ರತೀಕ ಈ ಆಕಾರದಲ್ಲಿದೆ. ಸೃಷ್ಟಿ, ಸ್ಥಿತಿ, ಲಯಗಳಿಗೆ ಬ್ರಹ್ಮ, ವಿಷ್ಣು, ಮಹೇಶ್ವರರು ಕಾರಣರೆಂದು ನಮ್ಮವರ ನಂಬಿಕೆ. ಬ್ರಹ್ಮನ ಕೈಯಲ್ಲಿರುವ ಜಪಮಾಲೆ ಮತ್ತು ಪದ್ಮ; ವಿಷ್ಣುವಿನ ಶಂಖ, ಚಕ್ರ, ಗದೆ; ಈಶ್ವರನ ತ್ರಿಶೂಲ, ಕಮಂಡಲಗಳು ದತ್ತಾತ್ರೇಯರ ಆರು ಕೈಗಳಲ್ಲಿ ರಾರಾಜಿಸುತ್ತವೆ. ನಾಲ್ಕು ವೇದಗಳ ರಕ್ಷಣೆಯ ಸಂಕೇತವಾಗಿ ನಾಲ್ಕು ನಾಯಿಗಳು, ಉಪನಿಷತ್ತುಗಳ ರಕ್ಷಣೆಯ ಸಂಕೇತವಾಗಿ ಗೋಮಾತೆ, ದತ್ತಮೂರ್ತಿಯ ಹತ್ತಿರ ಇರುವುದನ್ನು ಕಾಣಬಹುದು. ಭಕ್ತರ ಆತ್ಮಗಳ ಬೇಟೆಗಾರನಾದ, ಭಕ್ತನ ಹಿಂದೆ ಸದಾ ಇರುವ ಸತ್ಯದ ಕಾವಲು ನಾಯಿಗಳು ಇವು. ದತ್ತಮೂರ್ತಿಯ ಕಾವಿಬಟ್ಟೆ ‘ತ್ಯಾಗ’ದ ಸಂಕೇತ. ‘ತ್ಯಾಗೇನೈಕೇ ಅಮೃತತ್ವಮಾನಶುಃ’ ಎಂಬ ವೇದವಾಣಿ ಸ್ಮರಣೀಯ. ಅಂದರೆ ತ್ಯಾಗದಿಂದಲೇ ಮಾನವ ಅಮರನಾಗುತ್ತಾನೆ ಎಂದು. ‘ತ್ಯಾಗ ಮತ್ತು ಸಂನ್ಯಾಸ ಮೋಕ್ಷ ಸಾಧನೆಗೆ ಸುಲಭ ಉಪಾಯಗಳು’. ದತ್ತೋಪಾಸನೆಯಲ್ಲಿ ‘ಶೈವ-ವೈಷ್ಣವ’ ಭೇದ ಅಡಗಿಹೋಗಿ ಎರಡೂ ಒಂದೆಡೆ ಸೇರಿರುವುದನ್ನು ಕಾಣಬಹುದು. ಹೀಗೆ ಸಚ್ಚಾರಿತ್ರ್ಯ, ನಡತೆ, ಪಾತಿವ್ರತ್ಯ, ವೈಭವದ ಸಂಕೇತವಾಗಿ, ಜ್ಞಾನ-ವೈರಾಗ್ಯ, ಚೋದಕ-ಬೋಧಕವಾಗಿ, ಎಲ್ಲಾ ದೇವತೆಗಳೂ ಒಂದೇ, ಎಂಬುದರ ದ್ಯೋತಕವಾಗಿ ಆಚರಿಸುವ ಉತ್ಸವವೇ ‘ದತ್ತ ಜಯಂತಿ’.

✍️ *∆PAL™@UDI*

*ಆಲಂಪಲ್ಲಿ ಪ್ರತಿಷ್ಟಾನ ರಾಯಚೂರು*

ಶ್ರೀಕೃಷ್ಣಾರ್ಪಣಮಸ್ತು
[07/12, 12:59 PM] +91 96591 93666: *ಪ್ರಾರಬ್ಧ*

ಪ್ರತಿ ಜೀವರಾಶಿಗಳಿಗೂ ಕಟ್ಟಿಟ್ಟ ಬುತ್ತಿ, ಯೋಗಿ ಯಾಗಲಿ , ಬೋಗಿ ಯಾಗಲಿ , ರೋಗಿ ಯಾದರು ಕೂಡ, ಅನುಭವಿಸಿ ಮುಗಿಸಬೇಕಾದ ಕಾರ್ಯಕ್ರಮ. 
ಇದು ವಿಧಿ ಲಿಖಿತ ತಪ್ಪಿಸಲು ಯಾರಿಂದಾನು ಸಾಧ್ಯವಿಲ್ಲದ ವಿದ್ಯೆ.  

ಶ್ರೀ ಕ್ಷೇತ್ರ ಶೃಂಗೇರಿಯ ಇತಿಹಾಸದಲ್ಲಿ , ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ನೃಸಿಂಹ ಭಾರತಿ ಮಹಾಸ್ವಾಮಿಯವರ ಒಂದು ಸಣ್ಣ ಕಥೆ.  

ಗುರುಗಳಿಗೆ ಬಾಲ್ಯದಲ್ಲೇ ಅದುರು ರೋಗ (ಪಾರ್ಕಿಂಸನ್), ಆದರೇ ಮಹಾ ವಿದ್ವತ್ ಇದ್ದ ಯೋಗಿವರ್ಯ , ಇವರಕಾಲದಲ್ಲೇ ಕನ್ನಂಬಾಡಿ ಜಲಾಶಯ ಕಟ್ಟಿಸಿದ್ದು ಮೈಸೂರು ಮಹಾರಾಜಾ ನಾಲ್ಮಡಿ ಕೃಷ್ಣರಾಜ ಒಡೆಯರ್.  ಇವರ ಕುಲದೇವತೆ , ಶೃಂಗೇರಿ ಶಾರದಾ ಮಾತ. 
ಇವರು ಈ ಜಲಾಶಯ ನಿರ್ಮಣಕ್ಕೆ, ಶಾರದಾ ಮಾತೆಯ , ಅನುಗ್ರಹ ಅನುಮತಿಗೆ ಶೃಂಗೇರಿಗೇ ಆಗಮನ. 

ಅದಿರು ರೋಗವಿದ್ದ , ಗುರುಗಳಾದ ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ನೃಸಿಂಹ ಭಾರತಿ ಮಹಾಸ್ವಾಮಿಗಳ ಅನುಗ್ರಹಕ್ಕೇ 3 ದಿನ ಶೃಂಗೇರಿಯಲ್ಲಿ ವಾಸ ಮಾಡಿದರು. 

ಗುರುಗಳ ಮಾತು ಅದಿರು ರೋಗವಿದ್ದ ಕಾರಣ ಸ್ಪಷ್ಟವಾಗಿ ಕೇಳುತ್ತಿರಲಿಲ್ಲ, ಆದರೇ ಶ್ರೀಗಳು ಬ್ರಾಹ್ಮೀ ಮಹೂರ್ತದಲ್ಲಿ ಅಮ್ಮ ಶಾರದಾಂಬ ಪೂಜಾ ಸಮಯದಲ್ಲಿ, ತಮ್ಮ ಕಮಾಂಡಲು ಆಚೆ ಇಟ್ಟು , ತಮ್ಮ ಮೈ ಮೇಲಿನ ವಸ್ರವನ್ನು ಬಿಸುಟು , ಮಾತೃ ಭಾಷೆಯಲ್ಲಿ, ಆಕೆಡೆ ಪೋರ , ಪ್ರಾರಬ್ಧ ಎಂದ ಹೇಳುತ್ತಿದ್ದರು. ಆ ಕ್ಷಣದಲ್ಲಿ ಈ ಕಮಂಡಲು ನಡುಗುವಿಕೆ , ಇವರ ರೋಗ ಕಮಂಡುವಿಗೆ ವರ್ಗಾವಣೆ , ಸ್ಪಷ್ಟವಾಗಿ ಕಂಚಿನ ಕಂಠದಲ್ಲಿ ಸ್ತೋತ್ರ ಪಟನೆ ,  ಒಂದು ಚೂರು ತಪ್ಪಿಲ್ಲದೆ ಮಂತ್ರ , ವೃಷಭ ಕಂಠದಲ್ಲಿ ಪಾರಾಯಣ , ಪೂಜೆ ಮುಗಿದಮೇಲೆ , ಪುನಃ ವಸ್ರ ತೆಗೆದುಕೊಂಡು , ರಾರಾ ಈ ಕಡೆ , ಎಂದಕ್ಷಣ ಇವರ ಅದುರು ರೋಗ ಇವರ ದೇಹಕ್ಕೆ , 3 ದಿನ ಗಮನಿಸಿದ ಮಹಾರಾಜರು , ಶ್ರೀಗಳಿಗೆ ಭಯ ಭಕ್ತಿಯಿಂದ , ಮಹಾಸ್ವಾಮಿ ನನ್ನದೊಂದ್ದು ಪ್ರಶ್ನೆ..!!! 
ಕೇಳಿ ಎಂದರು ಶ್ರೀಗಳು , ಮಹಾಸ್ವಾಮಿ ನಿಮಗೆ ಅದ್ಬುತ , ಅಮೋಘ ಶಕ್ತಿ ಇದೆ , ಯಾಕೆ ನೀವೂ ನಿಮ್ಮ ಕಾಯಿಲೆಯನ್ನು ನಿವಾರಣೆ ಮಾಡಬಹುದಲ್ಲ , ಎಂದರು. 

ಶ್ರೀಗಳು ಒಂದು ನಿಮಿಷ ಮೌನವಾಗಿದ್ದು ಹೇಳಿದರು , ನೋಡಪ್ಪ , ಆ ತಪ ಶಕ್ತಿ ಇದೆ , ಆದರೇ ಇದನ್ನ ಈಗಲೇ ವ್ಯಯ ಮಾಡಿದರೆ ಈ ಪ್ರಾರಬ್ಧ ಮತ್ತೆ ಮುಂದಿನ ಜನ್ಮಕ್ಕೆ ವರ್ಗಾವಣೆ ಆಗುತ್ತದೆ , ಮತ್ತೆ ಮುಂದಿನ ಜನ್ಮಕ್ಕೆ ಇದರ ಗೊಡವೆ ಬೇಡ , ಇದನ್ನ ಇಲ್ಲೇ ಮುಗಿಸಿ ಜೀವನ ಮುಕ್ತಿ ಪಡೆಯೋಣ , ಹೌದು ತಾನೇ , ಮಹಾರಾಜರ ಪರಿವಾರಕ್ಕೇ ವಿಷ್ಮಯ , ಅಗಾದ ಚೇತನದ ಬೆಳಕು , ಶ್ರೀಗಳಿಗೆ ಮನ ಪೂರ್ವಕ ವಂದನೆಗಳನ್ನು ಸಮರ್ಪಿಸಿದರು. 

ಅದರಿಂದ ಪ್ರಾರಬ್ಧ ಕರ್ಮ ಅನುಭವಿಸಿ ಮುಗಿಸಬೇಕಾದ ಕಾರ್ಯಕ್ರಮ.

Post a Comment

Previous Post Next Post