ಡಿಸೆಂಬರ್ 13, 2022 | , | 8:02PM |
ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಶ್ರೀ ಅರಬಿಂದೋರಿಂದ ಸ್ಫೂರ್ತಿ ಪಡೆಯುವಂತೆ ಪ್ರಧಾನಿ ಮೋದಿ ಜನರಿಗೆ ಕರೆ ನೀಡಿದ್ದಾರೆ

ಶ್ರೀ ಅರಬಿಂದೋ ಅವರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ಅವರ ಆದರ್ಶಗಳು ಪೀಳಿಗೆಗೆ ಸ್ಫೂರ್ತಿ ನೀಡಿದ ತತ್ವಜ್ಞಾನಿ ಎಂದು ಶ್ರೀ ಮೋದಿ ಹೇಳಿದರು. ಭಾರತದ ಯುವಕರು ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ರಾಷ್ಟ್ರ ನೀತಿಯಿಂದ ಪ್ರೇರಿತರಾಗಿದ್ದಾರೆ ಎಂದರು. ಪ್ರಧಾನಮಂತ್ರಿಯವರು, ಶ್ರೀ ಅರವಿಂದರ ಜೀವನವು ಏಕ ಭಾರತ, ಶ್ರೇಷ್ಠ ಭಾರತಗಳ ಪ್ರತಿಬಿಂಬವಾಗಿದೆ. ಪ್ರೇರಣೆ ಮತ್ತು ಕ್ರಿಯೆ ಒಟ್ಟಿಗೆ ಸೇರಿದಾಗ ಪ್ರತಿಯೊಂದು ಉದ್ದೇಶವೂ ಸುಲಭವಾಗುತ್ತದೆ ಎಂದರು. ಈ ಸಂದರ್ಭದಲ್ಲಿ, ಶ್ರೀ ಅರಬಿಂದೋ ಅವರ ಗೌರವಾರ್ಥ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಶ್ರೀ ಮೋದಿ ಬಿಡುಗಡೆ ಮಾಡಿದರು.
Post a Comment