ಬಿಜೆಪಿ ರಾಜ್ಯ ಕಾರ್ಯಾಲಯದ ಬಳಿ ಸಂಭ್ರಮಾಚರಣೆ, ಪ್ರತಿಕ್ರಿಯೆ

 ಆದರಣೀಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಯವರ ತವರು ರಾಜ್ಯವಾದ ಗುಜರಾತ್  ಅಸೆಂಬ್ಲಿ ಚುನಾವಣೆಯಲ್ಲಿ ಮಹತ್ವದ ಗೆಲುವು ಸಾಧನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದ ಬಳಿ ಪಕ್ಷದ ವತಿಯಿಂದ ಸಂಭ್ರಮಾಚರಣೆ ನಡೆಯಿತು.

ದೇಶದಲ್ಲಿ ಮೋದಿಜಿ ಪರ ಅಲೆ ಮತ್ತೆ ಸಾಬೀತು- ನಳಿನ್‍ಕುಮಾರ್ ಕಟೀಲ್ 
ಬೆಂಗಳೂರು: ದೇಶದಲ್ಲಿ ಆದರಣೀಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ಅಲೆ ಇರುವುದನ್ನು ಗುಜರಾತ್ ಅಸೆಂಬ್ಲಿ ಚುನಾವಣೆಯ ಅಭೂತಪೂರ್ವ ಫಲಿತಾಂಶವು ಸಾಬೀತುಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಗುಜರಾತ್ ಫಲಿತಾಂಶವು ಅಭೂತಪೂರ್ವ ಎಂದು ಅವರು ತಿಳಿಸಿದ್ದು, ನರೇಂದ್ರ ಮೋದಿಜಿ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ರಾವಣ, ಭಸ್ಮಾಸುರ ಎಂದು ಟೀಕಿಸಿದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಮೋದಿಯವರ ನೇತೃತ್ವದಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿ ಸಾಧಿಸುತ್ತಿದೆ. ಅಲ್ಲದೆ ವಿಶ್ವಗುರು ಆಗುವತ್ತ ಮುನ್ನಡೆ ಸಾಧಿಸಿದೆ. ಇದನ್ನು ಗಮನಿಸಿ ಜನತೆ ಬಿಜೆಪಿಗೆ ಮತ್ತೆ ಅಧಿಕಾರ ನೀಡಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.
ಕರ್ನಾಟಕ ರಾಜ್ಯದ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಸರಕಾರ ರಚಿಸುವುದು ಖಚಿತ. ವಿರೋಧ ಪಕ್ಷದವರು ತಿರುಕನ ಕನಸು ಕಾಣುವುದನ್ನು ಬಿಡಬೇಕು. ಪ್ರಧಾನಿಯವರ ಬಗ್ಗೆ ಸಣ್ಣ ಮಾತನಾಡುವುದನ್ನು ಬಿಟ್ಟು ದೇಶದ ಅಭಿವೃದ್ಧಿಗಾಗಿ ಸರಕಾರಕ್ಕೆ ಬೆಂಬಲ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈಚೆಗೆ ನಡೆದಿದ್ದ ಪಂಚರಾಜ್ಯ ಚುನಾವಣೆಯಲ್ಲೂ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಮತ್ತೆ ಗುಜರಾತ್‍ನಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಪಕ್ಷವು ಅಲ್ಲಿ ಕನಿಷ್ಠ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಆಂತರಿಕ ಜಗಳದಿಂದಾಗಿ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವು ನೆಲಕಚ್ಚುವ ಸ್ಥಿತಿಗೆ ತಲುಪುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯದ ಬಳಿ ಸಂಭ್ರಮಾಚರಣೆ
ಬೆಂಗಳೂರು: ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಯವರ ತವರು ರಾಜ್ಯವಾದ ಗುಜರಾತ್  ಅಸೆಂಬ್ಲಿ ಚುನಾವಣೆಯಲ್ಲಿ ಮಹತ್ವದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದ ಬಳಿ ಪಕ್ಷದ ವತಿಯಿಂದ ಸಂಭ್ರಮಾಚರಣೆ ನಡೆಯಿತು.
ಕಾರ್ಯಕರ್ತರು ಪಕ್ಷದ ಧ್ವಜ ಬೀಸುತ್ತ ಸಂಭ್ರಮದಿಂದ ಕುಣಿದಾಡಿದರು. ಸಿಹಿ ಹಂಚುವ ಮೂಲಕ ಅಭೂತಪೂರ್ವ ಗೆಲುವಿನ ಸಂಭ್ರಮವನ್ನು ಆಚ
ರಾಜ್ಯದ ಕಾರ್ಯಕರ್ತರಲ್ಲಿ ಉತ್ಸಾಹ, ದೃಢತೆ ಹೆಚ್ಚಿಸಿದ ಗುಜರಾತ್ ಚುನಾವಣಾ ಫಲಿತಾಂಶ -ವಿ.ಸುನೀಲ್‍ಕುಮಾರ್
ಬೆಂಗಳೂರು: ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕದ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ ಹಾಗೂ ಅವರಲ್ಲಿನ ದೃಢತೆಯನ್ನು ಹೆಚ್ಚಿಸಲಿದೆ ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕøತಿ ಸಚಿವ ವಿ.ಸುನೀಲ್‍ಕುಮಾರ್ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗುಜರಾತ್‍ನಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಜನತೆ ಅಭಿವೃದ್ಧಿ ಪರವಾಗಿ ಮತ ನೀಡಿದ್ದಾರೆ. ಗುಜರಾತ್‍ನಲ್ಲಿ ಏಳನೇ ಬಾರಿಗೆ ಬಿಜೆಪಿ ಅಧಿಕಾರ ಗಳಿಸಿದೆ. ಚುನಾವಣೆಯಲ್ಲಿ ಗೆಲ್ಲಲು ನಾವು ಬೇರೆ ಏನೇನೋ ತಂತ್ರಗಾರಿಕೆ ಮಾಡಿಲ್ಲ. ಕೇವಲ ಅಭಿವೃದ್ಧಿಯನ್ನು ಕಣ್ಮುಂದೆ ಇಟ್ಟುಕೊಂಡು, ಮುಂದಿನ 5 ವರ್ಷಗಳ ಅಭಿವೃದ್ಧಿಯ ಪರಿಕಲ್ಪನೆಯನ್ನು ಜನರ ಮುಂದೆ ಇಟ್ಟಿದ್ದರಿಂದ ಈ ಅತ್ಯುತ್ತಮ ಫಲಿತಾಂಶ ಲಭಿಸಿದೆ. ಸಹಜವಾಗಿ ಕರ್ನಾಟಕದ ಮುಂದಿನ ಚುನಾವಣೆಗೆ ಇದು ಸ್ಪೂರ್ತಿಯನ್ನು ಕೊಟ್ಟಿದೆ ಎಂದು ತಿಳಿಸಿದರು.
ಕರ್ನಾಟಕದ ಚುನಾವಣೆಯೂ ಅಭಿವೃದ್ಧಿ, ಹಿಂದುತ್ವ, ಬೂತ್ ಕಾರ್ಯದ ಆಧಾರದಲ್ಲಿ ನಡೆಯಲಿದೆ. ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕರ್ನಾಟಕದಲ್ಲಿ ‘ನವ ಕರ್ನಾಟಕ ನಿರ್ಮಾಣ’ದ ಸಂಕಲ್ಪದೊಂದಿಗೆ ನಾವು ಮಾಡಿದ್ದೇವೆ. ಹಿಂದುತ್ವದ ಚಟುವಟಿಕೆಗಳಿಗೆ ಕಾನೂನು ಸ್ವರೂಪ ಕೊಡುವಂಥ ಕಾರ್ಯ ನಡೆದಿದೆ. ನಮ್ಮ ಭಾವನೆಗಳನ್ನು ಗೌರವಿಸುವ ಬೇರೆಬೇರೆ ಯೋಜನೆಗಳನ್ನು ನಾವು ಅನುಷ್ಠಾನಕ್ಕೆ ತಂದಿದ್ದೇವೆ ಎಂದು ವಿವರಿಸಿದರು.
ಅಭಿವೃದ್ಧಿ, ಹಿಂದುತ್ವ, ಪಕ್ಷದ ಬೂತ್ ಕಾರ್ಯವು ಪಕ್ಷದ ಗೆಲುವಿಗೆ ಪೂರಕವಾಗಲಿದೆ. ಇವತ್ತಿನಿಂದಲೇ ಕರ್ನಾಟಕದ ಚುನಾವಣೆ ಆರಂಭವಾಗಿದೆ. ಗುಜರಾತ್ ಗೆಲುವು ಕರ್ನಾಟಕದ ವಿಜಯದಲ್ಲೂ ಮುಂದುವರಿಯಲಿದೆ. ನಾವು ಡಬಲ್ ಎಂಜಿನ್ ಸರಕಾರದ ಮೂಲಕ ಜನರಿಗೆ ಇನ್ನಷ್ಟು ಯೋಜನೆಗಳನ್ನು ಕೊಡಲು ಮುಂದಿನ 5 ವರ್ಷಕ್ಕಾಗಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಹಿಮಾಚಲ ಪ್ರದೇಶದಲ್ಲಿ ಮತದಾರರ ತೀರ್ಪನ್ನು ನಾವು ಗೌರವಿಸುತ್ತೇವೆ. ಅಲ್ಲಿ ನಮಗೆ ಹಿನ್ನಡೆ ಆಗಿದೆ. ಅಲ್ಲಿನ ರಾಜ್ಯ ಘಟಕ ಮತ್ತು ರಾಷ್ಟ್ರೀಯ ತಂಡವು ಈ ಹಿನ್ನಡೆಯ ಕುರಿತ ಅವಲೋಕನ ಮಾಡಲಿದೆ. ನಾವು ಯಾವತ್ತೂ ಸೋಲಿನ ಹೊಣೆಯನ್ನು ಬೇರೆಯವರ ಮೇಲೆ ಹೊರಿಸುವುದಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದ ಚುನಾವಣಾ ಗೆಲುವಿಗೆ ಅಗತ್ಯವಾದ ಎಲ್ಲ ತಂತ್ರಗಾರಿಕೆಯನ್ನು ಪಕ್ಷ ಅನುಸರಿಸಲಿದೆ. ಹಿರಿಯರಿಗೆ ಮನ್ನಣೆ, ಹೊಸಬರಿಗೆ ಅವಕಾಶವನ್ನು ಗಮನದಲ್ಲಿ ಇಟ್ಟುಕೊಂಡು ಚುನಾವಣಾ ತಂತ್ರಗಾರಿಕೆ ರೂಪಿಸುತ್ತೇವೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರೂ

Post a Comment

Previous Post Next Post