*ಸ್ತ್ರೀ ಸಾಮರ್ಥ್ಯ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*

[22/12, 9:08 PM] Cm Ps: *ಸ್ತ್ರೀ ಸಾಮರ್ಥ್ಯ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*

*ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಮಾತು*

ಬೆಳಗಾವಿ: ಕರ ಕುಶಲತೆ ನಮ್ಮ ಭಾರತೀಯ ನಾರಿಯರಿಗೆ ದೇವರು ಕೊಟ್ಟ ವರ. ಬೇರೆ ಯಾವುದೇ ದೇಶದ ಮಹಿಳೆಯರಿಗೆ ಈ ಕಲೆ ಕೊಟ್ಟಿಲ್ಲ. ಮುಂದಿನ ವರ್ಷದಿಂದ ರಾಜ್ಯದ 5 ಕಡೆ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಶಾಶ್ವತ ವಸ್ತು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ ಈ ಉತ್ಪನ್ನಗಳಿಗೆ ಆನ್ಲೈನ್ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡುತ್ತೇವೆ. ಸ್ತ್ರೀ ಸಾಮರ್ಥ್ಯ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮ‌ಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಗ್ರಾಮೀಣ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಸ್ತ್ರೀ ಸಾಮರ್ಥ್ಯ ಅನ್ನುವ ಯೋಜನೆ ಜಾರಿ ಮಾಡಿದ್ದೇವೆ. ಸ್ತ್ರೀ ಸಾಮರ್ಥ್ಯ ಯೋಜನೆ ಅನುಷ್ಠಾನಕ್ಕಾಗಿ ಬಜೆಟ್ ನಲ್ಲಿ ರೂ‌‌.1000 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಯೋಜನೆಯಿಂದ ರಾಜ್ಯದ 33 ಸಾವಿರ ಮಹಿಳಾ ಸಂಘದ 5 ಲಕ್ಷ ಮಹಿಳೆಯರಿಗೆ ಲಾಭವಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಿಂದ ದೇಶದಲ್ಲಿ ದೊಡ್ಡ ಕ್ರಾಂತಿ ಉಂಟಾಗಲಿದೆ. ಮಹಿಳಾ ಸ್ವ ಸಂಘ ಉತ್ಪನ್ನಗಳ ಮಾರಾಟಕ್ಕೆ ರಾಜ್ಯದ 5 ಸ್ಥಳಗಳಲ್ಲಿ ಶಾಶ್ವತ ಪ್ರದರ್ಶನ ಮಾರಾಟ ಮಳಿಗೆ ನಿರ್ಮಾಣ ಮಾಡಲಾಗುವುದು ಎಂದರು.

ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ದೇಶದ ಅಭಿವೃದ್ಧಿ ಮಾಡುತ್ತಿರುವುದು ನಮ್ಮ ತಾಯಂದಿರು. ಸ್ತ್ರೀ ಸಾಮರ್ಥ್ಯದ ಮೌಲ್ಯಮಾಪನವಾಗಬೇಕು. ಮಹಿಳೆಯರು ನಿರ್ವಹಿಸುವ ಮನೆ ಕೆಲಸ ಹಾಗೂ ಸೇವೆ ಸಾಮಾನ್ಯವಾದುದಲ್ಲ. ಮಹಿಳೆಯರ ಶ್ರಮಕ್ಕೆ ಯಾರು ಬೆಲೆ ನೀಡುವುದಿಲ್ಲ. ಮನೆ ಕೆಲಸ ಮಾಡುವ ಮಹಿಳೆಯರಿಗೂ ಗೌರವ ಸಿಗಬೇಕು. ಅವರ ಕೆಲಸದ ಮೌಲ್ಯ ಮಾಪನವಾಗಬೇಕು. ಅವರ ಕೆಲಸಕ್ಕ ಆದಾಯ ಬರಬೇಕು. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಪುರುಷರ ರೀತಿಯಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ. ‌ಆದರೆ ಅವರಿಗೆ ಕಡಿಮೆ ಕೂಲಿ ನೀಡುತ್ತಾರೆ. ದೀನ ದಲಿತ ಮಹಿಳೆಯರು ಆಹಾರ‌ ಕೊರತೆ ಎದುರಿಸುತ್ತಾರೆ.  ಸ್ವಂತ ಭೂಮಿ ಇಲ್ಲದ ಅವರು ಬೇರೆಯವರ ಮನೆ ಹಾಗೂ ಜಮೀನಿನಲ್ಲಿ ದುಡಿಯುತ್ತಾರೆ ಎಂದರು.

ಮಹಿಳೆಯರ ಅಭಿವೃದ್ಧಿಗಾಗಿ ಮುಂದಿನ ಆಯವ್ಯಯದಲ್ಲಿ ವಿಶೇಷ ಯೋಜನೆ ಘೋಷಣೆ ಮಾಡಲಾಗುವುದು. ಸದ್ಯ ಸರ್ಕಾರದಿಂದ ಗ್ರಾ.ಪಂ‌. ವ್ಯಾಪ್ತಿಯಲ್ಲಿ 2 ಮಹಿಳಾ ಸಂಘಗಳಿಗೆ 1 ಲಕ್ಷ ಸಹಾಯಧನ ಹಾಗೂ ಬ್ಯಾಂಕ್ ಸಾಲ ನೀಡಿ ಅವರ ಸ್ವ ಉದ್ಯೋಗ ನೆರವು ನೀಡಲಾಗಿದೆ.‌ ಅಮೃತ ಯೋಜನೆಯಡಿ 5,000 ಸಾವಿರ ಮಹಿಳೆಯರಿಗೆ ಸಹಾಯ ಒದಗಿಸಲಾಗಿದೆ. ಬಾಂಗ್ಲಾದೇಶದಲ್ಲಿ ಸ್ತ್ರೀ ಶಕ್ತಿ ಸಂಘದವರು ಸರ್ಕಾರ ಹಾಗೂ ವರ್ಲ್ಡ್ ಬ್ಯಾಂಕ್ ಗಳಿಗೆ ಸಾಲ ಕೊಡುತ್ತಾರೆ. ಹೊಸ ತಂತ್ರಜ್ಞಾನ ಬಳಸಿ ಆಧುನಿಕ ವ್ಯವಸ್ಥೆಗೆ ಹೊಂದುವ ಉತ್ಪನ್ನ ತಯಾರಿಸಿ, ನಿಮ್ಮ ಕುಟುಂಬಗಳು ನೆಮ್ಮದಿಯ ಜೀವನ ನಡೆಸಬೇಕು. ಮಹಿಳೆಯರು ಹೆಚ್ಚು ಪ್ರಾಮಾಣಿಕರು. ಮಹಿಳೆಯರ ಸಾಮರ್ಥ್ಯದ ಮೇಲೆ ನಂಬಿಕೆಯಿಂದ ಹೆಚ್ಚಿನ ಬಂಡವಾಳ ಹೂಡಲು ಸಿದ್ಧನಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.
ಈ  ಸಂದರ್ಭದಲ್ಲಿ  ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಡಾ.‌ಸಿ.ಎನ್. ಅಶ್ಬತ್ಥ್ ನಾರಾಯಣ,  ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ ಕಾರಜೋಳ, ಹಣಕಾಸು ಇಲಾಖೆ ಎಸಿಎಸ್   ಐ.ಎಸ್ ಎನ್ ಪ್ರಸಾದ್, ಜಿ.ಪಂ.ಸಿಇಓ ದರ್ಶನ.ಹೆಚ್.ವಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
[22/12, 10:58 PM] Cm Ps: ಬೆಳಗಾವಿ, ಡಿಸೆಂಬರ್ 22:-  ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಕಾಕತಿಯ ಹೊಟೇಲ್ ಮ್ಯಾರಿಟ್ ಸಮೀಪ ಸ್ಥಾಪಿಸಿರುವ *“ದಿವಂಗತ ಶ್ರೀ ರಾವ್‍ಸಾಹೇಬ್ ಗೋಗಟೆ ಅವರ ಪುತ್ಥಳಿಯನ್ನು ಅನಾವರಣ”*ಗೊಳಿಸಿದರು. ಈ ಸಂದರ್ಭದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ ಕೋರೆ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
[22/12, 11:01 PM] Cm Ps: *ಹುಬ್ಬಳ್ಳಿ ಕಿಮ್ಸ್ ರೀತಿಯಲ್ಲಿ ಬಿಮ್ಸ್ ಹಳ್ಳಿ ಜನರ ಸೇವೆ ಮಾಡಲಿ - ಸಿಎಂ ಬೊಮ್ಮಾಯಿ*

ಬೆಳಗಾವಿ: ಹುಬ್ಬಳ್ಳಿ ಕಿಮ್ಸ್  ಮಾದರಿಯಲ್ಲಿ ಬೆಳಗಾವಿಯ ಬಿಮ್ಸ್ ಬೆಳೆಯಬೇಕೆಂಬ ಉದ್ದೇಶ ನನ್ನದು. ಆ ದೂರದೃಷ್ಟಿ ಇಟ್ಟುಕೊಂಡು ನಾವೆಲ್ಲರೂ ಕೆಲಸ ಮಾಡಬೇಕು. ಇದನ್ನು ಸಾಕಾರಗೊಳಿಸುವ ಜವಾಬ್ದಾರಿ ಆಸ್ಪತ್ರೆ ನಿರ್ದೇಶಕರ ಮೇಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. 

ಅವರು ಇಂದು ಸಂಜೆ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 100 ಹಾಸಿಗೆಗಳ ತಾಯಿ - ಮಕ್ಕಳ ಆಸ್ಪತ್ರೆ ಹಾಗೂ 50 ಬೆಡ್ ಗಳ ಐಸಿಯು ಘಟಕ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು

ಬೆಳಗಾವಿ ಬೆಳೆಯುತ್ತಿರುವ ನಗರ. ಈ ಭಾಗದಲ್ಲಿ ಸರ್ಕಾರದ ಒಂದು ವೈದ್ಯಕೀಯ ಸಂಸ್ಥೆ ಹಾಗೂ ಕಾಲೇಜು ಇರಬೇಕೆನ್ನುವ ಬೇಡಿಕೆ ಬಹಳ ದಿನಗಳಿಂದಲೂ ಇದ್ದರೂ ಸಾದ್ಯವಾಗಿರಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ಅಗತ್ಯ ಇತ್ತು. ಈ ಸಂಸ್ಥೆಯಲ್ಲಿ ನಿರ್ದೇಶಕರು ಮತ್ತು ಸಿಬ್ಬಂದಿ ನಡುವೆ ಹೊಂದಾಣಿಕೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಕೆಎಲ್ ಇ ಸಂಸ್ಥೆಯವರು ಸಾರ್ವಜನಿಕ ಆಸ್ಪತ್ರೆ  ಸೇವೆ ಸಲ್ಲಿಸಿದರು. ಅವರು ಅಭಿನಂದನೆಗೆ ಅರ್ಹರು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಒಬ್ಬರು ಐಎಎಸ್ ಅಧಿಕಾರಿ ಪ್ರಾಮಾಣಿಕವಾಗಿದ್ದರೆ ಏನೆಲ್ಲ ಸೇವೆ ಮಾಡಬಹುದು ಅನ್ನುವುದಕ್ಕೆ ಆದಿತ್ಯ ಆಮ್ಲಾ ಬಿಸ್ವಾಸ್ ಆಡಳಿತ ಉದಾಹರಣೆ. ಅದಕ್ಕಾಗಿ ಎಲ್ಲ ವಿಭಾಗಗಳನ್ನೂ ಒಳಗೊಂಡು ಇದು ಪ್ರಮುಖ ಆರೋಗ್ಯ ಕೇಂದ್ರ ಆಗಲಿದೆ. ಅವರಿಗೆ ಸಹಾನುಭೂತಿ ನೀಡಬೇಕು. ರೋಗಿಗಳು ದೇವರಿದ್ದಂತೆ. ಸೃಷ್ಟಿಯಲ್ಲಿ ಭಗವಂತನನ್ನು ಹೊರತುಪಡಿಸಿ ಮಾನವನ ನೋವನ್ನು ಕಡಿಮೆ ಮಾಡುವ ಗುಣ ಇರೋದು ವೈದ್ಯರಿಗೆ ಮಾತ್ರ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಹಳ್ಳಿಗರು ಹಣ ಇಲ್ಲದೇ ಆಸ್ಪತ್ರೆಗೆ ಹೋಗುವುದಿಲ್ಲ. ಮಹಿಳೆಯರಿಗೆ ಎದೆ ನೋವು ಕಾಣಿಸಿಕೊಂಡರೆ ಎರಡು ದಿನ ಅಮೃತಾಂಜನ ಹಚ್ಚಿಕೊಂಡು ಮಲಗಿಕೊಂಡು ಬಿಡುತ್ತಾರೆ. ಅವರಿಗೆ ಸೂಕ್ತ ಸಮಯದಲ್ಲಿ ಆರೋಗ್ಯ ಸೇವೆ ದೊರೆತರೆ ಅವರ ಆರೋಗ್ಯ ಸುಧಾರಿಸುತ್ತದೆ. ಹೊಲದಲ್ಲಿ ಕೂಲಿ ಮಾಡುವ ತಾಯಿ ತನ್ನ ಮಗುವಿಗೆ ಯಾವುದೇ ಪೌಷ್ಟಿಕ ಆಹಾರ ಕೊಡುವುದಿಲ್ಲ. ತಾಯಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆತರೆ ಬಹಳಷ್ಟು ರೋಗಗಳು ದೂರವಾಗುತ್ತದೆ. ಅಪೌಷ್ಟಿಕತೆ ದೇಶಕ್ಕೆ ದೊಡ್ಡ ಮಟ್ಟದ ಸಮಸ್ಯೆಗೆ ಕಾರಣಗಲಿದೆ. ಪೌಷ್ಟಿಕತೆಗೆ ನಮ್ಮ ಸರ್ಕಾರ ವಿಶೇಷ ಆಹಾರ ನೀಡಲಾಗುತ್ತಿದೆ. ಆರು ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಇದೆ. ಅದು ರಾಜ್ಯದ ಸರಾಸರಿ ಬರುವವರೆಗೂ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಹಲವಾರು ಯೋಜನೆಯನ್ನು ಪ್ರಥಮ ಬಾರಿ ಮಾಡುತ್ತಿದ್ದೇವೆ. ಸಿಎಂ ಆರೋಗ್ಯ ತಪಾಸಣೆ ಯೋಜನೆಯಡಿ 5 ಜಿಲ್ಲೆಗಳಲ್ಲಿ ಮೊಬೈಲ್ ಆರೋಗ್ಯ ಚೆಕ್ ಅಪ್ ವಾಹನ ಮೂಲಕ ತಪಾಸಣೆ ಮಾಡಲಾಗುತ್ತದೆ. 60 ವರ್ಷ ಮೀರಿದ ಎಲ್ಲರಿಗೂ ಉಚಿತ ಕಣ್ಣಿನ ತಪಾಸಣೆ ಮಾಡಿ ಕನ್ನಡಕ ನೀಡಲಾಗುತ್ತದೆ‌.‌ ಬಡವರಿಗೆ ಬೆಳಕನ್ನು ಕೊಡಬೇಕೆಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ಜತೆಗೆ ಹುಟ್ಟು ಕಿವುಡರಿಗೆ ವಿಶೇಷ ಸಾಧನವನ್ನು ಇಂಪ್ಲಾಂಟ್ ಮಾಡುವ 500 ಕೋಟಿ ರೂ ಮೊತ್ತದ ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ಸರ್ಕಾರ ಪ್ರತಿವರ್ಷ ಸಾವಿರಾರು ಕೋಟಿ ರೂಗಳನ್ನು ಮೆಡಿಕಲ್‌ ಕಾಲೇಜು ನಡೆಸಲು ಹೂಡಿಕೆ ಮಾಡುತ್ತದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗಿದೆ. ಸರ್ಕಾರ ಒಬ್ಬ ವೈದ್ಯಕೀಯ ವಿದ್ಯಾರ್ಥಿಗೆ 5-10 ಹತ್ತು ಲಕ್ಷ ಖರ್ಚು ಮಾಡುತ್ತೇವೆ. ಆದರೆ ವೈದ್ಯಕೀಯ ಶಿಕ್ಷಣ ಮುಗಿದ ಮೇಲೆ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು. ಆದ್ರೆ ಜನ ಸಾಮಾನ್ಯರು ಜ್ವರ ಬಂದ್ರೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಬೇಕು ಅನ್ನುವಂತಹ ಪರಿಸ್ಥಿತಿ ಬಂದಿದೆ. ಅಮೆರಿಕಾ ಮಾದರಿ ವೈದ್ಯಕಿಯ ವ್ಯವಸ್ಥೆ ಇಲ್ಲೂ ಜಾರಿಗೆ ಬರುತ್ತಿದೆ. ನಮ್ಮ ದೇಶಕ್ಕೆ ಇದು ಒಳ್ಳೆಯ ಬೆಳವಣಿಗೆಯಲ್ಲ. ನಮ್ಮ ದೇಶದ 130 ಕೋಟಿ ಜನರಲ್ಲಿ ಬಡವರು, ಅನಕ್ಷರಸ್ಥರು ಇದ್ದಾರೆ. ವಿದ್ಯಾವಂತರು ಬಡವರ ಸೇವೆ ಮಾಡುವ ಮೂಲಕ ಒಳ್ಳೆಯ ಕೆಲಸ ಮಾಡಬೇಕು. ಆಗ ಇಡೀ ನಾಡು ಸುಧಾರಿಸುತ್ತದೆ. ಆರೋಗ್ಯ ಕರ್ನಾಟಕವನ್ನು ನೀವು ನಿಜ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಚಿವರಾದ ಗೋವಿಂದ ಕಾರಜೋಳ, ಡಾ. ಸುಧಾಕರ್, ಶಾಸಕ ಅನಿಲ್‌ ಬೆನಕೆ ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

Post a Comment

Previous Post Next Post