ಡಿಸೆಂಬರ್ 18, 2022 | , | 8:31PM |
ಭಾರತವನ್ನು ಸ್ಥಳೀಯ ಹಡಗು ನಿರ್ಮಾಣ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಸಾಟಿಯಿಲ್ಲದ ಧೈರ್ಯ ಮತ್ತು ಸಮರ್ಪಣೆಯೊಂದಿಗೆ ಗಡಿಗಳು ಮತ್ತು ಕರಾವಳಿಗಳನ್ನು ರಕ್ಷಿಸಲು ಸಶಸ್ತ್ರ ಪಡೆಗಳನ್ನು ಶ್ರೀ ಸಿಂಗ್ ಶ್ಲಾಘಿಸಿದರು, ಅವುಗಳನ್ನು ಭಾರತದ ಅಭೂತಪೂರ್ವ ಬೆಳವಣಿಗೆಯ ಬೆನ್ನೆಲುಬು ಎಂದು ಬಣ್ಣಿಸಿದರು. ವೇಗವಾಗಿ ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಿಂದಾಗಿ ಉದ್ಭವಿಸುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಾಷ್ಟ್ರವನ್ನು ಸಿದ್ಧಪಡಿಸುವ ಸರ್ಕಾರದ ಸಂಕಲ್ಪವನ್ನು ರಕ್ಷಣಾ ಸಚಿವರು ಪುನರುಚ್ಚರಿಸಿದರು. ಸೇನೆಯನ್ನು ಅತ್ಯಾಧುನಿಕ ಸ್ವದೇಶಿ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳೊಂದಿಗೆ ಸಜ್ಜುಗೊಳಿಸುವ ಮೂಲಕ ಭದ್ರತಾ ಮೂಲಸೌಕರ್ಯವನ್ನು ಬಲಪಡಿಸುವುದನ್ನು ಮುಂದುವರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
Post a Comment