ಎಫ್‌ಐಎಚ್ ಹಾಕಿ ಮಹಿಳಾ ರಾಷ್ಟ್ರಗಳ ಕಪ್: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನಾಳೆ ಸ್ಪೇನ್‌ನಲ್ಲಿ ಫೈನಲ್

ಡಿಸೆಂಬರ್ 13, 2022
7:33PM

ಎಫ್‌ಐಎಚ್ ಹಾಕಿ ಮಹಿಳಾ ರಾಷ್ಟ್ರಗಳ ಕಪ್: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನಾಳೆ ಸ್ಪೇನ್‌ನಲ್ಲಿ ಫೈನಲ್ ಪಂದ್ಯವನ್ನು ಆಡಲಿವೆ

@TheHockeyIndia
ಹಾಕಿಯಲ್ಲಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನಾಳೆ ಸ್ಪೇನ್‌ನ ವೆಲೆನ್ಸಿಯಾದಲ್ಲಿ ಎಫ್‌ಐಎಚ್ ಹಾಕಿ ಮಹಿಳಾ ನೇಷನ್ಸ್ ಕಪ್‌ನ ಪೂಲ್ ಬಿ ನ ಅಂತಿಮ ಪಂದ್ಯವನ್ನು ಆಡಲಿವೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 7:45ಕ್ಕೆ ಆರಂಭವಾಗಲಿದೆ.

ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ ಪ್ರಸ್ತುತ ತನ್ನ ಪೂಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ದಕ್ಷಿಣ ಆಫ್ರಿಕಾ ಇದುವರೆಗಿನ ಟೂರ್ನಿಯಲ್ಲಿ ಶೂನ್ಯ ಗೆಲುವಿನೊಂದಿಗೆ ಪೂಲ್‌ನ ಕೆಳಭಾಗದಲ್ಲಿದೆ.

ನಿನ್ನೆ ಜಪಾನ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತ ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ.  

ಟೂರ್ನಿಯ ಮೊದಲ ಸೆಮಿಫೈನಲ್ ಡಿಸೆಂಬರ್ 16 ರಂದು ನಡೆಯಲಿದ್ದು, ಫೈನಲ್ ಪಂದ್ಯ ಡಿಸೆಂಬರ್ 17 ರಂದು ನಡೆಯಲಿದೆ.

Post a Comment

Previous Post Next Post